Home » ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳೊದು ಹೇಗೆ?

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳೊದು ಹೇಗೆ?

by manager manager

ಡಿಸೆಂಬರ್ ಬಂತು ಅಂದ್ರೆ ಸಾಕು ತಣ್ಣನೆ ಗಾಳಿ ಮೆಲ್ಲನೆ ಸುಳಿಯಲಾರಂಭಿಸಿ, ಬೆಚ್ಚನೆಯ ಹವಾಮಾನಕ್ಕೆ ಶೀತ ಸ್ಪರ್ಶ ಮಾಡಿಸಿಬಿಡುತ್ತೆ. ತಂಪಾದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯ ಮಟ್ಟವು ಶುಷ್ಕ ಗಾಳಿಗೆ ಕಾರಣವಾಗುತ್ತದೆ, ಇದು ಚರ್ಮದಿಂದ ತೇವಾಂಶವನ್ನು ಸೆಳೆಯುತ್ತದೆ. ಈ ಸಮಯದಲ್ಲಿ ಆರೋಗ್ಯದಲ್ಲಾಗೊ ವ್ಯತ್ಯಯದ ಜೊತೆಗೆ ನಮ್ಮ ಚರ್ಮ ಗಡುಸುಗೊಳ್ಳೊದು, ಕಾಂತಿ ಕಳೆದುಕಕೊಳ್ಳೊದು, ಕಾಲಿನ ಇಮ್ಮಡಿ ಬಿರುಕು ಬಿಡೋದು ಮತ್ತು ಮುಖ, ಕೈ-ಕಾಲು ಹೊಡೆದುಕೊಳ್ಳೊದು ಹಾಗೆ ಚರ್ಮವು ಬಿರುಕು ಬಿಟ್ಟು ರಕ್ತಸ್ರಾವಗೋದು ಸರ್ವೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡೊ ಸಮಸ್ಯೆಗಳು. ಇವುಗಳಿಂದ ಮುಕ್ತಿ ಪಡೆಯೊದು ಹೇಗೆ ಅಂತ ಯೋಚನೆ ಮಾಡುತ್ತಿರೊರಿಗೆ ಇಲ್ಲಿದೆ ಪರಿಹಾರ.

  • ದೇಹದಲ್ಲಿನ ಉಷ್ಣತೆಯ ಅಸಮತೋಲನ ಚರ್ಮ ಕಳೆ ಹೀನವಾಗಲು ಪ್ರಮುಖ ಕಾರಣ. ಹಾಗಾಗಿ ಪ್ರತಿ ದಿನ 3 ರಿಂದ 4 ಲೀ ನಷ್ಟು ನೀರು ಕುಡಿಯೊದರಿಂದ ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸಿ, ದೇಹದಲ್ಲಿ ತೇವಾಂಶದ ಸಮತೋಲನತೆ ಕಾಯ್ದಿರಿಸಲು ಸಹಕರಿಸುತ್ತದೆ.
  • ಚಳಿಗಾಲದಲ್ಲಿ ಆದಷ್ಟು ಉತ್ತಮ ನಿದ್ರೆ ಮಾಡೋದು ಬಹಳ ಮುಖ್ಯ. ನಾವು ದಿನದ ಎಲ್ಲಾ ಒತ್ತಡ ಸಮಸ್ಯೆಗಳಿಂದ ಹೊರ ಬರಲು ನಿದ್ರೆ ಪರಿಣಾಮಕಾರಿ ಮದ್ದು. ಮತ್ತು ಚರ್ಮದ ಆರೋಗ್ಯ ಕಾಪಾಡುವಲ್ಲಿ 7 ರಿಂದ 8 ಗಂಟೆ ನಿದ್ರೆ ಮುಖ್ಯ ಭೂಮಿಕೆಯನ್ನು ವಹಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿದ್ರೆಯೊಂದಿಗೆ ರಾಜಿಯಾಗೊದು ಚರ್ಮದ ಆರೋಗ್ಯ ಅಷ್ಟು ಸೂಕ್ತವಲ್ಲ.
  • ಚಳಿಗಾಲದ ತಂಪಾದ ವಾತಾವರಣ ನಾಲಿಗೆ ರುಚಿ ಎನಿಸುವ ಖಾದ್ಯಗಳಿಗೆ ಮತ್ತು ಬಿಸಿ ಬಿಸಿ ಆಹಾರ ಸೇವನೆಗೆ ಹೆಚ್ಚು ಮನ್ನಣೆ ನೀಡುವಂತೆ ಮಾಡುತ್ತವೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲ. ಹೆಚ್ಚು ಬಿಸಿಯಾದ ಆಹಾರ ಸೇವನೆ ದೇಹದೊಳಗಿನ ಸೂಕ್ಷ್ಮ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಈ ಖಾದ್ಯಗಳು ದೇಹದ ಉಷ್ಣತೆಯ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಹೆಚ್ಚಿನದಾಗಿ ಹಸಿ ತರಕಾರಿ ಮತ್ತು ದ್ರವಯುಕ್ತ ಹಣ್ಣುಗಳ ಸೇವನೆ ದೇಹಕ್ಕೆ ಬೇಕಾದ ಪೋಷಕಾಂಶಗಾಳನ್ನು ಒದಗಿಸುವಲ್ಲಿ ಮತ್ತು ಶರೀರದ ಅನಾರೋಗ್ಯ ವೈಪಲ್ಯತೆಗಳನ್ನು ಸರಿದೂಗಿಸಲು ಬಹಳ ಮುಖ್ಯ.
  • ಚಳಿಗಾಲದಲ್ಲಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಕುಂದುತ್ತದೆ ಮತ್ತು ತ್ವಚ್ಛೆಯ ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಈ ಸಮಯದಲ್ಲಿ ಉಗುರು ಬೆಚ್ಚನೆಯ ನೀರಿನ ಸ್ನಾನ ಮಾಡುವುದು ಉತ್ತಮ ಹಾಗೆ ಗಂಟೆಗಟ್ಟಲೆ ಸ್ನಾನ ಮಾಡೋ ಅಭ್ಯಾಸಕ್ಕೆ ವಿರಾಮ ನೀಡೊದು ಒಳ್ಳೆಯದು.
  • ದೇಹದಲ್ಲಿ ಉಷ್ಣತೆ ಕಾಪಾಡಲು ವ್ಯಾಯಾಮ ಒಂದು ಆರೋಗ್ಯಕರ ಅಭ್ಯಾಸ. ಇದು ದೇಹದಲ್ಲಿನ ರಕ್ತ ಸಂಚಾರವನ್ನು ಬಲಿಷ್ಠಗೊಳಿಸಿ, ಶರೀರ ಸಕ್ರೀಯವಾಗಿರಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ದೇಹ ದಹಿಕವಾಗಿ ಮತ್ತು ಮಾನಸಿಕವಾಗಿ ಚುರುಕಾಗಿರಲು ಸಹ ಸಹಾಯ ಮಾಡುತ್ತವೆ.
  • ಚಳಿಯಿಂದ ರಕ್ಷಣೆ ಪಡೆಯಲು ಆದಷ್ಟು ಹತ್ತಿ ಹಾಗೂ ಉಣ್ಣೆ ಬಟ್ಟೆಗಳನ್ನು ಧರಿಸೋದು ಒಳಿತು. ಇವು ದೇಹದ ಶಾಖವನ್ನು ಆರದಂತೆ ಭದ್ರಪಡಿಸಲು ಉತ್ತಮ ಸಾಧನ.
  • ದೇಹದ ತೇವಾಂಶವನ್ನು ಕಾಪಾಲು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾಯಿಶ್ಚರೈಸರ್ ಗಳು ಲಭ್ಯವಿವೆ. ನಿಮ್ಮ ಚರ್ಮ ಗುಣಕ್ಕೆ ತಕ್ಕ ಮತ್ತು ನಿಮ್ಮ ಚರ್ಮಕ್ಕೆ ಯಾವ ಬಗೆಯ ಮಾಯಿಶ್ಚರೈಸರ್ ಸೂಕ್ತ ಎಂಬುದನ್ನು ಮನದಟ್ಟು ಮಾಡಿಕೊಂಡು ಖರೀದಿಸಿ, ಬೆಳ್ಳಿಗೆ ಮತ್ತು ರಾತ್ರಿ ಬಳಸುವುದು ಉತ್ತಮ. ಈ ಮಾಯಿಶ್ಚರೈಸರ್ ಗಳಲ್ಲಿ ಬಳಸುವ ಸೆರಮೈಟ್ ಗಳು ಮತ್ತು ಹ್ಯಲುರೋನಿಕ್ ಆಮ್ಲ ತ್ವಚ್ಛೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯಮಾಡುತ್ತವೆ.
  • ಸನ್ ಸ್ಕ್ರೀನ್ ಲೋಷನ್ ಬಳಸಿ ಹೊರಗೆ ಹೋಗುವ ಅಭ್ಯಾಸ ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಶುಷ್ಕ ವಾತಾವರಣವು ತ್ವಚ್ಛೆಯಲ್ಲಿನ ನೀರಿನಾಂಶವನ್ನು ಹೀರಾಲಾರಂಭಿಸಿರುತ್ತದೆ. ಹಾಗಾಗಿ ಸೂರ್ಯನ ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವ ಹೆಚ್ಚಿನ ಅವಕಾಶವಿದೆ. ಆದ್ದರಿಂದ ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸೋದು ಜಾಣತನ.
  • ಆದಷ್ಟು ನೊರೆಬಿಲ್ಲೆ( ಸೋಪ್) ಗಳಿಂದ ದೂರವಿರೋದು ಉತ್ತಮ. ಏಕೆಂದರೆ ಇವುಗಳ ತಯಾರಿಯಲ್ಲಿ ಬಳಸಲಾದ ರಾಸಾಯನಿಕ ವಸ್ತುಗಳು ಚರ್ಮ ಮತ್ತಷ್ಟು ಬಿರುಸು ಮಾಡುತ್ತವೆ. ಈ ಗಡುಸು ಚರ್ಮದಲ್ಲಿ ಬಿರುಕು ಸೃಷ್ಟಿಸಿ ರಕ್ತ ಸ್ರಾವಕ್ಕೂ ಕಾರಣವಾಗುತ್ತದೆ.

ನಮ್ಮ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಅಧಿಕ ಇರುವ ಆಹಾರಗಳು ಯಾವುವು?

You may also like