Home » ಸ್ಮಾರ್ಟ್‌ಫೋನ್ ಬ್ಯಾಟರಿ ಪವರ್ ಬಹುಬೇಗ ಖಾಲಿಯಾಗಲು ಕಾರಣಗಳು ಏನು ಗೊತ್ತೇ?

ಸ್ಮಾರ್ಟ್‌ಫೋನ್ ಬ್ಯಾಟರಿ ಪವರ್ ಬಹುಬೇಗ ಖಾಲಿಯಾಗಲು ಕಾರಣಗಳು ಏನು ಗೊತ್ತೇ?

by manager manager

why smartphone battery is draining fast 10 reasons dp

ಸ್ಮಾರ್ಟ್‌ಫೋನ್(smartphone) ಒಂದು. ಅದರಲ್ಲಿರುವ ಆಪ್‌ಗಳು 50 ಕ್ಕೂ ಹೆಚ್ಚು. ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿ(Battery) ಒಂದೇ. ಆದರೆ ಈ ಬ್ಯಾಟರಿ ಒಂದೇ ಸ್ಮಾರ್ಟ್‌ಫೋನ್‌ ನಲ್ಲಿ ಅತಿ ಹೆಚ್ಚು ಬಳಸುವ ವಾಟ್ಸಾಪ್, ಫೇಸ್‌ಬುಕ್‌, ಟೆಲಿಗ್ರಾಂ, ಟ್ವಿಟ್ಟರ್, ಇನ್‌ಸ್ಟಗ್ರಾಂ, ಡಬ್‌ಸ್ಮ್ಯಾಶ್‌ ಇನ್ನು ಅದೆಷ್ಟೊ ಅಸಂಖ್ಯಾತ ಅಪ್ಲಿಕೇಶನ್‌ ಕಾರ್ಯ ನಿರ್ವಹಿಸಲು ಪವರ್ ನೀಡಬೇಕು.

ಅಂದಹಾಗೆ ಇಷ್ಟೆಲ್ಲಾ ಆಪ್‌ಗಳನ್ನು ದಿನನಿತ್ಯ ಬಳಸಲು ದಿನ ಒಂದರಲ್ಲಿ ಒಮ್ಮೆ ಪೂರ್ಣವಾಗಿ ಚಾರ್ಜ್‌ ಮಾಡಿದರೆ ಸಾಕು. ಆದರೆ ಕೆಲವರ ಸ್ಮಾರ್ಟ್‌ಫೋನ್‌ ಹೀಗೆ ಮಾಡಿಯೂ ಸಹ ಬಹುಬೇಗ ಬ್ಯಾಟರಿ ಪವರ್‌ ಖಾಲಿಯಾಗಿಬಿಡುತ್ತದೆ. ಇಂತಹ ಸಮಸ್ಯೆಗೆ ಕಾರಣಗಳು ಏನು ಗೊತ್ತೇ? ಅವುಗಳು ಈ ಕೆಳಗಿನಂತಿದ್ದು, ಸ್ಮಾರ್ಟ್‌ಫೋನ್ ಬ್ಯಾಟರಿ ಪವರ್ ಬಹುಬೇಗ ಖಾಲಿಯಾಗದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ.

why smartphone battery is draining fast; 10 reasons 1

1 ಬ್ರೈಟ್ ಸ್ಕ್ರೀನ್

ಅನಗತ್ಯವಾಗಿ ಹಗಲು ಎಷ್ಟು ಬೇಕು, ರಾತ್ರಿ ವೇಳೆ ಎಷ್ಟು ಬ್ರೈಟ್‌ನೆಸ್‌ ಬೇಕು ಎಂದು ತಿಳಿಯದೇ, ಯಾವಾಗಲು ಒಂದೇ ಬ್ರೈಟ್‌ನೆಸ್‌ ಹೆಚ್ಚಿನದಾಗಿ ಕೆಲವರು ಇಟ್ಟಿರುತ್ತಾರೆ. ಇದು ಪ್ರಮುಖ ಕಾರಣ. ಇದರ ಬದಲು ಹಗಲಿನ ವೇಳೆ ಕಡಿಮೆ ಬ್ರೈಟ್‌ನೆಸ್‌ ಇಟ್ಟು, ರಾತ್ರಿ ವೇಳೆ ಸಂಪೂರ್ಣ ಕಡಿಮೆ ಬ್ರೈಟ್‌ನೆಸ್‌ ಹೊಂದಿಸಿ. ಈ ಎರಡು ಕಾರ್ಯಗಳ ಬದಲಾಗಿ ಆಟೋಮೆಟಿಕ್ ಬ್ರೈಟ್‌ನೆಸ್‌ ಮೋಡ್‌ಗೆ ಸೆಟ್‌ ಮಾಡಿ.

why smartphone battery is draining fast; 10 reasons 2

2 ವೈಫೈ

ಉಚಿತ ವೈಫೈ ಕನೆಕ್ಟ್‌ ಮಾಡಿಕೊಂಡು ಡಾಟಾ ಬಿಲ್‌ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ವಿದ್ಯುತ್‌ ಬಿಲ್‌ ಹೆಚ್ಚಾಗುತ್ತದೆ ಎಂಬುದನ್ನು ಮರೆಯುವಹಾಗಿಲ್ಲ. ಹೌದು ಇಂಟರ್ನೆಟ್‌ ಬಳಕೆಗಾಗಿ ಸ್ಮಾರ್ಟ್‌ಫೋನ್‌ ವೈಫೈ ಆನ್‌ ಮಾಡಿದ್ದಲ್ಲಿ ಅದು ನೆಟ್‌ವರ್ಕ್‌ ಸರ್ಚ್‌ ಮಾಡುವ ವೇಳೆ ಅತಿಹೆಚ್ಚು ಬ್ಯಾಟರಿ ಬಳಸಿಕೊಳ್ಳುತ್ತದೆ. ಇದರಿಂದ ಬಹುಬೇಗ ಬ್ಯಾಟರಿ ಪವರ್ ಕಡಿಮೆ ಆಗುತ್ತದೆ.

why smartphone battery is draining fast; 10 reasons 3

3 ಬ್ಯಾಗ್ರೌಂಡ್‌ ಆಪ್ಸ್‌ ಗಳನ್ನು ಆಫ್‌ ಮಾಡಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವ ಬಹುಸಂಖ್ಯಾತರಿಗೆ ಗೊತ್ತಿಲ್ಲದ ಮಾಹಿತಿ ಇದು. ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಆಪ್‌ಗಳು ಬ್ಯಾಗ್ರೌಂಡ್‌ನಲ್ಲಿ ವರ್ಕ್‌ ಆಗುತ್ತಿರುತ್ತವೆ. ಅಂದರೆ ನಾವು ಆಪ್‌ ಓಪನ್‌ ಮಾಡದಿದ್ದರೂ ಸಹ ಅವು ಕಾರ್ಯ ನಿರ್ವಹಿಸುತ್ತಾ ಬ್ಯಾಟರಿ ಪವರ್ ಕಡಿಮೆಗೊಳಿಸುತ್ತವೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು Settings>>Apps Management ಗೆ ಹೋಗಿ ಎಲ್ಲಾ ಆಪ್‌ಗಳನ್ನು ಚೆಕ್‌ ಮಾಡಿ. ಯಾವ ಆಪ್ ಹೆಚ್ಚು ಬ್ಯಾಟರಿ ಉಪಯೋಗಿಸುತ್ತಿದೆಯೋ ಅದರ ಮೇಲೆ ಕ್ಲಿಕ್ ಮಾಡಿ ಡಿಸೇಬಲ್ ಮಾಡಿ.

ಈ ಕಾರ್ಯಕ್ಕಾಗಿ ಬ್ಯಾಟರಿ ಮ್ಯಾನೇಜ್‌ಮೆಂಟ್‌ ಎಂಬ ಮತ್ತೊಂದು ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳದಿರಿ.

why smartphone battery is draining fast; 10 reasons 4

4 ಓಎಸ್‌ ಅಪ್‌ಡೇಟ್ ಮಾಡಿ

ಸ್ಮಾರ್ಟ್‌ಫೋನ್‌ಗಳು ಯಾವಾಗಲು ಆಪರೇಟಿಂಗ್ ಸಿಸ್ಟಮ್‌ನ ಆಟೋಮೆಟಿಕ್ ಅಪ್‌ಡೇಟ್‌ ಮೋಡ್‌ನಲ್ಲಿಯ ಇರಬೇಕು. ಆಪರೇಟಿಂಗ್ ಸಿಸ್ಟಮ್‌ ಅಪ್‌ಡೇಟ್‌ ಆದಂತೆಲ್ಲಾ ಹಿಂದಿನ ಓಎಸ್‌ ತೊಂದರೆಗಳು ನಿವಾರಣೆಯಾಗಿ ಬ್ಯಾಟರಿ ಪವರ್ ಕಡಿಮೆ ಬಳಸುವ ಒಂದು ತಂತ್ರಾಂಶಗಳು ಅಭಿವೃದ್ಧಿಗೊಂಡಿರುತ್ತವೆ. ಹೀಗೆ ಮಾಡುವುದರಿಂದಲೂ ಬ್ಯಾಟರಿ ಲೈಪ್‌ ಹೆಚ್ಚಿಸಬಹುದು.

5 ನೋಟಿಫಿಕೇಶನ್‌ ಬಗ್ಗೆ ಎಚ್ಚರ ವಹಿಸಿ

ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಬಳಸುವ ಪ್ರತಿಯೊಂದು ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡುವ ವೇಳೆ ಮತ್ತು ಪ್ರತಿಯೊಂದು ಹೊಸ ವೆಬ್‌ಸೈಟ್‌ಗೆ ಬೇಟಿ ನೀಡಿದಾಗ ಆ ಆಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಮಗೆ ಪ್ರತಿಯೊಂದು ಅಪ್‌ಡೇಟ್‌ ಅನ್ನು ನೋಟಿಫಿಕೇಶನ್‌ ಕಳುಹಿಸಲೇ ಎಂದು ಕೇಳುತ್ತವೆ. ಆಗ ನೀವು Block, Not Allow, No Thanks ಎಂಬ ಆಯ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ಇಲ್ಲವಾದಲ್ಲಿ ಈ ಎಲ್ಲಾ ಆಪ್‌ಗಳು ಮತ್ತು ವೆಬ್‌ಸೈಟ್‌ಗಳಿಂದ ನಿರಂತರ ನೋಟಿಫಿಕೇಶನ್‌ ಬರುತ್ತಲೇ ಇರುತ್ತವೆ. ನಿಮಗೆ ಅಗತ್ಯವಿರುವುದನ್ನು ಬಿಟ್ಟು ಬೇರೆ ಯಾವುದೇ ಆಪ್‌ ಮತ್ತು ವೆಬ್‌ಗೆ ಈ ಅವಕಾಶ ನೀಡಬೇಡಿ.

6 ಎಲ್ಲಾ ಆಪ್‌ಗಳ ಬಳಕೆಯಿಂದ ಆಗಿರುವ ಅನಗತ್ಯ ಡಾಟಾ ಸಂಗ್ರಹವನ್ನು Settings>>Applications>>All>>Clear Cache ಮೇಲೆ ಕ್ಲಿಕ್ ಮಾಡಿ ಸ್ಮಾರ್ಟ್‌ಫೋನ್‌ಗೆ ದಿನದಲ್ಲಿ ಒಮ್ಮೆ ರಿಫ್ರೆಶ್‌ ನೀಡಿ.

– ಈ ಮೇಲಿನ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಮಾಡಿಯೂ ನಿಮ್ಮ ಬ್ಯಾಟರಿ ಪವರ್ ಬಹುಬೇಗ ಖಾಲಿ ಆಗುತ್ತಿದ್ದಲ್ಲಿ ಈ ಕೆಳಗಿನ ಕಾರಣಗಳಿಂದ ಬ್ಯಾಟರಿ ಪವರ್ ಭಾಗಶಃ ಸಮಸ್ಯೆಗೀಡಾಗಿದೆ ಎಂದರ್ಥ

1 ಬ್ಯಾಟರಿ ಡ್ಯಾಮೇಜ್ ಆಗಿರಬಹುದು

2 ಸ್ಮಾರ್ಟ್‌ಫೋನ್‌ ನ ಹಾರ್ಡ್‌ವೇರ್ ಸಮಸ್ಯೆ ಆಗಿರಬಹುದು.

3 ಬ್ಯಾಟರಿ ತುಂಬಾ ಹಳೆಯದಾಗಿದ್ದಿರಬಹುದು.

4 ಚಾರ್ಜರ್ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.

5 ಸ್ಕ್ರೀನ್‌ ಆಫ್‌ ಟೈಮ್‌ ಅನ್ನು ಕಡಿಮೆಗೊಳಿಸಿ.

In this article readers can know top reasons to why smartphone battery is draining fast and how solve this problem.

You may also like