ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಸಹಾಯಕ ಪ್ರಾಧ್ಯಾಪಕರು ಮತ್ತು ಯೂನಿಯರ್ ರಿಸರ್ಚ್ ಫೆಲೋಶಿಪ್ ಅರ್ಹತೆಗಳಿಗಾಗಿ ಸ್ನಾತಕೋತ್ತರ ಪದವಿ ಪಡೆದವರಿಗೆ ನಡೆಸುವ ಎನ್‌ಇಟಿ(NET) ಪರೀಕ್ಷೆಗೆ ಕಳೆದ ಒಂದು ವರ್ಷದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.
ಅವುಗಳಲ್ಲಿ 2018 ಡಿಸೆಂಬರ್ ಎನ್‌ಇಟಿ ಪರೀಕ್ಷೆಗೆ ಮುಂಚೆ ನಡೆಸುತ್ತಿದ್ದ ಆಫ್‌ಲೈನ್ ಪರೀಕ್ಷಾ ವಿಧಾನದ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಜಾರಿಗೆ ತಂದಿರುವುದು ಮತ್ತು ಎನ್‌ಇಟಿ ಪರೀಕ್ಷೆಯನ್ನು ನಡೆಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ವಹಿಸಿರುವುದು.
ಯುಜಿಸಿಯು ಜೂನ್ 2019 ರಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಲಿರುವ ಎನ್‌ಇಟಿ ಪರೀಕ್ಷೆಯಿಂದ ಅನ್ವಯಿಸುವಂತೆ 101 ವಿಷಯಗಳಿಗೆ(Subject) ಪಠ್ಯಕ್ರಮವನ್ನು ಅಪ್‌ಡೇಟ್ ಮಾಡಿದೆ. ಈ ಪಠ್ಯಕ್ರಮವು ಸಂಪೂರ್ಣವಾಗಿ ಹೊಸದಾಗಿ ಇರದೇ ಕೆಲವು ಹೊಸ ವಿಷಯಗಳು ಮತ್ತು ಅಧ್ಯಾಯಗಳನ್ನು ಅಪ್‌ಡೇಟ್ ಮಾಡಿದೆ. ಜೂನ್ ನಲ್ಲಿ ಎನ್‌ಇಟಿ ಪರೀಕ್ಷೆಗೆ ತಯಾರಿ ನಡೆಸುವವರು ಈ ಪಠ್ಯಕ್ರಮವನ್ನು ಒಮ್ಮೆ ಓದಿಕೊಂಡು ಅದರಂತೆ ಓದಿಕೊಂಡಲ್ಲಿ ಹೆಚ್ಚು ಅಂಕಗಳಿಸಿ ಸಹಾಯಕ ಪ್ರಾಧ್ಯಾಪಕರು ಮತ್ತು ಯೂನಿಯರ್ ರಿಸರ್ಚ್ ಫೆಲೋಶಿಪ್ ಅರ್ಹತೆಗಳನ್ನು ಪಡೆಯಲು ಅನುಕೂಲವಾಗಿದೆ.
ಅಂದಹಾಗೆ ಯುಜಿಸಿ ಅಪ್‌ಡೇಟ್ ಮಾಡಿರುವ ಹೊಸ ಪಠ್ಯಕ್ರಮವನ್ನು ತಮ್ಮ ವಿಷಯಗಳಂತೆ ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಓಪನ್ ಆಗುವ ವೆಬ್‌ಪೇಜ್ ನಲ್ಲಿ ಆಯಾ ವಿಷಯಗಳ ಮುಂದೆ ಪಠ್ಯಕ್ರಮವನ್ನು English ಅಥವಾ Hindi ಎರಡು ಭಾಷೆಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ತಮಗೆ ಅನುಕೂಲವಾದ ಭಾಷೆಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಯುಜಿಸಿ – ಎನ್ಇಟಿ ಅಪ್‌ಡೇಟೆಡ್ ಪಠ್ಯಕ್ರಮಕ್ಕಾಗಿ – ಕ್ಲಿಕ್ ಮಾಡಿ
Updated Syllabus of UGC-NET (Applicable from June 2019 UGC-NET Onwards) – Click Here
Link for UGC-NET Syllabus of Sindhi (Arabic Script) , Sindhi (Devnagari Script), Santali, Yoga – Click Here
University Grants Commission has updated Syllabus of UGC NET. This Syllabus applicable from June 2019 UGC NET onwards. Read more here..