ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯುಜಿಸಿ ಎನ್‌ಇಟಿ ಜೂನ್ 2021 ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಅಫೀಶಿಯಲ್ ವೆಬ್‌ಸೈಟ್ https://ugcnet.nta.nic.in/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಸಲ್ಲಿಸಬಹುದು.
UGC NET 2021 June exam ಮೂಲಕ JRF ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಬಾರಿಗೆ ಮಾತ್ರ ಅನ್ವಯವಾಗುವಂತೆ ಅಕ್ಟೋಬರ್ 01, 2021 ಕ್ಕೆ 31 ವರ್ಷ ಮೀರಿರಬಾರದು ಎಂದು ಎನ್‌ಟಿಎ ತಿಳಿಸಿದೆ.
UGC NET 2021 June exam ಅರ್ಜಿ ಸಲ್ಲಿಸಲು ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಎಂಎ ಪದವಿ ಪಡೆದಿರಬೇಕು.
ಪರೀಕ್ಷಾ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: ಆಗಸ್ಟ್ 10, 2021
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 05, 2021 ರ ರಾತ್ರಿ 11-50 ಗಂಟೆವರೆಗೆ.
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ : ಸೆಪ್ಟೆಂಬರ್ 7- 12, 2021 ರವರೆಗೆ.
ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: ಮುಂದಿನ ದಿನಗಳಲ್ಲಿ ಎನ್‌ಟಿಎ ವೆಬ್‌ನಲ್ಲಿ ತಿಳಿಸಲಾಗುತ್ತದೆ.
ಪರೀಕ್ಷಾ ದಿನಾಂಕ : 2021 ರ ಅಕ್ಟೋಬರ್ 06 ರಿಂದ 11
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.500
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.250.
ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು 300 ಅಂಕಗಳಿಗೆ ನಡೆಸಲಾಗುತ್ತದೆ. ಸಾಮಾನ್ಯ ಪ್ರಶ್ನೆ ಪತ್ರಿಕೆ ಪೇಪರ್ 1 100 ಅಂಕಗಳ 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಷಯ ಪತ್ರಿಕೆ 200 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಒಟ್ಟು 300 ಅಂಕಗಳಿಗೆ 3 ಗಂಟೆ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷೆ ಸಮಯ: ಮೊದಲ ಶಿಫ್ಟ್ 9-00 ಗಂಟೆಯಿಂದ 12-00 ಗಂಟೆ ವರೆಗೆ ನಡೆಯುತ್ತದೆ. ಎರಡನೇ ಶಿಫ್ಟ್ ಮಧ್ಯಾಹ್ನ 03-00 ಗಂಟೆಯಿಂದ ಸಂಜೆ 06-00 ಗಂಟೆ ವರೆಗೆ ಇರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
- ಎನ್‌ಟಿಎ ವೆಬ್‌ಸೈಟ್ https://ugcnet.nta.nic.in/ ಗೆ ಭೇಟಿ ನೀಡಿ
- ‘Application Form UGC-NET December 2020 and June 2021 Cycles’ ಎಂದಿರುವಲ್ಲಿ ಕ್ಲಿಕ್ ಮಾಡಿ
- ಓಪನ್ ಆದ ಹೊಸ ಪೇಜ್‌ನಲ್ಲಿ ಮೊದಲ ಬಾರಿ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ‘New Registration’ ಎಂಬುದರ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.
- ಈ ಹಿಂದೆ ಅರ್ಜಿ ಸಲ್ಲಿಸಿ ಈಗಾಗಲೇ ಪರೀಕ್ಷೆ ಬರೆದ ಅಭ್ಯರ್ಥಿಗಳು, ಬಲಭಾಗದಲ್ಲಿ ತಮ್ಮ ಹಿಂದಿನ ಬಾರಿಯ ಅಪ್ಲಿಕೇಶನ್ ನಂಬರ್, ಪಾಸ್‌ವರ್ಡ್(ಜನ್ಮ ದಿನಾಂಕ) ನೀಡಿ ಸೈನ್ ಇನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
Apply Online for UGC NET June 2021