Home » KSET ಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿಕೆ ಜೊತೆಗೆ ಪರೀಕ್ಷೆಯು ಮುಂದೂಡಿಕೆ

KSET ಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿಕೆ ಜೊತೆಗೆ ಪರೀಕ್ಷೆಯು ಮುಂದೂಡಿಕೆ

by manager manager

16 ಡಿಸೆಂಬರ್ 2018 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(KSET) ಅನ್ನು ಮುಂದೂಡಲಾಗಿದೆ. ಇದೇ ದಿನಾಂಕದಂದು ಎನ್‌ಇಟಿ ಪರೀಕ್ಷೆ ಸಹ ನಡೆಯುವ ಕಾರಣದಿಂದ ಮೈಸೂರು ವಿಶ್ವವಿದ್ಯಾನಿಲಯವು ಪರೀಕ್ಷೆಯನ್ನು ಡಿಸೆಂಬರ್ 30 ಕ್ಕೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಅಲ್ಲದೇ ಅರ್ಜಿ ಸಲ್ಲಿಸಲು ಹೆಚ್ಚಿನ ದಿನಗಳ ಅವಕಾಶ ನೀಡಿದೆ. ಮೈಸೂರು ವಿಶ್ವವಿದ್ಯಾಲಯವು ಕೆಎಸ್‌ಇಟಿ’ಗೆ ಸಂಬಂಧಿಸಿದಂತೆ ಹೊರಡಿಸಿರುವ ಇತ್ತೀಚಿನ ಪ್ರಕಟಣೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ.

– ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 23/08/2018
– ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/09/2018
– ದಂಡ 150 ರೂ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 10/10/2018
– ಭರ್ತಿಮಾಡಿ ಮುದ್ರಿಸಿದ ಅರ್ಜಿಯೊಂದಿಗೆ ರಶೀದಿ/ಇ-ಚಲನ್, ಜಾತಿ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿದ ನೊಡೆಲ್ ಕೇಂದ್ರಕ್ಕೆ ಸಲ್ಲಿಸಲು ಕೊನೆಯ ದಿನಾಂಕ : 15/10/2018
ಪರೀಕ್ಷಾ ದಿನಾಂಕ : 30/12/2018

KSET ಪರೀಕ್ಷೆ ಅರ್ಹತೆ ಪಡೆದವರು ಎಲ್ಲೆಲ್ಲಿ ನೇಮಕಗೊಳ್ಳಲು ಅರ್ಹರು?
ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆ(ಸರ್ಕಾರಿ, ಅನುದಾನಿತ ಮತ್ತು ಖಾಸಗಿ)ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

University of Mysore has extended the date of online application to their aspirants. The candidates can apply for KSET examination till to 29 september 2018 without fine.

You may also like