UGC announces various scholarships for post graduate students.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(UGC) ಪ್ರಸ್ತುತ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವಿದ್ಯಾರ್ಥಿ ವೇತನಗಳನ್ನು ಪ್ರಕಟಿಸಿದೆ. ಅವುಗಳು ಈ ಕೆಳಗಿನಂತಿವೆ..
1 ಒಬ್ಬಳೇ ಹೆಣ್ಣು ಮಗಳಾಗಿರುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಗೆ ಇಂದಿರಾ ಗಾಂಧಿ ವಿದ್ಯಾರ್ಥಿ ವೇತನ 2018-19
ಪೋಷಕರಿಗೆ ಒಬ್ಬಳೇ ಹೆಣ್ಣು ಮಗಳಾಗಿದ್ದು 30 ವರ್ಷ ಮೀರದ ಸ್ನಾತಕೋತ್ತರ ಪದವಿ ಮೊದಲ ವರ್ಷಕ್ಕೆ ದಾಖಲಾತಿ ಪಡೆದಿರುವ ವಿದ್ಯಾರ್ಥಿನಿಯರು ಇಂದಿರಾ ಗಾಂಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಇಂದಿರಾ ಗಾಂಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ ವಾರ್ಷಿಕವಾಗಿ 36,200 ರೂಗಳಂತೆ ಎರಡೂ ವರ್ಷವು ಈ ವಿದ್ಯಾರ್ಥಿ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನೇನು?
ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿನಿಯರು ಆಧಾರ್ ನಂಬರ್, ಒಂದು ಫೋಟೋ, ಹಿಂದಿನ ಪದವಿಯ ಸ್ವಯಂ ಅಟೆಸ್ಟ್ ಮಾಡಿರುವ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಮತ್ತು ಪ್ರಸ್ತುತ ಸ್ತಾತಕೋತ್ತರ ಪದವಿಗೆ ದಾಖಲಾತಿ ಪಡೆದಿರುವ ಶುಲ್ಕದ ರಶೀದಿ.
2 ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ಪಡೆದಿರುವವರಿಗೆ ಸ್ನಾತಕೋತ್ತರ ಪದವಿ ಮೆರಿಟ್ ಸ್ಕಾಲರ್‌ಶಿಪ್ 2018-19
ಕೆಮಿಕಲ್ ಸೈನ್ಸ್, ಅರ್ಥ್ ಸೈನ್ಸ್, ಲೈಫ್ ಸೈನ್ಸ್, ಭೌತಿಕ ವಿಜ್ಞಾನ, ವಾಣಿಜ್ಯ ಶಾಸ್ತ್ರ, ಐಚ್ಛಿಕ ಭಾಷೆ ಅಧ್ಯಯನಗಳು, ಗಣಿತ ವಿಜ್ಞಾನ, ಸಮಾಜಿಕ ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದಿರುವ, 30 ವರ್ಷ ಮೀರದವರು ತಮ್ಮ ಪದವಿ ಮಟ್ಟದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಕನಿಷ್ಠ ಶೇಕಡ 60 ಅಂಕಗಳಿಂದ 1st ಮತ್ತು 2nd ರ್ಯಾಂಕ್ ಪಡೆದವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಪ್ರತಿ ತಿಂಗಳಿಗೆ 3100 ರೂ ಗಳಂತೆ ಎರಡು ವರ್ಷಗಳ ಕಾಲ ವಿದ್ಯಾರ್ಥಿ ವೇತನ ಪಡೆಯಬಹುದು.
ಅರ್ಜಿ ಸಲ್ಲಿಸಲು ಏನೇನು ದಾಖಲೆಗಳು ಬೇಕು?
ಸ್ವಯಂ ಅಟೆಸ್ಟ್ ಮಾಡಿದ ಪದವಿ ಮಟ್ಟದ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಪ್ರತಿ, ಸ್ನಾತಕೋತ್ತರ ಪ್ರವೇಶಾತಿ ಪ್ರಮಾಣ ಪತ್ರ, ಆಧಾರ್ ಜೆರಾಕ್ಸ್ ಪ್ರತಿ.
3 2018-19 ನೇ ಸಾಲಿಗೆ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾತಿ ಪಡೆದಿರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿವೇತನ
ಸ್ನಾತಕೋತ್ತರ ಪದವಿ ಮಟ್ಟದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ದಾಖಲು ಪಡೆದಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ದೊರೆಯಲಿದ್ದು, ಯುಜಿಸಿ ಮಾನ್ಯತೆ ಪಡೆದಿರುವ ಸಂಸ್ಥೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಿಗಲಿದೆ. ME ಮತ್ತು MTech ವಿದ್ಯಾರ್ಥಿಗಳು ಪ್ರತಿ ತಿಂಗಳಿಗೆ 7800 ರೂ ಮತ್ತು ಇತರೆ ವೃತ್ತಿಪರ ಕೋರ್ಸ್‌ಗಳಿಗೆ ರೂ.4500 ವಿದ್ಯಾರ್ಥಿವೇತನ ಸಿಗಲಿದೆ.
ಈ ಮೇಲಿನ ಸ್ಕಾಲರ್‌ಶಿಪ್ ಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30, 2018
ಅರ್ಜಿ ಸಲ್ಲಿಸಲು ಬೇಟಿ ನೀಡಿ ಅಧಿಕೃತ ವೆಬ್ ವಿಳಾಸ : https://scholarships.gov.in/fresh/loginPage
The University Grant Commission (UGC) announced various scholarships for countrys students at the post graduate level students. Read more here