ಮೊದಲಿಗೆ ಥೈರಾಯ್ಡ್ ಸಮಸ್ಯೆ ಹೇಗೆ ಬರುತ್ತದೆ ಎಂದು ತಿಳಿಯೋಣ. ಹೈಪೋ ಥೈರಾಯ್ಡ್ ಟಿ2, ಟಿ4 ಹಾರ್ಮೋನ್ ಕಡಿಮೆ ಆಗುವುದರಿಂದ ಹೈಪೋ ಥೈರಾಯಿಡಿಸಮ್ ಸಮಸ್ಯೆ ಉಂಟಾಗುತ್ತದೆ. ಟಿ3, ಟಿ4 ಹಾರ್ಮೋನ್ ಹೆಚ್ಚಾಗುವುದರಿಂದ ಹೈಪರ್ ಥೈರಾಯಿಡಿಸಮ್ ಉಂಟಾಗುತ್ತದೆ. ಥೈರಾಯಿಡ್ ಗ್ರಂಥಿಯ ತೊಂದರೆಗಳಿಂದಾಗಿ ಶಾರೀರಿಕ ವ್ಯವಸ್ಥೆಯ ಮೇಲೆ ಮಾತ್ರವಲ್ಲದೆ ಮಾನಸಿಕ ವ್ಯವಸ್ಥೆಗೆ ಕೂಡ ತೊಂದರೆ ಉಂಟಾಗುತ್ತದೆ. ಅದಕ್ಕೆ ಥೈರಾಯಿಡ್ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು, ಪ್ರಪಂಚದ ಜನಸಂಖ್ಯೆಯಲ್ಲಿ ಸುಮಾರು ಶೇ. 7.5 ರಷ್ಟು ಸ್ತ್ರೀಯರು ಇಂದು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಪುರುಷರಲ್ಲಿ ಈ ಸಮಸ್ಯೆ 1.5 ರಷ್ಟು ಜನರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ಬರುವುದಕ್ಕೆ ಮೂಲ ಕಾರಣ ಅಸಮರ್ಪಕ ಜೀವನಶೈಲಿ ಹಾಗೂ ಮಾನಸಿಕ ಒತ್ತಡ.
ಥೈರಾಯಿಡ್ ಗ್ರಂಥಿ ಜೀವಕ್ರಿಯೆಗಳಿಗೆ ಅವಶ್ಯಕವಾದ ಗ್ರಂಥಿ ಆಗಿರುವುದರಿಂದ ಇದರ ಅಸ್ತಿತ್ವ ಬಹಳ ಮುಖ್ಯಾಪಾತ್ರವನ್ನು ವಹಿಸುತ್ತದೆ. ಆದರೆ ಈ ಸಮಸ್ಯೆ ಇರುವ ಬಹಳ ಜನರಿಗೆ ಆ ವಿಷಯವೇ ತಿಳಿದಿರುವುದಿಲ್ಲ. ಆಹಾರ ಸೇವನೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದೆ ಬಹಳಷ್ಟು ವೇಗವಾಗಿ ತೂಕ ಹೆಚ್ಚುವುದನ್ನು ಹೈಪೋಥೈರಾಯಿಡ್ ಸಮಸ್ಯೆಯಲ್ಲಿ ಒಂದಾಗಿದೆ.
ಹೈಪೋಥೈರಾಯಿಡಿಸಂನಲ್ಲಿ ಮಾನಸಿಕ ತೊಂದರೆಗಳು ಬಹಳಷ್ಟು ಕಂಡುಬರುತ್ತವೆ. ಸಮಸ್ಯೆಯನ್ನು ಗುರುತಿಸುವುದರಲ್ಲಿ ತಡವಾದರೆ ಸ್ಥೂಲಕಾಯದ ಜೊತೆಗೆ ಹೃದಯ ರೋಗಗಳು ಮತ್ತು ಕೂದಲು ಉದುರುವುದು, ಲೈಂಗಿಕ ಸಮಸ್ಯೆಗಳು, ಬಂಜೆತನ ಕೂಡಾ ತಲೆದೂರಬಹುದು. ಇಂದು ಥೈರಾಯ್ಡ್ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಹಾದಿ ತಪ್ಪಿದ ಆಹಾರ ಪದ್ಧತಿಯಿಂದಾಗಿ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ತಪ್ಪಿಸಲು, ನಮ್ಮ ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪುರುಷರಿಗಿಂತ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಥೈರಾಯ್ಡ್ ಸಮಸ್ಯೆಯನ್ನು ತಪ್ಪಿಸಲು ಯಾವ ವಸ್ತುಗಳನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಥೈರಾಯ್ಡ್ ಇದ್ದವರು ಆರೋಗ್ಯವನ್ನು ಕಾಪಾಡಲು ಪ್ರಮುಖ ಆಹಾರಕ್ರಮಗಳಿವೆ. ಅವುಗಳೆಂದರೇ :
ಥೈರಾಯ್ಡ್ ಆರೋಗ್ಯವನ್ನು ಕಾಪಾಡಲು ಸೇವಿಸಬೇಕಾದ ಆಹಾರ :
– ಸಮುದ್ರ ಆಹಾರವನ್ನು ಬೇಯಿಸಿ ತಿನ್ನುವುದು. ಮುಖ್ಯವಾಗಿ ಮೀನು ಮತ್ತು ಟೋನಾ, ಶ್ರೀಂಪ್ ಅನ್ನು ತಿನ್ನುವುದು
– ಹಾಲಿನ ಉತ್ಪನ್ನಗಳು, ಮೊಸರು, ಯಾಗುರ್ಟ್, ಚೀಸ್ ಮುಂತಾದವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು
– ಮೊಟ್ಟೆಯನ್ನು ಮರೆಯುವ ಹಾಗೇ ಇಲ್ಲ ದಿನವೊಂದಕ್ಕೆ ಮೊಟ್ಟೆಯನ್ನು ಸೇವಿಸುವುದು
– ಡ್ರೈ ನಟ್ಸ್‍ಗಳನ್ನು ತಿನ್ನುವುದು
– ಕ್ಯಾರೆಟ್ ಜ್ಯೂಸ್ ಕುಡಿಯಿರಿ ನೈಸರ್ಗಿಕವಾಗಿ ಸಿಹಿಯಾಗಿರುವÀ ಹಾಗೂ ಪೌಷ್ಟಿಕಾಂಶಗಳಿಂದಾಗಿ ಇದನ್ನೊಂದು ಅಪ್ಪಟ ಆರೋಗ್ಯಕರ ಆಹಾರವೆಂದು ಕರೆಯ ಬಹುದು. ಕ್ಯಾರೆಟ್ ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಬೀಟಾ ಕ್ಯಾರೋಟಿನ್ ಇದ್ದು ಇವು ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನುಗಳನ್ನು ನಿಯಂತ್ರಿಸಲು ನೆರವಾಗುತ್ತವೆ.
– ಪುರಾತನ ಕಾಲದಿಂದಲೂ ಆಯುರ್ವೇದ ಪದ್ದತಿಯಲ್ಲಿ ಹೆಚ್ಚು ಉಪಯೋಗಿಸಲ್ಟಡುತ್ತಿದ್ದ ಔಷದೀಯ ಸಸ್ಯ ಅಶ್ವಗಂಧ. ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಉಂಟಾದರೆ ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯವೆಂದರೆ ಅಶ್ವಗಂಧ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಅಶ್ವಗಂಧದಲ್ಲಿ ಆರೋಗ್ಯಕ್ಕೆ ಹೇರಳವಾದ ಲಾಭವಿದೆ. ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ಶೇ. 90ರಷ್ಟು ಮಹಿಳೆಯರಿಗೆ ತಲೆ ಸುತ್ತು, ಒತ್ತಡ, ನಿದ್ದೆ ಹೀನತೆ, ಕುತ್ತಿಗೆ ಬಳಿ ನೋವು ಕಾಣಿಸಿಕೊಳ್ಳುತ್ತದೆ. ಅಶ್ವಗಂಧ ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ.
– ಅಣಬೆ, ಪಾಲಕ್ ಸೊಪ್ಪು, ಸಾಸವೆ ಕಾಳು, ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಿ
ಥೈರಾಯ್ಡ್ ಆರೋಗ್ಯವನ್ನು ಕಾಪಾಡಲು ಸೇವಿಸಲೇಬಾರದ ಆಹಾರ :
– ಸೋಯ ಆಹಾರ
– ಕೋಸು, ಬಾರ್ಕೋಲಿ, ಹೂ ಕೋಸು, ಸ್ಪ್ಯಾನಿಚ್ ಸೊಪ್ಪುಗಳನ್ನು ಅತೀ ಹೆಚ್ಚು ತಿನ್ನಲೇಬಾರದು
– ಶೀತಯುಕ್ತ ಹಣ್ಣುಗಳು, ಗೆಣಸು, ಸ್ಟ್ರಾಬೆರಿಸ್
– ಕಡ್ಲೆಕಾಯಿ ಬೀಜ, ರಾಗಿ ಯನ್ನು ಸೇವಿಸಬಾರದು
– ಉಪ್ಪು ಸೇವನೆ ಸೀಮಿತವಾಗಿರಬೇಕು. ಅತಿಯಾದ ಪ್ರಮಾಣದ ಉಪ್ಪನ್ನು ಸೇವಿಸುವುದರಿಂದ ಥೈರಾಯ್ಡ್ ತೊಂದರೆ ಉಂಟಾಗುತ್ತದೆ. ಥೈರಾಯ್ಡ್ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ನಿಮ್ಮ ಆಹಾರದಲ್ಲಿ ನೀವು ಕಲ್ಲು ಉಪ್ಪನ್ನು ಸೇರಿಸಿಕೊಳ್ಳಬೇಕು.
ಆಹಾರದ ಪದಾರ್ಥಗಳ ಜೊತೆಗೆ ಸೇವಿಸುವ ಪಾನಿಯಗಳು :
– ವಿಟಮಿನ್ಸ್ ಮತ್ತು ಮಿನರಲ್ಸ್ ಇರುವ ಪಾನಿಯಗಳು
– ವಿಟಮಿನ್ ಸಿ ಇರುವ ಪಾನಿಯಾಗಳು
– ನಿಂಬೆಹಣ್ಣಿನ ರಸವನ್ನು ಪಾನಿಯಾ ರೂಪದಲ್ಲಿ ಸೇವಿಸುವುದು
ಥೈರಾಯ್ಡ್‍ನಿಂದ ದೇಹ ತೂಕ ಸಮಸ್ಯೆ ಹೆಚ್ಚಾಗಿದ್ದರೇ
– ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸುಮಾರು 7ಗಂಟೆಗೆ ಬಿಸಿ ನೀರಿಗೆ ನಿಂಬೆ ರಸ, ಜೇನುತುಪ್ಪ, ಸೇಬು ಸೈಡರ್ ವಿನೆಗರ್ ಅನ್ನು ಸೇರಿಸಿ ಮಿಶ್ರಗೊಳಿಸಿ, ಸೇವಿಸಿ.
– 8-9 ಗಂಟೆಯ ಒಳಗೆ ಬಾಳೆಹಣ್ಣು ಮತ್ತು ದಾಳಿಂಬೆ ಬೀಜದ ಸಲಾಡ್ ಅಥವಾ ಸೇಬು, ಬಾಳೆ ಮತ್ತು ಚಿಯಾ ಬೀಜಗಳ ಸಲಾಡ್ ಒಂದು ಬೌಲ್ ಅಥವಾ ಬೇಯಿಸಿದ ಕಾಳುಗಳನ್ನು ಸೇವಿಸಬೇಕು.
– 10.30 ಗಂಟೆಗೆ ಕಡಿಮೆ ಕೊಬ್ಬಿನಂಶ ಇರುವ ಮೊಸರು ಅರ್ಧಕಪ್, ದಾಳಿಂಬೆ ಬೀಜ, ನೆನೆಸಿದ ಚಿಯಾ ಬೀಜ ಮತ್ತು ಅಲಂಕಾರಕ್ಕೆ ತಾಜಾ ಸೊಪ್ಪುಗಳನ್ನು ಬಳಸಿ ಸೇವಿಸಿ.
– ಮಧ್ಯಾಹ್ನ 1-2 ಗಂಟೆಯ ವೇಳೆಗೆ 1 ಬೌಲ್ ಓಟ್ಸ್, 2 ಮಲ್ಟಿ ಗ್ರೇನ್ ಚಪಾತಿ, 1 ಬೌಲ್ ದಾಲ್/ಮೊಸರು, ಸೂಪ್, ಅನ್ನ, ಬೇಯಿಸಿದ ತರಕಾರಿಯನ್ನು ಸೇವಿಸಬಹುದು.
– ನಂತರ ಮಜ್ಜಿಗೆ ಅಥವಾ ಗ್ರೀನ್ ಟೀ ಸೇವಿಸಿ.
– 4ಗಂಟೆಯ ತಿಂಡಿಗಾಗಿ ಒಣ ಹಣ್ಣುಗಳು, ಮೊಳಕೆ ಬರಿಸಿದ ಕಾಳು ಸೇರಿಸಿದಂತೆ ಆರೋಗ್ಯಕರ ತಿಂಡಿಯನ್ನು ಸೇವಿಸಿ.
– ರಾತ್ರಿ ಊಟಕ್ಕೆ ಮೊದಲು ಒಂದು ಪ್ಲೇಟ್ ಹಸಿರು ತರಕಾರಿ ಸೇವಿಸಿ.
– ರಾತ್ರಿ ಊಟಕ್ಕೆ ಸೂಪ್, ಚಪಾತಿ, ಕಂದು ಅಕ್ಕಿ ಸೇರಿದಂತೆ ಆರೋಗ್ಯಕರ ಆಹಾರವನ್ನು ಸೇವಿಸಿ. ಮಲಗುವ ಮುನ್ನ 30 ನಿಮಿಷ ಮೊದಲು ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ, ಸೇವಿಸಿ.
ಆರೋಗ್ಯ ಕಾಪಾಡಿಕೊಳ್ಳಲು ಪ್ರೋಟೀನ್ ಬೇಕೆಬೇಕು., ಯಾವೆಲ್ಲ ಪದಾರ್ಥಗಳಲ್ಲಿ ಪ್ರೋಟೀನ್ ಇರುತ್ತೆ ಗೊತ್ತೇ?