ನಮ್ಮ ದೇಹಕ್ಕೆ ಒಂದಲ್ಲ ಒಂದು ರೀತಿಯ ಆಹಾರ ಬೇಕು. ಅದರಲ್ಲೂ ಆ ದೇಹವನ್ನು ಆರೋಗ್ಯವಾಗಿಡಲು ಪ್ರೋಟೀನ್‍ಯುಕ್ತ ಆಹಾರ ಬೇಕೆಬೇಕು. ಇಂದು ಎಲ್ಲಾ ಆಹಾರದಲ್ಲೂ ಕಲಬೆರಕೆ ಇದೆ. ಆ ಕಲಬೆರಕೆ ಆಹಾರವನ್ನು ಸೇವಿಸುತ್ತಿರುವ ನಮಗೆ ಪ್ರೋಟೀನ್ ಇರುವ ಆಹಾರ ದೇಹಕ್ಕೆ ಸೇರದೆ ಹೋದರೆ ನಾನಾ ರೀತಿಯ ಖಾಯಿಲೆಗಳಿಗೆ ನಾವೇ ತಾಂಬೂಲ ಕೊಟ್ಟು ಆಹ್ವಾನ ನೀಡಿದಂತೆ ಆಗುತ್ತದೆ. ಹಾಗಾಗೀ ನಮ್ಮ ದೇಹಕ್ಕೆ ಯಾವ ಸಮಯಕ್ಕೆ ಯಾವ ರೀತಿಯ ಆಹಾರ ಸಿಕ್ಕರೆ ಆರೋಗ್ಯವಾಗಿರುತ್ತೆ ಎಂಬುದನ್ನು ತಿಳಿದುಕೊಂಡು ಅದನ್ನು ಕೊಡುತ್ತ ಬಂದರೆ ಆರೋಗ್ಯವು ಚೆನ್ನಾಗಿರುತ್ತೆ. ನಾವು ಯಾವುದೇ ಕೆಲಸ ಕಾರ್ಯದಲ್ಲಿ ಚುರುಕಾಗಿದ್ದು ಯಶಸ್ವಿಯಾಗಿ ಬೆಳೆಯಬೇಕಾದರೇ ಅದಕ್ಕೆ ಪ್ರೋಟೀನ್‍ಯುಕ್ತ ಆಹಾರ ಬೇಕು.
ನಾವು ಸೇವಿಸುವ ಆಹಾರದಲ್ಲಿ ಭಿನ್ನ ಭಿನ್ನ ಪದ್ಧತಿಗಳಿವೇ, ಸಸ್ಯಹಾರ, ಮಾಂಸಹಾರ ಎಂಬ ವಿಂಗಡಣೆ ಕೂಡ ಇದೆ. ಹಾಗಾಗೀ ಈ ಲೇಖನದಲ್ಲಿ ಇವೆರೆಡನ್ನು ಸಹ ವಿವರಣೆ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ. ವೈದ್ಯರ ಪ್ರಕಾರ ನಮ್ಮ ದೇಹಕ್ಕೆ ದಿನವೊಂದಕ್ಕೆ ಇಷ್ಟು ಕ್ಯಾಲೋರಿಗಳು ಮತ್ತು ಪ್ರೋಟೀನ್ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ನಾವು ತೆಗೆದುಕೊಳ್ಳುವ ಆಹಾರದಲ್ಲಿ ಸಮಯಕ್ಕೆ ಸರಿಯಾಗಿ ವಿಂಗಡನೆ ಮಾಡಿ ತೆಗೆದುಕೊಳ್ಳಬೇಕು. ಯಾವುದೇ ಆಹಾರವಾಗಲೀ ಮಧ್ಯ ಮಧ್ಯ ಸಮಯವನ್ನು ಕೊಟ್ಟು ಸೇವಿಸಬೇಕು ಹಾಗಾದಲ್ಲಿ ಮಾತ್ರ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಪ್ರೋಟೀನ್‍ಯುಕ್ತ ಆಹಾರ ಹೋದರೆ ನಮ್ಮ ದೇಹ ನಾವು ಹೇಳಿದ ರೀತಿ ಕೇಳುತ್ತದೆ. ಇಲ್ಲವಾದಲ್ಲಿ ದೇಹದ ಮಾತನ್ನು ನಾವು ಕೇಳಿ ಸೊಂಬೇರಿಗಳಾಗಿ ಬೊಜ್ಜು, ಅನಾರೋಗ್ಯಕ್ಕೆ ವಿಳ್ಯೆದೆಲೆಕೊಟ್ಟು ನಾವೇ ಆಹ್ವಾನ ಕೊಟ್ಟ ರೀತಿ ಆಗುತ್ತದೆ.
ಸಸ್ಯಹಾರಿಗಳಿಗಾಗಿ ಪ್ರೋಟೀನ್ ಇರುವ ಆಹಾರಗಳು
ಸಸ್ಯಹಾರಕ್ಕಿಂತ ಮಾಂಸಹಾರದಲ್ಲಿ ಹೆಚ್ಚಿನ ಪ್ರೋಟೀನ್‍ಯುಕ್ತ ಆಹಾರವಿದೆ ಎಂಬ ವಾದವಿದೆ. ಆದರೆ ಅದು ಸುಳ್ಳು ನಿಮಗೆ ಮಾಂಸಹಾರಕ್ಕೆ ಹೋಲಿಸಿದರೆ ಸಸ್ಯಹಾರದಲ್ಲೂ ಸಹ ಅನೇಕ ರೀತಿಯ ಪ್ರೋಟೀನ್ ಆಹಾರವಿದೆ.
– ತರಕಾರಿಗಳು :- ಕ್ಯಾರೆಟ್, ಎಲೆಕೋಸು, ಬಟಾಣಿ, ಅವರೆಕಾಯಿ, ಹಸಿರೆಲೆ ತರಕಾರಿ, ಇವುಗಳಲ್ಲಿ ಹೆಚ್ಚಿನ ಪ್ರೋಟೀನ್ ಇದ್ದು ಇದನ್ನು ದಿನ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು.
– ಸೊಪ್ಪುಗಳು :- ಪ್ರತಿಯೊಂದು ಸೇವಿಸುವ ಸೊಪ್ಪಿನಲ್ಲೂ ಪ್ರೋಟೀನ್ ಇದ್ದೆ ಇರುತ್ತೆ. ಮಾಂಸಕ್ಕೆ ಪೈಪೋಟಿ ಕೊಡುವ ಪ್ರೋಟೀನ್‍ಯುಕ್ತ ಆಹಾರವೆಂದರೇ ಅದು ಸೊಪ್ಪುಗಳು ಮಾತ್ರ. ಆ ರೀತಿಯ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪಿನಲ್ಲಿ 5 ಗ್ರಾಂನಷ್ಟು ಪ್ರೋಟೀನ್ ಇದ್ದು ಇದು ಮೊಟ್ಟೆ ಕೊಡುವ ಪ್ರೋಟೀನ್‍ನನ್ನು ಕೊಡುತ್ತದೆ.
– ಹಾಲಿನ ಉತ್ಪನ್ನಗಳು :- ಸಸ್ಯಹಾರಿಗಳಿಗೆ ಹೆಚ್ಚಿನ ಪ್ರೋಟೀನ್ ಕೊಡುವುದು ಈ ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ಗಿಣ್ಣು, ಪನ್ನೀರ್, ತುಪ್ಪ ಇದರಲ್ಲಿ ಹೆಚ್ಚಿನ ಪ್ರೋಟೀನ್ ಹೊಂದಿದೆ. ಇದನ್ನು ಮಿತವಾಗಿ ಬಳಸಿದರೆ ಒಳ್ಳೆಯದು.
– ಕ್ವಿನೋದಲ್ಲಿ ಪ್ರೋಟೀನ್ ಹೆಚ್ಚಿದೆ ಇದು ಒಂದು ಕಪ್‍ಗೆ 8 ಗ್ರಾಂನಷ್ಟು ಪ್ರೋಟೀನ್ ಇರುತ್ತೆ, ಇದರಿಂದ ದೇಹದ ಬೆಳವಣಿಗೆ ಬೇಕಾದ 9 ಪ್ರಮುಖ ಅಮಿನೋ ಆಮ್ಲವು ಇದೆ.
– ಸೋಯಾ ಮೊಸರಿನ ಅರ್ಧ ಕಪ್‍ನಲ್ಲಿ 15-20 ಗ್ರಾಂನಷ್ಟು ಪ್ರೋಟೀನ್ ಇರುವುದರಿಂದ ನಿಮ್ಮ ಹೃದಯವನ್ನು ಸಹ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
– ಅರ್ಧ ಕಪ್ ಚನ್ನಾದಲ್ಲಿ 7.3 ರಷ್ಟು ಪ್ರೋಟೀನ್ ಇದೆ ಮತ್ತು ಕಿಡ್ನಿ ಬೀನ್ಸ್‍ನಲ್ಲೂ ಕೂಡ ಅರ್ಧ ಕಪ್‍ನಲ್ಲಿ 7.5 ರಷ್ಟು ಪ್ರೋಟೀನ್ ಹೊಂದಿರುತ್ತೆ ಹಾಗಾಗೀ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.
– ಡ್ರೈ ಫ್ರೂಟ್ಸ್ ಕೂಡ ನಮ್ಮ ದೇಹಕ್ಕೆ ಒಳ್ಳೆಯ ಪ್ರೋಟೀನ್‍ನನ್ನು ಕೊಡುತ್ತದೆ. ಇದರಲ್ಲಿ ಬಾದಾಮಿ, ಒಣದ್ರಾಕ್ಷಿ, ಗೋಡಂಬಿ ಮುಂತಾದುವುಗಳಿವೆ.
ಮಾಂಸಹಾರಿಗಳಿಗಾಗಿ ಪ್ರೋಟೀನ್ ಇರುವ ಆಹಾರಗಳು :
– ಮೊಟ್ಟೆ :- ಮೊಟ್ಟೆಯನ್ನು ಸಸ್ಯಹಾರಕ್ಕೆ ಸೇರಿಸಬೇಕಾ ಅಥವ ಮಾಂಸಹಾರಕ್ಕೆ ಸೇರಿಸಬೇಕಾ ಎಂಬ ಜಿಜ್ಞಾಸೆಯಲ್ಲಿದ್ದೇವೆ ಹಾಗಾಗೀ ಒಂದು ಮೊಟ್ಟೆಯಲ್ಲಿ 78% ರಷ್ಟು ಕ್ಯಾಲೋರಿ ಇದೆ, 6 ಗ್ರಾಂನಷ್ಟು ಪ್ರೋಟೀನ್ ಇದೆ ಆದ್ದರಿಂದ ದಿನವೊಂದಕ್ಕೆ ಒಂದು ಮೊಟ್ಟೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬೇಕಾದಷ್ಟು ಪ್ರೋಟೀನ್ ಸಿಗುತ್ತದೆ.
– ಚಿಕನ್ ಬ್ರೀಸ್ಟ್ :- ಚಿಕನ್ ತಿನ್ನುವವರು ಅದರ ಎದೆಯ ಭಾಗವನ್ನು ಹೆಚ್ಚು ತಿನ್ನಬೇಕು ಕಾರಣ ಬೇರೆ ಅಂಗಗಳಿಗೆ ಹೋಲಿಸಿದರೆ ಎದೆಭಾಗದಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ. ಇದರಲ್ಲಿ 53 ಗ್ರಾಂನಷ್ಟು ಪ್ರೋಟೀನ್, 284 ರಷ್ಟು ಕ್ಯಾಲೋರಿ ಇದೆ.
– ಟೂನಾ ಮೀನು :- ಮೀನಿನಲ್ಲಿರುವ ಹೆಚ್ಚಿನ ಪ್ರೋಟೀನ್ ನಮ್ಮ ದೇಹಕ್ಕೆ ಬೇಕಾಗಿರುವ ಪ್ರೋಟೀನ್‍ನನ್ನು ಕೊಡುವುದರಲ್ಲಿ ಮುಂದಿರುತ್ತದೆ. ಇದರಲ್ಲಿ 27 ಗ್ರಾಂನಷ್ಟು ಪ್ರೋಟೀನ್ ಇದ್ದು, 128 ಕ್ಯಾಲೋರಿಸ್ ಇರುತ್ತೆ.
– ಕುರಿ ಮಾಂಸ, ಎಲ್ಲ ತರಹದ ಮೀನುಗಳು, ಸಮುದ್ರದ ಆಹಾರಗಳು, ಹೀಗೆ ಎಲ್ಲದರಲ್ಲೂ ಪ್ರೋಟೀನ್ ಇದ್ದೆ ಇರುತ್ತದೆ ಅದನ್ನು ತಿಳಿದುಕೊಂಡು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ತುಂಬ ಸಹಕಾರಿಯಾಗುತ್ತದೆ.
ಮೂತ್ರಕೋಶ ನೋವಿಗೆ, ಉರಿಮೂತ್ರಕ್ಕೆ ಕಾರಣಗಳೇನು? ಪರಿಹಾರಗಳೇನು?