Home » ‘ಸೂರ್ಯನೇ ಎಲ್ಲಾ ಅವನಿಲ್ಲದೆ ಏನು ಇಲ್ಲ’: ಯಶಸ್ಸಿನ ಹಾದಿಗೆ ಸೂರ್ಯ ಶ್ಲೋಕಗಳು ಇಲ್ಲಿವೆ

‘ಸೂರ್ಯನೇ ಎಲ್ಲಾ ಅವನಿಲ್ಲದೆ ಏನು ಇಲ್ಲ’: ಯಶಸ್ಸಿನ ಹಾದಿಗೆ ಸೂರ್ಯ ಶ್ಲೋಕಗಳು ಇಲ್ಲಿವೆ

by manager manager

ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವತೆಗಳು ಇದ್ದರೂ ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿಯನ್ನು ಬಿಟ್ಟರೇ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಪ್ರತಿದಿನವು ನಾವು ನೋಡಲೇಬೇಕು ಮತ್ತು ಪೂಜಿಸಲೇ ಬೇಕು. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಶೈವ ಧರ್ಮದಲ್ಲಿ ಸೂರ್ಯನನ್ನು ಶಿವನೆಂದು, ವೈಷ್ಣವ ಧರ್ಮದಲ್ಲಿ ವಿಷ್ಣುವೆಂದು ಪೂಜಿಸುತ್ತಾರೆ.

ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಈ ರೀತಿಯಿಂದ ಕರೆಸಿಕೊಳ್ಳುವ ಸೂರ್ಯ ದೇವನಿಗೆ ಅವನದ್ದೇ ಮಂತ್ರಗಳ ಮೂಲಕ ಪಠಣೆ ಮಾಡಿ ಅವನನ್ನು ಪೂಜಿಸಿದರೆ ನಮಗೆ ಒಳ್ಳೆಯ ಆಯಸ್ಸು ಮತ್ತು ಜೀವನ ಪ್ರಾಪ್ತಿಯಾಗುತ್ತದೆ ಎಂಬುದು ಭಾರತೀಯರ ಮನೋಭಾವ. ಹಾಗಾಗೀ ಸೂರ್ಯನನ್ನು ಕುರಿತು 108 ಹೆಸರುಗಳಿಂದ ಕರೆಯುತ್ತಾರೆ.

ಸೂರ್ಯನನ್ನು ಕುರಿತು ಇರುವ ಮಂತ್ರಗಳ ಮಹತ್ವ :

ಈಗಾಗಲೇ ಹೇಳಿರುವ ಹಾಗೇ ಹಿಂದೂ ಧರ್ಮದ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುವ ದೇವ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುವ ಈತನ ಕಿರಣಗಳಿಗೆ ಜೀವರಾಶಿಯನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.

ಸೂರ್ಯ ಮಂತ್ರಗಳು:

ಸೂರ್ಯ ದೇವನನ್ನು ಮನಸ್ಸಿಗೆ ಬಂದಹಾಗೆಲ್ಲ ಪೂಜಿಸುವಂತಿಲ್ಲ. ಅವನನ್ನು ಪೂಜಿಸಲು ಪ್ರತ್ಯೇಕ ಸಮಯವಿದೆ. ಮುಂಜಾನೆ ಸೂರ್ಯ ಹುಟ್ಟಿದಾಕ್ಷಣ ಸ್ನಾನ ಮಾಡಿ ಪರಿಶುದ್ಧ ಮನಸ್ಸಿನಿಂದ ಆತನನ್ನು ಪೂಜಿಸಬೇಕು. ಸೂರ್ಯನನ್ನು ಪೂಜಿಸುವಾಗ ಪಠಿಸಬೇಕಾದ ಕೆಲವು ಮುಖ್ಯವಾದ ಮಂತ್ರಗಳು ಹೀಗಿವೆ:

• ಸೂರ್ಯ ಮಂತ್ರ (Surya mantra)

“ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ

ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ”

ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.

• ಸೂರ್ಯ ಬೀಜ ಮಂತ್ರ (Surya Beeja Mantra)

“ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ”

ಈ ಮಂತ್ರವು ಸೂರ್ಯದೇವನಿಗೆ ನಮಸ್ಕರಿಸುವ ಮಂತ್ರವಾಗಿದೆ. ಸೂರ್ಯ ಬೀಜ ಮಂತ್ರವು ದೈವಿಕ ಶಕ್ತಿಯನ್ನು ಹೊಂದಿದೆ. ಈ ಮಂತ್ರ ಪಠಿಸುವುದರಿಂದ ಸೂರ್ಯ ದೇವನು ಸಕಾರಾತ್ಮಕ ಶಕ್ತಿಯನ್ನು ಕರುಣಿಸುತ್ತಾನೆ. ಮನುಷ್ಯನಿಗೆ ಈ ಮಂತ್ರವು ಕೀರ್ತಿ, ಸಮೃದ್ಧಿಯನ್ನು ನೀಡಿ ಕಷ್ಟಗಳನ್ನು ದೂರಾಗಿಸುತ್ತಾನೆ. ರೋಗನಿವಾರಣೆಯ ಶಕ್ತಿಯನ್ನು ಇದು ಹೊಂದಿದೆ.

ದೇವತೆಗಳ ಪೂಜಾ ವಿಧಾನ ಹೇಗಿರಬೇಕು?

• ಸೂರ್ಯ ಗಾಯತ್ರಿ ಮಂತ್ರ (Surya Gayatri Mantra)

“ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡೇಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್”

ಸೂರ್ಯನಿಗೆ ಸಂಬಂಧಿಸಿದ ಈ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರವನ್ನು ದಿನನಿತ್ಯ ಜಪಿಸುವುದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿದರೆ ಸೂರ್ಯನನ್ನು ಹೊರತುಪಡಿಸಿ ಇತರೆ ಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

• ಸೂರ್ಯ ವಶೀಕರಣ ಮಂತ್ರ (Surya Vasheekarana Mantra)

“ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ”.

• ಆದಿತ್ಯ ಹೃದಯಂ ಮಂತ್ರ (Aditya Hrudayam Mantra)

“ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ

ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ”

ಈ ಮಂತ್ರವು ಸೂರ್ಯದೇವನಿಗೆ ಧನ್ಯವಾದವನ್ನು ಅರ್ಪಿಸುವ ಮಂತ್ರವಾಗಿದೆ. ಈ ಮಂತ್ರವನ್ನು ಸೂರ್ಯದೇವನಿಗೆ ಪಠಿಸುವುದರಿಂದ ನಿರ್ಭಯವನ್ನು, ಜ್ಞಾನವನ್ನು ಪಡೆಯುತ್ತಾನೆ. ವ್ಯಕ್ತಿಯ ಮನಸ್ಸಿನಲ್ಲಿನ ಅಹಂ, ದುರಾಸೆ, ದ್ರೋಹ, ಕೋಪ ಸೇರಿದಂತೆ ಇನ್ನಿತರ ನಕಾರಾತ್ಮಕ ಅಂಶವನ್ನು ತೊಡೆದು ಹಾಕುತ್ತದೆ.

ವಿಜ್ಞಾನವೇ ವಾಸ್ತು, ವಾಸ್ತುವಿರದ ವಸ್ತುಸ್ಥಿತಿಯೇ ಇಲ್ಲ: ಹಲವು ವಿಷಯಗಳಿಗೆ ವಾಸ್ತು ಪ್ರಾಮುಖ್ಯತೆ ಮಾಹಿತಿ ಇಲ್ಲಿದೆ..