Home » ಕೀಟಬಾಧೆ ತಡೆಯಲು ಪರಿಸರ ಸ್ನೇಹಿ ‘ಸೋಲಾರ್ ಇನ್‌ಸೆಕ್ಟ್ ಲೈಟ್‌ ಟ್ರ್ಯಾಪ್‌’

ಕೀಟಬಾಧೆ ತಡೆಯಲು ಪರಿಸರ ಸ್ನೇಹಿ ‘ಸೋಲಾರ್ ಇನ್‌ಸೆಕ್ಟ್ ಲೈಟ್‌ ಟ್ರ್ಯಾಪ್‌’

by manager manager

ರೈತ ಇಂದು ತನ್ನ ಬೆಳೆಯ ಇಳುವಿರಿ ಮತ್ತು ಅತ್ಯಧಿಕ ಲಾಭದ ಹಿಂದೆ ಮಾತ್ರ ಬಿದ್ದಿದ್ದಾನೆ. ಇದಕ್ಕಾಗಿ ತರಾವರಿ ಕೀಟನಾಶಕಗಳನ್ನು(ರಾಸಾಯನಿಕ ಔಷಧಗಳು) ಯಾವುದೇ ದೂರದ ಆಲೋಚನೆಗಳನ್ನು ಲೆಕ್ಕಿಸದೇ ಬೆಳೆಗಳಿಗೆ ಸಿಂಪಡಿಸುತ್ತಿದ್ದಾನೆ. ನಾವು ಸೇವಿಸುವ ಆಹಾರ ಬಹುತೇಕ ವಿಷ ಆಹಾರವಾಗುತ್ತಿದೆ ಎಂಬುದು ಗೊತ್ತಿಲ್ಲ. ನಮ್ಮ ಹೊಲದ ಮಣ್ಣು ದಿನದಿಂದ ದಿನಕ್ಕೆ ಫಲವತ್ತತೇ ಮತ್ತು ಸತ್ವವನ್ನು ಕಳೆದುಕೊಳ್ಳುತ್ತಿದೆ ಎಂಬ ಅರಿವಿಲ್ಲ. ಮಣ್ಣಿನಲ್ಲಿನ ಸೂಕ್ಷ್ಮ ಜೀವಿಗಳು ಸಾಯುತ್ತಿವೆ, ನಾವು ಬೆಳೆಯುವ ಬೆಳೆಗಳಿಗೆ ಅವುಗಳ ಪಾತ್ರವೇನು ಎಂಬುದು ಗೊತ್ತಿಲ್ಲ.

ಆದ್ರೆ ಏನು ಮಾಡೋದು ಇಂದು ತರಾವರಿ ಕೀಟಗಳು ಸಹ ರೈತನ ಬೆಳೆಗೆ ಬೀಳುತ್ತಿವೆ. ತರವಾರಿ ಕೀಟನಾಶಕಗಳನ್ನು ಬಳಸಿದರು ಸಹ ರೈತ ಇಂದು ನೆಮ್ಮದಿ ನಿದ್ರೆಯನ್ನು ಮಾಡುವಷ್ಟರ ಮಟ್ಟಿಗೆ ಪ್ರತಿಫಲ ಸಿಗುತ್ತಿಲ್ಲ. ತಾನು ಬೆಳೆದ ಬೆಳೆಯಿಂದ ಹಲವು ಭಾರಿ ಅರ್ಧಕ್ಕೆ ಅರ್ಧದಷ್ಟು ಸಹ ಲಾಭವನ್ನು ಪಡೆಯುವಲ್ಲಿ ರೈತ ವಿಫಲವಾಗುತ್ತಿದ್ದಾನೆ.

ಹಿಂದಿನ ದಿನಗಳನ್ನು ಯೋಚಿಸಿ.. ನೋಡಿದರೆ ಐದಾರು ವರ್ಷಗಳ ಹಿಂದೆ ರೈತ ತಾನು ಬೆಳೆದ ಯಾವುದೇ ಬೆಳೆಗೆ ಕೀಟನಾಶಕವಾಗಿ ಸೂಪರ್ ಕಿಲ್ಲರ್ ಎಂಬ ರಾಸಾಯನಿಕ ಕೀಟನಾಶಕವನ್ನು ಮಾತ್ರ ಹೆಚ್ಚಿನದಾಗಿ ಬಳಸುತ್ತಿದ್ದ. ಆದರೆ ಇಂದು ಔಷಧಿ ಅಂಗಡಿಗೆ ಹೋಗಿ ರೈತರು ಬೆಳೆಯ ಕೇವಲ ಒಂದು ಸಮಸ್ಯೆ ಹೇಳಿದರು ನಾಲ್ಕಾರು ತರಹದ ಔಷಧಿಗಳನ್ನು ಅಂಗಡಿಯವ ಮುಂದಿಡುತ್ತಾನೆ. ಅಲ್ಲದೇ ಬರೀ 20 ಗುಂಟೆ ಜಮೀನಿನಲ್ಲಿ ಬೆಳೆದ ಯಾವುದೇ ಬೆಳೆಗೆ ಒಮ್ಮೆ ಕೀಟನಾನಾಶಕ ಸಿಂಪಡಿಸಬೇಕೆಂದರೂ ಕನಿಷ್ಠ ರೂ.1500 ಇಂದ ರೂ.2 ಸಾವಿರ ವರೆಗೆ ಬಿಲ್‌ ಆಗುತ್ತದೆ. ಆದರೆ ಆ ಬೆಳೆಯಿಂದ ರೈತ ಲಾಭ ಮಾಡುತ್ತಾನೆಯೇ ಅಥವಾ ಇಲ್ಲವೋ ಎಂಬುದು ಹೇಳಲಾಗದ ವಿಷಯ.

ಇಂದು ಕೇವಲ ತರಕಾರಿ, ಹೂ, ಭತ್ತಕ್ಕೆ ಮಾತ್ರವಲ್ಲದೇ ಕರ್ನಾಟಕದ ಆಹಾರ ಅಂದ್ರೆ ವಿದೇಶಿಗರು ಹೇಳುವ ರಾಗಿ ಮುದ್ದೆಯ ರಾಗಿ ಧಾನ್ಯವನ್ನು ಕೀಟನಾಶಕ ಸಿಂಪಡಿಸಿ ಬೆಳೆಯುವ ಹಂತಕ್ಕೆ ರೈತರು ತಲುಪಿದ್ದಾರೆ ಎಂದರೆ ಎಂತಹವರು ಸಹ ಬಾಯಿಯ ಮೇಲೆ ಬೆರಳು ಇಡಬೇಕಾದ್ದೆ. ಕೀಟ ಭಾದೆ ತಡೆಯಲು ಸಾಲದ ಮೇಲೆ ಸಾಲ ಮಾಡುತ್ತ ರೈತ ಇಂದು ಬಡ ರೈತನಾಗಿಯೇ ಉಳಿಯುತ್ತಿದ್ದಾನೇ. ಆದರೆ ಕೀಟನಾಶಕಗಳನ್ನು ಮಾರುವ ಕಂಪನಿಯವರು ಉದ್ದಾರವಾದರೆ ಹೊರತು ರೈತ ಅಲ್ಲ..

ಏನೇ ಇರಲಿ ಕೀಟಗಳನ್ನು ನಾಶಮಾಡುವ ದಿಶೆಯಲ್ಲಿ ವಿಜ್ಞಾನಿಗಳು ಮಾತ್ರವಲ್ಲದೇ ಅನುಭವಿ ರೈತರು ಸಹ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಸಫಲವಾಗಿ ಈಗ ರೈತನ ಬೆಳೆಗೆ ಕೀಟಗಳು ಬೀಳದಂತೆ ಅವುಗಳನ್ನು ತನ್ನತ್ತ ಆಕರ್ಷಿಸಿ ಸಾಯಿಸುವ ‘ಸೋಲಾರ್ ಇನ್‌ಸೆಕ್ಟ್ ಲೈಟ್ ಟ್ರ್ಯಾಪ್ (Solar Insect Light Trap)’ ಸಾಧನ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರೈತರಾದ ಕರಿ ಬಸಪ್ಪ ಎಂಬುವರು ಅಭಿವೃದ್ದಿ ಪಡಿಸಿದ್ದಾರೆ.

‘ಸೋಲಾರ್ ಇನ್‌ಸೆಕ್ಟ್ ಲೈಟ್ ಟ್ರ್ಯಾಪ್ (Solar Insect Light Trap)’

ಹಗಲು ವೇಳೆ ಸೂರ್ಯನ ಬೆಳಕಿನಿಂದ ಚಾರ್ಜ್‌ ಆಗಿ ರಾತ್ರಿ ವೇಳೆ ಆ ಸಾಧನದಲ್ಲಿನ ಬಲ್ಬ್ ಹೊತ್ತಿಕೊಳ್ಳುತ್ತದೆ. ಇದನ್ನು ಬೆಳೆ ಇರುವ ಪ್ರದೇಶದಲ್ಲಿ ಅಳವಡಿಸಿದರೆ ಒಂದು ಎಕರೆ ಪ್ರದೇಶ ಸೇರಿದಂತೆ ಸೋಲಾರ್ ಕೀಟನಾಶಕ ಯಂತ್ರ ಎಲ್ಲಾ ತರಹದ ಕೀಟಗಳನ್ನು ತನ್ನ ಪ್ರಕಾಶಮಾನವಾದ ಬೆಳಕಿನಿಂದ ಸೆಳೆಯುತ್ತದೆ. ಆ ಬೆಳಕಿಗೆ ಬಂದ ಕೀಟಗಳು ಬಲ್ಬ್‌ನ ಕೆಳಗಿರುವ ನೀರಿನ ಬಟ್ಟಲಿನಲ್ಲಿ ಬಿದ್ದು ಸಾಯುತ್ತವೆ. ಬೆಳೆಗೆ ಬೀಳುವ ಎಷ್ಟೇ ದೊಡ್ಡ ಗಾತ್ರದ ಚಿಟ್ಟೆಗಳು, ಹಾಗೂ ಇತರೆ ಕೀಟಗಳು ಆ ಬೆಳಕಿಗೆ ಬಂದು ಸಾಯುವುದು ಖಂಡಿತ ಎನ್ನುತ್ತಾರೆ ಈ ಯಂತ್ರವನ್ನು ಅಭಿವೃದ್ಧಿಪಡಿಸಿರುವ ಕರಿಬಸಪ್ಪ. ಬಲ್ಭ್‌ನತ್ತ ಬಂದ ಕೀಟಗಳು ಸಾಧನದ ಕೆಳಗಿರುವ ನೀರಿನಲ್ಲಿ ಬಿದ್ದು ಸಾಯುತ್ತವೆ. ಸಾಧನದ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ತಿಳಿಯಲು ಕೆಳಗೆ ನೀಡಲಾದ ವಿಡಯೋ ನೋಡಿರಿ..

ಸೇವಂತಿಗೆ ಸೇರಿದಂತೆ ಎಲ್ಲಾ ಬಗೆಯ ಹೂ ಬೆಳೆಗಾರರೂ ಸಹ ಸೋಲಾರ್ ಇನ್‌ಸೆಕ್ಟ್ ಲೈಟ್‌ ಟ್ರ್ಯಾಪ್‌ ಅನ್ನು ಬಳಸಬಹುದು. ಹೂಗಳಿಗೆ ಬೀಳುವ ಮತ್ತು ಹೂಗಿಡದ ಎಲೆಗಳನ್ನು ತಿನ್ನುವ ಹಲವು ಬಗೆಯ ಚಿಟ್ಟೆಗಳನ್ನು ಸಹ ಇದು ತನ್ನತ್ತ ಆಕರ್ಷಿಸುತ್ತದೆ. ಇದರಿಂದ ನೀರಿನಲ್ಲಿ ಬಂದು ಬಿದ್ದು ಚಿಟ್ಟೆಗಳು ಸಾಯುತ್ತವೆ. ಅದಕ್ಕೆ ಉದಾಹರಣೆಯಂತೆ ಮೇಲಿನ ಚಿತ್ರವನ್ನು ಗಮನಿಸಬಹುದು.

ಸೋಲಾರ್ ಕೀಟನಾಶಕ ಯಂತ್ರದ ಬಗ್ಗೆ ಕೆಲವು ಮುಖ್ಯ ಅಂಶಗಳು ಈ ಕೆಳಗಿನಂತಿವೆ.

– ಎಲ್ಲಾ ರೀತಿಯ ಹೂವು, ಹಣ್ಣು, ತರಕಾರಿ ಮತ್ತು ಇತರ ಬೆಳೆಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸುತ್ತದೆ.

– ಬೆಂಗಳೂರಿನ IIHR, ಧಾರವಾಡ ಮತ್ತು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಗಳು, ದಾವಣಗೆರೆಯ ICER, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇಂದ್ರ, ಮುನಿರಾಬಾದ್ ತೋಟಗಾರಿಕಾ ಕಾಲೇಜು, ಮಂಗಳೂರಿನ CPRI, ಹೈದರಾಬಾದ್ ನ ಇಕ್ರಿಸಾಟ್ ಸಂಸ್ಥೆಗಳು Solar Insect Light Trap ಯಂತ್ರ ವನ್ನು ಪರೀಕ್ಷೆ ಮಾಡಿವೆ. ರೈತರು ಇದನ್ನು ಬಳಸುವಂತೆ ಸಲಹೆ ನೀಡಿವೆ.

– 5 ಜಿಲ್ಲೆಗಳಲ್ಲಿ ಆತ್ಮ ಯೋಜನೆಯಡಿ ರೈತರಿಗೆ ವಿತರಿಸಲಾಗಿದೆ.

– ಹಲವಾರು ಕೀಟ ಶಾಸ್ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.ಅವರೂ ಸಹ ಬಳಕೆದಾರರು.

– ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಬಳಸುತ್ತಿರುವರು.

– Solar Insect Light Trap ಅನ್ನು ಹೊರ ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿದೆ.

– ಬೆಲೆ ತೀರಾ ಕಡಿಮೆ. ನಿರ್ವಹಣೆ , ಬಳಕೆ ಸುಲಭ.

– ಅಧಿಕ ಬಾಳಿಕೆ, ಪರಿಸರ ಸ್ನೇಹಿ.

– ಮಣ್ಣು- ಆಹಾರ ವಿಷವಾಗುವುದನ್ನು ತಪ್ಪಿಸುತ್ತದೆ.

– ಅಂತರ್ ರಾಷ್ಟ್ರೀಯ ಗುಣಮಟ್ಟದ ಬಲ್ಬ್‌ಗಳನ್ನು ಇದರಲ್ಲಿ ಬಳಸಲಾಗುತ್ತದೆ.

– ತುಕ್ಕು, ನೀರು ನಿರೋಧಕ.

– ಸಾವಯುವ ಕೃಷಿಗೆ ಉತ್ತಮ ಸಾಧನ.

ಸೋಲಾರ್ ಕೀಟನಾಶಕ ಯಂತ್ರ ಖರೀದಿ ಎಲ್ಲಿ? ಬೆಲೆ ಎಷ್ಟು?

– ಹೆಚ್ಚಿನ ಮಾಹಿತಿಗಾಗಿ ಯಂತ್ರದ ಸಂಶೋಧಕರಾದ ಕರಿಬಸಪ್ಪ ರ ಮೊಬೈಲ್ ಸಂಖ್ಯೆ 9880973218 ಗೆ ಕರೆ ಮಾಡಿರಿ.

– ಸೋಲಾರ್ ಕೀಟನಾಶಕ ಯಂತ್ರದ ಬೆಲೆ ಕರ್ನಾಟಕದಲ್ಲಿ ರೂ. 4875 ( ಜಿಎಸ್‌ಟಿ ಮತ್ತು ಟ್ರ್ಯಾನ್ಸ್‌ಪೋರ್ಟ್‌ ವೆಚ್ಚ ಸೇರಿಸಿ)

– 6 ತಿಂಗಳು ವಾರಂಟಿ ಜೊತೆಗೆ ಉಚಿತ ಸರ್ವಿಸ್.

– ರಾಜ್ಯದ ಹಲವಾರು ಕಡೆ ಅಧಿಕೃತ ಮಾರಾಟ ಮತ್ತು ಸೇವೆ ಲಭ್ಯ.

ವಿಳಾಸ : ಕರಿಬಸಪ್ಪ ಎಂ.ಜಿ, ಲಕ್ಷ್ಮೀ ಟಾಕೀಸ್, 745/2, KB ಎಕ್ಸ್‌ಟೆಂಶನ್, 4ನೇ ಮುಖ್ಯ ರಸ್ತೆ, 2ನೇ ಕ್ರಾಸ್ ದಾವಣಗೆರೆ – 577002, ಕರ್ನಾಟಕ.

ಇನ್ನಷ್ಟು ಹೆಚ್ಚಿನ ಮಾಹಿತಿಗೆ ವೆಬ್‌ ವಿಳಾಸ http://www.mgksolartrap.com/ ಕ್ಕೆ ಬೇಟಿ ನೀಡಬಹುದು.

ಮಂಡ್ಯ ಜಿಲ್ಲೆಯ ರೈತರು ಸೋಲಾರ್ ಕೀಟನಾಶಕ ಯಂತ್ರ ಖರೀದಿಸಲು ಸಂಪರ್ಕಿಸಿ: ಕುಮಾರಸ್ವಾಮಿ- 9945638145

Solar Insect Light Trap for Natural Farming developed by Karibasappa from the Davanagere district of Karnataka State.

You may also like

1 comment

Karibasappaa mg February 15, 2019 - 6:45 am

Thank you very much for your support organic farming

Comments are closed.