Home » UPSC ಯಲ್ಲಿ ನೇಮಕಾತಿ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

UPSC ಯಲ್ಲಿ ನೇಮಕಾತಿ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

by manager manager

 

ಕೇಂದ್ರ ಲೋಕsoftware designers and senior developers post recruitment in UPSCಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ.

ಯುಪಿಎಸ್‌ಸಿ ಯಲ್ಲಿ ಪ್ರಸ್ತುತ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳು ಸಾಫ್ಟ್‌ವೇರ್ ಡಿಸೈನರ್ ಮತ್ತು ಸೀನಿಯರ್ ಡೆವಲಪರ್ ಹುದ್ದೆಗಳು ಖಾಲಿ ಇವೆ. ಈ ಹುದ್ದಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೀನಿಯರ್ ಡೆವಲಪರ್ : 6

ಸಾಫ್ಟ್‌ವೇರ್ ಡಿಸೈನರ್ : 1

ಒಟ್ಟು ಹುದ್ದೆಗಳ ಸಂಖ್ಯೆ: 7

ಅರ್ಜಿ ಸಲ್ಲಿಸುವುದು ಹೇಗೆ?

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಅರ್ಜಿ ಅನ್ನು ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿದ ಅರ್ಜಿ ಅನ್ನು -Under Secretary (Admn), R.No. 216/AB, Union Public Service Commission, Dholpur House, Shahjahan Road, New Delhi -110069 ವಿಳಾಸಕ್ಕೆ ಪೋಸ್ಟ್‌ ಮಾಡಬೇಕು.

ಅಭ್ಯರ್ಥಿಗಳು ಕಳುಹಿಸುವ ಅರ್ಜಿಯ ಎನ್‌ವಲಪ್‌ ಮೇಲೆ ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರು ನಮೂದಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-12-2018

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

– ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳ ಜೆರಾಕ್ಸ್‌ ಪ್ರತಿಗಳು

– ಪದವಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ

– ಪಾನ್‌ ಕಾರ್ಡ್ ಜೆರಾಕ್ಸ್ ಪ್ರತಿ

– ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿ ವಿಭಾಗಗಳಲ್ಲಿ BE/BTech ಪದವಿ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ ಪದವಿಗಳನ್ನು ಸರ್ಕಾರಿ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳಲ್ಲಿ ಪಡೆದಿರಬೇಕು.

– ಸೀನಿಯರ್ ಡೆವಲಪರ್‌ ಹುದ್ದೆಗೆ 4 ವರ್ಷಗಳ ಕಾಲ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಾರ್ಯ ಅನುಭವ ಇರಬೇಕು.

– ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಕನಿಷ್ಠ 7 ವರ್ಷ ಅನುಭವವಿರಬೇಕು.

The Union Public Service Commission has invited application for the post of software designers and senior developers. Read more here.

You may also like