Home » ಡಿಡಿ ಚಂದನದ ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಗರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಡಿ ಚಂದನದ ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಗರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

by manager manager

ಪ್ರಸಾರ ಭಾರತಿ ದೂರದರ್ಶನ ಕೇಂದ್ರದ ಬೆಂಗಳೂರು ಪ್ರಾದೇಶಿಕ ಸುದ್ದಿ ವಿಭಾಗ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಿಗೆ ಸ್ಟ್ರಿಂಗರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕದ ಬೀದರ್, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು, ಕಲಬುರಗಿ, ಕೊಪ್ಪಳ, ಹಾಸನ, ತುಮಕೂರು, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲಾ ಕೇಂದ್ರಗಳಿಗೆ ಸ್ಟ್ರಿಂಗರ್‌ ಹುದ್ದೆಗಳ ನೇಮಕಾತಿ ಇದಾಗಿದೆ.

ಸುದ್ದಿ ದೃಶ್ಯಾವಳಿ ಚಿತ್ರೀಕರಣ ಹಾಗೂ ವರದಿಗಾರಿಕೆಯಲ್ಲಿ ಅನುಭವ ಹಾಗೂ ಪರಿಣತಿ ಇರುವ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಮಾನದಂಡ ಹಾಗೂ ಅರ್ಹಿ ನಮೂನೆ ಮತ್ತು ಇತರೆ ಮಾಹಿತಿಗಳನ್ನು ಜಾಲತಾಣ www.ddchandana.gov.in ಗೆ ಭೇಟಿ ನೀಡಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/08/2019

ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಹುದ್ದೆಗಳಿಗೂ ಅರ್ಜಿ ಆಹ್ವಾನ

ಡಿಡಿ ಚಂದನ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಗ್ರೇಡ್-1, ಮತ್ತು ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳು ಗುತ್ತಿಗೆ ಆಧಾರವಾಗಿವೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/08/2019

ಅರ್ಜಿ ಸಲ್ಲಿಸಲು ಮತ್ತು ಇತರೆ ಹೆಚ್ಚಿನ ಮಾಹಿತಿಗಳಿಗಾಗಿ – ಕ್ಲಿಕ್ ಮಾಡಿ

You may also like