Home » ಮೂತ್ರಕೋಶ ನೋವಿಗೆ, ಉರಿಮೂತ್ರಕ್ಕೆ ಕಾರಣಗಳೇನು? ಪರಿಹಾರಗಳೇನು?

ಮೂತ್ರಕೋಶ ನೋವಿಗೆ, ಉರಿಮೂತ್ರಕ್ಕೆ ಕಾರಣಗಳೇನು? ಪರಿಹಾರಗಳೇನು?

by manager manager

Mutrakosha Novige Mane Maddu Tips

ಒಂದು ನೈಸರ್ಗಿಕ ಕರೆಯಾಗಿರುವ ಮೂತ್ರ ವಿಸರ್ಜನೆಯು ನೋವಿಗೆ ಮತ್ತು ಉರಿಮೂತ್ರಕ್ಕೆ ಕಾರಣವಾದರೆ.. ಅದು ತುಂಬಾ ಕಷ್ಟದ ವಿಚಾರ. ಆದರೆ ಕೆಲವರಿಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಆದರೆ ಇದು ನೈಸರ್ಗಿಕವಲ್ಲ. ರಾತ್ರಿ ವೇಳೆ ನಿದ್ರೆಯಿಂದ ಕೂಡ ಒಂದೆರಡು ಸಲ ಎದ್ದೇಳಬೇಕಾಗುತ್ತದೆ. ಇದರಿಂದ ನಿದ್ರೆಗೂ ತೊಂದರೆ ಆಗುವುದು. ಇದರಿಂದ ಯಾವುದೇ ಕಾರ್ಯಕ್ರಮ ಮತ್ತು ಸಭೆ ಸಮಾರಂಭಗಳಲ್ಲಿ ಕೂಡ ಅವರಿಗೆ ದೊಡ್ಡ ಮಟ್ಟದ ಮುಜುಗರ ಉಂಟಾಗುವುದು. ದಿನದಲ್ಲಿ ಏನಿಲ್ಲವೆಂದರೂ 7-8 ಸಲ ಮೂತ್ರ ವಿಸರ್ಜನೆಗೆ ಹೋಗುವರು.

ವಯಸ್ಸಾದಂತೆ ಉರಿಮೂತ್ರದ ಸಮಸ್ಯೆ ಆವರಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳದಲ್ಲಿ ಸೋಂಕಾಗುವುದು. ಮೂತ್ರ ಮಾಡುವಾಗ ಒಳಗಿನಿಂದ ಉರಿ, ಪದೇ ಪದೇ ಮೂತ್ರ ಮಾಡಬೇಕೆನಿಸುವುದು, ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು. ಈ ಸೋಂಕು ಉಂಟಾಗಲು ವಿವಿಧ ಕಾರಣಗಳಿವೆ.

ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣಗಳು

– ಪ್ರಮುಖವಾಗಿ ರೋಗನಿರೋಧಕ ವ್ಯವಸ್ಥೆಯ ಮೂಲಕ ಮೂತ್ರದ ಮೂಲಕ ಹೊರದಬ್ಬಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರದ ಕ್ಷಾರದಲ್ಲಿಯೂ ಸಾಯದೇ ಮೂತ್ರನಾಳದ ಒಳಭಾಗವನ್ನು ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ.

– ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ವೈಪರೀತ್ಯದ ಕಾರಣದಿಂದಲೂ ಸೋಂಕು ಉಂಟಾಗಬಹುದು.

– ಇನ್ನುಳಿದಂತೆ ವಯೋಸಹಜವಾದ ಕ್ರಿಯೆಯಿಂದ ದೇಹ ಕೊಂಚ ದುರ್ಬಲವಾಗುವುದು ಸಹ ಕಾರಣವಾಗಬಹುದು.

– ಇನ್ನೊಂದು ಪ್ರಮುಖ ಕಾರಣವೆಂದರೆ ಸಂಕೋಚದ ಕಾರಣ ಬಹುಕಾಲ ಮೂತ್ರ ವಿಸರ್ಜನೆ ಮಾಡದೇ ಇರುವುದು.

– ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಗಿದ್ದಾಗ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಸಕಾಲದಲ್ಲಿ ನಿಸರ್ಗದ ಕರೆಗೆ ಓಗೊಡದೇ ಸೂಕ್ತ ಅವಕಾಶ ಬರುವವರೆಗೆ ಕಾಯುತ್ತಾರೆ. ಪರಿಣಾಮವಾಗಿ ಮೂತ್ರಾಶಯದಲ್ಲಿ ಶೇಖರವಾದ ದ್ರವ ಹೆಚ್ಚು ಹೆಚ್ಚು ಕ್ಷಾರೀಯವಾಗಿ ಸೋಂಕು ತಗಲಲು ಪರೋಕ್ಷ ಕಾರಣವಾಗುತ್ತದೆ.

ಮಧುಮೇಹ

ಅತಿಯಾಗಿ ಮೂತ್ರದೊಂದಿಗೆ ಪದೇ ಪದೇ ಮೂತ್ರ ವಿಸರ್ಜನೆಯು ಆಗುತ್ತಲಿರುವುದು ಟೈಪ್ 1 ಮತ್ತು ಟೈಪ್ 2 ಮಧುಮೇಹದ ಆರಂಭಿಕ ಲಕ್ಷಣಗಳು ಆಗಿರಬಹುದು. ದೇಹವು ಬಳಸದೆ ಇರುವಂತಹ ಗ್ಲೂಕೋಶ್ ನ್ನು ಮೂತ್ರದ ಮೂಲಕ ಹೊರಗೆ ಹಾಕಲು ಪ್ರಯತ್ನಿಸುತ್ತಿರಬಹುದು.

ಗರ್ಭಧಾರಣೆ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಬೆಳೆಯುತ್ತಿರುವ ಗರ್ಭಕೋಶವು ಮೂತ್ರಕೋಶದ ಮೇಲೆ ಒತ್ತಡ ಹಾಕುವುದು. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆ ಆಗುವುದು.

ಪ್ರಾಸ್ಟೇಟ್ ಸಮಸ್ಯೆ

ಹಿಗ್ಗಿರುವಂತಹ ಪ್ರಾಸ್ಟೇಟ್ ಮೂತ್ರನಾಳದ ಮೇಲೆ ಒತ್ತಡ ಹಾಕಬಹುದು ಮತ್ತು ಮೂತ್ರ ವಿಸರ್ಜನೆಗೆ ತಡೆ ಹಾಕಬಹುದು. ಇದರಿಂದ ಮೂತ್ರನಾಳದ ಗೋಡೆಗೆ ಕಿರಿಕಿರಿ ಉಂಟಾಗಬಹುದು. ಮೂತ್ರ ನಾಳದಲ್ಲಿ ಸಣ್ಣ ಪ್ರಮಾಣದಲ್ಲಿ ಮೂತ್ರವಿದ್ದರೆ ಆಗ ಅದು ಹಿಗ್ಗುವುದು. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ ಆಗಬಹುದು.

– ಹೆಚ್ಚು ನೀರು ಕುಡಿದರೆ ಬೇಗನೇ ಅವಸರವಾಗುವುದೆಂದು ನೀರನ್ನೂ ಕುಡಿಯದೇ ಇರುವುದೂ ಇನ್ನೊಂದು ಕಾರಣವಾಗಿದೆ.

– ಪದೇ ಪದೇ ಮೂತ್ರ ವಿಸರ್ಜನೆ ಜತೆಗೆ ಜ್ವರ, ಮೂತ್ರ ವಿಸರ್ಜನೆಗೆ ಅವಸರ ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಅಥವಾ ಕಿರಿಕಿರಿ ಕಂಡುಬಂದರೆ ಆಗ ಇದು ಮೂತ್ರಕೋಶದ ಸೋಂಕಿನಿಂದ ಆಗಿರಬಹುದು.

– ಮಲ ವಿಸರ್ಜಿಸಿ ಬಂದ ಮೇಲೆ ನೀರಿನಿಂದ ಸರಿಯಾಗಿ ಸ್ವಚ್ಛ ಮಾಡದಿದ್ದಾಗ.

– ಮಕ್ಕಳಿಗೆ ಡೈಪರ್‍ಗಳನ್ನು ಹೆಚ್ಚು ಬಳಸುವುದರಿಂದ.

– ಅಸುರಕ್ಷಿತ ಲೈಂಗಿಕ ಅಭ್ಯಾಸಗಳು ಅಥವಾ ಸಂಭೋಗದ ನಂತರ ಮೂತ್ರ ವಿಸರ್ಜಿಸದಿದ್ದಾಗ.

ಇಂಟರ್ ಸ್ಟಿಟಿಯಲ್ ಸಿಸ್ಟೈಟಿಸ್

ಈ ಪರಿಸ್ಥಿತಿಯು ಮೂತ್ರಕೋಶ ಮತ್ತು ಶ್ರೋಣಿಯ ಭಾಗದಲ್ಲಿ ನೋವು ಉಂಟು ಮಾಡುವುದು.

ಮೂತ್ರವರ್ಧಕ ಬಳಕೆ

– ರಕ್ತದೊತ್ತಡ ಅಥವಾ ಕಿಡ್ನಿಯಲ್ಲಿ ತುಂಬಿರುವಂತಹ ಅಧಿಕ ನೀರಿನಾಂಶವನ್ನು ಹೊರಹಾಕಲು ತೆಗೆದುಕೊಳ್ಳುವಂತಹ ಔಷಧಿಯು ದೇಹದಲ್ಲಿರುವ ಅಧಿಕ ದ್ರವಾಂಶವನ್ನು ಹೊರಗೆ ಹಾಕುವುದು.

– ಪಾರ್ಶ್ವವಾಯು ಮತ್ತು ಇತರ ನರ ಸಂಬಂಧಿ ಸಮಸ್ಯೆಗಳಿದ್ದರೆ.

– ಮೂತ್ರಕೋಶ ಕಾರ್ಯನಿರ್ವಹಿಸದೆ ಇರುವುದು ಮತ್ತು ವಿಕಿರಣ ಚಿಕಿತ್ಸೆಯು ಕೂಡ ಇಂತಹ ಸಮಸ್ಯೆ ಉಂಟು ಮಾಡಲು ಅಪರೂಪದ ಕಾರಣವಾಗಿರಬಹುದು.

ಮೂತ್ರ ವಿಸರ್ಜನೆ ಪದೇ ಪದೇ ಆಗುತ್ತಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆಗಳೆಂದರೆ

ಮೊದಲಿಗೆ ನಮ್ಮಲ್ಲಿರುವ ಮೂತ್ರಕೋಶದ ಅಥವಾ ಉರಿಮೂತ್ರಕ್ಕೆ ಕಾರಣವನ್ನು ತಿಳಿದುಕೊಂಡು ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ, ಮಧುಮೇಹದಿಂದಾಗಿ ಹೀಗೆ ಆಗುತ್ತಲಿದ್ದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮೂತ್ರಕೋಶವು ಅತಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಕೆಲವೊಂದು ಮನೋಭಾವದ ಥೆರಪಿಗಳು ಇವೆ. ಇವುಗಳು ಈ ರೀತಿಯಾಗಿ ಇದೆ.

ಮೂತ್ರಕೋಶವನ್ನು ಹಿಡಿದಿಟ್ಟುಕೊಳ್ಳುವುದು

ಇದು ಸುಮಾರು 12 ವಾರಗಳಲ್ಲಿ ಶೌಚಾಲಯವನ್ನು ಬಳಸಿಕೊಳ್ಳುವ ಅಂತರವನ್ನು ಹೆಚ್ಚಿಸುವುದು. ಇದರಿಂದ ಮೂತ್ರಕೋಶವು ಹೆಚ್ಚು ಸಮಯ ಕಾಲ ಮೂತ್ರವನ್ನು ಹಿಡಿದಿಡುವುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಕಡಿಮೆ ಆಗುವುದು.

ಆಹಾರ ಬದಲಾವಣೆ

ಮುಖ್ಯವಾಗಿ ಕೆಫಿನ್, ಆಲ್ಕೋಹಾಲ್, ಕಾರ್ಬೊನೇಟೆಡ್ ಪಾನೀಯಗಳು, ಟೊಮೆಟೊ ಬಳಸಿದ ಉತ್ಪನ್ನಗಳು, ಚಾಕಲೇಟ್, ಕೃತಕ ಸಿಹಿ ಮತ್ತು ಖಾರದ ಆಹಾರ. ಅಧಿಕ ನಾರಿನಾಂಶ ಇರುವಂತಹ ಆಹಾರವನ್ನು ಸೇವಿಸುವುದು ಅತೀ ಅಗತ್ಯವಾಗಿರುವುದು.

ದ್ರವಾಹಾರ ಸೇವನೆ ಬಗ್ಗೆ ಗಮನವಿರಲಿ

ಮಲಬದ್ಧತೆ ನಿವಾರಿಸಲು ಮತ್ತು ಮೂತ್ರ ವಿಸರ್ಜನೆ ಹೆಚ್ಚಿಸಲು ನೀರನ್ನು ಅಧಿಕ ಪ್ರಮಾಣದಲ್ಲಿ ಕುಡಿಯಬೇಕು. ಮಲಗುವ ಮೊದಲು ನೀರು ಕುಡಿಯಲು ಹೋಗಬೇಡಿ. ಇದರಿಂದ ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆ ಆಗಬಹುದು.

ಕೆಗೆಲ್ ವ್ಯಾಯಾಮ

ಈ ವ್ಯಾಯಾಮದಿಂದಾಗಿ ಮೂತ್ರಕೋಶ ಮತ್ತು ಗರ್ಭಕೋಶದ ಸುತ್ತಲಿನ ಸ್ನಾಯುಗಳು ಹೆಚ್ಚು ಬಲಿಷ್ಠವಾಗಲು ನೆರವಾಗುವುದು ಮತ್ತು ಮೂತ್ರಕೋಶವು ತನ್ನ ತಡೆದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುವುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆಯನ್ನು ತಡೆಯುವುದು.

ಮೂತ್ರ ವಿಸರ್ಜನೆ ಪದೇ ಪದೇ ಆಗುತ್ತಿದ್ದರೆ ತಡೆಯಲು ಮನೆಮದ್ದುಗಳಿವೇ ಅವುಗಳೆಂದರೇ :

– ದಾಳಿಂಬೆಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ಇವೆ. ದಾಳಿಂಬೆ ಸಿಪ್ಪೆಯ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದರ ಸ್ವಲ್ಪ ಪೇಸ್ಟ್ ತೆಗೆದುಕೊಂಡು ನೀರಿಗೆ ಹಾಕಿ ಕಲಸಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಐದು ದಿನಗಳ ಕಾಲ ನೀವು ಇದನ್ನು ಸೇವಿಸಿ.

– ಬೇಯಿಸಿರುವ ಬಸಲೆ ಕೂಡ ಪದೇ ಪದೇ ಮೂತ್ರ ವಿಸರ್ಜನೆ ಮಾಡುವವರಿಗೆ ನೆರವಾಗುವುದು. ಬೇಯಿಸಿದ ಬಸಲೆ ಸೇವಿಸಿ ಮತ್ತು ಇದು ಪುರುಷರಿಗೆ ಒಂದು ಒಳ್ಳೆಯ ಔಷಧಿಯಾಗಿದೆ.

– ಮೆಂತ್ಯೆ ಕಾಳಿನ ಹುಡಿ ತಯಾರಿಸಿಕೊಳ್ಳಿ ಮತ್ತು ಇದನ್ನು ಶುಂಠಿ ಜತೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜೇನುತುಪ್ಪ ಅಥವಾ ನೀರಿಗೆ ಹಾಕಿ ದಿನನಿತ್ಯವೂ ಕುಡಿಯಿರಿ.

– ನೈಸರ್ಗಿಕ ವಿಧಾನವೆಂದರೆ ಅದು ಅಡುಗೆ ಸೋಡಾ. ಒಂದು ಚಮಚ ಅಡುಗೆ ಸೋಡಾ ತೆಗೆದುಕೊಳ್ಳಿ ಮತ್ತು ಇದನ್ನು ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ ಮತ್ತು ನಿತ್ಯವೂ ಕುಡಿಯಿರಿ. ನಿಮಗೆ ಕೆಲವೇ ದಿನಗಳಲ್ಲಿ ಮೂತ್ರ ವಿಸರ್ಜನೆಯಲ್ಲಿ ವ್ಯತ್ಯಾಸ ಕಂಡುಬರುವುದು.

– ಈ ಸಮಸ್ಯೆಯನ್ನು ಬಿಳಿ ವಿನೇಗರ್ ಕಡಿಮೆ ಮಾಡುವುದು. ಒಂದು ಚಮಚ ಬಿಳಿ ವಿನೇಗರ್ ಅನ್ನು ಬಿಸಿ ನೀರಿಗೆ ಹಾಕಿ ಮತ್ತು ಇದನ್ನು ದಿನನಿತ್ಯ ಸೇವಿಸಿ.

– ನಿಮಗೆ ಅತಿಯಾಗಿ ಮೂತ್ರ ವಿಸರ್ಜನೆ ಸಮಸ್ಯೆಯಿದ್ದರೆ ಎಳ್ಳನ್ನು ಬೆಲ್ಲದ ಜತೆಗೆ ಮಿಶ್ರಣ ಮಾಡಿಕೊಂಡು ಸೇವಿಸಿದರೆ ಒಳ್ಳೆಯದು. ಉತ್ತಮ ಫಲಿತಾಂಶಕ್ಕಾಗಿ ಕೇರಮ್ ಬೀಜಗಳು, ಕಪ್ಪು ಎಳ್ಳು ಸೇರಿಸಿಕೊಂಡು ಸೇವಿಸಿ.

– ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು 3 ಕಪದ ನೀರಿನೊಂದಿಗೆ ಬೆರೆಸಿ, ಬೇಯಿಸಿದ ನಂತರ ಅದಕ್ಕೆ ಒಂದು ಚಮಚ ಸಕ್ಕರೆ ಬೇರೆಸಿ ಕುಡಿಯುವುದರಿಂದ ತುಂಬ ಒಳ್ಳೆಯದು.

– ಸೊಗಡೆ ಬಳ್ಳಿ ಅಥವಾ ಅನಂತಮೂಲ ಉರಿಮೂತ್ರಕ್ಕೆ ಆಯುರ್ವೇದ ಶಿಫಾರಸ್ಸು ಮಾಡುವ ಅತ್ಯಂತ ಪರಿಣಾಮಕಾರಿ ಮೂಲಿಕೆಯೆಂದರೆ ಸೊಗಡೆ ಬಳ್ಳಿ. ಇದನ್ನು ಅರೆದು ತಿನ್ನುವುದರಿಂದ ತುಂಬ ಪರಿಣಾಮವನ್ನುಂಟು ಮಾಡುತ್ತದೆ.

– ವತ್ಸನಾಭಿ, ಪಾಸ್ರ್ಲೆ ಎಲೆಗಳ ರಸ, ಕಾರೇಕಾಯಿ ರಸಕ್ಕೆ ಹಾಲು, ನೀರು, ಸಕ್ಕರೆಯನ್ನು ಸೇರಿಸಿ ಕುಡಿದರೆ ಒಳ್ಳೆಯದು.

– ವಿಟಮಿನ್ ಸಿ ಇರುವ ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮಾಟೋ ಮೊದಲಾದ ಹಣ್ಣುಗಳನ್ನು ಸೇವಿಸಿ.

– ಎಳನೀರು ಉರಿಮೂತ್ರಕ್ಕೆ ರಾಮಬಾಣವಿದ್ದಂತೆ ಇದು ಕೂಡ ಸಹಕಾರಿಯಾಗುತ್ತದೆ.

ಭಾವನೆಗಳಿಗೆ ಸ್ಪಂದಿಸುವ ಆಪ್ತಜೀವ ಬೇಕೆ? ಹಾಗಿದ್ರೆ ಈ ಡೇಟಿಂಗ್ ಆಪ್‌ಗಳನ್ನು ಎಚ್ಚರದಿಂದ ಬಳಸಿ

You may also like