Home » ಮೋದಿಯ ಈ ಯೋಜನೆಯಿಂದ ನಿರುದ್ಯೋಗಿಗಳ ಜೀವನವೇ ಸಂಪೂರ್ಣ ಬದಲಾಗಬಹುದು!

ಮೋದಿಯ ಈ ಯೋಜನೆಯಿಂದ ನಿರುದ್ಯೋಗಿಗಳ ಜೀವನವೇ ಸಂಪೂರ್ಣ ಬದಲಾಗಬಹುದು!

by manager manager

ಪ್ರಧಾನಿ ನರೇಂದ್ರ ಮೋದಿಯವರು ಹೋದಲೆಲ್ಲಾ ಭಾರತವನ್ನು ಆರ್ಥಿಕವಾಗಿ ಸಬಲವಾಗಿ ಮಾಡಲು ತಮ್ಮ ಸರ್ಕಾರದಲ್ಲಿ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ ಎಂಬ ಸಾಲ ಪಡೆಯುವ ಯೋಜನೆಯನ್ನು ಹೊರತಂದಿರುವುದಾಗಿ ಹೇಳುತ್ತಿರುತ್ತಾರೆ. ಆದರೆ ಈ ಯೋಜನೆ ಬಗ್ಗೆ ಸಾಮಾನ್ಯ ಜನತೆಗೆ ಮಾತ್ರವಲ್ಲದೇ ಎಷ್ಟೋ ವಿದ್ಯಾವಂತರಿಗೂ ಸಂಪೂರ್ಣ ಮಾಹಿತಿ ಲಭ್ಯವಿಲ್ಲ ಎಂದೇ ಹೇಳಬಹುದು. ಆದ್ದರಿಂದ ಇಂದಿನ ಲೇಖನದಲ್ಲಿ ಕನ್ನಡಿಗರಿಗೆ ಇಂತಹ ಅತ್ಯಂತ ಉಪಯೋಗಯುತವಾದ ಮಾಹಿತಿಯನ್ನು ‘ಕನ್ನಡ ಅಡ್ವೈಜರ್’ ನಿಮಗಾಗಿ ನೀಡುತ್ತಿದೆ.

“ಪ್ರಧಾನ ಮಂತ್ರಿ ಮುದ್ರಾ ಯೋಜನ(PMMY)” ಅನ್ನು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ರವರು ಏಪ್ರಿಲ್ 8, 2015 ರಂದು ಉದ್ಘಾಟಿಸಿದರು. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಭಾರತೀಯ ಪ್ರಜೆಗಳು ರೂ.10 ಲಕ್ಷದ ವರೆಗೂ ಸಾಲ ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ.

ಈ ಯೋಜನೆ ಅಡಿಯಲ್ಲಿ ರೂ. 10 ಲಕ್ಷದ ವರೆಗೆ ನಾನ್-ಕಾರ್ಪೋರೇಟ್, ಕೃಷಿಯೇತರ ಮತ್ತು ಸಣ್ಣ ಉದ್ಯಮಗಳ ಉಗಮ ಮತ್ತು ಬೆಳವಣಿಗೆಗಾಗಿ ಸಾಲವನ್ನು ಪಡೆಯಬಹುದಾಗಿದೆ. ಈ ಸಾಲವನ್ನು PMMY ಯೋಜನೆ ಅಡಿಯಲ್ಲಿ ಮುದ್ರಾ ಲೋನ್ ಎಂದೇ ಕರೆಯಲಾಗುತ್ತದೆ.

ಮುದ್ರಾ ಲೋನ್ ನೀಡುವ ಬ್ಯಾಂಕ್ ಗಳು

ಮುದ್ರಾ ಲೋನ್ ಅನ್ನು ವಾಣಿಜ್ಯ ಬ್ಯಾಂಕು ಗಳು, RRBs(ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು), ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರ ಬ್ಯಾಂಕ್‌ಗಳು, ಎಂಎಫ್ಐ ಮತ್ತು ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ನೀಡುತ್ತವೆ. ಈ ಸಾಲ ಪಡೆಯಲು ಬಯಸುವವರು ಇಲ್ಲಿ ತಿಳಿಸಿದ ಯಾವುದೇ ಬ್ಯಾಂಕಗಳಲ್ಲಿ ಹೋಗಿ ಸಂಪರ್ಕಿಸಿಬಹುದು. ಅಥವಾ www.mudra.org.in ಪೋರ್ಟಲ್ ಮೂಲಕ ಆನ್‌ಲೈನ್ ನಲ್ಲಿಯೇ ಅಪ್ಲೇ ಮಾಡಬಹುದು.

ಮುದ್ರಾ ಯೋಜನೆ ಅಡಿಯಲ್ಲಿ ಮೂರು ಹಂತಗಳಲ್ಲಿ ಸಾಲ ಲಭ್ಯ

ಅಂದಹಾಗೆ ಮುದ್ರಾ ಯೋಜನೆ ಅಡಿಯಲ್ಲಿ ಮೂರು ವಿಧಾನಗಳ ಮೂಲಕ ಸಾಲ ಪಡೆಯಬಹುದಾಗಿದೆ. ಅವುಗಳು ಈ ಕೆಳಗಿನಂತಿವೆ.

1 ಶಿಶು ಲೋನ್: ಈ ಯೋಜನೆ ಅಡಿಯಲ್ಲಿ 50,000 ರೂ ವರೆಗೆ, ಹೊಸದಾಗಿ ವ್ಯಾಪಾರ ಆರಂಭಿಸುವವರು ಪಡೆಯಬಹುದಾಗಿದೆ.

2 ಕಿಶೋರ್ : ಈ ಯೋಜನೆ ಅಡಿಯಲ್ಲಿ 50,000 ರೂಗಳಿಂದ 5 ಲಕ್ಷಗಳವರೆಗೆ ಸಾಲ ದೊರೆಯುತ್ತದೆ.

3 ತರುಣ್ : ಈ ಹಂತದಲ್ಲಿ ಈಗಾಗಲೇ ಒಂದು ಉದ್ಯಮ ಸ್ಥಾಪಿಸಿರುವವರು, ಅದರ ಬೆಳವಣಿಗೆಗಾಗಿ 5 ಲಕ್ಷ ರೂ ನಿಂದ 10 ಲಕ್ಷ ರೂ ವರೆಗೆ ಸಾಲ ಪಡೆಯಬಹುದು.

ಸೂಚನೆ: ಮುದ್ರಾ ಒಂದು ಮರುಹಣಕಾಸು ಸಂಸ್ಥೆಯಾಗಿದ್ದು, ಮುದ್ರಾ ನೇರವಾಗಿ ಉದ್ಯಮದಾರರಿಗೆ ಸಾಲ ನೀಡುವುದಿಲ್ಲ. ಈ ಲೇಖನದಲ್ಲಿ ತಿಳಿಸಿದ ಬ್ಯಾಂಕುಗಳಿಂದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು. ಅಂದಹಾಗೆ ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಯಾವುದೇ ಏಜೆಂಟ್ ಇರುವುದಿಲ್ಲ. ಯಾರಾದರೂ ನಾವು ಈ ಯೋಜನೆ ಅಡಿಯಲ್ಲಿ ಸಾಲ ಕೊಡಿಸುತ್ತೇವೆ ಎಂದು ಬರುವವರ ಬಗ್ಗೆ ಎಚ್ಚರವಹಿಸಿ ಅಂತಹವರಿಂದ ದೂರವಿರಿ.

ಭಾರತದ ಪ್ರಜ್ಞಾವಂತ ನಿರುದ್ಯೋಗಿಗಳು ತಮಗೆ ಯಾವುದೇ ಕೆಲಸವಿಲ್ಲ ಎಂದು ಯೋಚಿಸುತ್ತಾ ಕೂರುವ ಬದಲು ಈ ಒಂದು ಯೋಜನೆ ಮೂಲಕ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಿ ತಮ್ಮ ಜೀವನವನ್ನೇ ಸಂಪೂರ್ಣ ಬದಲಿಸಕೊಳ್ಳಬಹುದಾಗಿದೆ.

Pradhan Mantri MUDRA Yojana (PMMY) is a scheme launched by the Hon’ble Prime Minister on April 8, 2015 for providing loans upto 10 lakh to the non-corporate, non-farm small/micro enterprises.

You may also like