Home » ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು 60 ಪೈಸೆಯಲ್ಲ ಬರಿ 1 ಪೈಸೆ

ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು 60 ಪೈಸೆಯಲ್ಲ ಬರಿ 1 ಪೈಸೆ

by manager manager

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ (Petrol, diesel) ಬೆಲೆಯಲ್ಲಿ 60 ಪೈಸೆ ಕಡಿಮೆ ಮಾಡಲಾಗಿದೆ ಎಂಬ ಕೇಳಿ ನಿರಾಳರಾಗಿದ್ದ ವಾಹನ ಸವಾರರಿಗೆ ನಿರಾಸೆಯಾಗಿದೆ. ಸತತ 16 ದಿನಗಳ ಬೆಲೆ ಏರಿಕೆಯ ಬಳಿಕ ದೇಶದ ಅತೀ ದೊಡ್ಡ ಸಗಟು ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತೈಲ ಬೆಲೆಯಲ್ಲಿ ಇಳಿಕೆ ಮಾಡಿದ್ದು 60 ಪೈಸೆಯಲ್ಲ ಬರಿ 1 ಪೈಸೆ ಯಷ್ಟೇ.

ಹೌದು. ತೈಲ ಬೆಲೆಗಳನ್ನು ಪರಿಷ್ಕರಿಸಿ ವೆಬ್‌ಸೈಟ್’‌ನಲ್ಲಿ ಹಾಕುವ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ತಾಂತ್ರಿಕದೋಷದಿಂದ ತಪ್ಪು ದರ ಪ್ರಕಟವಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು ಕೇವಲ 1 ಪೈಸೆಯಷ್ಟೆ.

ರಾಜ್ಯ ಸ್ವಾಮ್ಯ ಕಂಪನಿಗಳು ಬುದವಾರ ಬೆಳಗ್ಗೆ ಪೆಟ್ರೋಲ್ (Petrol) ​ ಬೆಲೆ 60 ಪೈಸೆ, ಡಿಸೇಲ್​ (diesel) ಬೆಲೆ 56 ಪೈಸೆ ಕಡಿಮೆಯಾಗಿದೆ ಎಂದು ಘೋಷಿಸಿದ್ದವು. ಆದರೆ ಇದಾದ ಒಂದು ಗಂಟೆ ಬಳಿಕ ಪರಿಷ್ಕೃತ ದರ ಪ್ರಕಟಿಸಿದ್ದು, 1ರೂ ಇಳಿಕೆಯಲ್ಲ ಬರಿ 1 ಪೈಸೆ ಯಷ್ಟೇ ಎಂದು ಘೋಷಣೆ ಮಾಡಿದೆ. ಈಗಾಗಲೆ ತೈಲ ಬೆಲೆ ಏರಿಕೆ ವಿರುದ್ಧ ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿರುವಾಗಲೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರಿಗಳು ಮಾಡಿದ ಎಡವಟ್ಟು ವಾಹನ ಸವಾರರ ಆಕ್ರೋಷಕ್ಕೆ ಕಾರಣವಾಗಿದೆ.

ರಾಹುಲ್ ಗಾಂಧಿ ಟೀಕೆ:

ಇನ್ನು ತೈಲ ಬೆಲೆಗಳನ್ನು 1 ಪೈಸೆ ಕಡಿಮೆ ಮಾಡಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಿಯ ಪ್ರಧಾನಿಯವರೆ ನೀವು ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು 1 ಪೈಸೆಯಷ್ಟು ಕಡಿಮೆ ಮಾಡಿದ್ದೀರಾ. ಒಂದು ಪೈಸೆ..! ಇದು ನಿಮ್ಮ ಬಾಲಿಶ ಆಲೋಚನೆ ಎಂದಾದರೆ, ಇದು ಕೇವಲ ಕಳಪೆ ಅಭಿರುಚಿಯ ಮಕ್ಕಳಾಟ. ಕಳೆದ ವಾರ ನಾನು ನಿಮಗೆ ಹಾಕಿದ್ದ ಇಂಧನ ಸಮಾಲಿಗೆ ಒಂದು ಪೈಸೆ ಕಡಿತ ಸಮರ್ಪಕ ಉತ್ತರವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ 1ರೂ. ಕಡಿತ

ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 1ರೂ ಕಡಿಮೆ ಮಾಡಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ. ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜೂನ್ 1ರಿಂದ ಇದು ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

After 16 days of hike, petrol and diesel prices were shown to have been cut by up to 60 paise on the IOC website. It later emerged that the actual price cut was just 1 paise. Early Indian Oil Corp (IOC) announcing a reduction of 60 paise.

You may also like