Home » ಪೇಟಿಎಮ್ ಸ್ಪಷ್ಟನೆ: ಬಳಕೆದಾರರು ಯಾವುದೇ ಭಯವಿಲ್ಲದೇ ನಿಶ್ಚಿಂತೆಯಿಂದ ಇರಬಹುದು..

ಪೇಟಿಎಮ್ ಸ್ಪಷ್ಟನೆ: ಬಳಕೆದಾರರು ಯಾವುದೇ ಭಯವಿಲ್ಲದೇ ನಿಶ್ಚಿಂತೆಯಿಂದ ಇರಬಹುದು..

by manager manager

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ಪೇಟಿಎಮ್(Paytm) ತನ್ನ ಬಳಕೆದಾರರ ಡೇಟಾವನ್ನು ಸರ್ಕಾರಕ್ಕಾಗಲಿ ಮತ್ತು ಯಾವುದೇ ಮೂರನೇ ವ್ಯಕ್ತಿಗೆ ನೀಡಿಲ್ಲ ಎಂದಿದೆ.

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಪೇಟಿಎಮ್ ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪ್ರಧಾನಿ ಕಚೇರಿಯಿಂದ ಕರೆ ಬಂದ ಕಾರಣ ನೀಡಿದೆ’ ಎಂಬ ವದಂತಿ ಸುದ್ದಿಗಳು ಹರಿದಾಡುತ್ತಿರುವ ಕುರಿತು ಮೇಲಿನಂತೆ ಪ್ರತಿಕ್ರಿಯಿಸಿದೆ.

“ಬಳಕೆದಾರರೇ ನಿಮ್ಮ ಡೇಟಾವನ್ನು ಯಾರಿಗೂ ಶೇರ್ ಮಾಡಿಲ್ಲ. ಯಾವುದೇ ಕಂಪನಿಗಾಗಲಿ, ಸರ್ಕಾರದ ಸಂಸ್ಥೆಗಾಗಲಿ ಅಥವಾ ಯಾವುದೇ ದೇಶದೊಂದಿಗೂ ನಿಮ್ಮ ಮಾಹಿತಿಯನ್ನು ಹಂಚಿಲ್ಲ. ಪೇಟಿಎಮ್‌ನಲ್ಲಿ ನೀವು ನೀಡಿರುವ ನಿಮ್ಮ ಮಾಹಿತಿ(ಡೇಟಾ) ಎಂದಿಗೂ ನಿಮ್ಮದೇ. ಅದು ನಮ್ಮದು ಸಹ ಅಲ್ಲ. ಅದು ಸರ್ಕಾರದ್ದು ಅಲ್ಲ” ಎಂದು Paytm ಬ್ಲಾಗ್‌ಸ್ಪಾಟ್‌ ಒಂದರಲ್ಲಿ ಹೇಳಿದೆ.

ಪೇಟಿಎಮ್(Paytm) ಕೇವಲ ಯಾವುದಾದರೂ ಡೇಟಾವನ್ನು ಕಾನೂನಿನಾತ್ಮಕವಾಗಿ ದೂರುನೀಡಿ ಕೇಳಿದರೆ ಮಾತ್ರ ಅಂತಹ ಸಂದರ್ಭದಲ್ಲಿ ದೇಶದ ಕಾನೂನಿಗೆ ಬದ್ಧವಾಗಿ ಡೇಟಾವನ್ನು ತನಿಖೆಗಾಗಿ ನೀಡುತ್ತದೆ. ಪೇಟಿಎಮ್ ಬಳಕೆದಾರು ನಿಶ್ಚಿಂತೆಯಿಂದ ಇರಬಹುದು. ಅಲ್ಲದೇ ಕಾನೂನು ಬದ್ಧವಾಗಿ bonafide ಏಜೆನ್ಸಿಯಿಂದ ಡೇಟಾ ಆಕ್ಸೆಸ್ ಗಾಗಿ ದೂರು ಬಂದರು ಸಹ, ನಿಮ್ಮ (ಬಳಕೆದಾರರ) ಅನುಮತಿ ಇಲ್ಲದೇ ವೈಯಕ್ತಿಕ ಮಾಹಿತಿ ಶೇರ್ ಮಾಡುವುದಿಲ್ಲ ಎಂದು ಪೇಟಿಎಮ್‌ ಪ್ರತಿಕ್ರಿಯಿಸಿದೆ.

ಪೇಟಿಎಮ್ ಇತರೆ ಮೊಬೈಲ್ ವ್ಯಾಲೆಟ್ ನಂತೆ ಪೇಟಿಎಮ್ ಬ್ಯಾಂಕ್ ಮತ್ತು ಇ-ಕಾಮರ್ಸ್ ಸೇವೆಗಳನ್ನು ಹೊಂದಿದೆ.

Responding to a video that has recently been viral on the social networking site, Paytm said its user data was not given to the government and to any third party.

You may also like