Home » 5 ದಿನಗಳಲ್ಲಿ ದೇಹದ ತೂಕ ಕಡಿಮೆಗಾಗಿ ಮತ್ತು ಬೆಲ್ಲಿ ಫ್ಯಾಟ್ ಕರಗಿಸಲು ಈ ಜ್ಯೂಸ್

5 ದಿನಗಳಲ್ಲಿ ದೇಹದ ತೂಕ ಕಡಿಮೆಗಾಗಿ ಮತ್ತು ಬೆಲ್ಲಿ ಫ್ಯಾಟ್ ಕರಗಿಸಲು ಈ ಜ್ಯೂಸ್

by manager manager

Parsley and lemon juice to speed up weight loss and melt belly fat in just 5 days 1

ತುಂಬಾ ಜನರು ತಮ್ಮ ಅತ್ಯಧಿಕ ದೇಹದ ತೂಕವನ್ನು ಮತ್ತು ಹಠಮಾರಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಇಲ್ಲ ಸಲ್ಲದ ಎಲ್ಲಾ ತರಹದ ಸರ್ಕಸ್ ಮಾಡುತ್ತಾರೆ. ಆದರೆ ಆ ಯಾವುದು ಚಟುವಟಿಕೆಗಳು ವರ್ಕ್‌ ಔಟ್ ಆಗದೆ ಸುಸ್ತ್ ಆಗಿರುವವರು ಇದ್ದಾರೆ.

ಆದರೆ ಆ ಸಮಸ್ಯೆಗೆ ಈಗ ರಾಮಬಾಣದಂತ ಒಂದು ಸರಳವಾದ ಚಟುವಟಿಕೆಯ ಬಗ್ಗೆ ಕನ್ನಡ ಅಡ್ವೈಸರ್ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ. ಮುಂದೆ ಓದಿರಿ.

ಕನ್ನಡ ಅಡ್ವೈಸರ್ ಇಂದಿನ ಲೇಖನದಲ್ಲಿ ತಿಳಿಸುತ್ತಿರುವ, ಮನೆಯಲ್ಲಿಯೇ ಸರಳವಾಗಿ ಮತ್ತು ಬಹುಬೇಗ ಮಾಡಿ ಕುಡಿಯಬಹುದಾದ ಸಿಂಪಲ್ ಪಾನೀಯ(ಜ್ಯೂಸ್) ಒಂದು ದೇಹಕ್ಕೆ ಪೌಷ್ಠಿಕ ಆಹಾರವು ಹೌದು, ಜೊತೆಗೆ ದೇಹದ ಕ್ಯಾಲೋರಿಯನ್ನು ಕರಗಿಸುವ ಡಿಲೀಸಿಯಸ್ ಸಹ ಹೌದು.

ಕೊತ್ತಂಬರಿ ಮತ್ತು ನಿಂಬೆಹಣ್ಣು ಎರಡನ್ನು ಮಿಕ್ಸ್ ಮಾಡಿದ ಜ್ಯೂಸ್ ಅನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಹಾಗೂ ಬೆಲ್ಲಿ ಫ್ಯಾಟ್ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುವವರು ಕೇವಲ 5 ದಿನಗಳು ನಿರಂತರವಾಗಿ ಸೇವಿಸಿದರೆ ಸಾಕು. ಕೊತ್ತಂಬರಿ ಸೊಪ್ಪು ಕಡಿಮೆ ಕ್ಯಾಲೋರಿ ಹೊಂದಿದ್ದು, ಆದರೆ ಹಲವು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಎ,ಬಿ,ಸಿ ಮತ್ತು ಕೆ ಹಾಗೂ ಕಬ್ಬಿಣ ಮತ್ತು ಪೊಟಾಷಿಯಂ ಖನಿಜಾಂಶಗಳನ್ನು ಹೊಂದಿದೆ.

ಕೊತ್ತಂಬರಿ ಸೊಪ್ಪಿನಲ್ಲಿ ಕ್ಲೋರೋಫಿಲ್ ಹೆಚ್ಚಿನ ಪ್ರಮಾಣದಲ್ಲಿದ್ದು, ನಿರ್ವೀಶೀಕರಣ ಹೆಚ್ಚಿಸಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದೇಹ ಸ್ಲಿಮ್ ಆಗಲು ಕಾರಣವಾಗುತ್ತದೆ.

ನಿಂಬೆಹಣ್ಣಿನ ಬಗ್ಗೆ ಹೇಳುವುದಾದರೆ ಆಸಿಟ್ ಸಿಟ್ರಸ್ ನಲ್ಲೇ ಪ್ರಖ್ಯಾತ. ವಿಟಮಿನ್‌ಗಳು, ಪೋಷಕಾಂಶಗಳು, ರೋಗನಿರೋಧಗಳ ಪ್ಯಾಕೇಜೇ ನಿಂಬೆಹಣ್ಣಿನಲ್ಲಿದೆ.

ಕೊತ್ತಂಬರಿ ಮತ್ತು ನಿಂಬೆಹಣ್ಣಿನ ಜ್ಯೂಸ್ ತಯಾರಿಸುವುದು ಹೇಗೆ?

-5 ನಿಮಿಷದಲ್ಲಿ ತಯಾರಿಸಬಹುದಾದ ಈ ಜ್ಯೂಸ್‌ಗೆ ಈ ಕೆಳಗಿನ ಪದಾರ್ಥಗಳು ಬೇಕು

– ಸ್ವಲ್ಪ ಪ್ರಮಾಣದಲ್ಲಿ ಅಥವಾ 60ಗ್ರಾಂ ನಷ್ಟು ಕೊತ್ತಂಬರಿ ಸೊಪ್ಪು

– ಒಂದು ನಿಂಬೆಹಣ್ಣು

– ಒಂದು ಲೋಟ ನೀರು

ಒಂದು ಲೋಟ ನೀರಿನೊಳಗೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತಿರಿಸಿ ಹಾಗಿ ಮತ್ತು ನಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಮಿಶ್ರಣ ಮಾಡಿ. ಈಗ ಕೊತ್ತಂಬರಿ ಮತ್ತು ನಿಂಬೆಹಣ್ಣು ಜ್ಯೂಸ್ ಕುಡಿಯಲು ರೆಡಿ.

Parsley and lemon juice to speed up weight loss and melt belly fat in just 5 days 2

ಹೇಗೆ ಮತ್ತು ಯಾವಾಗ ಈ ಜ್ಯೂಸ್ ಕುಡಿಯಬೇಕು?

ಪರಿಣಾಮಕಾರಿಯಾಗಿ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಬೆಲ್ಲಿ ಫ್ಯಾಟ್ ಕರಗಿಸಲು ಬೆಳಿಗ್ಗೆ ವೇಳೆ ಬೆಡ್‌ ನಿಂದ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿಯೇ ಕುಡಿಯಬೇಕು. 5 ದಿನಗಳು ನಿರಂತರವಾಗಿ ಹೀಗೆ ಕುಡಿದು ರಿಸಲ್ಟ್‌ ನೋಡಿ. ನಂತರ 10 ದಿನಗಳು ಹಾಗೆ ಬಿಟ್ಟು ನೋಡಿ. ಆ ಹತ್ತು ದಿನಗಳ ನಂತರ ನಿಮಗೆ ಇನ್ನೂ ತೂಕ ಕಡಿಮೆ ಮಾಡಿಕೊಳ್ಳಬೇಕು ಎನಿಸಿದರೆ ಮತ್ತೆ ಐದು ದಿನಗಳ ಕಾಲ ಕುಡಿಯಿರಿ.

ಸೂಚನೆ: ಇದು ಸಂಪೂರ್ಣವಾಗಿ ಸಾಮಾನ್ಯ ಮಾಹಿತಿಯಾಗಿದ್ದು, ವೃತ್ತಿಪರ ಮೆಡಿಕಲ್ ಸಲಹೆ ಎಂದು ಭಾವಿಸಬೇಡಿ. ನಿಮ್ಮ ಡಯಟ್‌ ಹಾಗೂ ಫಿಟ್‌ನೆಸ್‌ಗಾಗಿ ಯಾವಾಗಲು ಮೊದಲು ಡಾಕ್ಟರ್ ಅನ್ನು ಸಂಪರ್ಕಿಸಿ.

If your question is How to weight loss and melt belly fat in 5 days? then Drink Parsley and lemon juice to speed up weight loss and melt belly fat in just 5 days

You may also like