Home » Parijata Flower: ಪಾರಿಜಾತ ಹೂವಿನ ಬಗ್ಗೆ ನಿಮಗೆ ತಿಳಿದಿದಿಯೇ, ಅದರ ಔಷಧೀಯ ಗುಣಗಳು ಯಾವುವು? ಇಲ್ಲಿ ತಿಳಿಯಿರಿ..

Parijata Flower: ಪಾರಿಜಾತ ಹೂವಿನ ಬಗ್ಗೆ ನಿಮಗೆ ತಿಳಿದಿದಿಯೇ, ಅದರ ಔಷಧೀಯ ಗುಣಗಳು ಯಾವುವು? ಇಲ್ಲಿ ತಿಳಿಯಿರಿ..

by manager manager

ಇರುಳು ಮಲ್ಲಿಗೆ ಅಥವಾ ಪಾರಿಜಾತವನ್ನು ನಮ್ಮ ಪುರಾಣಗಳಲ್ಲೂ ಉಲ್ಲೇಖವಿದೆ. ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ 5 ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ನೆಲೆಗೊಂಡ. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. ಪುರಾಣಗಳಲ್ಲಿ ಉಲ್ಲೇಖಗೊಂಡ ಪಾರಿಜಾತದ ಹೂ, ಒಂದು ಕಾಲ್ಪನಿಕ ಪುಷ್ಪ. ಸಸ್ಯಶಾಸ್ತ್ರಜ್ಞರ ಪ್ರಕಾರ, ಇದು ಹೂವಲ್ಲವಂತೆ.

ಪಾರಿಜಾತದ ಮಹತ್ವ
• ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು.
• ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು.
• ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ ‘ಪಾರಿಜಾತ,’ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ.
• ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.
• ಪಾರಿಜಾತ ಎಂಬ ಸಸ್ಯಶಾಸ್ತ್ರೀಯ ವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.

ಪಾರಿಜಾತದ ಔಷಧೀಯ ಗುಣಗಳು
ಜೀಣಾರ್ಂಗಗಳ ತೊಂದರೆಗೆ ಈ ಪಾರಿಜಾತದ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.

ಪಾರಿಜಾತದ ಚಹಾ ಅಥವಾ ಡಿಕಾಕ್ಷನ್ ತಯಾರು ಮಾಡಲು ಬೇಕಾಗುವ ಸಾಮಗ್ರಿಗಳು :
• ಸುಮಾರು 100 ಗ್ರಾಂ ಇರುಳು ಮಲ್ಲಿಗೆ ಹೂಗಳು ಮತ್ತು ಗಿಡದ ಎಲೆಗಳು ತೆಗೆದುಕೊಳ್ಳಿ ನಂತರ ಸುಮಾರು 4 ಗ್ರಾಂ ಬೀಟಲ್ ಲೈಮ್, ಒಂದು ಲೀಟರ್ ನೀರು, ಒಂದು ಫ್ರೆಶ್ ನಿಂಬೆ ಹಣ್ಣಿನ ರಸ, ಸ್ವಲ್ಪ ಬೆಲ್ಲ ಅಥವಾ ಹಸಿ ಜೇನುತುಪ್ಪವನ್ನು ತೆಗೆದುಕೊಳ್ಳಿ, ನಂತರ ಡಿಕಾಕ್ಷನ್ ರೆಡಿ ಮಾಡಿಕೊಳ್ಳಿ ಅದು ಮೊದಲಿಗೆ ಪಾರಿಜಾತ (ಇರುಳು ಮಲ್ಲಿಗೆ ) ಹೂಗಳನ್ನು ಮತ್ತು ಎಲೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಪೇಸ್ಟ್ ತಯಾರಿಸಿಕೊಳ್ಳಿ. ಹೂವುಗಳ ಮತ್ತು ಎಲೆಗಳ ಪೇಸ್ಟ್ ತಯಾರಾದ ನಂತರ ಅದನ್ನು ಬಿಸಿಲಿನಲ್ಲಿ ಸ್ವಲ್ಪ ಹೊತ್ತಿನ ತನಕ ಒಣಗಿಸಿ. ನಿಮಗೆ ಬೇಕಾದ ಸಂದರ್ಭದಲ್ಲಿ ಈ ಪುಡಿಯನ್ನು ಬಿಸಿ ನೀರಿನ ಜೊತೆ ಹಾಕಿ ಚೆನ್ನಾಗಿ ಕುದಿಸಿ ಚಹ ತಯಾರಿಸಿಕೊಳ್ಳಬಹುದು. ಒಂದು ಲೀಟರ್ ನೀರಿನಲ್ಲಿ ನೀವು ಈ ಪುಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಕುಡಿಯಬೇಕು.

ಪಾರಿಜಾತ ಹೂವಿನಿಂದಾಗುವ ಅನುಕೂಲಗಳು ಅಥವ ಪ್ರಯೋಜನಗಳು
• ಹೊಟ್ಟೆಯಲ್ಲಿನ ಹುಳುಗಳನ್ನು ಸಾಯಿಸುತ್ತದೆ : ನಮಗೆ ಆಗಾಗ ಎದುರಾಗುವ ಕೆಲವೊಂದು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಇವುಗಳು ಕಾರಣವೆಂದು ಹೇಳಲಾಗುತ್ತದೆ. ಇಂತಹ ಜೀವಿಗಳನ್ನು ನಾಶಪಡಿಸಲು ಮತ್ತು ನಮ್ಮ ಹೊಟ್ಟೆಯ ಆರೋಗ್ಯವನ್ನು ವೃದ್ಧಿಗೊಳಿಸಲು ಪಾರಿಜಾತದ ಡಿಕಾಕ್ಷನ್ ಬಹಳ ಪರಿಣಾಮಕಾರಿ.
• ಅಸ್ತಮಾ ಮತ್ತು ದಮ್ ಆರೋಗ್ಯ ಸಮಸ್ಯೆಗೆ ಒಂದು ಸುಲಭ ಪರಿಹಾರವೆಂದರೆ, ಪಾರಿಜಾತ ಗಿಡದ ಚಕ್ಕೆಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ವೀಳ್ಯದ ಎಲೆಯಲ್ಲಿ ಇಟ್ಟು ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಅರ್ಧ ಟೀ ಚಮಚದಷ್ಟು ಸೇವಿಸಿದರೆ ಅಸ್ತಮಾ ಮತ್ತು ಕೆಮ್ಮಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
• ಕಾಲಕಾಲಕ್ಕೆ ಅನುಗುಣವಾಗಿ ಎದುರಾಗುವ ಮಲೇರಿಯಾ, ಡೆಂಗ್ಯೂ ಅಥವಾ ಚಿಕನ್ ಗುನ್ಯಾ ಎಂಬ ಮಾರಕ ಮತ್ತು ಸಾಂಕ್ರಾಮಿಕ ಜ್ವರದ ಅಸ್ವಸ್ಥತೆಯ ವಿರುದ್ಧ ಹೊರಡುವಂತಹ ಮತ್ತು

ಬಹಳ ಬೇಗನೆ ನಿವಾರಣೆ ಮಾಡುವಂತಹ ಶಕ್ತಿ ಪಾರಿಜಾತದಲ್ಲಿದೆ.
• ಆರ್‍ಥ್ರೈಟಿಸ್ ಹೆಚ್ಚಾಗಿ 40 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರಲ್ಲಿ ಕಂಡು ಬರುವ ಮೂಳೆಗಳಿಗೆ ಹಾಗೂ ಕೀಲುಗಳಿಗೆ ಸಂಬಂಧ ಪಟ್ಟ ಪ್ರತಿ ದಿನ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಡ್ ಕಾಫಿ ಅಥವಾ ಚಹಾ ಕುಡಿಯುವ ಬದಲು ಈ ಡಿಕಾಕ್ಷನ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತುಂಬ ಒಳ್ಳೆಯದು.
• ತಲೆ ಕೂದಲಿನ ಸಮಸ್ಯೆ ಇರುವವರು ಪಾರಿಜಾತ ಹೂಗಳಿಂದ ಮತ್ತು ಎಲೆಗಳಿಂದ ತಯಾರು ಮಾಡಿದ ಡಿಕಾಕ್ಷನ್ ಅನ್ನು ಬೋಳು ತಲೆಯ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆ ಸ್ನಾನ ಮಾಡಬೇಕು. ಸುಮಾರು 21 ದಿನಗಳ ತನಕ ಇದೇ ಅಭ್ಯಾಸ ಮುಂದುವರೆಸಿಕೊಂಡು ಬಂದರೆ ಕ್ರಮೇಣವಾಗಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ? ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದಿಯೇ?