Home » ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ? ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದಿಯೇ?

ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ? ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದಿಯೇ?

by manager manager

ತುಳಸಿ ಸಸ್ಯ ಜಾತಿಯು ಎಳೆಯದಾದ, ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯವಾಗಿದೆ. ತುಳಸಿ ನಳಪಾಕಕ್ಕೆ ಯೋಗ್ಯ ಸಸ್ಯವಾಗಿದ್ದು ಇಟಾಲಿಯನ್ ಪಾಕದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಜೊತೆಗೆ ಇದು ತೈವಾನ್ ನಂತಹ ಈಶಾನ್ಯ ಏಷಿಯಾ ಹಾಗು ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯ, ಹಾಗು ಲಾವೋಸ್ ನಂತಹ ಆಗ್ನೇಯ ಏಷಿಯಾದ ಪಾಕಪದ್ದತಿಗಳಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯದ ಜಾತಿ ಹಾಗು ತಳಿಯನ್ನು ಅವಲಂಬಿಸಿ, ಎಲೆಗಳು ಸ್ವಲ್ಪಮಟ್ಟಿಗೆ ಆನಿಸ್(ವಾಯುಹರ ಔಷಧಿಗೆ ಉಪಯೋಗಿಸುವ ಸೋಪು ಬೀಜ) ನ ಮಾದರಿಯ ರುಚಿ ಹೊಂದಿರುತ್ತವೆ. ಜೊತೆಗೆ ಗಾಢ, ತೀಕ್ಷ್ಣವಾಗಿರುವುದರ ಜೊತೆಗೆ ಸಾಮಾನ್ಯವಾಗಿ ಮೋಹಕ ಪರಿಮಳವನ್ನು ಹೊಂದಿರುತ್ತವೆ.

ಒಸಿಮಮ್ ಬಸಿಲಿಕಂ ನ ಹಲವು ಜಾತಿಗಳಿವೆ, ಜೊತೆಗೆ ಇದಕ್ಕೆ ಸಂಬAಧಿಸಿದ ಹಲವಾರು ಜಾತಿಗಳು ಹಾಗು ಮಿಶ್ರ ತಳಿಗಳನ್ನು ತುಳಸಿ ಎಂದು ಕರೆಯಲಾಗುತ್ತದೆ. ಇಟಾಲಿಯನ್ ಆಹಾರಗಳಲ್ಲಿ ಬಳಸಲಾಗುವ ಮಾದರಿಯನ್ನು ಸಿಹಿ ತುಳಸಿ ಎಂದು ಕರೆಯಲಾಗುತ್ತದೆ, ಇದು ಏಷಿಯಾದಲ್ಲಿ ಬಳಸಲಾಗುವ ಥಾಯ್ ತುಳಸಿ(ಔ.ಬಸಿಲಿಕಂ ವರ್. ಥೈರ್ಸಿಫ್ಲೋರ ) ನಿಂಬೆ ತುಳಸಿ(ಔ ್ಠ) ಸಿಟ್ರಿಯೋಡೋರಮ್ ) ಹಾಗು ಪವಿತ್ರ ತುಳಸಿ(ಒಸಿಮಮ್ ತೆನುಯಿಫ್ಲೋರಂ)ಗಿAತ ಭಿನ್ನವಾಗಿದೆ. ಬಹಳ ಸಾಮಾನ್ಯವಾದ ತುಳಸಿ ಜಾತಿಗಳು ವರ್ಷದಲ್ಲಿ ಒಂದೇ ಬಾರಿ ಬೆಳೆದರೆ, ಕೆಲವು ಜಾತಿಗಳು ಸುಖೋಷ್ಣ, ಉಷ್ಣವಲಯದ ವಾತಾವರಣಗಳಲ್ಲಿ ವರ್ಷವಿಡೀ ಬೆಳೆಯುತ್ತವೆ, ಇದರಲ್ಲಿ ಪವಿತ್ರ ತುಳಸಿ ಹಾಗು ‘ಆಫ್ರಿಕನ್ ಬ್ಲೂ’ ಎಂದು ಕರೆಯಲ್ಪಡುವ ತಳಿಗಳೂ ಸೇರಿವೆ.

ತುಳಸಿಯಲ್ಲಿದೆ ಹಲವು ಪ್ರಯೋಜನ :

  • ಹತ್ತರಿಂದ ಇಪ್ಪತ್ತು ಮಿಲಿ ತುಳಸಿ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಚರ್ಮದ ತುರಿಕೆ, ಉರಿ ಮತ್ತು ಮೈಯಲ್ಲಿ ಆಗುವ ಗಂದೆಗಳು ಗುಣವಾಗುತ್ತದೆ.
  • ತುಳಸಿಯ ಬೀಜವನ್ನು ಅಕ್ಕಿತೊಳೆದ ನೀರಿನಲ್ಲಿ ಅರೆದು ನಿಯಮಿತವಾಗಿ ಸೇವಿಸಿದರೆ ಕಟ್ಟಿಕೊಂಡಿರವ ಮೂತ್ರವು ಸರಾಗವಾಗಿ ಹೋಗುತ್ತದೆ.
  • ಪ್ರತಿ ದಿನ ೫ ತುಳಸಿ ಎಲೆಯನ್ನು ನೀರಿನೊಂದಿಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಬುದ್ಧಿಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ.
  • ಹಲ್ಲು ನೋವಿದ್ದರೆ ೨ ರಿಂದ ೪ ತುಳಸಿ ಎಲೆ ಜತೆಗೆ ೨ರಿಂದ ೩ ಕಾಳು ಮೆಣಸನ್ನು ಸೇರಿಸಿ ಜಜ್ಜಿ ಮಾತ್ರೆಗಳನ್ನು ಮಾಡಿ. ನೋವಿರುವ ಹಲ್ಲಿನ ನಡುವೆ ಇಟ್ಟುಕೊಂಡರೆ ನೋವು ತಕ್ಷ ಣ ಮಾಯವಾಗುತ್ತದೆ.
  • ತುಳಸಿಯ ಎಲೆ, ಕಾಂಡ, ಬೇರು, ಹೂವು ಎಲ್ಲವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಯನ್ನು ೨ ರಿಂದ ೫ ಗ್ರಾಂ ಹಾಲಿನ ಜತೆ ನಿಯಮಿತವಾಗಿ ಸೇವಿಸಿದರೆ ಸಂಧಿಗಳ ನೋವು ಕಡಿಮೆಯಾಗುತ್ತದೆ.
  • ಗಂಟಲು ರೋಗ, ಬಾಯಿ ರೋಗ ಮತ್ತು ಹಲ್ಲಿನ ಸಮಸ್ಯೆ ಇದ್ದಲ್ಲಿ ತುಳಸಿ ರಸದ ಜತೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿ ನಿಯಮಿತವಾಗಿ ಬಾಯಿ ಮುಕ್ಕಳಿಸಿದರೆ, ಗಂಟಲು, ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು ಗುಣವಾಗುತ್ತದೆ.
  • ೧೦ ಮಿಲಿ ತುಳಸಿ ರಸಕ್ಕೆ ೨ ರಿಂದ ೩ ಗ್ರಾಂ ಕರಿಮೆಣಸಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ .

ತುಳಸಿ ಬೀಜಗಳು :
ನೀರಿನಲ್ಲಿ ನೆನೆಸಿಟ್ಟಾಗ, ತುಳಸಿ ಜಾತಿಯ ಹಲವಾರು ಬೀಜಗಳು ಜೆಲಟಿನ್ ಪೂರಿತವಾಗುತ್ತವೆ, ಹಾಗು ಇವುಗಳನ್ನು ಫಾಲೂಡ ಅಥವಾ ಶರಬತ್ ನಂತಹ ಏಶಿಯನ್ ಪೇಯಗಳಲ್ಲಿ ಹಾಗು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಇಂತಹ ಬೀಜಗಳನ್ನು ವಿವಿಧವಾಗಿ ಸಬ್ಜ , ಸುಬ್ಜ , ಟಕ್ಮರಿಯಾ , ಟುಕ್ಮರಿಯಾ , ತುಖಮರಿಯಾ , ಫಾಲೂಡ , ಸೆಲಸಿಹ್ (ಮಲಯ್/ಇಂಡೋನೆಶಿಯನ್) ಅಥವಾ ಹಾಟ್ ಎ (ವಿಯೆಟ್ನಾಮೀಸ್) ಎಂದು ಕರೆಯಲಾಗುತ್ತದೆ. ಇವುಗಳಲ್ಲಿರುವ ಔಷಧೀಯ ಗುಣಗಳಿಂದಾಗಿ ಇವುಗಳನ್ನು ಭಾರತದ ಸಾಂಪ್ರದಾಯಿಕ ಔಷಧ ಪ್ರಕಾರವಾದ ಆಯುರ್ವೇದದಲ್ಲಿ ಹಾಗು ತಮಿಳಿನ ಸಾಂಪ್ರದಾಯಿಕ ಔಷಧ ಪ್ರಕಾರವಾದ ಸಿದ್ದ ಔಷಧದಲ್ಲಿ ಬಳಸಲಾಗುತ್ತದೆ. ಈಶಾನ್ಯ ಏಷಿಯಾದಲ್ಲಿ ಇದನ್ನು ಜನಪ್ರಿಯ ಪೇಯವಾಗಿಯೂ ಸಹ ಬಳಸುತ್ತಾರೆ.

ಬ್ರಾಹ್ಮಿ ಎಣ್ಣೆಯು ಕೂದಲಿಗೆ ಮತ್ತು ಚರ್ಮಕ್ಕೆ ಏನೆಲ್ಲಾ ಅನುಕೂಲತೆಗಳನ್ನು ನೀಡುತ್ತದೆ ಗೊತ್ತೇ?