Home » ನಿಫಾ ವೈರಸ್: ರೋಗದ ಲಕ್ಷಣಗಳು, ತಡೆಗಟ್ಟುವಿಕೆ, ಸೋಂಕಿನ ಚಿಕಿತ್ಸೆ ಹೇಗೆ?

ನಿಫಾ ವೈರಸ್: ರೋಗದ ಲಕ್ಷಣಗಳು, ತಡೆಗಟ್ಟುವಿಕೆ, ಸೋಂಕಿನ ಚಿಕಿತ್ಸೆ ಹೇಗೆ?

by manager manager

ಮಹಾಮಾರಿ ನಿಫಾ ವೈರಸ್ (Nipah virus – NiV)ಗೆ ಕೇರಳದಲ್ಲಿ ಇದುವರೆಗು 16 ಜನ ಸಾವನ್ನಪ್ಪಿದ್ದಾರೆ. ಇನ್ನು ಪರೀಕ್ಷೆಗೊಳಪಡಿಸಿದ ಹೊಸ ಪ್ರಕರಣಗಳಲ್ಲಿ ಕೆಲವರಿಗೆ ಸೋಂಕು ತಗುಳಿರುವುದು ದೃಡಪಟ್ಟಿದ್ದರೆ ಹಲವು ಪ್ರಕರಣಗಳಲ್ಲಿ ವೈರಸ್ ಕಂಡುಬಂದಿಲ್ಲ. ಸೋಂಕು ಹರಡಿರುವುದರಿಂದ ಇಡೀ ರಾಜ್ಯದ ಜನರು ಆತಂಕಗೊಂಡಿದ್ದಾರೆ. ನೂರಾರು ಜನರು ಸಮೀಪದ ಗ್ರಾಮಗಳಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ರೋಗದ ಭೀತಿ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ನಿಫಾ ವೈರಾಣುವಿನ ಸೋಂಕಿನ ಶಂಕೆಯಿದ್ದ ಕೇರಳ ಮೂಲದ 27 ವರ್ಷದ ಯೋಧ ಮೇ 31 ರಂದು ಕೋಲ್ಕತ್ತಾದಲ್ಲಿ ಮೃತಪಟ್ಟಿದ್ದರು. ಕೇರಳದ ಸೀನು ಪ್ರಸಾದ್ ಕೋಲ್ಕತ್ತಾದ ಫೋರ್ಟ್ ವಿಲಿಯಮ್ ಗೆ ಭಾರತೀಯ ಸೇನೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೇರಳಕ್ಕೆ ಒಂದು ತಿಂಗಳ ರಜೆ ಮೇಲೆ ಹೋಗಿದ್ದ ಸೀನು ಪ್ರಸಾದ್ ಮೇ 20ರಂದು ವಾಪಸ್ಸಾಗಿದ್ದರು. ಸೀನು ಪ್ರಸಾದ್ ಅವರ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ರಾಷ್ಟ್ರೀಯ ಸಂಸ್ಥೆ (ನಿಫಾ ವೈರಸ್ ನ್ನು ಪತ್ತೆ ಮಾಡುವ ದೇಶದಲ್ಲಿರುವ ಏಕೈಕ ಸಂಸ್ಥೆ)ಗೆ ಕಳುಹಿಸಲಾಗಿತ್ತು. ಪರೀಕ್ಷೆಯ ನಂತರ ಸೋಂಕು ತಗುಳಿರುವುದು ದೃಡಪಟ್ಟಿದೆ.

ಏನಿದು ನಿಫಾ ವೈರಸ್..?

1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ. ಇದರ ತಡೆಗೆ ಲಸಿಕೆಯಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಕುದುರೆಗಳಿಗೆ ಹೆಂಡ್ರಾ ಎಂಬ ವೈರಸ್ ಸೋಂಕು ತಗುಲಿದಾಗ ನೀಡುವ ಚಿಕಿತ್ಸೆಯನ್ನೇ ಈ ನಿಪಾ ವೈರಸ್ ಸೋಂಕು ತಗುಲಿದವರಿಗೂ ನೀಡುತ್ತಿದ್ದಾರೆ. ಬಾವಲಿಗಳು, ಹಂದಿಗಳು, ಕೋತಿ, ಬೆಕ್ಕು ಮುಂತಾದವುಗಳಿಂದ ಈ ವೈರಸ್ ಪಸರಿಸುತ್ತದೆ.

ಭಾರತದಲ್ಲಿ ಮೊದಲಿಗೆ 2001ರಲ್ಲಿ ಪಶ್ಚಿಮ ಬಂಗಾಳದ ಸಿಲುಗುರಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಒಟ್ಟು 66 ನಿಫಾ ಪ್ರಕರಣ ದಾಖಲಾಗಿ, 45 ಜನ ಸಾವನ್ನಪ್ಪಿದ್ದರು. 2007ರಲ್ಲಿ ಪಶ್ಚಿಮ ಬಂಗಾಳದ ನೋಯ್ಡಾದಲ್ಲಿ 5 ಜನ ನಿಫಾಗೆ ಬಲಿಯಾಗಿದ್ದರು.

ವೈರಸ್’ನ ಲಕ್ಷಣಗಳೇನು..?

  1. ನಿಫಾ ಸೋಂಕು ಆವರಿಸಿದರೆ ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ, ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ.
  2. ರೋಗದ ಲಕ್ಷಣಗಳು 3 ರಿಂದ 14 ದಿನಗಳವರೆಗೂ ಇರುತ್ತವೆ.
  3. ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.
  4. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 7 ರಿಂದ 14 ದಿನಗಳೇ ಬೇಕಾಗುತ್ತದೆ.
  5. ಸಾಮಾನ್ಯವಾದ ಜ್ವರ, ವಿಪರೀತ ತಲೆನೋವು, ಮಿದುಳಿನ ಉರಿಯೂತ, ಮಾಂಸಖಂಡಗಳ ನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ಉಸಿರಾಟದ ತೊಂದರೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ.
  6. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರಿ ಸಾವನ್ನಪ್ಪುವ ಸಾಧ್ಯತೆಗಳಿವೆ.

ಹೇಗೆ ಹರಡುತ್ತದೆ..?

ಪಕ್ಷಿಗಳು ತಿಂದು ಹಾಕಿರುವ ಹಣ್ಣುಗಳನ್ನು ಸೇವಿಸುವುದರಿಂದ ಅದರಲ್ಲೂ ಮುಖ್ಯವಾಗಿ ಬಾವಲಿ ತಿಂದು ಬಿಟ್ಟಿರುವ ಹಣ್ಣುಗಳನ್ನು ಸೇವಿಸುವುದರಿಂದ ಇದು ಹರಡುತ್ತದೆ. ಇದು ಪ್ರಾಣಿಗಳಲ್ಲೂ ಹರಡಲಿದ್ದು, ಅಂತಹ ಪ್ರಾಣಿಗಳ ದೇಹದಿಂದ ಹೊರಹೊಮ್ಮುವ ದ್ರವ (ಎಂಜಲು) ಮನುಷ್ಯನ ದೇಹ ಸೇರಿದರೆ ಆವರಿಗೂ ಬರುತ್ತದೆ. ಅಂತಹ ಮನುಷ್ಯನ ದೇಹದಿಂದ ಹೊರಹೊಮ್ಮುವ ದ್ರವ (ಎಂಜಲು, ಬೆವರು, ಕೆಮ್ಮು ಅಥವಾ ಸೀನಿದಾಗ) ದಿಂದ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ನಿಫಾ ವೈರಸ್​ಗೆ ಪ್ರಮುಖ ಕಾರಣ ಬಾವಲಿ, ಹಂದಿ, ಹಕ್ಕಿಗಳು ಹಕ್ಕಿಗಳು ತಿಂದ ಹಣ್ಣು ತಿಂದಾಗ ನಿಫಾ ವೈರಸ್​ ದೇಹ ಪ್ರವೇಶಿಸುತ್ತೆ ನಿಫಾ ವೈರಸ್​ ಇರುವ ವ್ಯಕ್ತಿಯಿಂದಲೂ ವೈರಸ್​ ಮತ್ತೊಬ್ಬರಿಗೆ ಹರಡುತ್ತೆ ವಿಶ್ವದ 10 ಮಾರಣಾಂತಿಕ ವೈರಸ್​ಗಳಲ್ಲಿ ನಿಫಾ ಕೂಡ ಒಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ತಿಳಿಸಿದೆ.

  • ಬಾವಲಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
  • ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
  • ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ)
  • ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ
  • ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ

ಮುಂಜಾಗ್ರತಾ ಕ್ರಮಗಳು:

  1. ಸೋಂಕಿತ ಜನರೊಂದಿಗೆ ನಿಕಟ (ಅಸುರಕ್ಷಿತ) ಭೌತಿಕ ಸಂಪರ್ಕವನ್ನು ತಪ್ಪಿಸಿ
  2. ರೋಗಿಗಳ ಜೊತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈ ಕವಚ ಧರಿಸಬೇಕಲ್ಲದೆ ವೈಯಕ್ತಿಕ ರಕ್ಷಣೆಗೆ ಹೆಚ್ಚು ಗಮನ ಕೊಡಬೇಕು. NH95 ದರ್ಜೆಯ ಮಾಸ್ಕ್’ಗಳನ್ನು ಧರಿಸಿಕೊಳ್ಳಿ
  3. ಸಾಬೂನಿನಿಂದ ನಿಯಮಿತವಾಗಿ ಕೈಗಳನ್ನು ತೊಳೆಯಿರಿ
  4. ನಿಮ್ಮ ಮತ್ತು ಮಕ್ಕಳ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ
  5. ರೋಗವು ಬಾವಲಿಗಳ ಮೂಲಕ ಹರಡುವುದರಿಂದ ಯಾವುದೇ ಪ್ರಾಣಿಗಳು ಕಚ್ಚಿದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಡಿ.
  6. ಬಾವಲಿಗಳು ವಾಸವಿರುವ ಪ್ರದೇಶಗಳಿಂದ ದೂರವಿರುವುದು ಉತ್ತಮವಾಗಿದೆ.
  7. ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಸೇವಿಸಬೇಕಲ್ಲದೆ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳಬೇಕು
  8. ಹಂದಿಯ ಮಾಂಸದ ಸೇವನೆಯನ್ನು ಕೆಲದಿನಗಳು ತ್ಯಜಿಸುವುದು ಉತ್ತಮ.
  9. ಹಂದೀ ಸಾಕಾಣಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೇ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು.
  10. ನೆಗಡಿ, ಕೆಮ್ಮು, ಜ್ವರ ಬಂದ ತಕ್ಷಣ ವೈದ್ಯರನ್ನು ಭೆಟ್ಟಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ.
  11. ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ನಿಫಾ ವೈರಸ್ ಲಕ್ಷಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
  12. ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರ ಮತ್ತು ಕಷಾಯಗಳನ್ನು ಸೇವಿಸುವುದು ಉತ್ತಮ.
  13. ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು.
  14. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು.
  15. ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು.

The Nipah virus (NiV) has claimed 16 lives in Kerala. details about nipah. Like Nipah Virus symptoms, prevention of Nipah, treatment of the infection.

 

You may also like