Home » ಕೋಳಿಯಿಂದ ನಿಫಾ ವೈರಸ್ ಹರಡುತ್ತಾ..? ವದಂತಿಗಳ ಬಗ್ಗೆ ಮಣಿಪಾಲ ವೈದ್ಯರ ಸ್ಪಷ್ಟೀಕರಣ

ಕೋಳಿಯಿಂದ ನಿಫಾ ವೈರಸ್ ಹರಡುತ್ತಾ..? ವದಂತಿಗಳ ಬಗ್ಗೆ ಮಣಿಪಾಲ ವೈದ್ಯರ ಸ್ಪಷ್ಟೀಕರಣ

by manager manager

ಉಡುಪಿ: ಕೋಳಿಯಿಂದ ನಿಫಾ ವೈರಸ್ ಹರಡುತ್ತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ವದಂತಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ನಿಫಾ ವೈರಸ್ ಕೋಳಿಯಿಂದ ಹರಡುವ ವಿಚಾರವನ್ನು ಸಂಶೋಧಕ ಡಾ. ಅರುಣ್ ಕುಮಾರ್ ತಳ್ಳಿಹಾಕಿದ್ದು, ನಿಫಾ ವೈರಸ್ ಕೋಳಿಯಿಂದ ಹರಡುತ್ತದೆನ್ನುವುದೆಲ್ಲಾ ಸುಳ್ಳು, ಅದು ಬಾವಲಿಯಿಂದ ಹರಡುತ್ತೆ ಎಂದು ತಿಳಿಸಿದ್ದಾರೆ.

ಡಾ. ಅರುಣ್ ಕುಮಾರ್ ಅವರು ನಿಫಾ ವೈರಸನ್ನು ಮೊದಲು ಪತ್ತೆ ಹಚ್ಚಿದ ಸಂಶೋಧಕರಾಗಿದ್ದಾರೆ. ವಾಟ್ಸ್ಆಫ್ ನಲ್ಲಿ ಈ ಸಂದೇಶ ವೈರಲ್ ಆದ ಹಿನ್ನೆಲೆಯಲ್ಲಿ ಈ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೋಳಿಯಿಂದ ನಿಫಾ ವೈರಸ್ ಹರಡಲ್ಲ. ಜಾಲತಾಣಗಳಲ್ಲಿ ಈ ಕುರಿತು ಸುಳ್ಳು ಸುದ್ದಿ ಹರಡಲಾಗುತ್ತಿದೆ. ನಿಪಾ ವೈರಸ್ ಬಾವಲಿಯಿಂದ ಬರುವ ರೋಗವಾಗಿದೆ ಎಂದು ಹೇಳಿದ್ದಾರೆ. ಹಾಗೆಯೆ ಮಂಗಳೂರು ಹಾಗೂ ಇತರ ಕರಾವಳಿ ಭಾಗಕ್ಕೆ ಈ ರೋಗಾಣು ಹರಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ನಾವು ಅಲ್ಲಿಗೆ ತೆರಳಿದ ವೇಳೆಯಲ್ಲಿ ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಫಾ ವೈರಸ್ ಕಾಣಸಿಲ್ಲ. ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಂಡುಬರುತ್ತದೆ. ಮಣಿಪಾಲ ಸೆಂಟರ್ ನಲ್ಲಿ ನಿಫಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ವೈರಸ್ ಪತ್ತೆಯಾಗಿಲ್ಲ. ಕೋಳಿಯಿಂದ ಹರಡುತ್ತೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಭಯಪಡುವ ಅಗತ್ಯವಿಲ್ಲ.

ಕೇರಳದಲ್ಲಿ ಈಗಾಗಲೇ ಮಲೇಶಿಯಾ ಹಾಗೂ ಆಸ್ಟ್ರೇಲಿಯಾ ದೇಶಗಳಿಂದ ಔಷಧಿಗಳನ್ನು ತರಿಸಲಾಗುತ್ತಿದೆ. ಕೇರಳದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಗೆ ಒಂದೇ ರೀತಿಯ ರೋಗ ಬಂದು ಸಾವು ಸಂಭವಿಸಿದ ವೇಳೆ ಪರೀಕ್ಷಿಸಿದಾಗ ಈ ವೈರಸ್ ಪತ್ತೆಯಾಗಿತ್ತು. ಕೇರಳದ ಕ್ಯಾಲಿಕಟ್​ನಲ್ಲಿ ಮಾತ್ರ ನಿಫಾ ವೈರಸ್ ಬಾವಲಿಯಿಂದ ಹರಡಿದ ಒಂದೇ ಪ್ರಕರಣ ಕಂಡುಬಂದಿದೆ. ಉಳಿದದ್ದು ರೋಗಿಯಿಂದ ರೋಗಿಗೆ ಹರಡಿರುವ ಪ್ರಕರಣಗಳಾಗಿವೆ. ಆದರೆ ಕರ್ನಾಟಕದಲ್ಲಿ ಯಾವುದೇ ನಿಫಾ ವೈರಸ್ ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Nipah virus is spreading through chickens has gone viral in social media platforms like whatsapp and facebook. Manipal Research department chief Dr. Arun Kumar has clarified that nipah virus not spreads from chicken. All these are false messages.

You may also like