Home » ಮುಕ್ತ ವಿದ್ಯಾಲಯದಲ್ಲಿ ನೇಮಕ: ಅರ್ಜಿಗೆ ಮೇ.17 ಕೊನೆ ದಿನ

ಮುಕ್ತ ವಿದ್ಯಾಲಯದಲ್ಲಿ ನೇಮಕ: ಅರ್ಜಿಗೆ ಮೇ.17 ಕೊನೆ ದಿನ

by manager manager

ಭಾರತ ಸರ್ಕಾರದ ಶಾಲಾ ಶಿಕ್ಷಕರು ಮತ್ತು ಸಾಕ್ಷರತೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಮುಕ್ತ ವಿದ್ಯಾಲಯ ಎಜುಕೇಷನ್ ಸಂಸ್ಥೆಯಲ್ಲಿ(NIOS) ಖಾಲಿ ಇರುವ ವಿವಿಧ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ಪ್ರಪಂಚದ ಅತಿದೊಡ್ಡ ಮುಕ್ತ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾರಿಗುವ ಕರ್ನಾಟಕವು ಸೇರಿದಂತೆ ದೇಶಾದಾದ್ಯಂತದ 6 ಸಾವಿರಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳನ್ನು ಹೊಂದಿರುವ NIOS ನ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ : 17-05-2019

ಹುದ್ದೆಗಳ ವಿವರ

ಗ್ರೂಪ್ A ಹುದ್ದೆಗಳು

ನಿರ್ದೇಶಕ(ಮೌಲ್ಯಮಾಪನ) – 1

ಉಪ ನಿರ್ದೇಶಕ (ಶೈಕ್ಷಣಿಕ) – 2

ಉಪ ನಿರ್ದೇಶಕ (ಖಾತೆ) – 1

ಶೈಕ್ಷಣಿಕ ಅಧಿಕಾರಿಗಳು ಒಟ್ಟು 11 ಹುದ್ದೆಗಳು. ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ.

ರಕ್ಷಣಾ ಅಧ್ಯಯನ, ಇಂಗ್ಲಿಷ್, ಲಲಿತ ಕೆಲ, ಭಾಷಾಶಾಸ್ತ್ರ, ಮನೋವಿಜ್ಞಾನ, ಸಂಸ್ಕೃತ, ವಿಜ್ಞಾನ, ಸಮಾಜ ವಿಜ್ಞಾನ, ವಿಶೇಷ ವಿಜ್ಞಾನ, ವಿಶೇಷ ಶಿಕ್ಷಣ, ಯೋಗ.

ಗ್ರೂಪ್ B ಹುದ್ದೆಗಳು

ಸಹಾಯಕ ಲೆಕ್ಕ ಪರಿಶೋಧಕ ಅಧಿಕಾರಿ – 1

ಇಡಿಪಿ ಮೇಲ್ವಿಚಾರಕ – 37

ಗ್ರೂಪ್ C ಹುದ್ದೆಗಳು

ಕಿರಿಯ ಸಹಾಯಕ – 37

ಯಾವ ಹುದ್ದೆ ಹೇಗೆ ನೇಮಕಾತಿ ಮಾಡಲಾಗುತ್ತದೆ?

– ನಿರ್ದೇಶಕ (ಮೌಲ್ಯಮಾಪನ), ಅಕಾಡೆಮಿಕ್ ಅಫೀಸರ್, ಇಡಿಪಿ ಸೂಪರ್ ವೈಸರ್, ಜೂನಿಯರ್ ಅಸಿಸ್ಟಂಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

– ಇತರೆ ಹುದ್ದೆಗಳನ್ನು ಡೆಪ್ಯೂಟೇಷನ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ

ನಿರ್ದೇಶಕ(ಮೌಲ್ಯಮಾಪನ) – ಸ್ನಾತಕೋತ್ತರ ಪದವಿ

ಉಪ ನಿರ್ದೇಶಕ (ಶೈಕ್ಷಣಿಕ) – ಸ್ನಾತಕೋತ್ತರ ಪದವಿ

ಉಪ ನಿರ್ದೇಶಕ (ಖಾತೆ) – ಸ್ನಾತಕೋತ್ತರ ಪದವಿ

ಶೈಕ್ಷಣಿಕ ಅಧಿಕಾರಿಗಳು – ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ

ಸಹಾಯಕ ಲೆಕ್ಕ ಪರಿಶೋಧಕ ಅಧಿಕಾರಿ –

ಇಡಿಪಿ ಮೇಲ್ವಿಚಾರಕ – ಪದವಿ, ಕಂಪ್ಯೂಟರ್ ಅಪ್ಲಿಕೇಷನ್/ಹಾರ್ಡ್‌ವೇರ್ ಎಂಜಿನಿಯರ್ ನಲ್ಲಿ ಗ್ರ್ಯಾಜುಯೇಟ್ ಡಿಪ್ಲೊಮಾ

ಕಿರಿಯ ಸಹಾಯಕ – ದ್ವಿತೀಯ ಪಿಯುಸಿ, ಗಂಟೆಗೆ 6 ಸಾವಿರ ಕೀ ಟೈಪಿಸುವ ಸಾಮರ್ಥ್ಯ ಹೊಂದಿರಬೇಕು. ಹಿಂದಿ ಮತ್ತು ಇಂಗ್ಲಿಷ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ ಎಷ್ಟು?

– ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಗ್ರೂಪ್ A ಹುದ್ದೆಗೆ ರೂ.750

– ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ರೂ.500

– SC/ST ಅಭ್ಯರ್ಥಿಗಳಿಗೆ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗೆ ರೂ.250

– SC/ST ಅಭ್ಯರ್ಥಿಗಳಿಗೆ ಗ್ರೂಪ್ ಸಿ ಹುದ್ದೆಗೆ ರೂ.150

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.

NIOS ನಲ್ಲಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ

ವಿದ್ಯಾರ್ಹತೆ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ – ಕ್ಲಿಕ್ ಮಾಡಿ

You may also like