Home » 7 ದಿನಗಳು ಬಹುರೂಪಿ ನಾಟಕೋತ್ಸವ: ಜ.12 ರಿಂದ ಪ್ರಾರಂಭ

7 ದಿನಗಳು ಬಹುರೂಪಿ ನಾಟಕೋತ್ಸವ: ಜ.12 ರಿಂದ ಪ್ರಾರಂಭ

by manager manager
mysuru bahurupi fest 2019 will start on january 12th

ರಂಗಾಯಣದ ವತಿಯಿಂದ ಆಯೋಜನೆಗೊಳ್ಳಲಿರುವ ‘ಬಹುರೂಪಿ (Bahurupi)’ ನಾಟಕೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು ಜ.12 ರಿಂದ 18 ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಖ್ಯಾತ ರಂಗಕರ್ಮಿ ಪ್ರಸನ್ನ ‘ಬಹುರೂಪಿ’ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ.

2019 ರ ಬಹುರೂಪಿ ನಾಟಕೋತ್ಸವವನ್ನು ‘ಲಿಂಗಸಮಾನತೆ’ ಶೀರ್ಷಿಕೆಯಡಿಯಲ್ಲಿ ಏಳು ದಿನಗಳ ಕಾಲ ಆಯೋಜಿಸಲಾಗಿದೆ. 12 ರಂದು ಸಂಜೆ 6ಕ್ಕೆ ರಂಗಾಯಣದ ವನರಂಗದಲ್ಲಿ ನಾಟಕೋತ್ಸವ ಚಾಲನೆ ಆಗಲಿದೆ. ಈ ಬಾರಿ ಬಹುರೂಪಿ ಉತ್ಸವದಲ್ಲಿ ಇತರೆ ಏನೆಲ್ಲಾ ವಿಶೇಷತೆಗಳು ಇರಲಿವೆ ಎಂಬುದು ಈ ಕೆಳಗಿನಂತಿದೆ.

– ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ(Bahurupi National Theatre festival) ವಿವಿಧ ರಾಜ್ಯಗಳ 12 ನಾಟಕಗಳು ಪ್ರದರ್ಶನಗೊಳ್ಳಿವೆ. ಈ ಬಾರಿ ಪ್ರತಿ ನಾಟಕಕ್ಕೆ ಟಿಕೆಟ್ ದರವನ್ನು 30 ಹೆಚ್ಚಳ ಮಾಡಿದ್ದು ಟಿಕೆಟ್ ಒಂದಕ್ಕೆ ರೂ.80.

– ಕನ್ನಡದ 6 ನಾಟಕಗಳು ಪ್ರದರ್ಶನಗೊಳ್ಳಿವೆ.

– ಪ್ರತಿದಿನ ಮೂರರಂತೆ ವಿವಿಧ ಔಆಷೆಗಳ 24 ಚಲನಚಿತ್ರಗಳ ಪ್ರದರ್ಶನ ಇರಲಿದೆ.

– ಜನವರಿ 17 &18 ರಂದು ವಿಚಾರ ಸಂಕಿರಣ

– ಜನಪದ ಕಲೆಗಳ ಪ್ರದರ್ಶನ

– 70 ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ

– ಭಿತ್ತಿಚಿತ್ರ ಪ್ರದರ್ಶನ

– ಕರಕುಶಲ ಮೇಳ

– ಚಿತ್ರಕಲಾ ಪ್ರದರ್ಶನ

– ಯಕ್ಷಗಾನ

– ಚಲನಚಿತ್ರೋತ್ಸವದ ಸೇರಿದಂತೆ ಹಲವು ವೈವಿದ್ಯಮಯ ಕಾರ್ಯಕ್ರಮಗಳು ಇರಲಿವೆ.

ನಾಟಕಗಳು ಆರಂಭಗೊಳ್ಳುವ ವೇಳಾಪಟ್ಟಿ

* ಪ್ರತಿದಿನ ಸಂಜೆ 6 ಗಂಟೆಗೆ ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನ

* ಪ್ರತಿದಿನ ಸಂಜೆ 6-30 ಕ್ಕೆ ಭೂಮಿಗೀತದಲ್ಲಿ ನಾಟಕ ಪ್ರದರ್ಶನ

* ಪ್ರತಿದಿನ ಸಂಜೆ 7 ಗಂಟೆಗೆ ವನರಂಗದಲ್ಲಿ ನಾಟಕ ಪ್ರದರ್ಶನ

* ಪ್ರತಿದಿನ ರಾತ್ರಿ 8 ಗಂಟೆಗೆ ಕಲಾಮಂದಿರದಲ್ಲಿ

* ಪ್ರತಿದಿನ ಸಂಜೆ 5-30 ಕ್ಕೆ ಕಿಂದರಿಜೋಗಿ ಆವರಣದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನ ಜರುಗಲಿದೆ.

Mysuru Bahurupi theatre national festival 2019 will start from January 12th, end on January 18th. Rangayana has been conducting ‘Bahurupi’ theatre festival.

You may also like