Home » ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಂದೂಡಲಾದ ಪರೀಕ್ಷೆಗಳು ಯಾವುವು? ಪಟ್ಟಿ ಇಲ್ಲಿದೆ

ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಂದೂಡಲಾದ ಪರೀಕ್ಷೆಗಳು ಯಾವುವು? ಪಟ್ಟಿ ಇಲ್ಲಿದೆ

by manager manager
list of exams postponed due to bharat bandh on january 8th and 9th

ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 8 ಮತ್ತು 9 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲು ಮುನ್ನಚ್ಚರಿಕೆ ಕ್ರಮವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಲ್ಲಿನ ಅಗತ್ಯಕ್ಕೆ ತಕ್ಕಂತೆ ರಜೆ ಘೋಷಿಸಿದ್ದಾರೆ. ಇದರ ಜೊತೆಗೆ ಮುಷ್ಕರದ ಹಿನ್ನೆಲೆಯಲ್ಲಿ ಹಲವು ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಮೂದೂಡಲಾದ ಪರೀಕ್ಷೆಗಳು ಯಾವುದು ಮತ್ತು ಎಲ್ಲೆಲ್ಲಿ ಎಂಬ ಮಾಹಿತಿ ಈ ಕೆಳಗಿನಂತಿದೆ.

ಮಂಡ್ಯ

– ಮಂಡ್ಯ ಸರ್ಕಾರಿ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಾಳೆ ಮತ್ತು ನಾಡಿದ್ದು ಇದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ತುಮಕೂರು ವಿವಿ

– ತುಮಕೂರು ವಿವಿಯಲ್ಲಿನ ಎಲ್ಲಾ ವಿಭಾಗದ ಪರೀಕ್ಷೆಗಳನ್ನು ನೀಡಿ ಜನವರಿ 10 ರಂದು ನಡೆಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ವಿವಿ

– ಕರ್ನಾಟಕ ವಿಶ್ವವಿದ್ಯಾಲಯವು ಎರಡು ದಿನಗಳ ಪರೀಕ್ಷೆ ಮುಂದೂಡಿದೆ. ಎಂಎ, ಎಂಎಸ್ಸಿ ಹಾಗೂ ಎಂಕಾಂ ಪರೀಕ್ಷೆಗಳನ್ನು ಜನವರಿ 17 & 18 ರಂದು ನಡೆಸಲಾಗುವುದು ಎಂದು ಕರ್ನಾಟಕ ವಿವಿ ಕುಲಸಚಿವರು ತಿಳಿಸಿದ್ದಾರೆ.

ದಾವಣಗೆರೆ

– ನಾಳೆ ಇದ್ದ(ಜನವರಿ 8) ದ್ವೀತೀಯ ಪಿಯುಸಿ ತರಗತಿಗಳ ಪೂರ್ವಭಾವಿ ಪರೀಕ್ಷೆಗಳು ಮತ್ತು ಧಾರವಾಡ, ತುಮಕೂರು, ದಾವಣಗೆರೆ ವಿಶ್ವವಿದ್ಯಾಲಯಗಳ ಹಾಗೂ ಕಾನೂನು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

– ದಾವಣಗೆರೆ ವಿವಿ ಅಧೀನದಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿ ಪ್ರಸ್ತುತ ಪರೀಕ್ಷೆಗಳು ನಡೆಯುತ್ತಿದ್ದು, ನಾಳೆ ಮತ್ತು ಜನವರಿ 9 ರಂದು ಇದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಪರೀಕ್ಷೆಗಳನನು ಜನವರಿ 10 ರಂದು ನಡೆಸಲು ಕುಲಸಚಿವ ಡಾ.ಬಸವರಾಜ್‌ ಬಣಕಾರ ರವರು ತಿಳಿಸಿದ್ದಾರೆ.

ಜ.8 &9 ರಂದು ಭಾರತ್ ಬಂದ್: ಎಲ್ಲೆಲ್ಲಿ ರಜೆ ಇದೆ? ಎಲ್ಲಿಲ್ಲ? ಇಲ್ಲಿದೆ ಮಾಹಿತಿ

Due to Bharat bandh on january 8th and 9th by trade unions some exams in some district are postponed by University’s and authority. Here is all you need to know..

You may also like