Home » ಜ.8 & 9 ರಂದು ಭಾರತ್ ಬಂದ್: ಎಲ್ಲೆಲ್ಲಿ ರಜೆ ಇದೆ? ಎಲ್ಲಿಲ್ಲ? ಇಲ್ಲಿದೆ ಮಾಹಿತಿ

ಜ.8 & 9 ರಂದು ಭಾರತ್ ಬಂದ್: ಎಲ್ಲೆಲ್ಲಿ ರಜೆ ಇದೆ? ಎಲ್ಲಿಲ್ಲ? ಇಲ್ಲಿದೆ ಮಾಹಿತಿ

by manager manager
list of district announced holiday due to bharat bandh on january 8th and 9th

ಹಲವು ಕಾರ್ಮಿಕ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತದಾದ್ಯಂತ ಜನವರಿ 8 ಮತ್ತು 9 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ(Bharat Bandh). ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲು ಮುನ್ನಚ್ಚರಿಕೆ ಕ್ರಮವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಲ್ಲಿನ ಅಗತ್ಯಕ್ಕೆ ತಕ್ಕಂತೆ ರಜೆ ಘೋಷಿಸಲು ಅನುಮತಿ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು.

ಇದಕ್ಕೆ ಅನುಗುಣವಾಗಿ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಯಾವ್ಯಾವ ಜಿಲ್ಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಯಾವ ಜಿಲ್ಲೆಗಳಲ್ಲಿ ರಜೆ ಇಲ್ಲ ಎಂಬುದರ ಪಟ್ಟಿ ಈ ಕೆಳಗಿನಂತಿದೆ ನೋಡಿ.

ರಜೆ ಘೋಷಣೆ ಮಾಡಿರುವ ಜಿಲ್ಲೆಗಳ ಪಟ್ಟಿ

– ಚಿತ್ರದುರ್ಗ

– ದಕ್ಷಿಣ ಕನ್ನಡ

– ಉಡುಪಿ

– ಮೈಸೂರು

– ದಾವಣಗೆರೆ

– ಕಾರವಾರ

– ಮಂಡ್ಯ

– ರಾಮನಗರ

– ಬಳ್ಳಾರಿ

– ಚಾಮರಾಜನಗರ

– ಚಿಕ್ಕಬಳ್ಳಾಪುರ

– ಕೊಪ್ಪಳ

– ಕಲಬುರಗಿ

– ಗದಗ

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗದ ಜಿಲ್ಲೆಗಳು

– ಯಾದಗಿರಿ

– ಚಿಕ್ಕಮಗಳೂರು

– ವಿಜಯಪುರ

– ಬೆಳಗಾವಿ

– ಹಾಸನ

Bharat bandh on january 8th and 9th by trade unions. Who is supporting the Strike and who is not all you need to know.

You may also like