Home » Kisan Credit Card: ಕಿಸಾನ್ ಕ್ರೇಡಿಟ್ ಕಾರ್ಡ್ ಬಗ್ಗೆ ನಿಮಗೆ ತಿಳಿದಿದಿಯೇ? ಪಡೆಯುವುದು ಹೇಗೆ ?

Kisan Credit Card: ಕಿಸಾನ್ ಕ್ರೇಡಿಟ್ ಕಾರ್ಡ್ ಬಗ್ಗೆ ನಿಮಗೆ ತಿಳಿದಿದಿಯೇ? ಪಡೆಯುವುದು ಹೇಗೆ ?

by manager manager

ಭಾರತ ಸರ್ಕಾರ ದೇಶದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಅಲ್ಪಾವಧಿಯ ಔಪಚಾರಿಕ ಸಾಲ ನೀಡುವ ಸಲುವಾಗಿ ಕೇಂದ್ರ ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 1998 ರಲ್ಲಿ ಪರಿಚಯಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಚಿತ್ರಕೂಟಿನಲ್ಲಿ ಪ್ರಧಾನಿ ಕಿಸಾನ್ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಡಿ 25 ಲಕ್ಷಕ್ಕೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಒದಗಿಸಲಾಗಿದ್ದು, ರೈತರಿಗೆ ಕೆಸಿಸಿ ಒದಗಿಸುವ ಕಾರ್ಯವನ್ನು 2 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ವಹಿಸಲಾಗಿದೆ.

ಇದನ್ನು ಪಡೆಯಲು ನಮ್ಮ ಬಳಿ ಮೂರು ದಾಖಲಾತಿಗಳಿರಬೇಕು ಅವುಗಳೇಂದರೇ
• ಕಿಸಾನ್ ಕಾರ್ಡ್ ಪಡೆಯಲು ಇಚ್ಚಿಸುವ ರೈತರು ಮೊದಲಿಗೆ ತಾವು ರೈತ ಎಂಬುದಕ್ಕೆ ಸಾಕ್ಷಿ ಒದಗಿಸಬೇಕು.
• ವಾಸದ ದೃಢೀಕರಣ ಪತ್ರ ಒದಗಿಸಬೇಕು.
• ನೀವು ಬ್ಯಾಂಕ್‍ನಲ್ಲಿ ಯಾವುದೇ ಸಾಲ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲು ಅಫಿಡವಿಟ್ ಸಲ್ಲಿಸಬೇಕು.
ಈ ಮೂರು ದಾಖಲೆಗಳೊಂದಿಗೆ ಕಿಸಾನ್ ಕಾರ್ಡ್ ಅನ್ನು ಪಡೆಯಬಹುದು.

  • ಇದರಿಂದಾಗಿ ರೈತರಿಗೆ ಕೃಷಿ ಮೇಲೆ ರೂ. 3 ಲಕ್ಷದವರೆಗೆ ಸಾಲ ಸಿಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೇವಲ ಕೃಷಿಕರಿಗೆ ಮಾತ್ರ ಸೀಮಿತವಾಗಿಸಿಲ್ಲ. ಬದಲಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಹ ಸಾಲ ನೀಡುತ್ತದೆ.
  • ಇನ್ನು 3 ಲಕ್ಷದವರೆಗಿನ ಸಾಲಕ್ಕೆ ಇಲ್ಲಿ ಶೇ.7 ರಷ್ಟು ಬಡ್ಡಿ ದರವನ್ನು ರಾಜ್ಯ ಸರ್ಕಾರಗಳು ಬ್ಯಾಂಕ್ ಮತ್ತು ಗ್ರಾಮ ಪಂಚಾಯತಿ ಸಹಾಯದಿಂದ ವಿತರಿಸಬಹುದಾಗಿದೆ.
  • ಅಲ್ಲದೆ ಈ ಸಾಲದ ಮೊತ್ತವನ್ನು 1 ವರ್ಷದೊಳಗೆ ಮರು ಪಾವತಿಸಿದರೆ ಶೇ. 3 ರಷ್ಟು ರಿಯಾಯಿತಿ ಸಿಗುತ್ತದೆ.
    ಕಿಸಾನ್ ಕಾರ್ಡ್ ಒದಗಿಸುವ ಬ್ಯಾಂಕುಗಳು ಈ ಕೆಳಗಿನಂತಿವೆ
  • ಸಾರ್ವಜನಿಕ ವಲಯದ ಬ್ಯಾಂಕುಗಳು
  • ಸಹಕಾರಿ ಬ್ಯಾಂಕುಗಳು
  • ಭಾರತದ ಗ್ರಾಮೀಣ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) – ಬ್ಯಾಂಕ್ ಆಫ್ ಇಂಡಿಯಾ – ಇಂಡಿಯಾ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) – ನಬಾರ್ಡ್

ಮುಖ್ಯ ಅಂಶಗಳು :
• ರಾಜ್ಯದ ಹೆಚ್ಚಿನ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕುರಿತು ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಶೇ.50ರಷ್ಟು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‍ನ ಉಪಯೋಗ ಪಡೆದುಕೊಂಡಿಲ್ಲದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
• ರಾಜ್ಯದಲ್ಲಿ ಒಟ್ಟು 86,77,00 ರೈತ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದ್ದು ಫೆಬ್ರವರಿಗೆ ವೇಳೆಗೆ ರಾಜ್ಯದ 41.85 ಲಕ್ಷ ರೈತರು ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದಾರೆ, 44.91 ಲಕ್ಷ ರೈತರು ಕಾರ್ಡ್ ಪಡೆಯಲು ಮನಸು ಮಾಡಿಲ್ಲ.
• ಕಾರ್ಡ್ ಮೂಲಕ ರೈತರು ಸುಲಭವಾಗಿ ಬ್ಯಾಂಕ್‍ಗಳಿಂದ ದೀರ್ಘಾವಧಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸಾಲ ಮರುಪಾವತಿಯೂ ಸುಲಭವಾಗಿದೆ. ಗೊಬ್ಬರ, ಬಿತ್ತನೆ ಬೀಜಗಳ ಖರೀದಿಯಲ್ಲಿ ಸಹಕಾರಿಯಾಗಲಿದ್ದು, ಕಡಿಮೆ ದಾಖಲೆಗಳನ್ನು ಸಲ್ಲಿಸಿ ಲಾಭ ಪಡೆಯಬಹುದಾಗಿದೆ.
• ಒಂದು ವರ್ಷದ ಅವಧಿಗೆ ಸಾಲ ಮಂಜೂರಾದ ಕಾರ್ಡ್‍ನ ಅಲ್ಪಾವಧಿ ಸಾಲದ ಭಾಗವು ನಗದು ಮುಂಗಡದ ರೂಪದಲ್ಲಿದ್ದು, ತನಗೆ ಅಗತ್ಯ ಬೀಳುವ ಸಂದರ್ಭದಲ್ಲಿ ಕಾರ್ಡ್‍ದಾರರು ಬೇಕಾದಷ್ಟೇ ಮೊತ್ತವನ್ನು ತನ್ನ ಖಾತೆಯಿಂದ ಪಡೆಯಬಹುದಾಗಿದೆ. ತೆಗೆಯಬಹುದಾದ ಕಂತುಗಳ ಲೆಕ್ಕಕ್ಕೆ ಮಿತಿ ಇರುವುದಿಲ್ಲ. ಆದರೆ, ಖಾತೆಯಿಂದ ಪಡೆದ ಪ್ರತಿ ಕಂತಿನ ಮೊತ್ತ ಒಂದು ವರ್ಷ ಅವಧಿಯ ಒಳಗಾಗಿ ಮರುಪಾವತಿಯಾಗಬೇಕು.

Chowkidar: ಚೌಕಿದಾರ್ ಎಂದರೇನು ? ಅದರ ಅರ್ಥ ಹೀಗೂ ಇದೆಯೇ?