Home » Chowkidar: ಚೌಕಿದಾರ್ ಎಂದರೇನು ? ಅದರ ಅರ್ಥ ಹೀಗೂ ಇದೆಯೇ?

Chowkidar: ಚೌಕಿದಾರ್ ಎಂದರೇನು ? ಅದರ ಅರ್ಥ ಹೀಗೂ ಇದೆಯೇ?

by manager manager

ಚೌಕಿದಾರ್ ಎಂದರೇನು ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿ ಸುತ್ತುತ್ತಾ ಇರುತ್ತದೆ ಕಾರಣ ಇದನ್ನು ಹೆಚ್ಚಾಗಿ ಬಳುಸುವುದು ಪ್ರಧಾನಮಂತ್ರಿಗಳೆ ಅಂದರೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನಾವು ಚೌಕಿದಾರ್ ಎಂದೆ ಕರೆಯುವುದು ಹಾಗಾಗೀ ಇದಕ್ಕೆ ತನ್ನದೆಯಾದ ಅರ್ಥವೊಂದು ಹುಟ್ಟಿಕೊಂಡಿದೆ, ಚೌಕಿದಾರ್ ಎಂದರೇ ವಾಸ್‍ಮನ್, ಕೇರ್ ಟೇಕರ್, ಪೊಲೀಸ್, ಗಾರ್ಡ್ ಹೀಗೆ ನಾನಾ ಅರ್ಥಗಳಿವೆ ಆದರೇ ಒಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯು ‘ಚೌಕಿದಾರ್ ಚೋರ್ ಹೈ’ ಎಂದು ಹೇಳುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಚೌಕಿದಾರ್ ಪದಕ್ಕೆ ನಾನಾರ್ಥಗಳನ್ನು ಕಲ್ಪಿಸುತ್ತ ತಿರುಗೇಟು ನೀಡುತ್ತಿದ್ದಾರೆ.

ರಾಷ್ಟ್ರದ ವಾಚ್‍ಮನ್ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಧ್ವನಿ ಸಂದೇಶವನ್ನು ರವಾನಿಸಿದ್ದು ಚೌಕಿದಾರ್ ಎಂಬುವ ಪದಕ್ಕೆ ಅವರದ್ದೆಯಾದ ಅರ್ಥವನ್ನು ಹೇಳುತ್ತ ಚೌಕಿದಾರ ಎಂದರೆ ಪ್ರಾಮಾಣಿಕತೆ ಮತ್ತು ದೇಶಭಕ್ತಿ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ.

ಯಾರ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ನಾಮದಾರರಿಗೆ ಕೆಲಸದ ಮೇಲೆ ನಂಬಿಕೆ ಇರಿಸಿಕೊಂಡವರನ್ನು ದ್ವೇಷಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲಸ ಮಾಡುವವರ ಪೈಕಿ ಯಾರಾದರು ಪ್ರಧಾನಮಂತ್ರಿಯಾದರೆ ಅವರನ್ನು ಮೂದಲಿಸುವ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಟೀಕಿಸಿದ್ದಾರೆ.

ಸಂಸತ್ತು, ಶಾಸಕಾಂಗ, ಮಾಧ್ಯಮ ಮತ್ತು ಸೇನಾ ಪಡೆ ಎಲ್ಲದಕ್ಕೂ ಕಾಂಗ್ರೆಸ್ ಅವಮಾನಿಸಿದೆ. ಮತದಾರರು ಮತ ಚಲಾಯಿಸುವಾಗ ಯೋಚನೆ ಮಾಡಿ ಮತ ಹಾಕಬೇಕು ಎಂದು ಮೋದಿ ತಿಳಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮೈ ಭೀ ಚೌಕಿದಾರ್ ಅಭಿಯಾನವನ್ನು ಆರಂಭಿಸಿದ್ದರು. ನಂತರ ಟ್ವೀಟರ್‍ನಲ್ಲೂ ತಮ್ಮ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ನಡೆಯನ್ನು ಅನುಸಿರಿಸಿದ ಕೇಂದ್ರ ಸಚಿವರು, ಬಿಜೆಪಿ ನಾಯಕರು ಮತ್ತು ಬಿಜೆಪಿ ಬೆಂಬಲಿಗರು ತಮ್ಮ ಪ್ರೊಫೈಲ್‍ನಲ್ಲಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಳ್ಳುತ್ತಿದ್ದಾರೆ. ಈ ಅಭಿಯಾನವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ‘ಚೌಕಿದಾರ್ ಚೋರ್ ಹೈ’ ಎನ್ನುತ್ತಿವೆ.

ಹೀಗೆ ಸಾಮಾನ್ಯ ಅರ್ಥದಲ್ಲಿದ್ದ ಈ ಚೌಕಿದಾರ್ ಶಬ್ದ ಇತ್ತೀಚಿಗೆ ನಾನಾ ಅರ್ಥಗಳ ಜೊತೆಗೆ ಅದರದ್ದೆಯಾದ ಒಂದು ಮಹತ್ವ ಬಂದಿದೆ ಎಂದರೇ ತಪ್ಪಾಗಲಾರದು, ಹಾಗಾಗೀ ಇಷ್ಟು ದಿನಗಳಲ್ಲಿ ಚೌಕಿದಾರ್ ಪದಕ್ಕೆ ಇದ್ದ ಅರ್ಥವೇ ಬೇರೆ ಇನ್ಮುಂದೆ ಇರುವ ಅರ್ಥವೇ ಬೇರೆ ಕಾರಣ ಅದಕ್ಕೆ ಮೋದಿ ಎಂದರೇ ತಪ್ಪಾಗಲಾರದು.

ಆರ್ಟಿಕಲ್ 370 ಬಗ್ಗೆ ನಿಮಗೆ ತಿಳಿದಿದೆಯೇ ?