Home » ಕಿಡ್ನಿ ಆರೋಗ್ಯವಾಗಿಟ್ಟುಕೊಳ್ಳಲು ಈ ಟಿಪ್ಸ್‌

ಕಿಡ್ನಿ ಆರೋಗ್ಯವಾಗಿಟ್ಟುಕೊಳ್ಳಲು ಈ ಟಿಪ್ಸ್‌

by manager manager

Kidney Health Tips in Kannada: ಮೂತ್ರ ಪಿಂಡಗಳು ನಮ್ಮ ಬೆನ್ನು ಮೂಳೆಯ ಎರಡು ಬದಿಗಳ ಪಕ್ಕೆಲುಬಿನ ಕೆಳ ಭಾಗದಲ್ಲಿ ಮುಷ್ಟಿ ಗಾತ್ರದಷ್ಟಿರುವ ಅಂಗ. ಇವು ಸಾಮಾನ್ಯವಾಗಿ ಬೀನ್ಸ್ ಬೀಜದ ಆಕೃತಿಯಲ್ಲಿ ರಚನೆಯಾಗಿರುತ್ತವೆ. ಈ ಮೂತ್ರ ಪಿಂಡಗಳ ಮುಖ್ಯ ಕಾರ್ಯವೆಂದರೆ ದೇಹದಲ್ಲಿನ ಎಲ್ಲಾ ರೀತಿಯ ಘನ ಮತ್ತು ದ್ರವ ತ್ಯಾಜ್ಯಗಳನ್ನು ಕಲ್ಮಶಗಳನ್ನು ಹೊರ ಹಾಕುವುದು. ಈ ಕ್ರಿಯೆಯ ಜೊತೆಗೆ ಮೂತ್ರಪಿಂಡಗಳು ದೇಹದಲ್ಲಿನ PH, ಉಪ್ಪು ಮತ್ತು ಪೊಟ್ಯಾಷಿಯಂ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಜೊತೆಗೆ ರಕ್ತ ಶುದ್ಧೀಕರಣ ನೆಡೆಯುವುದು ಸಹ ಮೂತ್ರಪಿಂಡಗಳಲ್ಲೆ. ಹಾಗೇ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನ್ ಗಳನ್ನು ಈ ಮೂತ್ರಪಿಂಡಗಳು ಉತ್ಪಾದಿಸುತ್ತವೆ ಹಾಗೂ ದೇಹದ ಮೂಳೆ ನಿರ್ಮಾಣ ವ್ಯವಸ್ಥೆಯಲ್ಲಿ ಮತ್ತು ಸ್ನಾಯುಗಳ ಕಾರ್ಯ ನಿಯಂತ್ರಿಸುವಲ್ಲಿ ಪಾತ್ರ ವಹಿಸಿವೆ. ಇಷ್ಟೆಲ್ಲ ಸಹಾಯಕವಾಗಿರುವ ಮತ್ತು ದೇಹದ ಸಕಲ ಕಾರ್ಯದಲ್ಲೂ ತನ್ನದೆ ಪಾಲು ಹೊಂದಿರುವ ಈ ಮೂತ್ರಪಿಂಡಗಳ ಅರೋಗ್ಯದ ರಕ್ಷಣೆ ಶರೀರದ ಸರ್ವ ಕಾರ್ಯ ಯಶಸ್ಸಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತಿದೆ. ಹಾಗಾದರೆ ದೇಹವೆಂಬ ಬಂಡಿ ಸುಭಿಕ್ಷವಾಗಿ ತನ್ನ ಕಾರ್ಯ ನಿರ್ವಹಿಸಲು, ದೇಹ ಕೆಡದಂತೆ ಸರಾಗವಾಗಿ ಕಾರ್ಯಕ್ರಿಯೆ ನಡೆಸಲು ಮೂತ್ರ ಪಿಂಡಗಳು ಆರೋಗ್ಯವಾಗಿರಬೇಕು. ಅವುಗಳ ಅರೋಗ್ಯ ಕಾಪಾಡಲು ಇಲ್ಲಿದೆ ಟಿಪ್ಸ್.

ಸಕ್ರಿಯ ಹಾಗೂ ಫಿಟ್ ಆಗಿರುವುದು
ನಿಯಮಿತ ವ್ಯಾಯಾಮವು ಮೂತ್ರಪಿಂಡಗಳ ಆರೋಗ್ಯಕ್ಕೆ ತುಂಬಾ ಹೆಚ್ಚು ಒಳ್ಳೆಯದು. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೇ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಹಾನಿಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ವ್ಯಾಯಾಮವೆಂದರೆ ದೇಹದಿಂದ ಬೇವರಿಳಿಯುವಂತೆ ದಂಡಿಸುವುದಲ್ಲ ಅಥವಾ ಯುದ್ದ ಸಿದ್ಧತೆಯಲ್ಲ ಸಾಮಾನ್ಯ ರೀತಿಯ ಕಸರತ್ತು.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ
ಅಧಿಕ ರಕ್ತದ ಸಕ್ಕರೆಗೆ ಕಾರಣವಾಗುವ ಅಂಶಗಳು ಮೂತ್ರಪಿಂಡದ ಹಾನಿಯನ್ನು ಉಂಟುಮಾಡಬಹುದು. ದೇಹದ ಜೀವಕೋಶಗಳು ರಕ್ತದಲ್ಲಿನ ಗ್ಲೂಕೋಸ್ (ಸಕ್ಕರೆ) ಅನ್ನು ಬಳಸಲಾಗದಿದ್ದಾಗ, ರಕ್ತವನ್ನು ಫಿಲ್ಟರ್ ಮಾಡಲು ಮೂತ್ರಪಿಂಡಗಳು ಹೆಚ್ಚುವರಿಯಾಗಿ ಕೆಲಸ ಮಾಡಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ, ಇದು ಮಾರಣಾಂತಿಕ ಹಾನಿಗೆ ಕಾರಣವಾಗಬಹುದು.

ಆಗಾಗ ರಕ್ತದೊತ್ತಡದ ತಪಾಸಣೆ ನಡೆಸುವುದು
ಅಧಿಕ ರಕ್ತದೊತ್ತಡ ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಮಧುಮೇಹ, ಹೃದ್ರೋಗ, ಅಥವಾ ಅಧಿಕ ಕೊಲೆಸ್ಟ್ರಾಲ್‌ನಂತಹ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಅಧಿಕ ರಕ್ತದೊತ್ತಡವು ಸಂಭವಿಸಿದರೆ, ದೇಹದ ಮೇಲೆನ ಪರಿಣಾಮವು ಗಂಭೀರವಾಗಿರುತ್ತದೆ. ಆದರೆ ನಮ್ಮ ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳು ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೇ ಆಗಾಗ ರಕ್ತದೊತ್ತಡದ ತಪಾಸಣಾ ಮಾಡಿಸುವುದು ಮತ್ತು ಅದಕ್ಕೆ ತಕ್ಕ ಔಷಧಿ ಸೇವನೆ ಈ ಎಲ್ಲಾ ಬಗೆಯ ಆತಂಕಕ್ಕೆ ಮುಲಾಮು
ದೇಹದ ತೂಕದ ಮೇಲೆ ನಿಗಾ ವಹಿಸಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ
ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಮೂತ್ರಪಿಂಡಗಳಿಗೆ ಹಾನಿ ಮಾಡುವ ಹಲವಾರು ಅಪಾಯವನ್ನು ತಂದೊಡ್ಡುತ್ತವೆ ಇವುಗಳಲ್ಲಿ ಮಧುಮೇಹ, ಹೃದ್ರೋಗ ಮತ್ತು

ಮೂತ್ರಪಿಂಡದ ಕಾಯಿಲೆ ಸೇರಿವೆ.
ಸೋಡಿಯಂ ಕಡಿಮೆ ಇರುವ ಆರೋಗ್ಯಕರ ಆಹಾರ, ಸಂಸ್ಕರಿಸಿದ ಮಾಂಸಗಳು ಮತ್ತು ಇತರ ಕಿಡ್ನಿಗೆ ಹಾನಿಕಾರಕವಲ್ಲದ ಆಹಾರಗಳು ಮೂತ್ರಪಿಂಡದ ಹಾನಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೂಕೋಸು, ಬೆರಿಹಣ್ಣುಗಳು, ಮೀನು, ಧಾನ್ಯಗಳು ಮತ್ತು ನೈಸರ್ಗಿಕವಾಗಿ ಕಡಿಮೆ ಸೋಡಿಯಂ ಹೊಂದಿರುವ ತಾಜಾ ಪದಾರ್ಥಗಳನ್ನು ತಿನ್ನುವುದರ ಮೇಲೆ ಕೇಂದ್ರೀಕರಿಸುವುದು ಉತ್ತಮ.

ಸಾಕಷ್ಟು ದ್ರವಯುಕ್ತ ಆಹಾರದ ಸೇವನೆ
ಸಾಮಾನ್ಯವಾಗಿ ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯುವುದು ಉತ್ತಮ ಏಕೆಂದರೆ ಅದು ದೇಹ ತೇವಾಂಶ ಬರಿತವಾಗಿರಲು ಸಹಕರಿಸುತ್ತದೆ. ನಿಯಮಿತ, ಸ್ಥಿರವಾದ ನೀರಿನ ಸೇವನೆಯು ನಿಮ್ಮ ಮೂತ್ರಪಿಂಡಗಳು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತವೆ.
ನೀರು ನಿಮ್ಮ ಮೂತ್ರಪಿಂಡದಿಂದ ಸೋಡಿಯಂ ಮತ್ತು ವಿಷವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಒಂದು ದಿನದಲ್ಲಿ ಕನಿಷ್ಠ 1.5 ರಿಂದ 2 ಲೀಟರ್ಗಳಷ್ಟು ನೀರು ಸೇವನೆಯ ಗುರಿಯು ಉತ್ತಮ ಅಭ್ಯಾಸ. ಆದರೆ ನಿಮಗೆ ಎಷ್ಟು ನೀರು ಬೇಕು ಎಂಬುದು ನಿಮ್ಮ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಹವಾಮಾನ, ವ್ಯಾಯಾಮ, ಲಿಂಗ, ಒಟ್ಟಾರೆ ಆರೋಗ್ಯ, ಮತ್ತು ನೀವು ಗರ್ಭಿಣಿಯಾಗಿದ್ದೀರಾ ಅಥವಾ ಹಾಲುಣಿಸುತ್ತಿರುವಿರಿ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ದೈನಂದಿನ ನೀರಿನ ಸೇವನೆಯನ್ನು ಯೋಜಿಸುವಾಗ ಪರಿಗಣಿಸುವುದು ಮುಖ್ಯ. ಹಾಗೆ ಹಿಂದೆ ಅಂದರೆ ತಮ್ಮ ಭೂತಕಾಲದಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದ ಜನರು ಭವಿಷ್ಯದಲ್ಲಿ ಕಲ್ಲಿನ ನಿಕ್ಷೇಪಗಳನ್ನು ತಡೆಯಲು ಸ್ವಲ್ಪ ಹೆಚ್ಚು ನೀರು ಕುಡಿಯಬೇಕು.

ಧೂಮಪಾನ ಮಾಡಬೇಡಿ
ಧೂಮಪಾನವು ನಿಮ್ಮ ದೇಹದ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ನಿಮ್ಮ ದೇಹದಾದ್ಯಂತ ಮತ್ತು ನಿಮ್ಮ ಮೂತ್ರಪಿಂಡಗಳಿಗೆ ನಿಧಾನವಾದ ರಕ್ತದ ಹರಿವಿಗೆ ಕಾರಣವಾಗುತ್ತದೆ. ಧೂಮಪಾನವು ಮೂತ್ರಪಿಂಡಗಳಿಗೆ ಕ್ಯಾನ್ಸರ್ ಅನ್ನು ತಂದೊಡ್ಡಬಹುದು. ನೀವು ಧೂಮಪಾನದಿಂದ ದೂರವಿದ್ದರೆ ಈ ರೀತಿಯ ಅಪಾಯವು ಕಡಿಮೆಯಾಗುತ್ತದೆ.

ನೀವು ತೆಗೆದುಕೊಳ್ಳುವ OTC ಮಾತ್ರೆಗಳ ಪ್ರಮಾಣ
ನೀವು ನಿಯಮಿತವಾಗಿ ಓವರ್-ದಿ-ಕೌಂಟರ್ (OTC) ನೋವು ಔಷಧಿಗಳನ್ನು ತೆಗೆದುಕೊಂಡರೆ, ಅವು ಮೂತ್ರಪಿಂಡದ ಮೇಲೆ ಹಾನಿಯನ್ನು ಉಂಟುಮಾಡಬಹುದು. ಐಬುಪ್ರೊಫೇನ್ ಮತ್ತು ನ್ಯಾಪ್ರೋಕ್ಸೆನ್ ಸೇರಿದಂತೆ ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧಗಳು (NSAID ಗಳು), ದೀರ್ಘಕಾಲದ ನೋವು, ತಲೆನೋವು ಅಥವಾ ಸಂಧಿವಾತಕ್ಕೆ ನಿಯಮಿತವಾಗಿ ಸೇವಿಸುವ ಮಾತ್ರೆ ನಿಮ್ಮ ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಔಷಧಿ ಬಳಸುವುದು ಒಳಿತು.

ಮೂತ್ರಪಿಂಡದ ಕಾರ್ಯವನ್ನು ಪರೀಕ್ಷಿಸಿ
ನೀವು ಮೂತ್ರಪಿಂಡದ ಹಾನಿ ಅಥವಾ ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ತಪ್ಪಿಸಲು , ನಿಯಮಿತವಾಗಿ ಮೂತ್ರಪಿಂಡದ ಕಾರ್ಯ ಪರೀಕ್ಷೆಗಳನ್ನು ಹೊಂದುವುದು ಒಳ್ಳೆಯದು. ನಿಯಮಿತ ಸ್ಕ್ರೀನಿಂಗ್‌ನಿಂದ ಪ್ರಯೋಜನ ಪಡೆಯಬಹುದು ಮತ್ತು ನಮ್ಮ ಮೂತ್ರ ಪಿಂಡಗಳ ಆರೋಗ್ಯದ ಮಟ್ಟದ ಬಗ್ಗೆ ಕಾಲ ಕಾಲದ ಮಾಹಿತಿ ತಿಳಿದು ಸರಿಯಾದ ಚಿಕಿತ್ಸೆ ಪಡೆಯಲು ಸಹಾಯಕ.

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳೊದು ಹೇಗೆ?

You may also like