Home » ನ.25 ರಂದು ರದ್ದಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಿವಿಲ್ ಪರೀಕ್ಷೆ ಡಿ.23 ಕ್ಕೆ ನಿಗದಿ

ನ.25 ರಂದು ರದ್ದಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಿವಿಲ್ ಪರೀಕ್ಷೆ ಡಿ.23 ಕ್ಕೆ ನಿಗದಿ

by manager manager

karnataka police constable civil 2018 written exam will conduct on december 23

Karnataka police constable civil 2018 written exam will conduct on December 23

ನವೆಂಬರ್ 25-2018 ರಂದು ನಿಗದಿಯಾಗಿದ್ದ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಸಿವಿಲ್ 2018 ರ ಲಿಖಿತ ಪರೀಕ್ಷೆಯನ್ನು ಇಲಾಖೆಯು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಿತ್ತು. ಅಲ್ಲದೇ ಅಭ್ಯರ್ಥಿಗಳಿಗೆ ಮುಂದಿನ ಪರೀಕ್ಷೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಇಲಾಖೆ ಪ್ರಕಟಣೆ ಹೊರಡಿಸಿತ್ತು. ರದ್ದಾಗಿದ್ದ ಆ ಲಿಖಿತ ಪರೀಕ್ಷೆ ನಡೆಸಲು ಈಗ ದಿನಾಂಕವನ್ನು ನಿಗದಿಪಡಿಸಲಾಗಿದೆ.

ದಿನಾಂಕ 25-11-2018 ರಂದು ನಡೆಸಲು ತೀರ್ಮಾನಿಸಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಿವಿಲ್ 2018 ಹುದ್ದೆಯ ಲಿಖಿತ ಪರೀಕ್ಷೆಯನ್ನು ದಿನಾಂಕ 23-12-2018 ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಮತ್ತು ತರಬೇತಿ, ಬೆಂಗಳೂರು ಇವರು ದಿನಾಂಕ 28-11-2018 ರಂದು ಆದೇಶ ಹೊರಡಿಸಿ, ರಾಜ್ಯದ ಹಲವು ಘಟಕಗಳಲ್ಲಿ ನಡೆಯುವ ಈ ಲಿಖಿತ ಪರೀಕ್ಷೆಗೆ ಅಭ್ಯರ್ಥಿಗಳ ಸಂಖ್ಯೆಗೆ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಅಂದಹಾಗೆ ಪೊಲೀಸ್ ಕಾನ್ಸ್‌ಟೇಬಲ್ ಸಿವಿಲ್ 2018 ಲಿಖಿತ ಪರೀಕ್ಷೆಯು ದಿನಾಂಕ 23-12-2018 ರಂದು ಪೂರ್ವಾಹ್ನ 10.30 ರಿಂದ 12.00 ಗಂಟೆ ವರೆಗೆ (90 ನಿಮಷಗಳ ಕಾಲ) ನಡೆಯಲಿದೆ.

karnataka police constable civil 2018 written exam will conduct on december 23. Read more here about this..

You may also like