Home » ಬೀದಿಬದಿ ವ್ಯಾಪಾರಿಗಳಿಗೆ HDK ರವರ ‘ಬಡವರ ಬಂಧು’ ನೆರವು: ಬಡ್ಡಿ ರಹಿತ ಸಾಲ ಪಡೆಯಿರಿ

ಬೀದಿಬದಿ ವ್ಯಾಪಾರಿಗಳಿಗೆ HDK ರವರ ‘ಬಡವರ ಬಂಧು’ ನೆರವು: ಬಡ್ಡಿ ರಹಿತ ಸಾಲ ಪಡೆಯಿರಿ

by manager manager

Interest free loans for street vendor under Badavara Bandhu scheme in kannada

ಮೀಟರ್ ಬಡ್ಡಿ ದಂಧೆ ನಡೆಸುವವರಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಿಸಿ, ಅವರ ಜೀವನವನ್ನು ಇನ್ನಷ್ಟು ಉತ್ತಮವಾಗಿಸಲು ಮುಖ್ಯ ಮಂತ್ರಿ ಕುಮಾರಸ್ವಾಮಿ ರವರು ಚಾಲನೆ ಗೊಳಿಸಿರುವ ಮಹತ್ವಾಕಾಂಕ್ಷಿ ಯೋಜನೆ ಈ ‘ಬಡವರ ಬಂಧು’. ಈ ಅತ್ಯುತ್ತಮ ಯೋಜನೆಯನ್ನು ಮೊನ್ನೆಯಷ್ಟೇ CM ಕುಮಾರಸ್ವಾಮಿ ರವರು ಉದ್ಘಾಟಿಸಿದ್ದಾರೆ.

“ಬಡವರ ಬಂಧು” ಯೋಜನೆಯಡಿ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ದೊರೆಯಲಿದ್ದು, ವ್ಯಾಪಾರಿಗಳು 2 ಸಾವಿರ ರೂಪಾಯಿಗಳಿಂದ 10 ಸಾವಿರ ರೂ ವರೆಗೂ ತಮ್ಮ ಅಗತ್ಯಕ್ಕೆ ತಕ್ಕಂತೆ ಬಡ್ಡಿ ರಹಿತ ಸಾಲ ಪಡೆಯಬಹುದಾದ ಯೋಜನೆ ಇದಾಗಿದೆ.

“ಬಡವರ ಬಂಧು” ಯೋಜನೆಯಡಿಯಲ್ಲಿ ಸಾಲ ಹೇಗೆ ಸಿಗಲಿದೆ?

ಜಿಲ್ಲಾ ಸಹಕಾರ ಕೇಂದ್ರ (DCC Banks) ಬ್ಯಾಂಕುಗಳು ಬೀದಿ ವ್ಯಾಪಾರ ಮಾಡುವ ಫಲಾನುಭವಿಗಳನ್ನು ಗುರುತಿಸಿ ಈ ಸಾಲ ಸೌಲಭ್ಯವನ್ನು ನೀಡಲಿದೆ. ಈ ಸಾಲವನ್ನು ವ್ಯಾಪಾರಿಗಳು ಪ್ರತಿನಿತ್ಯ ನಿರ್ದಿಷ್ಟ ಮೊತ್ತ ಪಾವತಿ ಮಾಡುವ ಮೂಲಕ ಅಥವಾ ಪಿಗ್ಮಿ ಕಟ್ಟುವ ಮೂಲಕವೂ ಹಣವನ್ನು ಮೂರು ತಿಂಗಳ ಒಳಗಾಗಿ ಬ್ಯಾಂಕುಗಳಿಗೆ ಹಿಂದಿರುಗಿಸಬಹುದು. ಮೂರು ತಿಂಗಳ ಒಳಗಾಗಿ ನಿಯಮಿತವಾಗಿ ಸಾಲವನ್ನು ವಾಪಸು ಮಾಡಿದ್ದಲ್ಲಿ ಅಂತಹವರು ಮತ್ತೆ ಸಾಲ ಪಡೆಯುವ ಮೊತ್ತವನ್ನು ಶೇ.10 ರಷ್ಟು ಹೆಚ್ಚಿಸುವ ಅವಕಾಶವನ್ನು ಈ ಯೋಜನೆಯಡಿ ನೀಡಲಾಗಿದೆ.

ಯಾರೆಲ್ಲಾ ಈ ಬಡ್ಡಿ ರಹಿತ ಸಾಲ ಪಡೆಯಬಹುದು?

– ಪಾದರಕ್ಷೆ ಮಾರಾಟ ಮತ್ತು ರಿಪೇರಿ ಮಾಡುವವರು

– ಆಟಾದ ಸಾಮಾನುಗಳನ್ನು ಮಾರಾಟ ಮಾಡುವವರು

– ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರು

– ತರಕಾರಿ, ಹೂ, ಹಣ್ಣು, ಇತರೆ ಪದಾರ್ಥಗಳು ಮತ್ತು ವಸ್ತುಗಳನ್ನು ಬಂಡಿಯಲ್ಲಿ ವ್ಯಾಪಾರ ಮಾಡುವವರಿಗೆ.

– ತಳ್ಳುವ ಬಂಡಿಯಲ್ಲಿ, ಮೋಟಾರ್ ವಾಹನಗಳಲ್ಲಿ ಊಟ ವಿತರಣೆ ಮಾಡುವವರು

ಈ ಎಲ್ಲಾ ರೀತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ದೊರೆಯಲಿದೆ.

ಬಡವರ ಬಂಧು ಸಾಲ ಪಡೆಯುವುದು ಹೇಗೆ?

– ವ್ಯಾಪಾರ ಸ್ಥಳದ ಫೋಟೋದೊಂದಿಗೆ ತಮ್ಮ ಗುರುತಿನ ಚೀಟಿ ತೆಗೆದುಕೊಂಡು ಹೋಗಿ ಹತ್ತಿರದ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಜೀರೋ ಬ್ಯಾಲೆನ್ಸ್ ಖಾತೆ ತೆರೆಯಬೇಕು.

– ‘ಬಡವರ ಬಂಧು’ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು.

– ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಇತರೆ ಸ್ಥಳೀಯ ಗುರುತಿನ ಚೀಟಿಗಳ ಪ್ರತಿಯನ್ನು ನೀಡಬಹುದು.

– ಬ್ಯಾಂಕುಗಳು ಅರ್ಹರಿಗೆ ಸಾಲ ನೀಡಲಿವೆ.

– ಮೂರು ತಿಂಗಳ ಒಳಗೆ ಸಾಲದ ಮರುಪಾವತಿ ಮಾಡಬೇಕು.

ಬಡ್ಡಿ ರಹಿತ ಸಾಲ ಇವರಿಗೆ ಲಭ್ಯವಿಲ್ಲ..

– ರಸ್ತೆ ಬದಿ ಯಾವುದೇ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತ ಪರಿಸರ ಮಾಲಿನ್ಯ ಉಂಟುಮಾಡುವ ಮತ್ತು ಸ್ವಚ್ಛತೆ ಹಾಳು ಮಾಡುವಂತಹವರಿಗೆ ಈ ಬಡ್ಡಿ ರಹಿತ ಸಾಲ ದೊರೆಯುವುದಿಲ್ಲ.

Interest free loans for street vendors under ‘Badavara Bandhu’ scheme launched by H D Kumaraswamy, Chief minister of Karnataka. Here you can know hot to get Interest free loans  under ‘Badavara Bandhu’ scheme.

You may also like