Home » ಫಾರಿನ್ ಟಾಯ್ಲೆಟ್‌ಗಿಂತ ಭಾರತೀಯ ಟಾಯ್ಲೆಟ್ ಸಂಸ್ಕೃತಿಯೇ ಅತ್ಯುತ್ತಮ ಏಕೆ? 7 ವೈಜ್ಞಾನಿಕ ಕಾರಣಗಳು

ಫಾರಿನ್ ಟಾಯ್ಲೆಟ್‌ಗಿಂತ ಭಾರತೀಯ ಟಾಯ್ಲೆಟ್ ಸಂಸ್ಕೃತಿಯೇ ಅತ್ಯುತ್ತಮ ಏಕೆ? 7 ವೈಜ್ಞಾನಿಕ ಕಾರಣಗಳು

by manager manager

ಹೆಮ್ಮೆಯ ಭಾರತೀಯರಾದ ನಾವು ಇಂದಿನಿಂದ ಮಾತ್ರವಲ್ಲದೇ ಹಿಂದಿನಿಂದಲೂ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಒಗ್ಗಿಕೊಂಡಿದ್ದೇವೆ. ಆ ಒಂದು ಗೀಳು ಈಗಲೂ ಮುಂದುವರಿಯುತ್ತಿದೆ.

ಸ್ವಲ್ಪ ನಾಚಿಕೆಪಟ್ಟಿಕೊಳ್ಳಬೇಕಾದ ವಿಷಯ ಅಂದ್ರೆ ಭಾರತೀಯರಾದ ನಾವು ಫಾರಿನ್ ಶೈಲಿಯ ಟಾಯ್ಲೆಟ್ ಸಂಸ್ಕೃತಿಯನ್ನು ರೂಡಿಸಿಕೊಳ್ಳುತ್ತಿದ್ದೇವೆ. ಅಲ್ಲದೇ ಕಟ್ಟುವ ಹೊಸ ಮನೆಗಳಲ್ಲಿ ವಿದೇಶಿ ಶೈಲಿಗಳ ಟಾಯ್ಲೆಟ್ ವ್ಯವಸ್ಥೆಯನ್ನು ಸಹ ಕಟ್ಟಿಸಿಕೊಳ್ಳುತ್ತಿದ್ದೇವೆ. ಆದರೆ ಭಾರತೀಯರೆಲ್ಲರೂ ಎಚ್ಚರದಿಂದ ಗಮನಿಸಬೇಕಾದ ವಿಷಯ ಅಂದ್ರೆ ಭಾರತೀಯ ಟಾಯ್ಲೆಟ್ ಸಂಸ್ಕೃತಿಯೂ ವೈಜ್ಞಾನಿಕವಾಗಿ ಫಾರಿನ್ ಟಾಯ್ಲೆಟ್ ಸಂಸ್ಕೃತಿಗಿಂತಲೂ ಅತ್ಯುತ್ತಮವಾದದ್ದು. ಇದಕ್ಕೆ ಸಾಕ್ಷಿಯಾಗಿ ನಿಮ್ಮ ಕನ್ನಡ ಅಡ್ವೈಸರ್ 7 ವೈಜ್ಞಾನಿಕ ಕಾರಣಗಳನ್ನು ನೀಡುತ್ತಿದೆ. ಮುಂದೆ ಓದಿರಿ.

7 Scientific Reasons why Indian Toilets are better than western ones in kannada 1

1 ಫಿಟ್‌ನೆಸ್‌ ಕಾಪಾಡುತ್ತದೆ ಹಾಗೂ ಜೀವಿತಾವಧಿಯನ್ನು ಹೆಚ್ಚಿಸುತ್ತದೆ

ಭಾರತೀಯ ಟಾಯ್ಲೆಟ್ ಸಂಸ್ಕೃತಿ ದಿನನಿತ್ಯ ವ್ಯಾಯಾಮ ಮಾಡಿಸುತ್ತದೆ ಮತ್ತು ಜೀವಿತಾವಧಿಯನ್ನು ಹೆಚ್ಚಿಸುವ ಮಾರ್ಗವು ಇದೆಯೇ ಆಗಿದೆ. ಎಲ್ಲರಿಗೂ ವ್ಯಾಯಾಮದ ಪ್ರಾಮುಖ್ಯತೆ ಗೊತ್ತೇ ಇದೆ. ಭಾರತೀಯ ಟಾಯ್ಲೆಟ್‌ಸಂಸ್ಕೃತಿ ಬಳಸುವವರು ಕೇವಲ ಕೂರುವುದಲ್ಲದೇ, ನಿಲ್ಲುವುದಲ್ಲದೇ ಕೆಲವೊಮ್ಮೆ ಬೆವರುತ್ತೀರಿ ಸಹ.

ಭಾರತೀಯ ಟಾಯ್ಲೆಟ್ ಗಳಲ್ಲಿ ಕೂರುವ ಶೈಲಿಯೂ ರಕ್ತ ಸಂಚಾರಕ್ಕೆ ಅತ್ಯುತ್ತಮವಾದುದು. ಅಲ್ಲದೇ ಕೈಗಳು ಮತ್ತು ಕಾಲುಗಳ ವ್ಯಾಯಾಮಕ್ಕೆ ಸಹಾಯಕವಾಗಿದೆ.

7 Scientific Reasons why Indian Toilets are better than western ones in kannada 2

2 ಜೀರ್ಣಕ್ರಿಯೆಗೆ ಸಹಾಯಕ

ಭಾರತೀಯ ಟಾಯ್ಲೆಟ್‌ ನಲ್ಲಿ ಪದ್ಮಾಸನದಲ್ಲಿ ಕೂರುವುದರಿಂದ ಈ ಆಸನವು ಸರಿಯಾದ ಜೀರ್ಣಕ್ರಿಯೆಗೆ ಚಿಕಿತ್ಸೆ ಇದ್ದಹಾಗೆ. ಅಂದರೆ ಆಹಾರವನ್ನು ಪ್ರೆಸ್ ಮಾಡಿ, ಒತ್ತಡಕ್ಕೊಳಗಾಗಿಸಿ, ಮರುವಿನ್ಯಾಸ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಆದರೆ ಅಮೆರಿಕನ್ ಟಾಯ್ಲೆಟ್ ಸಂಸ್ಕೃತಿಯಲ್ಲಿ ಸುಖಾಸುಮ್ಮನೆ ಕೂರುವುದರಿಂದ ಹೊಟ್ಟೆಗೆ ಯಾವುದೇ ರೀತಿಯ ಒತ್ತಡ ಬೀಳುವುದಿಲ್ಲ. ಇದರಿಂದ ಉತ್ತಮ ರಿಸಲ್ಟ್ ಯಾವುದೇ ರೀತಿಯಲ್ಲು ಸಿಗುವುದಿಲ್ಲ.

7 Scientific Reasons why Indian Toilets are better than western ones in kannada 3

3 ಪರಿಸರ ಸ್ನೇಹಿ ಟಾಯ್ಲೆಟ್

ಭಾರತೀಯ ಟಾಯ್ಲೆಟ್ ಸಂಸ್ಕೃತಿ ಬಗ್ಗೆ ಎಂದಾದರೂ ವಿರೋಧಾತ್ಮಕ ಧ್ವನಿ ಕೇಳಿದ್ದೀರಾ? ಖಂಡಿತಾ ಸಾಧ್ಯವಿಲ್ಲ. ಫಾರಿನ್ ಟಾಯ್ಲೆಟ್ ಸಂಸ್ಕೃತಿ ಬಗ್ಗೆ ಹೇಳುವುದಾದರೆ ಸ್ವಚ್ಛತೆಗಾಗಿ ಟಾಯ್ಲೆಟ್ ಪೇಪರ್ ಬಳಸಲಾಗುತ್ತದೆ. ಇದು ಪೇಪರ್ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲಿ ಕೇವಲ ಸ್ವಲ್ಪ ಪ್ರಮಾಣದಲ್ಲಿ ಸೋಪು ಮತ್ತು ಕಡಿಮೆ ಪ್ರಮಾಣದ ನೀರು ಉಪಯೋಗಿಸಿದರೆ ಸಾಕು. ಇಲ್ಲಿ ಯಾವುದೇ ರೀತಿಯ ಪೇಪರ್ ತ್ಯಾಜ್ಯಕ್ಕೆ ಅವಕಾಶವಿಲ್ಲ. ಆದ್ದರಿಂದ ಇದು ಸೂಕ್ತ ಮತ್ತು ಪರಿಸರ ಸ್ನೇಹಿ ಟಾಯ್ಲೆಟ್ ಸಿಸ್ಟಮ್.

7 Scientific Reasons why Indian Toilets are better than western ones in kannada 4

4 ಗರ್ಭಿಣಿ ಮಹಿಳೆಯರಿಗೂ ಒಳ್ಳೆಯದು

ಭಾರತೀಯ ಟಾಯ್ಲೆಟ್ ಸಂಸ್ಕೃತಿ ಉಪಯೋಗಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದೇ ಆಗಿದ್ದು, ನೈಸರ್ಗಿಕವಾಗಿ ಮಗು ಹಡೆಯಲು ಸಹಾಯಕವಾಗಿದೆ. ಇಲ್ಲಿನ ಟಾಯ್ಲೆಟ್ ನಲ್ಲಿ ಪದ್ಮಾಸನದಲ್ಲಿ ಕೂರುವುದರಿಂದ ಗರ್ಭಾಶಯದ ಮೇಲೆ ಒತ್ತಡ ಬೀಳುವುದನ್ನು ಕಡಿಮೆ ಮಾಡುತ್ತದೆ. ಗರ್ಭಿಣಿ ಸ್ತ್ರೀಯರು ಅತಿ ಹೆಚ್ಚಾಗಿ ಇಲ್ಲಿನ ಟಾಯ್ಲೆಟ್ ಬಳಸುವುದರಿಂದ ಹೆರಿಗೆ ನೈಸರ್ಗಿಕವಾಗಿ ಆಗಲು ಸಹಾಯಕ ಎಂದೇಳಲಾಗಿದೆ.

7 Scientific Reasons why Indian Toilets are better than western ones in kannada 5

5 ಶುದ್ಧ ಮತ್ತು ಆರೋಗ್ಯಕರ

ನಾವು ಭಾರತೀಯರು ಹೆಚ್ಚು ಶುದ್ಧವಾಗಿರಲು ಇಷ್ಟಪಡುತ್ತೇವೆ. ಟಾಯ್ಲೆಟ್ ಬಳಸಿದ ನಂತರ ಸೋಪು ಮತ್ತು ನೀರು ಬಳಸುತ್ತೇವೆ. ಆದರೆ ಅಮೆರಿಕನ್ನರು ಜಸ್ಟ್ ಟಾಯ್ಲೆಟ್ ಪೇಪರ್ ಬಳಸುತ್ತಾರೆ. ಸೋಪು ಮತ್ತು ನೀರು ಬಳಸುವುದರಿಂದ ಬ್ಯಾಕ್ಟೀರಿಯಾಗಳ ಉಲ್ಭಣದಿಂದ ದೂರವಿರಬಹುದು.

7 Scientific Reasons why Indian Toilets are better than western ones in kannada 6

6 ದೊಡ್ಡ ಪ್ರಮಾಣದಲ್ಲಿ ನೀರು ಮತ್ತು ಮರಗಳ ರಕ್ಷಣೆಯಿಂದ ಪರಿಸರದ ರಕ್ಷಣೆಯೂ ಸಾಧ್ಯ

ಪ್ರಸ್ತುತ ದಿನಗಳಲ್ಲಿ ನೀರು ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ ಒಂದು ದೊಡ್ಡ ಸವಾಲೇ ಆಗಿದೆ. ಮುಂದಿನ ದಿನಗಳಲ್ಲಿ ನೀರು ಸಮಸ್ಯೆ ಎದುರಿಸುವ ಎಲ್ಲಾ ಲಕ್ಷಣಗಳು ನಮಗೆ ಎದುರಾಗಿವೆ. ಭಾರತೀಯ ಟಾಯ್ಲೆಟ್ ಸಂಸ್ಕೃತಿ ಬಳಸುವುದರಿಂದ ಸ್ವಚ್ಛತೆಗಾಗಿ 1-2 ಮಗ್‌ಗಳಷ್ಟು ನೀರು ಬಳಸುತ್ತೇವೆ. ಇದಕ್ಕಿಂತ ಹೆಚ್ಚು ನೀರು ಅವಶ್ಯಕತೆಯೂ ಇಲ್ಲ. ಆದರೆ ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ ಬಳಸುವುದರಿಂದ ಫ್ಲಸ್ ಸಿಸ್ಟಮ್(Flush System) ನಲ್ಲಿ ಹೆಚ್ಚು ನೀರು ಪೋಲಾಗುತ್ತದೆ.

7 Scientific Reasons why Indian Toilets are better than western ones in kannada 7

7 ಅತಿ ಮುಖ್ಯವಾಗಿ ಕರುಳಿನ ಕ್ಯಾನ್ಸರ್ ನಿಂದ ರಕ್ಷಣೆ

ಭಾರತೀಯ ಸಂಸ್ಕೃತಿ ಟಾಯ್ಲೆಟ್ ನಲ್ಲಿ ಪದ್ಮಾಸನದಲ್ಲಿ ಕೂರುವುದರಿಂದ ಕರುಳಿನಲ್ಲಿನ ಮಲ ವಿಸರ್ಜನೆ ಸಂಪೂರ್ಣವಾಗಿ ಹೊರಹೋಗಲು ಸಹಾಯಕ. ಆದಕಾರಣ ಮಲಬದ್ಧತೆ, ಹುಣ್ಣುರೋಗ ಮತ್ತು ಕರುಳಿನ ಕ್ಯಾನ್ಸರ್‌ಗಳಿಂದ ರಕ್ಷಣೆ ಸಾಧ್ಯ.

Indian Toilets makes fit and increase human life expectancy. Here is 7 Scientific Reasons why Indian Toilets are better than western ones in kannada

You may also like

1 comment

Shreedhara November 5, 2018 - 5:17 am

Nice

Comments are closed.