ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವಲಂಬಿಸಿರುವ ಮಾನ್ಸೂನ್ ಅಥವಾ ಮುಂಗಾರು ಮಾರುತಗಳು ಮಂಗಳವಾರ ಕೇರಳದ ಮೂಲಕ ಭಾರತವನ್ನು ಪ್ರವೇಶಿಸಿದೆ. ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಕಳೆದ ವರ್ಷ ಕೂಡಾ ಮುಂಗಾರು ಮಾರುತಗಳು ಮೇ 30 ಕ್ಕೆ ಕೇರಳ ಪ್ರವೇಶ ಮಾಡಿದ್ದವು.
ಇನ್ನು ಕರ್ನಾಟಕಕ್ಕು ಪ್ರವೇಶಿಸಿರುವ ಮುಂಗಾರು ಮಾರುತಗಳು ಹೀಗಾಗಲೆ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟಿಸುತ್ತಿದೆ. ಕಳೆದೆರಡು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಷ್ಟಕ್ಕೂ ಮಾನ್ಸುನ್ ಮಾರುತಗಳೆಂದರೆ ಏನು..? ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳ ಬಗ್ಗೆ ಇಲ್ಲಿದೆ ಮಾಹಿತಿ.
ಏನಿದು ಮುಂಗಾರು..?
ಅರಬ್ಬಿ ಸಮುದ್ರದಿಂದ ತೇವಾಂಶವನ್ನು ಹೊತ್ತು ಬರುವ ಮಾರುತಗಳು ಭಾರತದ ಭೂಪ್ರದೇಶದ ಮೇಲೆ ಹಾದುಹೋಗುತ್ತವೆ. ಒಂದುವರೆ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಈ ಮಾರುತಗಳು ಕ್ರಮಿಸುತ್ತವೆ. ದಕ್ಷಿಣದ ಕೆರಳದಿಂದ ಭಾರತವನ್ನು ಪ್ರವೆಶಿಸುವ ಮಾರುತಗಳು, ಉತ್ತರದ ತುತ್ತತುದಿ ಜಮ್ಮುಕಾಶ್ಮೀರದ ವರೆಗೆ ಸಾಗುತ್ತವೆ. ಈ ಮಾರುತಗಳು ಸುರಿಸುವ ಮಳೆಯೇ ”ಮುಂಗಾರು ಮಳೆ’
ಹೀಗೆ ಹಾದು ಹೋದ ಮಾರುತಗಳು ಉತ್ತರದಿಂದ ದಕ್ಷಿಣಕ್ಕೆ ಪುನರಾಗಮನ ಮಾಡುತ್ತವೆ. ಕೇರಳದ ಮೂಲಕ ಮತ್ತೆ ಅರಬ್ಬಿ ಸಮುದ್ರದತ್ತ ಸಾಗುತ್ತವೆ. ಇದನ್ನು ’ಹಿಂಗಾರು ಮಳೆ” ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ನೈರುತ್ಯ ಮಾರುತ (ಮುಂಗಾರು) ಹಾಗೂ ಈಶಾನ್ಯ ಮಾರುತ (ಹಿಂಗಾರು) ಎಂದು ವಿಂಗಡಿಸಲಾಗಿದ್ದು, ದಕ್ಷಿಣದಿಂದ ಉತ್ತರಕ್ಕೆ ಸಾಗುವ ಮಾರುತಗಳು ನೈರುತ್ಯ ಮಾರುತಗಳಾಗಿದ್ದು, ಜೂನ್ ನಿಂದ ಸೆಪ್ಟೆಮ್ಬರ್ ವರೆಗೆ ಈ ಮಾರುತಗಳು ಮಳೆಯನ್ನು ಸುರಿಸುತವೆ. ಅದೇ ರೀತಿ, ಉತ್ತರದಿಂದ ದಕ್ಷಿನಕ್ಕೆ ಜುಲೈ ನಿಂದ ಆಗಸ್ಟ್ ನಲ್ಲಿ ಹಾದುಹೋಗುವ ಮಾರುತಗಳು ಈಶಾನ್ಯಮಾರುತಗಳು. ಇವು ಸೆಪ್ಟೆಂಬರ್ ನಿಂದ ಜನವರಿವರೆಗೆ ಮಳೆ ಸುರಿಸುತ್ತವೆ.
ರಾಜ್ಯದಲ್ಲಿ ಈ ವೇಳೆಯ ಸುರಿಸುವ ಮಾಳೆ ಪ್ರಮಾಣದಲ್ಲಿ ಕರಾವಳಿ ಪ್ರದೇಶದಲ್ಲಿ 3,083.5ಮಿಮೀ, ಉತ್ತರ ಒಳನಾಡು 506ಮಿ.ಮೀ, ದಕ್ಷಿಣ ಒಳನಾಡು 659.9ಮಿ.ಮೀ, ಒಟ್ಟಾರೆ ರಾಜ್ಯಾದ್ಯಂತ 832.3ಮಿ.ಮೀ ಮುಂಗಾರಿನ ವಾಡಿಕೆ ಮಳೆಯಾಗುತ್ತದೆ.
ದೇಶದ ಆರ್ಥಿಕತೆ ಮೇಲೆ ಪರಿಣಾಮ..!
ಮುಂಗಾರು ಭಾರತೀಯ ಕೃಷಿಯ ಜೀವನಾಡಿ. ಮುಂಗಾರು ಮಳೆ ದೇಶದ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತದೆ. ದೇಶದಲ್ಲಿ ಒಟ್ಟು ಸುರಿಯುವ ಮಳೆಯ ಪೈಕಿ ಶೇ.70 ರಷ್ಟು ಮಳೆ ಮುಂಗಾರಿನದ್ದು. ದೇಶದ ಶೇ.40ರಷ್ಟು ವಿದ್ಯುತ್ ಬೇಡಿಕೆ ಪೂರೈಸುವ ಜಲವಿದ್ಯುದಾಗಾರಗಳು ಮುಂಗಾರು ಅವಲಂಬಿತವಾಗಿವೆ. ಭಾರತದ 2 ಲಕ್ಷ ಕೋಟಿ ಕೃಷಿ ಆರ್ಥಿಕತೆ ಬಹುತೇಕವಾಗಿ ಮುಂಗಾರು ಮಳೆಯನ್ನು ಅವಲಂಬಿಸಿದೆ. ದೇಶದ 80 ಕೋಟಿ ಜನರ ಜೀವನೋಪಾಯಕ್ಕೆ ಅವಲಂಬಿಸಿರುವುದು ಮುಂಗಾರು ದೇಶದ ಜಿಡಿಪಿಯ ಶೇ.20 ರಷ್ಟು ಪಾಲು ಕೃಷಿ ವಲಯದ್ದು. ಇಲ್ಲಿನ ಸಣ್ಣ ವ್ಯತ್ಯಾಸವೂ ದೇಶಕ್ಕೆ ಮಾರಕವಾಗಿದೆ.
ಮುಂಗಾರು ಮಾರುತದ ಬಗ್ಗೆ ಹೇಳುವುದು ಸವಾಲಿನ ಕೆಲಸ..!
ಭಾರತದಲ್ಲಿ ಮಾನ್ಸುನ್ ಮಾರುತದ ಬಗ್ಗೆ ಹೇಳುವುದು ಸವಾಲಿನ ಕೆಲಸ. ಯಾವುದೇ ಕ್ಷಣದಲ್ಲಾದರೂ ಈ ಮಾರುತಗಳು ವಿಜ್ನಾನಿಗಳ ಊಹೆಗಳನ್ನು ಬುಡಮೇಲು ಮಾಡುತ್ತವೆ. ಇಲ್ಲಿ ಹಾದುಹೋಗುವ ಮುಂಗಾರು ಮಾರುತಗಳು ಪರಿಣಾಮಕಾರಿಯಾಗಿರುತ್ತವೆ ಹಾಗೂ ವಿಶೇಷವಾದವುಗಳು. ಅಮಿನಿ, ತಿರುವನಂತಪುರಂ, ಪುನಾಲುರ, ಕೊಲ್ಲಂ, ಅಲ್ಲಪುಳ, ಕೊಟ್ಟಾಯಂ, ಕೊಚ್ಚಿ, ಕಣ್ಣೂರು, ಕೊಡುಲು, ಮಂಘಳೂರು ಸೇರಿದಂತೆ 14 ಕೇಂದ್ರಗಳಲ್ಲಿ ಸತತ 2 ದಿನಗಳು 2.5ಮಿ.ಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾದರೆ ಇದಾದ ಮೂರನೇ ದಿನವೇ ಮುಂಗಾರು ಕೇರಳ ಪ್ರವೇಶಿಸಿದೆ ಎಂದು ಘೋಷಿಸಲಾಗುತ್ತದೆ.
Monsoon is the livelihood of Indian agriculture. its showers affect the country’s economy by the common man. Monsoons deliver about 70 percent of India’s annual rainfall. Monsoon has entered India through Kerala on Tuesday.