ವಾಯ್ಸ್ ಮೂಲಕವೇ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಸಬಹುದು ಎಂಬುದು ತಿಳಿದಿರಬಹುದು. ಇದಕ್ಕಾಗಿಯೇ ಗೂಗಲ್ ವಾಯ್ಸ್ ಆ್ಯಕ್ಸೆಸ್ ಆ್ಯಪ್ ತಯಾರಿಸಿದೆ. ಫೋನಿನಲ್ಲಿರುವ ಆ್ಯಪ್ಗಳನ್ನು ಓಪನ್ ಮಾಡುವುದು, ನ್ಯಾವಿಗೇಶನ್ ಮತ್ತು ಟೆಕ್ಟ್ಸ್ ಎಡಿಟ್ ಮಾಡುವುದು ಹೀಗೆ ಎಲ್ಲವನ್ನೂ ಕೈಗಳ ಸಹಾಯವಿಲ್ಲದೆ ಕೇವಲ ಧ್ವನಿಯ ಮೂಲಕವೇ ಮಾಡಬಹುದು. ಆ್ಯಂಡ್ರಾಯ್ಡ್ ಫೋನಿನಲ್ಲಿ ವಾಯ್ಸ್ ಆ್ಯಕ್ಸೆಸ್ ಬಳಸುವುದು ಹೇಗೆ ಇಲ್ಲಿ ತಿಳಿಯಿರಿ.
Google Voice ಆಫ್ ಅಪ್ಲಿಕೇಶನ್ ಅನ್ನು ನಿಮ್ಮ ಡಿವೈಸ್ ಸಪೋರ್ಟ್ ಮಾಡುತ್ತದೆಯಾ ಪರಿಶೀಲಿಸಿ
- ನಿಮ್ಮ ಡಿವೈಸ್ ಆ್ಯಂಡ್ರಾಯ್ಡ್ 5 ಅಥವಾ ಅದಕ್ಕೂ ಹೆಚ್ಚಿನ ವರ್ಷನ್ ಹೊಂದಿರಬೇಕು.
- ಗೂಗಲ್ ಆ್ಯಪ್ ಲೇಟೆಸ್ಟ್ ವರ್ಷನ್ ಡೌನ್ಲೋಡ್ ಮಾಡಿಕೊಳ್ಳಿ
- ಯಾವುದಾದರೂ ಸ್ಕ್ರೀನ್ ಮೇಲಿಂದ “OK Google” ಆನ್ ಮಾಡಿಕೊಳ್ಳಿ.
- ಆಫ್ಲೈನ್ ಸ್ಪೀಚ್ ರಿಕಗ್ನಿಶನ್ಗಾಗಿ ಯಾವುದಾದರೂ ಭಾಷೆಯನ್ನು ಡೌನ್ಲೋಡ್ ಮಾಡಲಾಗಿದೆಯಾ ಎಂಬುದನ್ನು ಚೆಕ್ ಮಾಡಿ.
ವಾಯ್ಸ್ ಆ್ಯಕ್ಸೆಸ್ ಡೌನ್‌ಲೋಡ್ ಮಾಡಿ
- ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ Google Voice Accesss ಆ್ಯಪ್ ಡೌನ್ ಲೋಡ್ ಮಾಡಿ.
Google Voice Access ಬಳಕೆ ಪ್ರಾರಂಭಿಸಿ
- ನಿಮ್ಮ ಮೊಬೈಲಿನಲ್ಲಿ ಸೆಟ್ಟಿಂಗ್ಸ್ ಮೆನು ಓಪನ್ ಮಾಡಿ
- ಅದರಲ್ಲಿ Accessibility ಆಪ್ಷನ್ ಕ್ಲಿಕ್ ಮಾಡಿ ನಂತರ Voice Access ಆಯ್ಕೆ ಮಾಡಿ.
- ಈಗ ಯೂಸ್ ಸರ್ವಿಸ್ ಅನ್ನು ಆನ್ ಮಾಡಿ.
ಇತರೆ ವಿಧಾನಗಳು
- ಗೂಗಲ್ ಡಿಟೆನ್ಷನ್ ಆನ್ ಇದ್ದರೆ “Hey Google, Voice Access” ಎಂದು ಹೇಳುವ ಮೂಲಕ ವಾಯ್ಸ್ ಆ್ಯಕ್ಸೆಸ್ ಓಪನ್ ಮಾಡಬಹುದು.
- ನೋಟಿಫಿಕೇಶನ್ ಟ್ಯಾಪ್ ಮಾಡಿ ಅದರಲ್ಲಿ ಸ್ಟಾರ್ಟ್ ಎಂಬುದನ್ನು ಕ್ಲಿಕ್ ಮಾಡಿ.
- ಹೋಮ್ ಸ್ಕ್ರೀನ್ ಮೇಲಿರುವ ವಾಯ್ಸ್ ಆ್ಯಕ್ಸೆಸ್ ಟ್ಯಾಪ್ ಮಾಡಿ.
- ವಾಯ್ಸ್ ಆ್ಯಕ್ಸೆಸ್ ಬಟನ್ ಅನ್ನು ಒತ್ತುವ ಮೂಲಕವೂ ಬಳಸಬಹುದು.
- ಓಪನ್ ಕಾಂಟ್ಯಾಕ್ಸ್ಟ್ ಎಂದು ಅಥವಾ ಮತ್ತಾವುದಾದರೂ ಕಮಾಂಡ್ ಹೇಳುವ ಮೂಲಕ ಗೂಗಲ್ ವಾಯ್ಸ್ ಬಳಕೆ ಆರಂಭಿಸಿ.
UAN ನಂಬರ್ ಅನ್ನು ಆನ್‌ಲೈನ್ ಮೂಲಕ ಪಡೆಯುವುದು ಹೇಗೆ?