Home » ಕಳವಾದ ಅಥವಾ ಕಳೆದುಕೊಂಡ ಸ್ಮಾರ್ಟ್‌ಫೋನ್‌ ಟ್ರ್ಯಾಕ್‌ ಮಾಡುವುದು ಹೇಗೆ? ಇಲ್ಲಿದೆ ಸರಳ ಮಾರ್ಗ..

ಕಳವಾದ ಅಥವಾ ಕಳೆದುಕೊಂಡ ಸ್ಮಾರ್ಟ್‌ಫೋನ್‌ ಟ್ರ್ಯಾಕ್‌ ಮಾಡುವುದು ಹೇಗೆ? ಇಲ್ಲಿದೆ ಸರಳ ಮಾರ್ಗ..

by manager manager

ಥ್ಯಾಕ್ಸ್ ಟು ಟೆಕ್ನಾಲಜಿ(Technology). ತಂತ್ರಜ್ಞಾನ ಇಂದು ಪ್ರತಿಯೊಂದು ಕೆಲಸವನ್ನು ಅತಿ ಸುಲಭಗೊಳಿಸಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ನಾವು ಕಳೆದುಕೊಂಡ ಮೊಬೈಲ್(mobile) ಅನ್ನು ನಾವೇ ಹುಡುಕಿಕೊಳ್ಳುವಷ್ಟು.

ಹೌದು. ನಮ್ಮದೇ ಸ್ಮಾರ್ಟ್‌ಫೋನ್(Smartphone) ಕಳೆದುಕೊಂಡರೇ ನಾವು ಇತರರನ್ನು ಕೇಳಿಕೊಂಡು ಆಗಲಿ ಅಥವಾ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡುವ ಕೆಲಸಕ್ಕೆ ಮೊದಲು ಸ್ವಲ್ಪ ತಲೆ ಓಡಿಸಿದಲ್ಲಿ, ಕಳೆದುಕೊಂಡ ಮೊಬೈಲ್ ಅನ್ನು ನಾವೇ ಸ್ವತಃ ಹುಡುಕಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಸರಳವಾಗಿ ನಿಮಗೆ ತಿಳಿಸುತ್ತೇವೆ. ಮುಂದೆ ಓದಿರಿ.

– ಸ್ಮಾರ್ಟ್‌ಫೋನ್(Smartphone) ಹೊಂದಿರುವವರೆಲ್ಲರೂ ಬಹುಮುಖ್ಯವಾಗಿ ಮೊದಲು Gmail ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡಿರಬೇಕು.

– ಸ್ಮಾರ್ಟ್‌ಫೋನ್ ಕಳೆದುಹೋದಾಗ ಸ್ವತಃ ಹುಡುಕಿಕೊಳ್ಳಲು(ಮೊಬೈಲ್ ಟ್ರ್ಯಾಕ್ ಮಾಡಲು) ತಮ್ಮ ಡಿವೈಸ್‌ಗಳಲ್ಲಿ ಆಂಡ್ರಾಯ್ಡ್ ಬಳೆಕೆದಾರರು ‘Android divice manager’ ಆಪ್ ಅನ್ನು ಮತ್ತು ಐಫೋನ್ ಬಳೆಕೆದಾರರು ‘Find my iPhone’ ಆಪ್ ಇನ್‌ಸ್ಟಾಲ್ ಮಾಡಿಕೊಂಡಿರಬೇಕು.

ಗೂಗಲ್ ಸೆಟ್ಟಿಂಗ್ಸ್

ಡಿವೈಸ್‌ಗಳನ್ನು ಟ್ರ್ಯಾಕ್‌ ಮಾಡಲು ಇನ್‌ಸ್ಟಾಲ್ ಮಾಡಿಕೊಂಡ ಆಪ್‌ಗಳನ್ನು ಸೆಟ್‌ ಮಾಡಲು ಗೂಗಲ್ ಸೆಟ್ಟಿಂಗ್ಸ್ ಗೆ ಹೋಗಿ ‘ಸೆಕ್ಯೂರಿಟಿ’ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ನಂತರ ‘Android device manager’ ಎಂಬಲ್ಲಿಯ ಕೆಳಗೆ ‘Remotely locate this device’ ಎಂಬ ಆಯ್ಕೆಯನ್ನು ಎನೇಬಲ್ ಮಾಡಿ. ಹಾಗೂ ‘Allow remote lock’ ಆಯ್ಕೆಯನ್ನು ಎನೇಬಲ್ ಮಾಡಿ.

ಮೊಬೈಲ್ ಕಳೆದು ಹೋದಾಗ ಟ್ರ್ಯಾಕ್ ಮಾಡುವುದು ಹೇಗೆ?

ಮೇಲೆ ತಿಳಿಸಿದ ಸೆಟ್ಟಿಂಗ್ ಅನ್ನು ಯಶಸ್ವಿಗೊಳಿಸಿದ್ದಲ್ಲಿ, ಮೊಬೈಲ್ ಕಳೆದು ಹೋದಾಗ ಕಂಪ್ಯೂಟರ್ ನಲ್ಲಿ ನಿಮ್ಮ ಜಿಮೇಳ್ ಖಾತೆಯನ್ನು ಓಪನ್ ಮಾಡಿ(ಲಾಗಿನ್ ಆಗಿ). ಅಲ್ಲಿ Android device manager ಎಂದು ಬ್ರೌಸರ್ ಟೈಟಲ್ ಬಾರ್‌ ನಲ್ಲಿ ಟೈಪ್ ಮಾಡಿ. ಮೊಬೈಲ್ ಇರುವ ಸ್ಥಳ ಗೂಗಲ್ ಮ್ಯಾಪ್‌ನಲ್ಲಿ ನಿಮಗೆ ಕಾಣುತ್ತದೆ.

ಲಾಕ್ ಸ್ಕ್ರೀನ್ ಸೆಟಪ್ ಮಾಡಿ

‘Android device manager’ನಲ್ಲಿ ಲಾಕ್ ಸ್ಕ್ರೀನ್ ಸೆಟ್ ಮಾಡಲು ಮತ್ತು ಮೊಬೈಲ್‌ ನಲ್ಲಿನ ಡಾಟಾ ಸುರಕ್ಷಿಸಲು ಪಾಸ್‌ವರ್ಡ್‌ ನೀಡಬಹುದಾಗಿರುತ್ತದೆ.

ಹೊಸ ಲಾಕ್ ಸ್ಕ್ರೀನ್

‘New lock screen’ ಆಯ್ಕೆ ಮೇಲೆ ಕ್ಲಿಕ್ ಮಾಡಿ ಪಾಸ್‌ವರ್ಡ್ ನೀಡಿ ಖಚಿತಪಡಿಸಿಕೊಳ್ಳಿ. ಅಲ್ಲದೇ ಡಿವೈಸ್‌ನಲ್ಲಿರುವ ಮೆಸೇಜ್‌ಗಳ ರಿಕವರಿಗಾಗಿ ಅವಕಾಶ ಇದ್ದು ಫೋನ್‌ ನಂಬರ್‌ ನೀಡಬಹುದು.

ಮೊಬೈಲ್‌ ರಿಂಗಿಂಗ್ ಆಯ್ಕೆ

ನೀವು ಕಳೆದುಕೊಂಡ ಮೊಬೈಲ್ ನಿಮ್ಮ ಸುತ್ತಮುತ್ತ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಲ್ಯಾಪ್‌ಟಾಪ್ ಅಥವಾ ಇತರೆ ಮೊಬೈಲ್‌ಗಳಲ್ಲಿ ಜಿಮೇಲ್ ಓಪನ್ ಮಾಡಿ ‘android device manager’ ಮೂಲಕ ಲಾಕ್ ಮಾಡಿದ ನಂತರ ‘ಲೊಕೇಶನ್ ಆನ್ ಆಗಿದ್ದಲ್ಲಿ ಮತ್ತು ಆನ್‌ಲೈನ್‌ ನಲ್ಲಿ ಇದ್ದಲ್ಲಿ Ring device ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇದು ಐದು ನಿಮಿಷಗಳ ವರೆಗೆ ರಿಂಗ್ ಆಗುತ್ತದೆ.

ಡೇಟಾ ಡಿಲೀಟ್ ಮಾಡುವುದು

ಕಳೆದುಹೋದ ಮೊಬೈಲ್‌ನಲ್ಲಿ ಮುಖ್ಯ ಮಾಹಿತಿಗಳು ಇತರರಿಗೆ ತಿಳಿಯದಂತೆ ಸುರಕ್ಷಿಸಲು, ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಮೂಲಕ ಲಾಕ್ ನಂತರದಲ್ಲಿರುವ Erase ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಅಳಿಸಿ ಹಾಕಬಹುದು.

In this article readers can know How to track lost and stolen smartphone with android device manager in kannada, Read more here..

You may also like