Home » ಮುಟ್ಟಿನ ಸಮಯದಲ್ಲಿ ಅತೀಯಾಗಿ ರಕ್ತ ಸ್ರಾವವಾದರೇ ಏನು ಮಾಡಬೇಕು ?

ಮುಟ್ಟಿನ ಸಮಯದಲ್ಲಿ ಅತೀಯಾಗಿ ರಕ್ತ ಸ್ರಾವವಾದರೇ ಏನು ಮಾಡಬೇಕು ?

by manager manager

ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳು ಒಂದು ರೀತಿ ಕರಾಳ ರಾತ್ರಿಯ ಹಾಗೇ ಜೀವಕ್ಕೆ ಹಿಂಸೆ ಕೊಡುವ ಜೊತೆಗೆ ಮಾನಸಿಕವಾಗಿ ಹಿಂಸೆಯನ್ನು ಕೊಡುತ್ತದೆ. ನೈಸರ್ಗಿಕವಾಗಿ ಬರುವ ಈ ಸಮಸ್ಯೆಯನ್ನು ಹೋಗಲಾಡಿಸಲು ಆಗುವುದಿಲ್ಲ ಬದಲಿಗೆ ಕೆಲವು ರೀತಿಯ ಚಟುವಟಿಕೆಗಳ ಮೂಲಕ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಿಸಬಹುದು ಅಷ್ಟೆ. ಅದ್ರಲ್ಲೂ ಯುವತಿಯರಲ್ಲಿ ಮತ್ತು ಮುಟ್ಟು ಕೊನೆಗೊಳ್ಳುವ ವಯಸ್ಕ ಮಹಿಳೆಯರಲ್ಲಿ ವಿಪರೀತ ನೋವು ಜೊತೆಗೆ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಎಷ್ಟು ಪ್ಯಾಡ್ ಚೇಂಜ್ ಮಾಡಿದ್ರೂ ಒದ್ದೆಒದ್ದೆಯಂತಹ ಅನುಭವ..ಕಿರಿಕಿರಿ. ಕೆಲವರಿಗೆ ಕೇವಲ ರಕ್ತಸ್ರಾವ ಮಾತ್ರ ಇರುವುದಿಲ್ಲ. ಕೆಟ್ಟ ವಾಸನೆ ಮತ್ತು ಮಾನಸಿಕ ಹಿಂಸೆಯ ಅನುಭವವಾಗ್ತಾ ಇರುತ್ತೆ. ಸರಿಯಾಗಿ ನಿದ್ದೆಯೂ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯನ್ನು ತಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಅಂತ ಭಾವಿಸುವಷ್ಟು ಹೀನಾಯ ಮನಸ್ಥಿತಿಗೆ ತಲುಪಿಸಿಬಿಡುತ್ತೆ. ಹಾಗಂತ ಮನಸ್ಥಿತಿ ಹಾಳು ಮಾಡಿಕೊಂಡ್ರೆ ಯಾವ ಸಮಸ್ಯೆಗೂ ಪರಿಹಾರ ಸಿಗಲಾರದು. ಹಾಗಾಗೀ ಆ ರಕ್ತಸ್ರಾವವನ್ನು ಆದಷ್ಟು ತಡೆಯಬೇಕು ಹಾಗೇ ತಡೆಯುವುದಾದರೂ ಹೇಗೆ ಎಂಬ ಪ್ರಶ್ನೇಗೆ ಉತ್ತರವಾಗಿ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ ಅದನ್ನು ನೋಡಿ.

• ಬಿದಿರಿನ ಎಲೆಗಳು :- ಪೇಟೆ ಮಂದಿಗೆ ಬಿದಿರು ಸಿಗೋದು ಅಪರೂಪವೇ. ಆದ್ರೆ ಹಳ್ಳಿಯವರಿಗೆ ಅದ್ರಲ್ಲೂ ಮಲೆನಾಡಿನವ್ರಿಗೆ ಬಿದಿರಿನ ಎಲೆಗಳು ಆರಾಮಗಿ ಕೈಗೆಟುಕುತ್ತೆ. ಒಂದು ವೇಳೆ ನೀವೇನಾದ್ರೂ ಋತುಚಕ್ರದ ಸಂದರ್ಭದಲ್ಲಿ ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ಒಂದಷ್ಟು ಬಿದಿರಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಅದ್ರ ಡಿಕಾಕ್ಷನ್ ತಯಾರಿಸಿಕೊಂಡು ಒಂದೆರಡು ಬಾರಿ ಕುಡಿಯಿರಿ.
• ಶುಂಠಿ :- ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತ್ರ ಅದ್ರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ.
• ಚಕ್ಕೆ :- ಒಂದೆರಡು ಚಕ್ಕೆಯನ್ನು ಸ್ವಲ್ಪ ಕುಟ್ಟಿ ಪುಡಿಮಾಡಿಕೊಳ್ಳಿ, ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.. ಡಿಕಾಕ್ಷನ್ ತಯಾರಿಸಿ ಕಾದ ನಂತರ ದಿನಕ್ಕೆ ಎರಡು ಬಾರಿ ಸೇವಿಸಬೇಕು.
• ಫ್ರೆಶ್ ಬ್ರಕೋಲಿಯನ್ನು ಮಿಕ್ಸಿ ಮಾಡಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ. ಜೊತೆಗೆ ಸೇಬುಹಣ್ಣನ್ನು ಕೂಡ ಜ್ಯೂಸ್ ಮಾಡಿಕೊಂಡು ಎರಡನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಅಷ್ಟು ಟೇಸ್ಟಿ ಅನ್ನಿಸದೇ ಇದ್ರೂ ಆರೋಗ್ಯದ ದೃಷ್ಟಿಯಿಂದ ತುಂಬಾ ಹಿತವಾಗಿರುತ್ತೆ.
• ಸ್ವಲ್ಪ ನೀರು ಸೇರಿಸಿ ಎರಡರಿಂದ ಮೂರು ಮೂಲಂಗಿಯನ್ನು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇರಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.
• ಸಿಹಿಗುಂಬಳ ಅಥ್ವಾ ಹಳದಿ ಬಣ್ಣದಲ್ಲಿ ಬರುವ ಚೀನಿಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತರ ಅದನ್ನು ಮಿಕ್ಸಿ ಮಾಡ್ಕೊಂಡು ಸಕ್ಕರೆ ಮತ್ತು ಹಾಲು ಇಲ್ಲವೇ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸೋದ್ರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು.
• ಒಂದೆರಡು ಒಣ ಅಡಿಕೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದ್ರ ಡಿಕಾಕ್ಷನ್ ಸೇವಿಸಿ..ನಂತರ ನೀರನ್ನು ತಣಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದು ಕೂಡ ರಕ್ತಸ್ರಾವ ಕಡಿಮೆಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
• ಕೊತ್ತಂಬರಿ ಬೀಜ 20 ಗ್ರಾಂ ಬೀಜವನ್ನು 200ಎಮ್ ಎಲ್ ನಷ್ಟು ನೀರಿನಲ್ಲಿ ಹಾಕಿ ಆ ನೀರು 100 ಎಮ್ ಎಲ್ ಗೆ ಬರುವಷ್ಟು ಕುದಿಸಿ ಡಿಕಾಕ್ಷನ್ ತಯಾರಿಸಿಕೊಂಡು ಕುಡಿಯೋದ್ರಿಂದ ಕೂಡ ಸಮಸ್ಯೆ ನಿವಾರಿಸಿಕೊಳ್ಳಬಹುದು.
• ಬಾಳೆಹೂವನ್ನು ಬೇಯಿಸಿ ಮೊಸರು ಸೇರಿಸಿ ಸೇವಿಸೋದ್ರಿಂದ ಪ್ರೊಜೆಸ್ಟ್ರಾನ್ ಲೆವೆಲ್ ಅಧಿಕವಾಗಿ, ರಕ್ತಸ್ರಾವ ನಿಲ್ಲುವಲ್ಲಿ ಸಹಾಯ ಮಾಡಲಿದೆ.
• ಪ್ರತಿದಿನ ಸ್ವಲ್ಪವೇ ಸ್ವಲ್ಪ ಅಲವೀರಾ ಜಲ್‍ನಿಂದ ಜ್ಯೂಸ್ ತಯಾರಿಸಿಕೊಂಡು ಸೇವಿಸಿದ್ರೆ ಮುಟ್ಟಿನ ದಿನಗಳನ್ನು ಆರಾಮದಾಯಕವಾಗಿ ಕಳೀಬಹುದು.
• ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮ್ಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.
• ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ಹಳದಿ ಬಣ್ಣಕ್ಕೆ ತಿರುಗಿದ ನಂತರ ಬೇಕು ಅನ್ನಿಸಿದರೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ.

ಸಹಜವಾಗಿ ಹೆರಿಗೆ ಮಾಡಿಕೊಳ್ಳಲು ಬೆಸ್ಟ್‌ ಟಿಪ್ಸ್‌ ಇಲ್ಲಿವೆ..

You may also like