Home » ಮಾವಿನ ಹಣ್ಣಿನ ಲಸ್ಸಿ ಮಾಡುವುದು ಹೇಗೆ?

ಮಾವಿನ ಹಣ್ಣಿನ ಲಸ್ಸಿ ಮಾಡುವುದು ಹೇಗೆ?

by manager manager

How to prepare mango lassi in home

ಒಂದು ಮಾವಿನ ಹಣ್ಣಿನಿಂದ ತಯಾರಿಸುವ ಜ್ಯೂಸ್‌ಗೆ ಸಾಮಾನ್ಯವಾಗಿ ಹೊರಗೆ ಕನಿಷ್ಟ ರೂ.40 ಕೊಡಬೇಕು. ಆದರೆ ಅದರ ಜೊತೆಗೆ 20-30 ರೂಪಾಯಿ ಸೇರಿಸಿದರೆ ಒಂದು ಕೆಜಿ ಮಾವಿನ ಹಣ್ಣುಗಳನ್ನೇ ಖರೀದಿಸಬಹುದು. ಹೀಗೆ ಯೋಚಿಸುವವರು ತುಂಬಾ ಜನರು.

ಅಂತಹವರು ಮನೆಯಲ್ಲೇ ಮಾವಿನ ಹಣ್ಣಿನ ಜ್ಯೂಸ್‌ ಮಾಡಬೇಕು ಎಂದುಕೊಂಡಿರುತ್ತಾರೆ. ಅಲ್ಲದೇ ಮಾವಿನ ಹಣ್ಣಿನಿಂದ ಇತರೆ ಯಾವ ರೀತಿಯ ಆಹಾರ ತಯಾರಿಸಬಹುದು ಎಂದು ಯೋಚಿಸುತ್ತಿರುತ್ತಾರೆ. ಅಂತಹವರು ಇಂದಿನ ಲೇಖನದಲ್ಲಿ ಮಾವಿನ ಹಣ್ಣಿನ ಲಸ್ಸಿ(mango lassi) ಮಾಡುವುದು ಹೇಗೆ? ಎಂದು ತಿಳಿಯಿರಿ.

ಬೇಕಾಗುವ ವಸ್ತುಗಳು

1 ಕಪ್ ಮಾವಿನ ಹಣ್ಣಿನ ತಿರುಳು, 1 ದೊಡ್ಡ ಚಮಚದಲ್ಲಿ ಅಗಸೆ ಬೀಜಗಳ ಪುಡಿ, ಚಿಟಕಿ ಅರಿಶಿಣ, ಒಂದು ಚಿಟಕಿ ಕರಿಮೆಣಸು, 1 ದೊಡ್ಡ ಚಮಚ ಕಿತ್ತಳೆ ರಸ, ಒಂದು ಚಿಟಕಿ ಕರಿ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ರುಚಿಗೆ ಬೇಕಾದಷ್ಟು ಮತ್ತು, ಅರ್ಧ ಕಪ್ ಮೊಸರು.

ಮಾವಿನ ಹಣ್ಣಿನ ಲಸ್ಸಿ ಮಾಡುವ ವಿಧಾನ: ಮಾವಿನ ಹಣ್ಣಿನ ತಿರುಳು, ಅಗಸೆ ಬೀಜಗಳ ಪುಡಿ, ಅರಿಸಿನ ಪುಡಿ, ಕರಿಮೆಣಸಿನ ಪುಡಿ, ಕಿತ್ತಳೆ ರಸ, ಜೇನುತುಪ್ಪ, ಕರಿ ಉಪ್ಪು ಎಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಮೊಸರು ಸೇರಿಸಿ ಇನ್ನೊಮ್ಮೆ ಸುತ್ತು ಮಿಕ್ಸಿಯಲ್ಲಿ ರುಬ್ಬಿ. ನಂತರ ಶುದ್ಧವಾದ ಗಾಜಿನ ಲೋಟಗಳಿಗೆ ಹಾಕಿ, ಆಗೋಗ್ಯಕರವಾದ ಪೌಷ್ಠಿಕ ಮಾವಿನ ಹಣ್ಣಿನ ಲಸ್ಸಿ ಸವಿಯಿರಿ.

A mango lassi is basically a yogurt based mango milkshake or smoothie. Here is how to prepare Mango lassi in home.

You may also like