Home » ಕಾಲೇಜು ವಿದ್ಯಾರ್ಥಿಗಳು ಓದಿನೊಂದಿಗೆ ಆನ್‌ಲೈನ್‌ ಮೂಲಕ ಸಂಪಾದನೆ ಮಾಡೋದು ಹೇಗೆ?.. ಇಲ್ಲಿವೆ ಟಿಪ್ಸ್‌..

ಕಾಲೇಜು ವಿದ್ಯಾರ್ಥಿಗಳು ಓದಿನೊಂದಿಗೆ ಆನ್‌ಲೈನ್‌ ಮೂಲಕ ಸಂಪಾದನೆ ಮಾಡೋದು ಹೇಗೆ?.. ಇಲ್ಲಿವೆ ಟಿಪ್ಸ್‌..

by manager manager

ಹಣ ಯಾರಿಗೆ ಬೇಡ, ನಾವು ಮಗುವಾಗಿರುವಾಗಿನಿಂದ ಮಾಗಿ ಹೆಣವಾಗುವವರೆಗೂ ಹಣ ಜೀವನಕ್ಕೆ ಅವಶ್ಯ. ನಮ್ಮಲ್ಲಿ ಒಂದು ಗಾದೆ ಮಾತಿದೆ. ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತಂತೆ’ ಅಂತ. ಸದ್ಯದ ಮಟ್ಟಿಗೆ ಇದು ಶೇಕಡ ನೂರರಷ್ಟು ಸತ್ಯ. ಇದು ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಇನ್ನು ವಿದ್ಯಾರ್ಥಿಗಳ ಕಾಲೇಜು ದಿನಗಳಲ್ಲಿ ಮೋಜು ಮಸ್ತಿ ಜೊತೆಗೆ ನಾವು ಸ್ವಾವಲಂಬಿಯಾಗಬೇಕೆಂಬ ತುಡಿತ ಹೆಚ್ಚಿರುತ್ತದೆ. ಅಂಥವರಿಗೆ ಈ ಲೇಖನ ದುಡ್ಡಿನ ಅಕ್ಷಯ ಪಾತ್ರೆಯ ದಾರಿ ತೊರದಿದ್ದರು, ಸ್ವಲ್ಪ ಮಟ್ಟಿಗೆ ನಮ್ಮ ಖರ್ಚಿಗೆ ಆಗುವಷ್ಟು ಹಣ ಸಂಪಾದಿಸಲು ಉತ್ತಮ ಸಲಹೆ ನೀಡುತ್ತದೆ.

ಓದಿನ ಜೊತೆ ಜೊತೆಗೆ ಹಣಗಳಿಸೋದು ಹೇಗೆ?
ನಮ್ಮದು ಇಂಟರ್ನೆಟ್ ಪ್ರಪಂಚ. ಕೈ ಬೆರಳಲ್ಲಿ ಜಗತ್ತು ಸುತ್ತಿಸೋ ಮೊಬೈಲ್ ಆಯಾಶವಿಲ್ಲದೆ ಹಣ ಮಾಡೋ ಸಾಧನವು ಹೌದು. ಓದಿಕೊಂಡು ಬಿಡುವಿನ ಸಮಯದಲ್ಲಿ ಮೊಬೈಲ್ ಮೂಲಕ ಕೆಲವು ಆ್ಯಪ್ ವೆಬ್ ಸೈಟ್ ಗಳಲ್ಲಿ ನೀಡಿದ ಸವಾಲುಗಳನ್ನು ಪೂರೈಸಿದ ನಂತರ ನಮಗೊಂದಿಷ್ಟು ಪಾಯಿಟ್ಸ್ ನೀಡುತ್ತಾರೆ. ಅವುಗಳನ್ನು ನಾವು ಇತರೆ ಶಾಪಿಂಗ್ ಅಥವಾ ಸರ್ವೀಸ್ ಆ್ಯಪ್ಸ್ ಗಳಲ್ಲಿ ಕೂಪನ್‌ಗಳಾಗಿ ಬಳಸಬಹುದು.

ಹಾಗಾದರೆ ಯಾವೆಲ್ಲ ಆ್ಯಪ್ ನಮಗೆ ಹಣ ಗಳಿಸಲು ಅನುವು ಮಾಡಿಕೊಡುತ್ತವೆ?
Freecash, Canvera, Toluna, Fronto, Notesgen, Jobspotter, Pocket Bounty, Google Opinion Rewards, Survey Junkie, Swagbucks, Receipt Hog, Ibotta, Bookscouter ಇತ್ಯಾದಿ. ಇವುಗಳಲ್ಲಿ ಕೆಲವು ಉತ್ಪನ್ನಗಳ ಜಾಹೀರಾತು ವಿಡಿಯೋ ವೀಕ್ಷಣೆ, ಆನ್ಲೈನ್ ಸರ್ವೇ, ಶೈಕ್ಷಣಿಕ ವಿಷಯವಾಗಿ ಸಂಬಂಧಪಟ್ಟ ವಿಷಯಕ್ಕೆ ನೋಟ್ಸ್ ಬರೆದು ಅಪ್ಲೋಡ್ ಮಾಡುವುದು ಮತ್ತು ದಿನಸಿ ಅಂಗಡಿ, ಮೆಡಿಕಲ್ ಮತ್ತು ಬ್ಯೂಟಿ ಪಾರ್ಲರ್ಗಳ ರೆಸಿಪ್ಟ್ ಅಪ್ಲೋಡ್ ಮಾಡುವ ಕೆಲಸ ನೀಡುತ್ತಾರೆ. ವೆಬ್ ಸೈಟ್ ಅಥವಾ ಆ್ಯಪ್ ನ ನಿಯಮಕ್ಕೆ ಅನುಗುಣವಾಗಿ ಇವುಗಳಿಂದ ಕುಳಿತಲ್ಲೇ ಹಣ ಪಡೆಯಬಹುದು. ಆದರೆ ನೆನಪಿರಲಿ ಇಲ್ಲಿ ಸಿಗುವ ಹಣ ನೇರವಾಗಿ ಬಳಸಲು ಸಿಗದು. ಇದು ಡಿಜಿಟಲ್ ಕರೆನ್ಸಿ / ಪಾಯಿಂಟ್ಸ್/ ಗಿಫ್ಟ್ ಕೂಪನ್ಗಳ ಮಾದರಿಯಲ್ಲಿ ಸಿಗುತ್ತವೆ. ಇವುಗಳನ್ನು ನೀವು ಅವುಗಳು ಮಾನ್ಯವಿರುವ ವೆಬ್ ಸೈಟ್/ಆ್ಯಪ್ಗಳಲ್ಲಿ ಬಳಸಬಹುದು
ಉದಾಹರಣೆಗೆ – Amazon, Google Play, Netflix, Spotify, Zalando, Play Station, ಮತ್ತು Xbox.

ಈ ಆ್ಯಪ್ ಗಳ/ವೆಬ್ ಸೈಟ್ಗಳ ಮೂಲಕ ಹಣ ಗಳಿಸೋದು ಹೇಗೆ?
ನೀವು ವಿದ್ಯಾರ್ಥಿಯಾಗಿ ಹಣವನ್ನು ಗಳಿಸಲು ಹಲವಾರು ಮಾರ್ಗಗಳಿವೆ. ಅದಕ್ಕೆ ಪಾರ್ಟ್ ಟೈಮ್ ಜಾಬ್ ಸೇರಬೇಕಂತೇನಿಲ್ಲ. ಆದರೆ ಬ್ಲಾಗಿಂಗ್, ಯೂಟ್ಯೂಬ್‌ಗೆ ವೀಡಿಯೋಗಳನ್ನು ಪೋಸ್ಟ್ ಮಾಡುವುದು, ಆನ್‌ಲೈನ್ ಟ್ಯೂಟರಿಂಗ್, ಡೇಟಾ ಎಂಟ್ರಿ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಅಪ್ಲೋಡ್ ಮಾಡುವುದು ಮತ್ತು ಆನ್‌ಲೈನ್ ಮಾರಾಟ ಗಳ ಮೂಲಕ ನೀವು ಹಣವನ್ನು ಗಳಿಸಬಹುದು. ಇವು ವಿದ್ಯಾರ್ಥಿಯು ತನ್ನ ಓದಿನೊಂದಿಗೆ ಮಾಡಬಹುದಾದ ಕೆಲಸಗಳೇ. ಈ ಎಲ್ಲ ಆ್ಯಪ್/ವೆಬ್ ಸೈಟ್ಗಳನ್ನು ಬಳಸುವ ಮುನ್ನ ಅವುಗಳ ನಿಯಮ ಮತ್ತು ಅವು ಪೇ ಮಾಡೋ ವಿಧಾನದ ಬಗ್ಗೆ ತಿಳಿದುಕೊಂಡು ಬಳಸುವುದು ಒಳ್ಳೆಯದು.

You may also like