Home » ಗರ್ಭಧಾರಣೆಯನ್ನು ನಿಲ್ಲಿಸುವುದು ಹೇಗೆ ? ಇದರಿಂದ ಭವಿಷ್ಯದಲ್ಲಿ ತೊಂದರೆಗಳಿವೆಯೇ?

ಗರ್ಭಧಾರಣೆಯನ್ನು ನಿಲ್ಲಿಸುವುದು ಹೇಗೆ ? ಇದರಿಂದ ಭವಿಷ್ಯದಲ್ಲಿ ತೊಂದರೆಗಳಿವೆಯೇ?

by manager manager

pregnancy remove tips in kannada

ಇಂದಿನ ಭಾರತದಲ್ಲಿ ನಾನಾ ಕಾರಣಗಳಿಗೆ ಗರ್ಭಧಾರಣೆಯನ್ನು ಹೊಂದಲೂ ಸ್ತೀಯರು ಗಮನಕೊಡುವುದಿಲ್ಲ. ಅದರಂತೆ ಗರ್ಭಧಾರಣೆ ಎನ್ನುವುದು ತೀರಾ ವೈಯಕ್ತಿಕ ವಿಚಾರ, ನಾವು ಮಾತಾಡುವುದು ಬೇಡ ಆದರೂ ಅದರ ಬಗ್ಗೆ ನಮಗೆ ತಿಳಿದಿರುವ ಮಾಹಿತಿಯನ್ನು ಇಲ್ಲಿ ಹೇಳಲು ಬಯಸುತ್ತೇವೆ. ಯಾವಾಗ ಮಗು ಬೇಕು ಯಾವಾಗ ಬೇಡ ಎನ್ನುವುದನ್ನು ನಿರ್ಧರಿಸುವುದು ಅವರವರ ಆಯ್ಕೆ. ಕಾಂಡೋಮ್ ಗಳಿಂದ ಹಿಡಿದು ಗರ್ಭನಿರೋಧಕ ಮಾತ್ರೆಗಳವರೆಗೆ, ವೈದ್ಯಕೀಯ ವಿಜ್ಞಾನವು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಮತ್ತು ಅನಗತ್ಯ ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುವ ಬಹಳಷ್ಟು ವಿಷಯಗಳನ್ನು ನಮಗೆ ನೀಡಿದೆ. ನಿಮ್ಮ ಅಸುರಕ್ಷಿತ ದಿನಗಳಲ್ಲಿ ರಕ್ಷಣೆಯಿಲ್ಲದೆ ಲೈಂಗಿಕ ಕ್ರಿಯೆಯನ್ನು ನಡೆಸಿದ್ದರೆ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಮತ್ತು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತಡೆಗಟ್ಟಬಹುದು. ಆದರೆ ಈ ಗರ್ಭನಿರೋಧಕ ಮಾತ್ರೆಗಳು ಎಷ್ಟು ಹಾನಿಕಾರಕವೆಂದು ನಮಗೆಲ್ಲರಿಗೂ ತಿಳಿದೇ ಇದೆ. ಮಹಿಳೆಯ ನೈಸರ್ಗಿಕ ಸಂತಾನೋತ್ಪತ್ತಿ ಚಕ್ರದಲ್ಲಿ ಈ ಮಾತ್ರೆಗಳು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಅನಿಯಮಿತ ಮುಟ್ಟು, ಬಿಳಿ ಸೆರಗು, ವಾಕರಿಕೆ, ತಲೆನೋವು, ಮನಸ್ಥಿತಿ ಬದಲಾವಣೆಗಳು, ಯೋನಿ ಡಿಸ್ಚಾರ್ಜ್, ತೂಕ ಹೆಚ್ಚಾಗುವುದು ಮತ್ತು ಇನ್ನೂ ಅನೇಕ ವಿಷಯಗಳಂತಹ ಅಡ್ಡಪರಿಣಾಮಗಳನ್ನು ಅವು ಹೊಂದಿರುವ ಸಾಧ್ಯತೆಗಳಿರುತ್ತವೆ.

ಗರ್ಭಧಾರಣೆಯನ್ನು ತಡೆಯಲು ಕೆಲವು ಸರಳ ವಿಧಾನಗಳಿವೆ. ಅವುಗಳೆಂದರೇ :

– ವೀರ್ಯವನ್ನು ಹೊರಚೆಲ್ಲುವ ವಿಧಾನ ಒಂದು ಹೊಸ ಅಧ್ಯಯನದ ಪ್ರಕಾರ 3276 ಅಮೆರಿಕಾದ ಮಹಿಳೆಯರು ತಮಗೆ ಬೇಡದ ಗರ್ಭವನ್ನು ವೀರ್ಯ ಹೊರಚೆಲ್ಲುವ ವಿಧಾನದಿಂದ ತಡೆಯುತ್ತಾರಂತೆ. ವೀರ್ಯ ಸ್ಖಲನವಾಗುವ ಸಂದರ್ಭದಲ್ಲಿ ಅದನ್ನು ಹೊರಗೆ ಚೆಲ್ಲುವ ಮೂಲಕ ಇದನ್ನು ಇವರು ಸಾಧಿಸುತ್ತಾರೆ. ಇದು ಸ್ವಲ್ಪ ಅಪಾಯಕಾರಿಯಾದರು, ಸುರಕ್ಷಿತವಾದ ವಿಧಾನ, ಇದರ ಒಂದೇ ಒಂದು ಅಡ್ಡಪರಿಣಾಮ ಅಪ್ಪಿ-ತಪ್ಪಿದರೆ ಗರ್ಭಧರಿಸಬಹುದು ಅಷ್ಟೇ!

– ಸ್ತ್ರೀಯರ ಕಾಂಡೋಮ್‌ಗಳು ಹಲವರಿಗೆ ಇದೆ ಎಂಬುದೇ ತಿಳಿದಿಲ್ಲ. ಗಂಡಸರು ಮಿಲನದಲ್ಲಿ ಪಾಲ್ಗೊಂಡಾಗ ಇದನ್ನು ಧರಿಸಿದರೆ, ಹೆಂಗಸರು ಇದನ್ನು ಮಿಲನಕ್ಕೆ ಮೊದಲೆ ಎಂಟುಗಂಟೆಗಳ ಮೊದಲೇ ಬೇಕಾದರೂ ಧರಿಸಬಹುದು. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಇದು ಹೆಂಗಸರಿಗೆ ಹೇಳಿ ಮಾಡಿಸಿದ ಕಾಂಡೋಮ್ ಆಗಿರುತ್ತದೆ.

– ಗರ್ಭನಿರೋಧಕ ಮಾತ್ರೆಗಳು ಹೆಂಗಸರಿಗೆ ಗರ್ಭವನ್ನು ತಡೆಯಲು ಇರುವ ಮಾರ್ಗಗಳಲ್ಲಿ ಒಂದಾಗಿದೆ. ಕೆಲವೊಂದು ಮಾತ್ರೆಗಳು, ಸ್ತ್ರೀಯರು ಅಪ್ಪಿ-ತಪ್ಪಿ ಮಿಲನದಲ್ಲಿ ಪಾಲ್ಗೊಂಡ ನಂತರ ಸಹ ಸೇವಿಸಬಹುದು. ಆದರೆ ಇದು ಅವರ ಆರೋಗ್ಯಕ್ಕೆ ಪೂರಕವಲ್ಲ. ಅವರಿಗೆ ಇದನ್ನು ಸೇವಿಸುವುದರಿಂದ ತಲೆನೋವು, ಋತು ಚಕ್ರದ ಏರು-ಪೇರು, ನಾಸಿಯಾ, ಸ್ತನ ಊದಿಕೊಳ್ಳುವಿಕೆ, ಅಧಿಕ ತೂಕ, ಮೂಡ್ ಬದಲಾವಣೆ, ಮಿಲನಾಸಕ್ತಿಯ ಕೊರತೆ, ಯೋನಿ ಸ್ರಾವ ಇತ್ಯಾದಿ ಕಾಣಿಸಿಕೊಳ್ಳುತ್ತದೆ.

– ಲ್ಯೂಬ್ರಿಕೆಂಟ್ ಸಹ ಗರ್ಭಧಾರಣೆಯನ್ನು ತಡೆಯುತ್ತವೆ. ಒಂದು ವೇಳೆ ನೀವು ವಾಟರ್-ಬೇಸ್‌ಡ್ ಲೂಬ್ರಿಕೆಂಟ್ ಬಳಸುತ್ತಿದ್ದಲ್ಲಿ, ಅದರಿಂದ ಸಹ ಗರ್ಭಧಾರಣೆಯನ್ನು ತಡೆಯಬಹುದು. ಇವುಗಳಲ್ಲಿರುವ ರಾಸಾಯನಿಕಗಳು ವೀರ್ಯವನ್ನು ತತ್‌ಕ್ಷಣದಲ್ಲಿ ಕೊಲ್ಲುತ್ತವೆ. ಇದನ್ನು ಸಹ ಮಹಿಳೆಯರು ಗರ್ಭನಿರೋಧಕ ಮಾರ್ಗವಾಗಿ ಬಳಸಬಹುದು.

– ಸುರಕ್ಷಿತ ಅವಧಿ ಸಾಮಾನ್ಯವಾಗಿ ಆರೋಗ್ಯಕರವಾಗಿರುವ ಮತ್ತು ಸರಿಯಾದ ಋತುಚಕ್ರದ ಅವಧಿಯನ್ನು ಹೊಂದಿರುವ ಮಹಿಳೆಯರು ಒಂದು ತಿಂಗಳಿನಲ್ಲಿ ಆರು ದಿನಗಳ ಸುರಕ್ಷಿತವಾದ ಅವಧಿಯನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ಮಿಲನ ಮಾಡುವುದರಿಂದ ಅಥವಾ ಆ ಅವಧಿಯಲ್ಲಿ ಗರ್ಭ ನಿರೋಧಕಗಳನ್ನು ಬಳಸದೆ ಮಿಲನ ಮಾಡುವುದರಿಂದ, ಗರ್ಭಧರಿಸುವ ಅಪಾಯ ಇರುವುದಿಲ್ಲ. ಆದರೂ ಇದು ಅಷ್ಟೊಂದು ಸುರಕ್ಷಿತವಲ್ಲ ಎಂಬುದು ಹಲವರ ಅಭಿಪ್ರಾಯ.

ಗರ್ಭಧಾರಣೆಯನ್ನು ತಡೆಯಲು ಸುರಕ್ಷಿತ ಆಯುರ್ವೇದ ಸಲಹೆಗಳೆಂದರೇ :

– ಕಲ್ಲುಪ್ಪು ಲೈಂಗಿಕ ಸಮಯದಲ್ಲಿ ನಿಮ್ಮ ಯೋನಿಯಲ್ಲಿ ತಲುಪಿದ ವೀರ್ಯವನ್ನು ಕೊಲ್ಲುವ ಮೂಲಕ ಗರ್ಭಧಾರಣೆಯನ್ನು ತಪ್ಪಿಸಬಹುದು. ಇಲ್ಲಿ ತಿಳಿಸುವ ವಿಧಾನವು ಹಾಗೆ ಮಾಡಲು ಸಹಾಯ ಮಾಡುತ್ತದೆ. 500 ಮಿಲಿ ನೀರನ್ನು 50 ಗ್ರಾಂ ಕಲ್ಲು ಉಪ್ಪಿನೊಂದಿಗೆ ಕುದಿಸಿ ಮತ್ತು ಅದನ್ನು ಹದಗೊಳ್ಳಲು ಬಿಡಿ. ಸಂಭೋಗದ ನಂತರ, 5 ನಿಮಿಷಗಳಲ್ಲಿ ನಿಮ್ಮ ಯೋನಿಯನ್ನು ಈ ಮಿಶ್ರಣದಿಂದ ತೊಳೆಯುವುದರಿಂದ ಇದು ವೀರ್ಯವನ್ನು ಕೊಲ್ಲಲು ಸಹಾಯ ಮಾಡುತ್ತದೆ.

– ದಾಸವಾಳದ ಹೂವು ತಾಜಾ ದಾಸವಾಳದ ಹೂವು ಮತ್ತು ಪಿಷ್ಟದ ಪೇಸ್ಟ್ ತಯಾರಿಸಿ. ಗರ್ಭನಿರೋಧಕವಾಗಿ ಬಳಸಲು ನಿಮ್ಮ ಋತುಚಕ್ರದ ಮೊದಲ 3 ದಿನಗಳವರೆಗೆ ಈ ಪೇಸ್ಟ್ ಅನ್ನು ತೆಗೆದುಕೊಳ್ಳಿ ಇದರಿಂದ ನೀವು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತಪ್ಪಿಸಬಹುದು.

– ಹರಳೆಣ್ಣೆ ಬೀಜ ತಾಜಾ ಹರಳೆಣ್ಣೆ ಬೀಜ (ಕೆಂಪು ಹೊದಿಕೆ ಇರುವ ಬೀಜ) ಗಳೊಳಗಿನ ಬಿಳಿ ಬೀಜವು ನೀವು ಮಾರುಕಟ್ಟೆಯಲ್ಲಿ ಪಡೆಯುವ ಗರ್ಭನಿರೋಧಕ ಮಾತ್ರೆಗಳಂತೆ ಕೆಲಸ ಮಾಡುತ್ತದೆ. ಈ ಬೀಜಗಳಲ್ಲಿ ಯಾವುದಾದರೂ 1 ಬೀಜಗಳನ್ನು ತೆಗೆದುಕೊಂಡು ನಿಮ್ಮ ಲೈಂಗಿಕಾವಧಿ ಮುಗಿದ 72 ಗಂಟೆಗಳ ಒಳಗೆ ಸೇವಿಸಿ. ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಋತುಚಕ್ರದ ಅವಧಿಯ 3 ದಿನಗಳಲ್ಲಿ ನೀವು ತಲಾ 3 ಬೀಜಗಳನ್ನು ಸೇವಿಸಿ ಮತ್ತು ಇದು 1 ತಿಂಗಳವರೆಗೆ ನೈಸರ್ಗಿಕ ಗರ್ಭನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

– ಕಲ್ಲುಪ್ಪು ಮತ್ತು ಎಳ್ಳೆಣ್ಣೆ ನೀವು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತೊಡೆದುಹಾಕಲು ಬಯಸಿದರೆ ನೀವು ಈ ಆಯುರ್ವೇದ ಸಲಹೆಯನ್ನು ಪ್ರಯತ್ನಿಸಲೇಬೇಕು. ಲೈಂಗಿಕತೆಯ ನಂತರ 2-5 ನಿಮಿಷಗಳಲ್ಲಿ ಎಳ್ಳೆಣ್ಣೆಯಲ್ಲಿ ತುಂಡು ಕಲ್ಲುಪ್ಪನ್ನು ಅದ್ದಿ ಯೋನಿಯ ಒಳಗಿಡಿ. ಇದು ವೀರ್ಯವು ಗರ್ಭವನ್ನು ತಲುಪದಿರಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಮಿಶ್ರಣವನ್ನು ಅದ್ದಿದ ಹತ್ತಿಯ ತುಂಡನ್ನು ಸುಮಾರು 100 ಸೆಕೆಂಡುಗಳ ಕಾಲ ಯೋನಿಯೊಳಗಿಡಿ.

– ಒಣ ಪುದೀನ ಎಲೆಗಳು ಗರ್ಭಧಾರಣೆಯನ್ನು ತಪ್ಪಿಸಲು ಸಂಭೋಗದ ನಂತರ ನೀವು ಈ ನೈಸರ್ಗಿಕ ಗರ್ಭನಿರೋಧಕ ವಿಧಾನವನ್ನು ಪ್ರಯತ್ನಿಸಬಹುದು. ಒಣ ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಸಂಗ್ರಹಿಸಿಡಿ. ನೀವು ಸಂಭೋಗಿಸಿದ ನಂತರ, ಸ್ವಲ್ಪ ನೀರು ಕುದಿಸಿ ಮತ್ತು 1 ಚಮಚ ಒಣ ಪುದೀನ ಪುಡಿಯನ್ನು ಬೆರೆಸಿ ತಕ್ಷಣ ಕುಡಿಯಿರಿ.

ಕ್ಯಾನ್ಸರ್‌’ನ ಲಕ್ಷಣಗಳೇನು? ತಲೆ, ಕುತ್ತಿಗೆ ಕ್ಯಾನ್ಸರ್ ನಿರ್ಲಕ್ಷ್ಯ ಮಾಡಿದರೇ ಏನೆಲ್ಲಾ ಅಪಾಯಗಳಿವೆ ಗೊತ್ತೇ?

You may also like