Home » Cancer: ಕ್ಯಾನ್ಸರ್‌’ನ ಲಕ್ಷಣಗಳೇನು? ತಲೆ, ಕುತ್ತಿಗೆ ಕ್ಯಾನ್ಸರ್ ನಿರ್ಲಕ್ಷ್ಯ ಮಾಡಿದರೇ ಏನೆಲ್ಲಾ ಅಪಾಯಗಳಿವೆ ಗೊತ್ತೇ?

Cancer: ಕ್ಯಾನ್ಸರ್‌’ನ ಲಕ್ಷಣಗಳೇನು? ತಲೆ, ಕುತ್ತಿಗೆ ಕ್ಯಾನ್ಸರ್ ನಿರ್ಲಕ್ಷ್ಯ ಮಾಡಿದರೇ ಏನೆಲ್ಲಾ ಅಪಾಯಗಳಿವೆ ಗೊತ್ತೇ?

by manager manager

Cancer Symptoms :

ಕ್ಯಾನ್ಸರ್ ಎಂದತಕ್ಷಣ ನಮಗೆ ಜೀವ ಬಾಯಿಗೆ ಬಂದಂತಾಗುತ್ತದೆ. ಕಾರಣ ಇದರ ವಿಶ್ವ ಸ್ವರೂಪ. ಕ್ಯಾನ್ಸರ್ ಎಂಬುದು ಗುಣವೇ ಆಗದ ಕಾಯಿಲೆ ಎಂದು ಈ ಹಿಂದೆ ಭಯ ಪಡುತ್ತ ಇದ್ದದ್ದುಂಟು. ಆದರೇ ಇಂದು ನಾವು ನಾನಾ ರೀತಿಯ ಕ್ಯಾನ್ಸರ್‍ಗಳಿಗೆ ಮದ್ದನ್ನು ಕಂಡುಹಿಡಿದು ಸಂಪೂರ್ಣವಾಗಿ ಗುಣಪಡಿಸುವ ಕೆಲವು ರೀತಿಯ ಕ್ಯಾನ್ಸರ್‍ಗಳು ಹಾಗೂ ಇನ್ನು ಔಷಧಿಗಳನ್ನು ಕಂಡುಹಿಡಿಯಲಾಗುತ್ತಿರುವ ಕ್ಯಾನ್ಸರ್‍ಗಳು ನಮ್ಮ ಮಧ್ಯ ಇದೆ. ಕ್ಯಾನ್ಸರ್ ನಲ್ಲಿ ಕೂಡ ಹಲವಾರು ವಿಧಗಳು ಇವೆ. ಇದರಲ್ಲಿ ಒಂದು ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ತಲೆ ಕ್ಯಾನ್ಸರ್, ಕುತ್ತಿಗೆ ಕ್ಯಾನ್ಸರ್ ಇನ್ನು ಹಲವು ರೀತಿಯ ಕ್ಯಾನ್ಸರ್‍ಗಳಿವೇ.

ಕ್ಯಾನ್ಸರ್ ಕೋಶಗಳು ಬೆಳೆಯುತ್ತಿರುವಂತೆ ಅದು ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯಕ್ಕಿಂತ ಕಡಿಮೆ ರಕ್ತ ಕಣಗಳನ್ನು ಹೊಂದಿರುವುದು ರಕ್ತ ಕ್ಯಾನ್ಸರ್ ನ ಲಕ್ಷಣಗಳಲ್ಲಿ ಒಂದು.

ಬಿಳಿ ರಕ್ತದ ಕಣಗಳು ಕಡಿಮೆ ಇರುವುದನ್ನು ನ್ಯೂಟ್ರೋಪೆನಿಯಾ ಎಂದು ಕರೆಯುವರು ಮತ್ತು ಪ್ಲೇಟ್ಲೆಟ್ ಗಳು ಕಡಿಮೆ ಇದ್ದರೆ ಆಗ ಥ್ರಂಬೋಸೈಟೋಪೆನಿಯಾ ಕಾಣಿಸುವುದು. ಎಲ್ಲಾ ಮೂರು ರಕ್ತ ಕಣಗಳು ಕಡಿಮೆ ಇದ್ದರೆ ಆಗ ಇದನ್ನು ಪ್ಯಾನ್ಸಿಟೊಪೆನಿಯಾ ಎಂದು ಕರೆಯಲಾಗುತ್ತದೆ.

ಕೆಂಪು ರಕ್ತ ಕಣಗಳು ಕಡಿಮೆ ಇರುವ ಕೆಲವು ಲಕ್ಷಣಗಳು :

– ನಿಶ್ಯಕ್ತಿಯಿಂದ ಇರುವುದು.

– ಪೇಲವ ಚರ್ಮವನ್ನು ಹೊಂದಿರುವುದು.

– ಉಸಿರಾಟದ ತೊಂದರೆ ಇರುವುದು.

– ತಲೆನೋವು.

– ಕೈ ಅಥವಾ ಪಾದಗಳು ತಣ್ಣಗಾಗುವುದು.

– ವೇಗ ಮತ್ತು ಅನಿಯಮಿತ ಎದೆಬಡಿತ.

– ಎದೆ ನೋವು

ಬಿಳಿ ರಕ್ತ ಕಣಗಳು ಕಡಿಮೆ ಇರುವ ಕೆಲವು ಲಕ್ಷಣಗಳು :

– ಸೋಂಕು.

– ಬೆವರುವುದು.

– ನಿಶ್ಯಕ್ತಿ.

– ಪದೇ ಪದೇ ಸೋಂಕು ಕಾಡುವುದು ಅಥವಾ ಸೋಂಕು ಹೋಗದೆ ಇರುವುದು.

– ಯಾವುದೇ ಕಾರಣವಿಲ್ಲದೆ ಜ್ವರ ಬರುವುದು.

– ಚಳಿ ಮತ್ತು ಬೆವರುವುದು.

– ಬಾಯಿಯಲ್ಲಿ ಹುಣ್ಣುಗಳಾಗುವುದು.

– ಗಂಟಲಿನ ಊತ.

– ಚರ್ಮದಲ್ಲಿ ಹುಣ್ಣುಗಳು

ವಿಶ್ವದಲ್ಲಿ ಐದನೇ ಸ್ಥಾನದಲ್ಲಿ ಇರುವಂತಹ ಕ್ಯಾನ್ಸರ್ ಎಂದರೆ ಅದು ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್. ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯು ಅಧಿಕವಾಗಿ ಕಂಡುಬರುವಂತಹ ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿದೆ. ಭಾರತದಲ್ಲಿ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಗಿಂತ ಹೆಚ್ಚಾಗಿ ಬಾಯಿ ಮತ್ತು ನಾಲಗೆಯ ಕ್ಯಾನ್ಸರ್ ಅಧಿಕವಾಗಿ ಕಂಡುಬರುತ್ತಿದೆ. ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಮಹಿಳೆಯರಿಗಿಂತ ಹೆಚ್ಚು ಪುರುಷರನ್ನು ಕಾಡುತ್ತಿದೆ. ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ನ ಶೇ.57.5ರಷ್ಟು ಏಷ್ಯದಲ್ಲಿ ಅದರಲ್ಲೂ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂಧು ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ ಸುಮಾರು ಎರಡು ಲಕ್ಷದಷ್ಟು ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಕಾನಿಸಿಕೊಂಡಿದೆ. ಅದರಲ್ಲೂ ಪುರುಷರಲ್ಲಿ ಶೇ.30ರಷ್ಟು ಈ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮಹಿಳೆಯರಲ್ಲಿ ಇದರ ಪ್ರಮಾಣವು ಶೇ.11-16ರಷ್ಟು ಮಾತ್ರ ಇದೆ.ಕ್ಯಾನ್ಸರ್ ಎಂದ ಕೂಡಲೇ ಭೀತಿಗೊಳಗಾಗುವುದು ಸಹಜ. ಯಾಕೆಂದರೆ ಇದು ಹಾಗೆ ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಮಹಾಮಾರಿ. ಕೆಲವು ಸಂದರ್ಭದಲ್ಲಿ ಆರಂಭದಲ್ಲೇ ಇದರ ಲಕ್ಷಣ ಕಂಡುಬಂದರೆ ಆಗ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಲಕ್ಷಣಗಳು ತಿಳಿಯದೆ ಕೊನೇ ಹಂತಕ್ಕೆ ತಲುಪಿದರೆ ಆಗ ಖಂಡಿತವಾಗಿಯೂ ಇದು ಪ್ರಾಣಕ್ಕೆ ಹಾನಿ ಉಂಟು ಮಾಡುವುದು.

ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳು :

– ತಂಬಾಕು ಸೇವನೆ ಇದು ಧೂಮಪಾನ ಅಥವಾ ಬೇರೆ ರೀತಿಯಲ್ಲಿ ತಂಬಾಕು ಸೇವನೆಯಿಂದ ಆಗಿರಬಹುದು. ತಂಬಾಕಿನಿಂದಾಗಿ ಕ್ಯಾನ್ಸರ್ ಬರುವುದಕ್ಕೆ ಅನುವಂಶೀಯವಾಗಿಯೂ ಕೆಲವು ಸಾಕ್ಷ್ಯಗಳಿವೆ.

– ಆಲ್ಕೋಹಾಲ್ ಸೇವನೆ ಸಹ ಕ್ರಿಯೆಯ ಪರಿಣಾಮ ಬೀರುವುದು.

– ಹ್ಯೂಮನ್ ಪ್ಯಾಪಿಲೋಮ ವೈರಸ್(ಎಚ್ ಪಿವಿ). ಇದರಿಂದಾಗಿ ಬರುವಂತಹ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಟಾನ್ಸಿಲ್ ಮತ್ತು ನಾಲಗೆಯ ಬುಡದಲ್ಲಿ ಕಾಣಿಸಿಕೊಳ್ಳುವುದು. ವಿಕಿರಣಕ್ಕೆ ಒಗ್ಗಿಕೊಳ್ಳುವುದು, ಎಲೆಅಡಕೆ ಸೇವನೆ, ವಿಟಮಿನ್ ಗಳ ಕೊರತೆ, ಬಾಯಿಯ ಕಾಯಿಲೆ ಇತ್ಯಾದಿಗಳು

ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‍ನ ಪ್ರಮುಖ ಲಕ್ಷಣಗಳು :

– ಬಾಯಿ ಊತ ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗುವುದು.

– ಗಂಟಲು ಊತವಾಗಿ ನುಂಗಲು ಕಷ್ಟವಾಗುವುದು.

– ಧ್ವನಿ ಗಡುಸಾಗುವುದು.

– ಕೆಮ್ಮು ಮತ್ತು ಕಫದಲ್ಲಿ ರಕ್ತಸ್ರಾವವಾಗುವುದು.

– ಕುತ್ತಿಗೆಯಲ್ಲಿ ಗಡ್ಡೆ, ಕಿವಿ ನೋವು, ಕಿವಿ ಕೇಳದೇ ಇರುವುದು ಮತ್ತು ಕಿವಿಯಲ್ಲಿ ಬಡಿದಂತೆ ಆಗುವುದು.

ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‍ನಿಂದಾಗುವ ಅಪಾಯಗಳನ್ನು ಸ್ವಲ್ಪ ಮಟ್ಟಿಗೆ ತಡೆಯುವುದಾದರೆ :

– ತಂಬಾಕು ಮತ್ತು ಧೂಮಪಾನ ತ್ಯಜಿಸುವುದು.

– ಆಲ್ಕೋಹಾಲ್ ಸೇವನೆ ಪ್ರಮಾಣ ಕಡಿಮೆ ಮಾಡುವುದು.

– ಮರಿಜುನಾ ಬಳಕೆ ನಿಲ್ಲಿಸುವುದು.

– ಲಿಪ್ ಮಲಾಮ್ ಸಹಿತ ಸನ್ ಸ್ಕ್ರಿನ್ ನ್ನು ಸರಿಯಾಗಿ ಬಳಕೆ ಮಾಡುವುದು.

– ಲೈಂಗಿಕ ಸಂಗಾತಿಗಳನ್ನು ಕಡಿಮೆ ಮಾಡಿ. ಸುರಕ್ಷಿತವಾಗಿ ಮುಂದುವರೆಯಿರಿ.

ಮೂತ್ರಕೋಶ ನೋವಿಗೆ, ಉರಿಮೂತ್ರಕ್ಕೆ ಕಾರಣಗಳೇನು? ಪರಿಹಾರಗಳೇನು?