Home » ಬೇರು ಹಲಸು ಬಗ್ಗೆ ನಿಮಗೆಷ್ಟು ಗೊತ್ತು? ಒಮ್ಮೆ ತಿಳಿಯಿರಿ.. ನಂತರ ತಿನ್ನಿರಿ

ಬೇರು ಹಲಸು ಬಗ್ಗೆ ನಿಮಗೆಷ್ಟು ಗೊತ್ತು? ಒಮ್ಮೆ ತಿಳಿಯಿರಿ.. ನಂತರ ತಿನ್ನಿರಿ

by manager manager
health benefits of Breadfruit Breadfruit has more nutrisions than Jackfruits 1

ಕರ್ನಾಟಕದಲ್ಲಿ ಮಲೆನಾಡಿನ ಭಾಗದ ಜನರ ನಿತ್ಯ ಆಹಾರದಲ್ಲಿ ತನ್ನದೇ ಆದ ಸ್ಥಾನವನ್ನು ಈ ಬೇರು ಹಲಸು (Breadfruit) ಪಡೆದಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು ಪ್ರದೇಶಗಳಲ್ಲಿಯೂ ಬೆಳೆಯುತ್ತಾರೆ. ಬೇರು ಹಲಸನ್ನು ಜೀಹುಜೆ ಅಥವಾ ಬ್ರೆಡ್‌ಫ್ರೂಟ್ ಎಂದು ಸಹ ಈ ತರಕಾರಿಯನ್ನು ಕರೆಯುತ್ತಾರೆ.

ಹಲಸಿಗಿಂತ ಸಣ್ಣದಾದರು ಬೇರು ಹಲಸು (Breadfruit) ಹಳ್ಳಿ ಮಕ್ಕಳಿಗೆ ಬಲು ಅಚ್ಚುಮೆಚ್ಚು. ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಉಪಯೋಗಿಸುವ ಈ ಬೇರು ಹಲಸು ಪೌಷ್ಠಿಕಾಂಶಗಳ ಆಗರವನ್ನೇ ಹೊಂದಿದೆ. ಆದರೆ ಬಹುಸಂಖ್ಯಾತರಿಗೆ ಬೇರು ಹಲಸಿನ ಆರೋಗ್ಯಕರ ಅನುಕೂಲಗಳ ಬಗ್ಗೆ ಗೊತ್ತೇ ಇಲ್ಲ.

ಈ ಲೇಖನದಲ್ಲಿ ಬೇರು ಹಲಸಿನ (Breadfruit) ಅನುಕೂಲಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಮುಪ್ಪಿನಿಂದ ಮುಕ್ತಿ : ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹಕ್ಕಾಗುವ ಇನ್‌ಫೆಕ್ಷನ್‌ಗಳ ವಿರುದ್ಧ ಹೋರಾಡುತ್ತದೆ. ಇದರ ಸೇವನೆಯಿಂದ ಬೇಗನೇ ದೇಹಕ್ಕೆ ವಯಸ್ಸಾಗುವುದನ್ನು ತಪ್ಪಿಸುತ್ತದೆ. ಮುಪ್ಪಿನ ತೊಂದರೆಗಳಿಂದಲೂ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಲೈಂಗಿಕ ನಿರಾಸಕ್ತಿಯನ್ನು ಕಡಿಮೆ ಗೊಳಿಸುತ್ತದೆ: ಬೇರು ಹಲಸುವಿನಲ್ಲಿ ಹೇರಳವಾಗಿರುವ ಹಿಸ್ಟಿಡೈನ್ ಎಂಬ ಒಂದು ಅಮೈನೋ ಆಮ್ಲವು ಲೈಂಗಿಕ ನಿರಾಸಕ್ತಿಯನ್ನು ಕಡಿಮೆಗೊಳಿಸುತ್ತದೆ.

ಕೂದಲಿನ ಆರೋಗ್ಯಕ್ಕೆ ರಾಮಬಾಣ – ಬೇರು ಹಲಸಿನಲ್ಲಿ(Breadfruit) ಒಮೆಗಾ 3 ಫ್ಯಾಟಿ ಆಸಿಡ್ ಉತ್ತಮ ಪ್ರಮಾಣದಲ್ಲಿ ಇರುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ. ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆಗೆ ಬೇರು ಹಲಸಿನ ಕಾಯಿ ಉತ್ತಮ ಪರಿಹಾರ.

ಹೃದಯ ಆರೋಗ್ಯ ಕಾಪಾಡುತ್ತದೆ – ಬೇರು ಹಲಸಿನಲ್ಲಿ ಪೊಟ್ಯಾಷಿಯಂ, ಫೈಬರ್ ಅಂಶಗಳು ರಕ್ತ ಸಂಚಾರವನ್ನು ಉತ್ತಮವಾಗಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ : ಬೇರು ಹಲಸಿನ ಕಾಯಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕೂಡ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿ, ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡಲು ಬೇರು ಹಲಸಿನ ಕಾಯಿ ಉತ್ತಮ.

– ಗ್ಯಾಸ್ಟ್ರಿಕ್, ಜ್ಯೂಸ್ ಉತ್ಪತ್ತಿಯನ್ನು ಹೆಚ್ಚಿಸುವುದರಿಂದ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನೀಗಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.

– ರಕ್ತದೊತ್ತಡವನ್ನು ನಿಯಂತ್ರಿಸಲು ಬೇಕಾದ ಪೊಟ್ಯಾಶಿಯಂ ಅಂಶ ಬೇರು ಹಲಸಿನಕಾಯಿಯಲ್ಲಿದೆ.

– ಈ ಗಿಡದ ಎಲೆ ಹೈಪರ್ ಟೆನ್ಶನ್ ದೂರ ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

– ದೇಹದ ತೂಕ ನಿಯಂತ್ರಣದಲ್ಲಿಡಲು ಬೇರು ಹಲಸು ಉತ್ತಮ ಆಹಾರ ಎನ್ನುತ್ತಾರೆ ತಜ್ಞರು.

– ವಿಟಮಿನ್ ಎ, ಬಿ ಮತ್ತು ಕ್ಯಾಲ್ಸಿಯಂ ಅನ್ನು ಸಮಪ್ರಮಾಣದಲ್ಲಿ ಹೊಂದಿದೆ.

-ಝಿಂಕ್ ಕೊರತೆಯಿಂದ ಹೊರಬರಲು Breadfruit ಸೇವನೆ ಸಹಕಾರಿ.

Breadfruit is special vegetable of the Karnataka. Special it grow up in Malenaadu, Dakshina Kannada, Kodagu, Mysuru. Breadfruit has more nutrisions than Jackfruits.

You may also like