Home » ಕ್ಯಾರೆಟ್ ಬಗೆಗಿನ ಈ 10 ಅನುಕೂಲಗಳ ಬಗ್ಗೆ ಭಾಗಶಃ ಊಹಿಸಿರಲು ಸಾಧ್ಯವೇ ಇಲ್ಲ!

ಕ್ಯಾರೆಟ್ ಬಗೆಗಿನ ಈ 10 ಅನುಕೂಲಗಳ ಬಗ್ಗೆ ಭಾಗಶಃ ಊಹಿಸಿರಲು ಸಾಧ್ಯವೇ ಇಲ್ಲ!

by manager manager

Carrots top 10 healthy benefits in kannada everybody must read 3

ಕ್ಯಾರೆಟ್ ಬೆಳೆದ ರೈತರೇ ಆಗಲಿ ಅಥವಾ ಕೊಂಡುಕೊಂಡವರೇ ಹಸಿದನ್ನು ತಿನ್ನಲು ಆಸಕ್ತಿ ವಹಿಸುವುದೇ ಇಲ್ಲ. ಆದರೆ ಸ್ನ್ಯಾಕ್ ತಿನ್ನುವ ಹಾಗೆಯೇ ಕ್ಯಾರೆಟ್ ಅನ್ನು ತಿಂದರೆ ಎಷ್ಟೊಂದು ಉಪಯೋಗವಿದೆ ಎಂಬುದೇ ಅವರಿಗೆ ಗೊತ್ತಿಲ್ಲ.

ಕ್ಯಾರೆಟ್ ತಿನ್ನುವವರು ವಿಟಮಿನ್ ಎ ಮಾತ್ರೆಗಳನ್ನು ಮರೆತುಬಿಡಿ. ಕ್ಯಾರೆಟ್ ವಿಟಮಿನ ಎ ಜೊತೆಗೆ ದೇಹಕ್ಕೆ ಪ್ಯಾಕೇಜ್ ಗಟ್ಟಲೇ ಆರೋಗ್ಯ ಉಪಯೋಗಗಳನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಟಾಪ್ 10 ಕ್ಯಾರೆಟ್‌ ತಿನ್ನುವುದರಿಂದ ಆಗುವ ಆರೋಗ್ಯಕರ ಅನುಕೂಲಗಳನ್ನು ತಿಳಿಸುತ್ತಿದ್ದೇವೆ. ಮಿಸ್ ಮಾಡದೇ ಒಮ್ಮೆಯಾದರೂ ಸಂಪೂರ್ಣವಾಗಿ ಈ ಮಾಹಿತಿಯನ್ನು ಓದಿ..

ಕ್ಯಾರೆಟ್ ನ ಟಾಪ್ 10 ಆರೋಗ್ಯಕರ ಅನುಕೂಲಗಳು (Top 10 Benefits of Carrots)

1 ಕಣ್ಣಿನ ದೃಷ್ಠಿಯನ್ನು ಸುಧಾರಿಸುತ್ತದೆ

ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ಶತಮಾನಗಳ ಮಾತು ಇದೆ. ಕ್ಯಾರೆಟ್ ಬೀಟಾ ಕೆರೋಟಿನ್ ಪೋಷಕಾಂಶಗಳ ಶ್ರೀಮಂತಿಕೆಯನ್ನು ಹೊಂದಿದ್ದು, ಲಿವರ್ ನಲ್ಲಿ ಇದನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ವಿಟಮಿನ್ ಎ ರೆಟಿನಾದಲ್ಲಿ ರೋಡೋಪ್ಸಿನ್‌ ಗೆ ರೂಪಾಂತರಗೊಂಡು, ರಾತ್ರಿ ದೃಷ್ಟಿಗೆ ಅಗತ್ಯವಾದ ನೇರಳೆ ಬಣ್ಣಕ್ಕೆ ಸಹಾಯ ಮಾಡುತ್ತದೆ.

ಬೀಟಾ ಕೆರೋಟಿನ್ ಅಕ್ಷಿಪಟಲದ ಅವನತಿ ಮತ್ತು ಕಣ್ಣಿನ ಪೊರೆ ವಿರುದ್ಧ ತನ್ನ ಕಾರ್ಯನಿರ್ವಹಿಸುತ್ತದೆ. ಬೀಟಾ ಕೆರೋಟಿನ್ ಹೆಚ್ಚು ಸೇವಿಸುವ 40ಶೇಕಡ ಜನತೆ ಅಕ್ಷಿಪಟಲದ ಅವನತಿ ಸಮಸ್ಯೆಯಿಂದ ಹೆಚ್ಚು ದೂರ ಉಳಿದಿದ್ದಾರೆ ಎಂಬದನ್ನು ಸಂಶೋಧನೆಗಳು ದೃಢಪಡಿಸಿವೆ.

2 ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ

ಕ್ಯಾರೆಟ್ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಫಲ್ಕಾರಿನಾಲ್ ಎಂಬುದು ನೈಸರ್ಗಿಕ ಕೀಟನಾಶಕವಾಗಿದ್ದು, ಕ್ಯಾರೆಟ್‌ನಿಂದ ಉತ್ಪತ್ತಿಯಾಗುತ್ತದೆ. ಅದು ಶಿಲೀಂಧ್ರಗಳ ರೋಗಗಳನ್ನು ಆರಂಭದಿಂದಲೇ ರಕ್ಷಿಸುತ್ತದೆ. ಕ್ಯಾರೆಟ್ ಫಲ್ಕಾರಿನಾಲ್ ನ ಏಕೈಕ ಮೂಲವಾಗಿದ್ದು 1/3 ಭಾಗ ಕಡಿಮೆ ಕ್ಯಾನ್ಸರ್ ಸಮಸ್ಯೆ ಮಾತ್ರ ಇರುತ್ತದೆ ಎಂದು ಅಧ್ಯಯನ ಒಂದು ಹೇಳಿದೆ.

3 ಮುಪ್ಪಾಗುವುದನ್ನು ನಿಧಾನಗೊಳಿಸುತ್ತದೆ(ವಯಸ್ಸಾಗುವುದನ್ನು)

ನಿರಂತರ ಚಯಪಚಯ ಕ್ರಿಯೆಗಳಿಂದ ದೇಹದಲ್ಲಿನ ಕೋಶಗಳಿಗೆ ಹಾನಿ ಉಂಟಾಗುವುದರ ವಿರುದ್ಧ ಕ್ಯಾರೆಟ್ ನಲ್ಲಿನ ಬೀಟಾ ಕೆರೋಟಿನ್ ಆಂಟಿ ಆಕ್ಟಿಡಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಕೋಶಗಳಿಗೆ ವಯಸ್ಸಾಗುವುದನ್ನು ತಡೆಗಟ್ಟಿ ವ್ಯಕ್ತಿಯ ಮುಪ್ಪಾಗುವ ಸಮಯವನ್ನು ದೀರ್ಘಗೊಳಿಸುತ್ತವೆ.

4 ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ

ಸೂರ್ಯನ ಶಾಖದಿಂದ ಚರ್ಮಕ್ಕೆ ಆಗುವ ಹಾನಿಯನ್ನು ಕ್ಯಾರೆಟ್ ನಲ್ಲಿನ ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗಳು ರಕ್ಷಿಸುತ್ತವೆ. ದೇಹದಲ್ಲಿನ ವಿಟಮಿನ್ ಎ ಕೊರತೆಯಿಂದ ಚರ್ಮ ಒಣಗುವಿಕೆ, ಕೂದಲು ಮತ್ತು ಉಗುರುಗಳ ಶುಷ್ಕತೆಗೆ ಕಾರಣವಾಗುತ್ತದೆ. ಹೇರಳವಾಗಿ ಕ್ಯಾರೆಟ್ ತಿನ್ನುವುದರಿಂದ ವಿಟಮಿನ್ ಎ ದೇಹದಲ್ಲಿ ಹೆಚ್ಚಾಗಿ ಅಕಾಲಿಕ ಚರ್ಮದ ಸುಕ್ಕು, ಮೊಡವೆಗಳು, ಕಲೆ ಮತ್ತು ಅಸಮ ಚರ್ಮದ ಟೋನ್ ಈ ಎಲ್ಲಾ ಸಮಸ್ಯೆಗಳಿಂದ ದೂರ ಇರಬಹುದು.

5 ಕ್ಯಾರೆಟ್ ಸೋಂಕುಗಳಿಂದ ತಡೆಯುತ್ತದೆ

ಕ್ಯಾರೆಟ್ ಸೋಂಕನ್ನು ತಡೆಯುವ ಗಿಡಮೂಲಿಕೆಯಾಗಿಯೂ ಹೆಸರುವಾಸಿಯಾಗಿದೆ. ಆದ್ದರಿಂದ ಕ್ಯಾರೆಟ್ ಅನ್ನು ಕಟ್ ಮಾಡಿ ಚೂರುಗಳಾಗಿ, ಬೇಯಿಸಿ ಮತ್ತು ಹಿಸುಕಿ ಸೋಂಕು ನಿವಾರಕವಾಗಿ ಬಳಸಬಹುದು.

Carrots top 10 healthy benefits in kannada everybody must read 4

6 ಹೊರಭಾಗದಿಂದಲೂ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ

ಕ್ಯಾರೆಟ್ ಅನ್ನು ಅತೀ ಕಡಿಮೆ ವೆಚ್ಚದಲ್ಲಿ ಹಾಗೂ ಸುಲಭವಾಗಿ ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. ರಸಭರಿತವಾದ ಕ್ಯಾರೆಟ್‌ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಜೇನು ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ ಫೇಸ್‌ ಪ್ಯಾಕ್‌ ಆಗಿ ಬಳಸಿ.

7 ಹೃದಯ ಸಂಬಂಧಿ ರೋಗಗಳಿಂದ ರಕ್ಷಣೆ

ಕ್ಯಾರೆಟ್‌ ನಲ್ಲಿನ ಕ್ಯಾರೊಟಿನಾಯ್ಡ್‌ಹೃದಯ ಸಂಬಂಧಿ ಖಾಯಿಲೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ. ಕ್ಯಾರೆಟ್ ಕೇವಲ ಬೀಟಾ ಕ್ಯಾರೋಟಿನ್ ಮಾತ್ರವಲ್ಲದೇ ಆಲ್ಪಾ-ಕ್ಯಾರೋಟಿನ್ ಮತ್ತು ಲುಟೀನ್ ಗಳನ್ನು ಹೊಂದಿದೆ.

ದಿನನಿತ್ಯ ಕ್ಯಾರೆಟ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಕಾರಣ ಕ್ಯಾರೆಟ್‌ ನಲ್ಲಿ ಕರಗುವ ನಾರುಗಳು ಪತ್ತರಸ ಆಮ್ಲದೊಂದಿಗೆ ಬಂಧಿಸುತ್ತವೆ.

8 ದೇಹವನ್ನು ಸ್ವಚ್ಛಗೊಳಿಸುವ ಕ್ಯಾರೆಟ್

ಕ್ಯಾರೆಟ್ ನಲ್ಲಿನ ವಿಟಮಿನ್ ಎ ಪಿತ್ತಜನಕಾಂಗದಲ್ಲಿನ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುತ್ತದೆ. ಪಿತ್ತಜನಕಾಂಗದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣವಾಗದ ಪದಾರ್ಥಗಳು ಮತ್ತು ತ್ಯಾಜ್ಯವನ್ನು ಕ್ಯಾರೆಟ್ ನಲ್ಲಿನ ಫೈಬರ್ ಗಳು ಹೊರಹಾಕಿ ಸ್ವಚ್ಛಗೊಳಿಸುತ್ತವೆ.

9 ಕ್ಯಾರೆಟ್‌ ನಿಂದ ಹಲ್ಲುಗಳು ಮತ್ತು ಒಸಡುಗಳ ರಕ್ಷಣೆ

ಕ್ಯಾರೆಟ್ ಟೂತ್ ಬ್ರಸ್ ಮತ್ತು ಟೂತ್ ಪೇಸ್ಟ್‌ಗಳ ರೀತಿಯಲ್ಲಿ ಹಲ್ಲಗಳ ಸಂಧಿಗಳಲ್ಲಿನ ಆಹಾರ ಕಣಗಳನ್ನು ಹೊರತೆಗೆಯುತ್ತದೆ. ಅಲ್ಲದೇ ಒಸಡನ್ನು ಉತ್ತೇಜಿಸಿ ಲಾಲಾರಸವನ್ನು ಪ್ರಚೋದಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಕ್ಯಾರೆಟ್‌ಗಳಲ್ಲಿನ ಖನಿಜಗಳು ಹಲ್ಲಿನ ಹಾನಿಯನ್ನು ತಡೆಯುತ್ತವೆ.

10 ಸ್ಟ್ರೋಕ್‌ ತಡೆಯುತ್ತದೆ

ಮೇಲಿನ ಎಲ್ಲಾ ಅನುಕೂಲಗಳು ಅಷ್ಟೊಂದು ಆಶ್ಚರ್ಯ ಎನಿಸುವುದಿಲ್ಲ. ಆದರೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ, ವಾರದಲ್ಲಿ 5 ಕ್ಕಿಂತ ಹೆಚ್ಚು ಕ್ಯಾರೆಟ್ ತಿನ್ನುವವರು ಸ್ಟ್ರೋಕ್‌ ಸಮಸ್ಯೆಯಿಂದ ದೂರ ಉಳಿಯಬಹುದು. ಆದರೆ ತಿಂಗಳಿಗೆ ಒಮ್ಮೆ ಬಳಸುವವರು ತುಂಬಾ ಹತ್ತಿರದಲ್ಲಿ ಸ್ಟ್ರೋಕ್ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಿದೆ.

Carrots top 10 healthy benefits in kannada everybody must read 2

ಕ್ಯಾರೆಟ್ ತಿನ್ನುವುದು ಹೇಗೆ? (How to Eat Carrot)

ಕ್ಯಾರೆಟ್ ನಲ್ಲಿನ ಫೋಷಕಾಂಶಗಳು ಪ್ರೋಟೀನ ಚೀಲಗಳಲ್ಲಿ ಬಿಗಿಯಾಗಿ ಸುತ್ತುವರಿಯಲ್ಪಟ್ಟಿರುತ್ತವೆ. ಆದರೆ ಕ್ಯಾರೆಟ್ ಅನ್ನು ಹೆಚ್ಚು ಶಾಖದಿಂದ ಬೇಯಿಸುವುದರಿಂದ ಅಥವಾ ಮಿಕ್ಸಿಯಲ್ಲಿ ರುಬ್ಬುವುದರಿಂದ ಅದರ ವಿಟಮಿನ್‌ಗಳು ಮತ್ತು ಫೊಷಕಾಂಶಗಳು ದೇಹಕ್ಕೆ ಸಿಗದಂತೆ ಆಗುತ್ತದೆ.

ಕೊಬ್ಬು ಅಥವಾ ಆಯಿಲ್‌ಗಳ ಜೊತೆ ಕ್ಯಾರೆಟ್ ಅನ್ನು ಬೇಯಿಸುವುದರಿಂದ, ಜ್ಯೂಸ್ ಮಾಡುವುದರಿಂದ ಅದರಲ್ಲಿನ ಕೆರೋಟಿನಾಯ್ಡ್‌ಗಳ ಲಭ್ಯತೆ ಶೇಕಡ 600 ಪ್ರತಿಶತ ಹೆಚ್ಚಾಗುತ್ತದೆ.

ಕೊಬ್ಬು ಕೆರೊಟಿನಾಯ್ಡ್‌ಗಳನ್ನು ಹೀರಿಕೊಳ್ಳುವಲ್ಲಿ 1,000 ಶೇಕಡ ಸಹಾಯ ಮಾಡುತ್ತದೆ. ಆಲೀವ್ ಆಯಿಲ್‌ ಅನ್ನು ಸ್ವಲ್ಪ ಪ್ರಮಾಣದಲ್ಲಿ ಇದರ ಜೊತೆ ಬಳಸಿ.

Carrots top 10 healthy benefits in kannada everybody must read 5

ಕ್ಯಾರೆಟ್‌ ಬಗೆಗಿನ ಹಾಸ್ಯಕಾರಕ ಸಂಗತಿಗಳು (Fun Facts about Carrot)

– ಮೊಲಗಳು ಕ್ಯಾರೆಟ್ ಅನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಅತಿ ಹೆಚ್ಚು ತಿನ್ನುವುದಿಲ್ಲ

– ಮನುಷ್ಯರು 20 ಕ್ಯಾರೆಟ್ ತಿನ್ನುವುದು ಒಂದೇ, ಮೊಲಗಳು ಒಂದು ಕ್ಯಾರೆಟ್ ತಿನ್ನುವುದು ಒಂದೇ. ಮೊಲಗಳ ಹಲ್ಲುಗಳಿಗೆ ಕ್ಯಾರೆಟ್ ಉತ್ತಮವಾದ ಆಹಾರ ಮತ್ತು ಕೃತಕ ಸಕ್ಕರೆ ಅಂಶ ಇದರಲ್ಲಿ ಇರುವುದಿಲ್ಲ. ಸ್ವಾಭಾವಿಕವಾಗಿ ಹೆಚ್ಚು ಸಕ್ಕರೆ ಅಂಶ ಹೊಂದಿದ್ದು ಡಯಾಬಿಟಿಸ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಮೊಲಗಳು ಮೇಲ್ಭಾಗವನ್ನು ಹೆಚ್ಚು ತಿನ್ನುತ್ತವೆ.

– ಆಲೂಗೆಡ್ಡೆ ನಂತರ ಅತೀ ಹೆಚ್ಚು ಪ್ರಖ್ಯಾತವಾದ ತರಕಾರಿ ಕ್ಯಾರೆಟ್

– ದಾಖಲೆ ಮಾಡಿದ ಕ್ಯಾರೆಟ್ ಗಳೆಂದರೆ 19ಪೌಂಡ್ ತೂಕದ್ದು ಮತ್ತು 19 ಅಡಿ ಉದ್ದದ ಕ್ಯಾರೆಟ್. ಅವುಗಳನ್ನು ನೋಡಲು ಕ್ಲಿಕ್ ಮಾಡಿ http://www.carrotmuseum.co.uk/record.html

– 100 ತಳಿಗಳ ಕ್ಯಾರೆಟ್‌ ಗಳಿವೆ.

ಕೆಲವು ಸಣ್ಣವು, ಕೆಲವು ದೊಡ್ಡವು, ಕೆಲವು ಹಲವು ಬಣ್ಣಗಳಲ್ಲಿಯೂ ಇವೆ. ಕಿತ್ತಳೆ, ನೇರಳೆ, ಬಿಳಿ, ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಕ್ಯಾರೆಟ್ ಇವೆ.

– 1600 ಇಸವಿಯಲ್ಲಿ ಇಂಗ್ಲಿಷ್ ಮಹಿಳೆಯೊಬ್ಬಳು ತಲೆಗೆ ಹೂ ಮುಡಿಯುವ ಬದಲು ಕ್ಯಾರೆಟ್ ಎಲೆಯನ್ನು ಮುಡಿಯುತ್ತಿದ್ದಳು

– Carrot ಪದವು ಗ್ರೀಕ್ ಪದ Karoton ದಿಂದ ಬಂದಿದೆ.

ಕ್ಯಾರೆಟ್‌ನಲ್ಲಿ ಪತ್ತೆ ಹಚ್ಚಲಾದ ಬೀಟಾ ಕ್ಯಾರೋಟಿನಾ ‘ಕ್ಯಾರೆಟ್’ ಎಂದು ಹೆಸರು ನೀಡಲು ಕಾರಣ.

– ಅಮೆರಿಕನ್ನರು ವರ್ಷಕ್ಕೆ ಸರಾಸರಿ 12ಪೌಂಡ್ ಕ್ಯಾರೆಟ್ ತಿನ್ನುತ್ತಾರೆ.

ವಾರಕ್ಕೆ ಒಂದು ಕಪ್ ಕ್ಯಾರೆಟ್ ಜ್ಯೂಸ್ ಸೇವಿಸುತ್ತಾರೆ. ನಾವು ಎಲ್ಲಾ ವಿಧದ ತರಕಾರಿಗಳನ್ನು ಮೂರು ಪಟ್ಟು ಸೇವಿಸುವಷ್ಟು.

Carrots top 10 health benefits in kannada is here. Forgot about vitamin A pills. Carrots provide Vitamin A and impressive health benefis including beautiful skin.

You may also like