Home » ಶುಂಠಿ ಚಹಾ ಕುಡಿಯೋದ್ರಿಂದ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆ ಗೊತ್ತಾ..?

ಶುಂಠಿ ಚಹಾ ಕುಡಿಯೋದ್ರಿಂದ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆ ಗೊತ್ತಾ..?

by manager manager

ಇಂದು ದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆ ಕಾಫಿ ಅಥವಾ ಟೀ ಕುಡಿಯುವುದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ನಮ್ಮ ಹಿರಿಯರು ಕಷಾಯ ಅಥವಾ ಶುಂಠಿ ಬೆರೆಸಿದ ಹಾಲನ್ನು ಕುಡಿಯುತ್ತಿದ್ದರು. ಶುಂಠಿಯ ಆರೋಗ್ಯಕರ ಪೋಷಕಾಂಶಗಳ ಕಾರಣ ಅವರ ಆಯಸ್ಸು ಮತ್ತು ಆರೋಗ್ಯ ಇಂದಿನವರಿಗಿಂತ ಹೆಚ್ಚಿತ್ತು. ಶುಂಠಿಯನ್ನು ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದ್ದು, ಹಲವಾರು ಪೋಷಕಾಂಶಗಳನ್ನು ಹೊಂದಿರುವ ಶುಂಠಿಯ ಸದ್ಭಳಕೆಯು ಅನೇಕಾನೇಕ ಖಾಯಿಲೆಗಳ ನಿಯಂತ್ರಣಕ್ಕೆ ಹಾಗೂ ಸ್ವಸ್ಥ ಆರೋಗ್ಯಕ್ಕೆ ಸಹಕಾರಿಯಾಗಿದೆ.

ದಿನಕ್ಕೆ ಎರಡು ಬಾರಿ ಶುಂಠಿ ಚಹಾ ಕುಡಿಯುವುದರಿಂದ ತಕ್ಷಣವೇ ಪ್ರಯೋಜನ ಸಿಗುವುದು ಮತ್ತು ವೈದ್ಯರ ನಿಯಮಿತ ಭೇಟಿ ಮತ್ತು ಅತಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ನಮ್ಮ ದೇಹದ ವ್ಯವಸ್ಥೆಯು ಆಂತರಿಕವಾಗಿ ಮತ್ತು ನೈಸರ್ಗಿಕವಾಗಿ ದೇಹವನ್ನು ರಕ್ಷಿಸುವುದು. ಇಂದಿನ ಲೇಖನದಲ್ಲಿ ಶುಂಠಿ ಚಹಾದಲ್ಲಿರುವ ಆರೋಗ್ಯಕರ ಗುಣದ ಬಗ್ಗೆ ತಿಳಿಸಲಾಗಿದೆ.

health benefits of drinking ginger tea everyday

ಶುಂಠಿಯ ಪ್ರಯೋಜನಗಳು:

  • ಶೀತ, ಗಂಟಲ ನೋವು , ಕೆಮ್ಮಿನೊಂದಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಯನ್ನು ಸರಿಪಡಿಸುವುದಕ್ಕೆ ಸಹಾಯ ಮಾಡುತ್ತದೆ.
  • ಶ್ವಾಸಕೋಶದಲ್ಲಿ ಕಫಾ ತೆಳುಗೊಳಿಸುತ್ತದೆ.
  • ತಾಪಮಾನವನ್ನು ಕಡಿಮೆ ಮಾಡುತ್ತದೆ, ಹಾಗು ಮೂಗು ಕಟ್ಟುವಿಕೆ ಸರಿಪಡಿಸುವುದಕ್ಕೆ ಸಹಾಯಕ.
  • ನೋವನ್ನು ಶಮನಗೊಳಿಸುತ್ತದೆ ಮತ್ತು ಶಾಂತಗೊಳಿಸುತ್ತದೆ.
  • ಶ್ವಾಸಕೋಶದ ದಟ್ಟಣೆ (congestion) ಸಡಿಲಗೊಳಿಸಲು ಸಹಾಯವಾಗುತ್ತದೆ.

ಶುಂಠಿ ಚಹಾ ಕುಡಿಯೋದ್ರಿಂದ ಆಗುವ ಪ್ರಯೋಜನಗಳು:

1. ಕೆಮ್ಮು, ಶೀತಕ್ಕೆ ನೈಸರ್ಗಿಕ ಔಷಧ:

ಪ್ರತಿನಿತ್ಯ ಶುಂಠಿ ಹಾಕಿದ ಚಹಾ ಸೇವಿಸಿ ಇದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಶುಂಠಿ ಚಹಾ ಕೆಮ್ಮು, ಜ್ವರ, ಶೀತ, ರೋಗಗಳಿಂದ ರಕ್ಷಣೆ ಮತ್ತು ಅನೇಕ ಕಾಯಿಲೆಗಳ ಚಿಕಿತ್ಸೆಗೆ ಅಥವಾ ಮನೆಯಲ್ಲಿ ತಯಾರಿಸಬಹುದಾದ ಆಯುರ್ವೇದದ ನೈಸರ್ಗಿಕ ಔಷಧವಾಗಿದೆ.

2. ಜೀರ್ಣಕ್ರಿಯೆಗೆ:

ಉದರ ಸಂಬಂಧಿ, ಜೀರ್ಣಕ್ರಿಯೆಗೆ ಶುಂಠಿ ಚಹಾ ಉತ್ತಮ ಮನೆಮದ್ದು. ಜೀರ್ಣಕ್ರಿಯೆಗೆ ಸಹಕರಿಸುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.

health benefits of drinking ginger tea everyday

3. ಒತ್ತಡ ನಿವಾರಣೆ:

ಶುಂಠಿ ಚಹಾ ಸೇವಿಸುವುದರಿಂದ ಒತ್ತಡದಿಂದ ಹೊರಬರಬಹುದು. ಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್ ಚೆನ್ನಾಗಿರಿಸುತ್ತದಲ್ಲದೆ, ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.

4. ತಲೆನೋವಿಗೆ ಪರಿಹಾರ:

ಶುಂಠಿ ಚಹಾ ತಲೆನೋವಿಗೆ ಉತ್ತಮ ಪರಿಹಾರ. ಅರ್ಧ ಟಿ ಚಮಚ ಚಹಾ ಪುಡಿ, ಸ್ವಲ್ಪ ಬೆಲ್ಲ /ಸಕ್ಕರೆ, ತುರಿದ ಶುಂಠಿ ಸೇರಿಸಿ ಚಹಾ ತಯಾರಿಸಿ ಕುಡಿಯಿರಿ. ಹಾಲು ಸೇರಿಸಿದರೆ ರುಚಿ ಹೆಚ್ಚುತ್ತದೆ. ಇದರಿಂದ ತಲೆನೋವು ಬೇಗ ಕಡಿಮೆಯಾಗುತ್ತದೆ .

health benefits of drinking ginger tea everyday

5. ಅಸ್ತಮಾ ರೋಗಿಗಳಿಗೆ ಉತ್ತಮ:

ಅಸ್ತಮಾ ರೋಗಿಗಳಿಗೂ ಇದು ಉತ್ತಮ. ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

6. ಚಳಿಗಾಲದಲ್ಲಿ ಶುಂಠಿ ಚಹಾ ದೇಹವನ್ನು ಬೆಚ್ಚಗಿರಿಸುತ್ತದೆ.

7. ಶುಂಠಿ ಸ್ನಾಯು ಮತ್ತು ಜಂಟಿ ನೋವನ್ನು ನಿವಾರಿಸಬಲ್ಲ ಶಕ್ತಿ ಹೊಂದಿದ್ದು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ.

8. ಶುಂಠಿ ಚಹಾ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಈ ಮೂಲಕ, ಹೃದಯರಕ್ತನಾಳದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.

9. ಶುಂಠಿ ಚಹಾ ಸೇವಿಸುವುದರಿಂದ ಮಲ ವಿಸರ್ಜನೆ ತೊಂದರೆ ಆಗುವುದಿಲ್ಲ.

Ginger tea used to prevent colds and to aid in digestion, upset stomach, diarrhea, and nausea. Drinking a cup of ginger tea beats cold. ginger tea may help lower your stress and tension.

You may also like