Home » ಗ್ರೀನ್ ಟೀ ಕುಡಿಯುವುದರಿಂದ ದೇಹಕ್ಕೆ ಆಗುವ ಅನುಕೂಲಗಳು, ಅನಾನುಕೂಲಗಳೇನು ಗೊತ್ತೇ?

ಗ್ರೀನ್ ಟೀ ಕುಡಿಯುವುದರಿಂದ ದೇಹಕ್ಕೆ ಆಗುವ ಅನುಕೂಲಗಳು, ಅನಾನುಕೂಲಗಳೇನು ಗೊತ್ತೇ?

by manager manager

Green Tea Benefits in Kannada

ಮನುಷ್ಯನಿಗೆ ಚೈತನ್ಯವನ್ನು ತುಂಬಿ ಅವನು ಚುರುಕಾಗಿ ಕೆಲಸ ಮಾಡುವಂತೆ ಮಾಡುವಲ್ಲಿ ಚಹಾ, ಟೀ, ಎಂಬ ಹಲವು ರೀತಿಯ ಪಾನಿಯಾಗಳು ನಮ್ಮ ಮಾರುಕಟ್ಟೆಯಲ್ಲಿವೇ ಆದರೆ ಅವುಗಳಲ್ಲಿ ಯಾವುದು ಬೆಸ್ಟ್ ಎಂದು ತಿಳಿಯುವುದು ಸ್ವಲ್ಪ ಮಟ್ಟಿಗೆ ಕಷ್ಟವಾದರೂ ಬಹಳ ಹಿಂದಿನಿಂದಲೂ ಚಹಾದ ಮೇಲಿನ ವ್ಯಾಮೋಹ ಜನರಲ್ಲಿ ಕಮ್ಮಿಯಾಗಿಲ್ಲ ಹಾಗೂ ಭವಿಷ್ಯತ್ತಿನ್ನಲ್ಲೂ ಕೂಡ ಹಾಗೆ ಮುಂದುವರೆಯುತ್ತದೆ. ಇತ್ತೀಚಿನವರೆಗೂ ನಮಗೆ ಅಪರಿಚಿತವಾಗಿದ್ದ ಗ್ರೀನ್ ಚಹಾ ಅಥವಾ ಗ್ರೀನ್ ಟೀ ಈಗ ಎಲ್ಲೆಡೆ ಲಭ್ಯವಾಗುತ್ತಿದೆ. ಇದಕ್ಕೆ ಇದರ ಆರೋಗ್ಯಕರ ಗುಣಗಳೇ ಕಾರಣ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಕುಡಿಯುತ್ತಾ ಬಂದಿರುವ ಚೀನೀಯರ ಆರೋಗ್ಯದ ಗುಟ್ಟು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಎಂದಿಗೂ ಎವರ್ ಗ್ರೀನ್! ಇದರ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‍ಗಳು ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪಾನೀಯಾ ಎನ್ನುವುದರಲ್ಲಿ ಎರಡು ಮಾತಿಲ್ಲ.

ಗ್ರೀನ್ ಟೀ ಕುಡಿಯಲು ಒಳ್ಳೆಯ ಸಮಯ ಯಾವುದು ?

• ನೀವು ಊಟ ಸೇವಿಸುವ ಮುನ್ನ ಪ್ರಮುಖವಾಗಿ ಎರಡು ಊಟಗಳ ನಡುವೆ. ಅಂದರೇ ಮಧ್ಯಾಹ್ನ ಊಟ ಮಾಡಿದ್ದರೆ ಸಂಜೆ ಟೀಯನ್ನು ಸೇವಿಸಿ ಮತ್ತೆ ರಾತ್ರಿ ಊಟ ಮಾಡಿ.

• ನೀವು ದಿನನಿತ್ಯ ವ್ಯಾಯಾಮ ಮಾಡುವುದಾದರೆ ಆ ವ್ಯಾಯಾಮ ಮಾಡುವುದಕ್ಕೂ ಮುಂಚೆ ಗ್ರೀನ್ ಟೀಯನ್ನು ಸೇವಿಸಿ.

• ನೀವು ನಿದ್ರೆಗೆ ಜಾರುವ ಮುಂಚೆ ಅಂದರೇ ಗ್ರೀನ್ ಟೀಯನ್ನು ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ.

ಗ್ರಿನ್ ಟೀಯನ್ನು ಯಾವಾಗ ಸೇವಿಸಬಾರದು ಮತ್ತು ಅದರಿಂದಾಗುವ ಹಾನಿ

• ಗ್ರೀನ್ ಟೀಯನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಬಾರದು.

• ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸಿದರೆ ಕೆಲವಾರು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ.

• ವಿಶೇಷವಾಗಿ ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

• ಖಾಲಿಹೊಟ್ಟೆಯಲ್ಲಿ ಗ್ರೀನ್ ಟೀಯಲ್ಲಿರುವಂತಹದ್ದೇ ಹೆಚ್ಚುವರಿ ಆಹಾರಗಳ ಸೇವನೆಯ ಪರಿಣಾಮವನ್ನು ಕಂಡುಕೊಳ್ಳಲು ನಡೆಸಲಾದ ಸಂಶೋಧನೆಯಲ್ಲಿ ಯಕೃತ್ ನ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿರುವುದು ಕಂಡುಬಂದಿದೆ.

• ಗ್ರೀನ್ ಟೀ ಯಲ್ಲಿ ಕ್ಯಾಟೆಚಿನ್ ಗಳೆಂಬ ಪೋಷಕಾಂಶಗಳಿವೆ. ಈ ಕಣಗಳ ಸಾಂದ್ರತೆ ಹೆಚ್ಚಿದರೆ ಯಕೃತ್ ನ ಮೇಲೆ ಹೆಚ್ಚಿನ ಅಪಾಯವುಂಟಾಗುತ್ತದೆ. ಒಂದು ವೇಳೆ ಸಾಂದ್ರತೆ ಒಂದು ಮಟ್ಟ ಮೀರಿದರೆ ಯಕೃತ್ ವೈಫಲ್ಯವೂ ಎದುರಾಗಬಹುದು.

ದಿನಕ್ಕೆಷ್ಟು ಕಪ್ ಗ್ರೀನ್ ಟೀ ಸೇವಿಸಬೇಕು?

ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ಪ್ರಕಾರ ದಿನಕ್ಕೆ ಎರಡರಿಂದ ಮೂರು ಕಪ್ ಗ್ರೀನ್ ಟೀ (ಸುಮಾರು 100 ರಿಂದ 750 ಮಿಲಿಗ್ರಾಂ ನಷ್ಟು ಗ್ರೀನ್ ಟೀ ಯ ಸತ್ವವುಳ್ಳ ಆಹಾರ) ಸೇವಿಸುವ ಮೂಲಕ ಆರೋಗ್ಯ ಉತ್ತಮವಾಗಿರಿಸಬಹುದು.

ಗ್ರೀನ್ ಟೀಯನ್ನು ಏಕೆ ಕುಡಿಯಬೇಕು ?

• ಒಳ್ಳೆಯ ನಿದ್ರೆಯನ್ನು ಮಾಡಲು ಗ್ರೀನ್ ಟೀಯನ್ನು ಕುಡಿಯಬೇಕು ಒಳ್ಳೆಯ ನಿದ್ರೆ ಹಲವು ಕಾಯಿಲೆಗಳಿಗೆ ರಾಮಬಾಣವಿದ್ದಂತೆ.

• ಕ್ಯಾನ್ಸರ್ ಅಪಾಯ ತಗ್ಗಿಸುವುದಕ್ಕೆ ಸಹಾಯಕಾರಿಯಾಗುತ್ತದೆ.

• ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಹೃದಯದ ಆರೋಗ್ಯವು ಸುಧಾರಣೆ ಆಗುವುದು.

• ಪೋಷಕಾಂಶಗಳಿಂದ ತುಂಬಿ ತುಳುಕುತ್ತೆ ಹಾಗಾಗೀ ಗ್ರೀನ್ ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ.

• ಬುದ್ಧಿಮತ್ತೆಯನ್ನು ಚುರುಕು ಮುಟ್ಟಿಸಲು ಕೊಂಚವೇ ಪ್ರಮಾಣದ ಕೆಫೇನ್ ಬೇಕು. ಗ್ರೀನ್ ಟೀಯಲ್ಲಿ ಇದು ಅತ್ಯಂತ ಸಮರ್ಪಕ ಪ್ರಮಾಣದಲ್ಲಿರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಹೊರಡಿರುವ ನ್ಯೂರಾನ್ ಗಳೆಂಬ ನರವ್ಯವಸ್ಥೆಯ ಕಣಗಳು ನೆರವಾಗುತ್ತವೆ.

• ಗ್ರೀನ್ ಟೀ ನಮ್ಮ ಪಚನಕ್ರಿಯೆ ಮತ್ತು ಜೀವರಾಸಾಯನಿಕ ಕ್ರಿಯೆಯನ್ನು ಸರಿಸುಮಾರು ಶೇಖಡಾ ನಾಲ್ಕರಷ್ಟು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಕೆಲಸವನ್ನು ಪೂರೈಸಲು ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ನಿತ್ಯದ ಗ್ರೀನ್ ಟೀ ಸೇವನೆಯಿಂದ ನಿಧಾನವಾಗಿಯಾದರೂ ಆರೋಗ್ಯಕರವಾಗಿ ಕೊಬ್ಬು ಕರಗುತ್ತದೆ.

• ಗ್ರೀನ್ ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ. ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.

• ನಮ್ಮ ದೇಹದಲ್ಲಿ ಯಾವುದೋ ಮಾಯೆಯಿಂದ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡು ಹಬ್ಬ ಆಚರಿಸುತ್ತಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಗ್ರೀನ್ ಟೀ ಮಹತ್ವದ ಪಾತ್ರ ವಹಿಸುತ್ತದೆ.

• ನಿಯಮಿತ ಗ್ರೀನ್ ಟೀ ಸೇವನೆಯಿಂದ ಮಧುಮೇಹ ಆವರಿಸುವ ವಯಸ್ಸನ್ನು ಸಮರ್ಥವಾಗಿ ಮುಂದೂಡಬಹುದು. ಅಲ್ಲದೇ ಗ್ರೀನ್ ಟೀ ಸೇವನೆಯಿಂದ ಮಧುಮೇಹಿಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿರುವುದು ಕೆಲವು ಪ್ರಯೋಗಗಳಿಂದ ದೃಢಪಟ್ಟಿದೆ.

• ಗ್ರೀನ್ ಚಹಾ ಗ್ರೀನ್ ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ.

• ನಿಮ್ಮ ದೇಹದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಒಂದು ಕಪ್‍ನಷ್ಟು ನೀರಿಗೆ ಎರಡು ಗ್ರೀನ್ ಚಹಾ ಬ್ಯಾಗ್ ಸಾಕು. ಇದು ನಿಮ್ಮ ತೂಕವನ್ನು ಕರಗಿಸುತ್ತದೆ.

• ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ..

• ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಗ್ರೀನ್ ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ ಆಗ ನೋಡಿ ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

• ಸ್ವಲ್ಪ ಕೆಲಸ ಮಾಡಿದ ನಂತರ ನೀವು ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಈ ಗ್ರೀನ್ ಟೀ ನಿಮಗೆ ಒಳ್ಳೆಯದು.

• ಗ್ರೀನ್ ಚಹಾದಲ್ಲಿ ಕಂಡುಬರುವ ಕೆಫೀನ್ ಹಲ್ಲುಗಳಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮಥ್ರ್ಯ ಹೊಂದಿದೆ. ಕಡಿಮೆ ಬ್ಯಾಕ್ಟೀರಿಯಾದಿಂದಾಗಿ, ನಿಮ್ಮ ಹಲ್ಲುಗಳನ್ನು ದೀರ್ಘಕಾಲದವರೆಗೆ ಇದು ರಕ್ಷಿಸುತ್ತದೆ.

ಬ್ರಾಹ್ಮಿ ಎಣ್ಣೆಯು ಕೂದಲಿಗೆ ಮತ್ತು ಚರ್ಮಕ್ಕೆ ಏನೆಲ್ಲಾ ಅನುಕೂಲತೆಗಳನ್ನು ನೀಡುತ್ತದೆ ಗೊತ್ತೇ?