Home » ಬ್ರಾಹ್ಮಿ ಎಣ್ಣೆಯು ಕೂದಲಿಗೆ ಮತ್ತು ಚರ್ಮಕ್ಕೆ ಏನೆಲ್ಲಾ ಅನುಕೂಲತೆಗಳನ್ನು ನೀಡುತ್ತದೆ ಗೊತ್ತೇ?

ಬ್ರಾಹ್ಮಿ ಎಣ್ಣೆಯು ಕೂದಲಿಗೆ ಮತ್ತು ಚರ್ಮಕ್ಕೆ ಏನೆಲ್ಲಾ ಅನುಕೂಲತೆಗಳನ್ನು ನೀಡುತ್ತದೆ ಗೊತ್ತೇ?

by manager manager

Brahmi Oil Benefits for Hair in Kannada

ಬ್ರಾಹ್ಮಿ ಎಣ್ಣೆಯನ್ನು ಭಾರತದಲ್ಲಿ ಬಹಳ ಹಿಂದಿನಿಂದಲೂ ಬಳಸುತ್ತಿದ್ದು, ಈ ಎಣ್ಣೆಯಲ್ಲಿನ ಸತ್ವ ಮತ್ತು ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಬ್ರಹ್ಮ ಸತ್ವಕ್ಕೆ ಹೋಲುವಂತಹ ಹೆಸರಾದ “ಬ್ರಾಹ್ಮಿ” ಎಂಬ ಹೆಸರಿಟ್ಟಿದ್ದಾರೆ. ಇದಕ್ಕೆ ವೈಜ್ಞಾನಿಕವಾಗಿ “ಬಕೊಪಾ ಮೊನ್ನೇರಿ” ಮತ್ತು “ಬಕೋಪಾ ಮೊನ್ನಿಯೇರಿ” ಎಂದು ಕರೆಯಲಾಗುತ್ತದೆ. ಭಾರತೀಯರು ಹಿಂದಿನಿಂದಲೂ ಇದನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ.

ಬ್ರಾಹ್ಮಿ ಎಣ್ಣೆಯ ಹಲವು ಉಪಯೋಗಗಳೆಂದರೆ…

• ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ.

• ಬ್ರಾಹ್ಮಿಯು ಜ್ಞಾಪಕಶಕ್ತಿ ಹೆಚ್ಚು ಮಾಡುತ್ತದೆ.

• ಕೂದಲಿನ ಬೆಳವಣಿಗೆಗೆ ಕೂಡ ಹಲವರು ಬ್ರಾಹ್ಮಿಯನ್ನು ಬಳಸುತ್ತಾರೆ.

• ಐಬಿಎಸ್, ಅಲ್ಝೈಮರ್ ಕಾಯಿಲೆ, ಆತಂಕ, ಏಕಾಗ್ರತೆ ಕೊರತೆಯಂತೆ ಸಮಸ್ಯೆ, ಅಲರ್ಜಿ ಇತ್ಯಾದಿ ಕಾಯಿಲೆಗಳಿಗೆ ಬಳಸಲಾಗುತ್ತದೆ.

• ಒತ್ತಡ ನಿವಾರಣೆ ಮಾಡಲು.

• ಮಾನಸಿಕ ಆರೋಗ್ಯ, ಬೆನ್ನುನೋವು, ಗಂಟುನೋವು ಮತ್ತು ಲೈಂಗಿಕ ಪ್ರದರ್ಶನ ಉತ್ತಮಪಡಿಸಿಕೊಳ್ಳಲು ಬಳಸಲಾಗುತ್ತದೆ.

• ಬ್ರಾಹ್ಮಿ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಇದು ಕೂದಲಿನ ಸಮಸ್ಯೆಗಳನ್ನು ಇವಾರಣೆ ಮಾಡುವುದು.

• ಇದು ಮೆದುಳಿನ ರಾಸಾಯನಿಕಗಳನ್ನು ಹೆಚ್ಚಿಸಿ, ಅದರಿಂದ ಮೆದುಳನ್ನು ಮತ್ತಷ್ಟು ಚುರುಕಾಗಿಸುವುದು.

ಈ ಬ್ರಾಹ್ಮಿ ಎಣ್ಣೆಯನ್ನು ಕೂದಲಿಗೆ ಬಳಸುವುದು ಹೇಗೆ?

ನೆಲ್ಲಿಕಾಯಿ, ತುಳಸಿ ಅಥವಾ ಬೇವಿನ ಎಲೆ ಜತೆಗೆ ಬ್ರಾಹ್ಮಿ ಮಿಶ್ರಣ ಮಾಡಿಕೊಳ್ಳಿ. ಇಂತಹ ಗಿಡಮೂಲಿಕೆ ಮತ್ತು ಎಣ್ಣೆಯನ್ನು ಬ್ರಾಹ್ಮಿ ಹುಡಿಯಿಂದ ಕೂದಲಿಗೆ ತಯಾರಿಸುವ ಪೇಸ್ಟ್ ಗೆ ಮಾತ್ರ ಬಳಸಿಕೊಳ್ಳಬೇಕು. ಯಾಕೆಂದರೆ ಕೇವಲ ಬ್ರಾಹ್ಮಿ ಮಾತ್ರ ಕೂದಲಿಗೆ ಅಂಟಿಕೊಳ್ಳದು. ಎಣ್ಣೆ ಮತ್ತು ಇತರ ಕೆಲವೊಂದು ಗಿಡಮೂಲಿಕೆ ಬಳಕೆ ಮಾಡಿದರೆ ಅದರಿಂದ ಪೇಸ್ಟ್ ದಪ್ಪ ಆಗುವುದು. ಕೂದಲಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ ಮತ್ತು 45-50 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಲಾಭಗಳು:-

• ಬ್ರಾಹ್ಮಿಯು ಕೂದಲಿನ ಸಂಪೂರ್ಣ ಆರೋಗ್ಯವನ್ನು ಉತ್ತಮಪಡಿಸುವುದು.

• ಇದು ಕೂದಲನ್ನು ಉದ್ದ ಹಾಗೂ ದಪ್ಪ ಮಾಡುವುದು.

• ಬ್ರಾಹ್ಮಿ ಹುಡಿಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ನಿಯಮಿತವಾಗಿ ಬಳಸಿದರೆ ಕೆಲವೇ ವಾರಗಳಲ್ಲಿ ಕೂದಲ ತುಂಡಾಗುವುದನ್ನು ತಡೆಯವುದು.

• ಕೂದಲಿನ ಕಿರುಚೀಲಗಳನ್ನು ಇದು ರಕ್ಷಿಸುವ ಮೂಲಕ ಕೂದಲಿಗೆ ಆಗುವ ಹಾನಿ ತಡೆಯುವುದು. ಇದರಿಂದ ಕೂದಲು ಸೊಂಪಾಗಿ ಬೆಳೆಯಲು ನೆರವಾಗುವುದು.

• ತಾಜಾ ಬ್ರಾಹ್ಮಿ ಎಲೆಯ ಹುಡಿಯನ್ನು ಕೂದಲಿಗೆ ಬಳಸುವ ಕಾರಣದಿಂದ ಇದು ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದು.

• ವಯಸ್ಸಾದ ಚಿಹ್ನೆಗಳ ನಿವಾರಣೆಯಲ್ಲಿ ಬ್ರಾಹ್ಮಿ ಎಲೆ :- ಕಾಲಜನ್ ಎಲುಬು, ಕಾರ್ಟಿಲೆಜ್, ಸ್ನಾಯುರಜ್ಜು, ಅಸ್ಥಿರಜ್ಜು ಹಾಗೂ ಚರ್ಮದ ಕೋಶಗಳನ್ನು ಬೆಂಬಲಿಸುವ ಪ್ರೋಟೀನ್‍ಗಳನ್ನು ಒಳಗೊಂಡಿದೆ. ಇದರಲ್ಲಿ ಇರುವ ಪ್ರೊಟೀನ್ ಚರ್ಮದ ಕೋಶಗಳು ಒಂದಕ್ಕೊಂದು ಅಂಟಿಕೊಂಡಿರಲು ಸಹಾಯ ಮಾಡುತ್ತದೆ.

• ಚರ್ಮದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಕೊಡುತ್ತದೆ. ಕಾಲಜನ್ ಉತ್ಪಾದನೆಯು ವಯಸ್ಸಿನೊಂದಿಗೆ ಕಡಿಮೆಯಾಗುವುದು. ಇದರಿಂದಾಗಿ ಚರ್ಮದ ಮೇಲೆ ಸುಕ್ಕುಗಟ್ಟುವುದು, ಚರ್ಮದಲ್ಲಿ ಸಡಿಲತೆ ಹಾಗೂ ಕುಗ್ಗುವಿಕೆ ಕಂಡುಬರುತ್ತದೆ.

• ಬ್ರಾಹ್ಮಿಯಲ್ಲಿ ಇರುವ ಟ್ರೈಟರ್ಪೆನಾಯ್ಡ್ ಮತ್ತು ಏಸಿಯಾಟಿಕೊಸೈಡ್ ಸಂಯುಕ್ತಗಳಿವೆ. ಇದು ದೇಹದಲ್ಲಿ ನೈಸರ್ಗಿಕವಾಗಿಯೇ ಕಾಲಜಾನ್ ಪ್ರೋಟೀನ್ ಉತ್ಪತ್ತಿಯಾಗುವಂತೆ ಪ್ರಚೋದನೆ ನೀಡುವುದು. ಜೊತೆಗೆ ಯೌವನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.

• ಉತ್ತಮ ಚರ್ಮದ ಆರೋಗ್ಯ :- ಬ್ರಾಹ್ಮಿ ಮತ್ತು ಕ್ಯಾಮೊಮೈಲ್‍ನ ಸಂಯೋಜನೆಯಲ್ಲಿ ತಯಾರಿಸಲಾಗುವ ಕμÁಯಗಳನ್ನು ಬಳಸುವುದರಿಂದ ವಿವಿಧ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇವುಗಳಿಂದ ನಂಜು ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿದೆ. ಇದು ಚರ್ಮದ ಕಿರಿಕಿರಿಯನ್ನು ಶಮನಗೊಳಿಸುವುದು, ಕಲೆಯನ್ನು ಕಡಿಮೆಮಾಡುವುದು. ಮೊಡವೆಗಳನ್ನು ತಡೆಯುವುದು ಹಾಗೂ ಮೊಡವೆಗಳಿಂದ ಚರ್ಮದ ಮೇಲೆ ಉಂಟಾದ ಹಾನಿಯನ್ನು ಸಹ ತಡೆಯುತ್ತವೆ.

• ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು :- ಬ್ರಾಹ್ಮಿ ಮತ್ತು ತುಳಸಿಯಲ್ಲಿ ಆಂಟಿಫಂಗಲ್ ಆಂಟೊಬಯೋಟಿಕ್ ಮತ್ತು ಉರಿಯೂತದಂತಹ ಲಕ್ಷಣವನ್ನು ಕಡಿಮೆ ಮಾಡುತ್ತವೆ. ಎರಡು ಗಿಡಮೂಲಿಕೆಗಳ ಮಿಶ್ರಣದಲ್ಲಿ ಅಥವಾ ಕೇವಲ ಒಂದೇ ಗಿಡಮೂಲಿಕೆಯ ಬಳಕೆ ಮಾಡುವುದರಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮೊಡವೆ ಹಾಗೂ ಹೈಪರ್ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುವುದು.

• ಬ್ರಹ್ಮಿ ಮತ್ತು ಅಲೋವೆರಾ ಸಸ್ಯವನ್ನು ಅಮರತ್ವದ ಸಸ್ಯ ಎಂದು ಕರೆಯುತ್ತಾರೆ. ಸಾವಿರಾರು ವರ್ಷಗಳಿಂದಲೂ ಅಲೋವೆರಾವನ್ನು ಚರ್ಮದ ಆರೋಗ್ಯ ಹಾಗೂ ದೇಹದ ಇತರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬಳಸಲಾಗುವುದು. ಬ್ರಾಹ್ಮಿ ಮತ್ತು ಅಲೋವೆರಾ ಅದ್ಭುತವಾದ ಹಸಿರುಬಣ್ಣಗಳಿಂದ ಕೂಡಿರುತ್ತವೆ. ಇವುಗಳಿಂದ ಆರೋಗ್ಯ ರಕ್ಷಣೆಯನ್ನು ಉತ್ತಮವಾಗಿ ನಿರ್ವಹಿಸಬಹುದು. ಇವು ಕಾಲಜಾನ್ ಉತ್ಪತ್ತಿಯನ್ನು ಹತೋಟಿಯಲ್ಲಿ ಇಡುತ್ತವೆ. ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಕಾಯುವುದರ ಜೊತೆಗೆ ಸದಾ ತೇವಾಂಶದಿಂದ ಕೂಡಿರುವಂತೆ ಮಾಡುವುದು. ಚರ್ಮವು ಆರೋಗ್ಯಕರವಾಗಿದ್ದರೆ ಸೂಕ್ಷ್ಮ ರೇಖೆಗಳು, ಸುಕ್ಕು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ತಡೆಯುವುದು.

ಔಷಧೀಯ ಗುಣಗಳು :-

• ಬ್ರಾಹ್ಮಿಯಲ್ಲಿ ಅಮೈನೋ ಆಮ್ಲಗಳು, ಬೀಟಾ ಕ್ಯಾರೋಟೀನ್, ಕೊಬ್ಬುನಾಮ್ಲ, ಫೈಟೊಕೆಮಿಕಲ್‍ಗಳು ಸೇರಿದಂತೆ ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ.

• ಇದರಲ್ಲಿ ಇರುವ ಔಷಧೀಯ ಗುಣವು ಉರಿಯೂತವನ್ನು ಕಡಿಮೆ ಮಾಡುವುದು.

• ಗಾಯಗಳನ್ನು ಗುಣಪಡಿಸುವುದು.

• ಕಾಲಜನ್ ನಿರ್ಮಿಸುವುದು ಹಾಗೂ ರಕ್ತಗಳ ಪರಿಚಲನೆಯನ್ನು ಸುಧಾರಿಸುವುದು.

what is brahmi leaves called in kannada : ಬ್ರಾಹ್ಮಿ ಎಲೆಗಳು

Brahmi Leaves Online Bangalore – Click Here

ನವಧಾನ್ಯದ ದಾನವೇ ಶ್ರೇಷ್ಠ, ದಾನ ಕೊಟ್ಟರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆಯೇ?