Home » ನಿಮ್ಮ ನೆರೆಮನೆಯವರ ಬಗ್ಗೆ ಮಾಹಿತಿ ನೀಡುತ್ತೆ ಗೂಗಲ್’ನ ಈ ಹೊಸ ಆ್ಯಪ್..!

ನಿಮ್ಮ ನೆರೆಮನೆಯವರ ಬಗ್ಗೆ ಮಾಹಿತಿ ನೀಡುತ್ತೆ ಗೂಗಲ್’ನ ಈ ಹೊಸ ಆ್ಯಪ್..!

by manager manager

ನವದೆಹಲಿ: ಭಾರಯತದಲ್ಲಿ ಹಲವಾರು ಆ್ಯಪ್​ಗಳ ಬಿಡುಗಡೆಯ ನಂತರ ಗೂಗಲ್ ಮತ್ತೊಂದು ಆ್ಯಪ್​ ಬಿಡುಗಡೆ ಮಾಡಿದೆ. ಇದರ ಹೆಸರು ನೇಬರ್ಲಿ (Neighborly). ಇದು ಈ ಪ್ರಶ್ನೋತ್ತರ ನೀಡುವ ಆ್ಯಪ್ ಆಗಿದೆ.

ಮೊಬೈಲ್ ಪೇಮೆಂಟ್ ಆ್ಯಪ್, ಫುಡ್​ ಡೆಲಿವರಿ ಸರ್ವಿಸ್ ಹಾಗೂ ನ್ಯಾಷನಲ್ ವೈ ಫೈ ನೆಟ್ವರ್ಕ್​ ಎನಿಶಿಯಲ್ ಆ್ಯಪ್​ಗಳ ಬಿಡುಗಡೆ ನಂತರ ಗೂಗಲ್ ನ ‘ನೆಕ್ಸಟ್ ಬಿಲಿಯನ್’ ಟೀಂ ಈ Q & A ಆ್ಯಪ್ ಬಿಡುಗಡೆ ಮಾಡಿದೆ. ನಿಮ್ಮ ಸುತ್ತಲಿರುವ ನಿವಾಸಿಗಳನ್ನು ಪ್ರಶ್ನೆ ಕೇಳುವ ಮೂಲಕ ನಿಮ್ಮ ನೆರೆಹೊರೆಯ ಬಗ್ಗೆ ತಿಳಿದುಕೊಳ್ಳಲು ಈ ಮೊಬೈಲ್ ಅಪ್ಲಿಕೇಶನ್ ವಿನ್ಯಾಸಗೊಳಿಲಾಗಿದೆ. ನಿಮ್ಮ ಸುತ್ತಲಿರುವ ನಿವಾಸಿಗಳಿಗೆ ಪ್ರಶ್ನೆ ಕೇಳುವ ಮೂಲಕ ಸ್ಥಳೀಯ ಸೇವೆಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿಯಲು ಈ ಆ್ಯಪ್ ಸಹಕರಿಸುತ್ತದೆ.

ಹೇಗೆ ಕಾರ್ಯ ನಿರ್ವಹಿಸಲಿದೆ..?

ಈ ಆ್ಯಪ್ಪ್​ಗೆ ಸೈನ್​ ಅಪ್ ಆಗಲು ನೀವು ನಿಮ್ಮ ಹೆಸರನ್ನಷ್ಟೇ ನಮೂದಿಸಿದರೆ ಸಾಕು. ನೀವು ಸೈನ್​ ಅಪ್ ಮಾಡುತ್ತಿದ್ದಂತೆಯೇ ಜಿಪಿಎಸ್​ ಬಳಸಿ ನಿಮ್ಮ ಸುತ್ತ ಮುತ್ತಲಿನ ಕುರಿತಾದ ಮಾಹಿತಿ ನೀಡುತ್ತದೆ.

ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದೆ

ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಕಾಳಜಿ ವಹಿಸಿಯೇ ಇಂತಹದೊಂದು ಆ್ಯಪ್ ತಯಾರು ಮಾಡಲಾಗಿದೆ. ಯಾವುದೇ ವ್ಯಕ್ತಿ ಮತ್ತೊಬ್ಬರ ಫೋಟೋ ಸೇವ್​ ಮಾಡಿಕೊಳ್ಳಲು ಹಾಗೂ ಸ್ಕ್ರೀನ್ ಶಾಟ್​ ತೆಗೆದುಕೊಳ್ಲಲೂ ಸಾಧ್ಯವಿಲ್ಲ​. ಬಳಕೆದಾರರಿಗೆ ಯಾವುದೇ ಒಂದು ವಿಷಯ​ ಸರಿ ಅನಿಸುತ್ತಿಲ್ಲವಾದರೆ ಅದನ್ನು ರಿಪೋರ್ಟ್​ ಮಾಡಬಹುದಾಗಿದೆ.

ಗೂಗಲ್​ನ ಈ ಆ್ಯಪ್​ನ್ನು ಈಗಾಗಲೇ 1000ಕ್ಕೂ ಅಧಿಕ ಮಂದಿ ಬಳಸಿದ್ದು, ಅವರೆಲ್ಲರೂ ಸುಮಾರು 30-35 ಶೇಕಡಾ ಪ್ರಶ್ನೆಗಳಿಗೆ ಕೇವಲ 54 ನಿಮಿಷದೊಳಗೆ ಉತ್ತರ ಕಂಡುಕೊಂಡಿದ್ದಾರೆ. ಆರಂಭದಲ್ಲಿ ಈ ಆ್ಯಪ್​ನ ಬೀಟಾ ವರ್ಷನ್​ ಮುಂಬೈನಲ್ಲಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೆ ವಿಸ್ತರಣೆಯಾಗಲಿದೆ.

Google launches a mobile app designed to help you learn about your neighborhood by asking other residents. It’s a way to find out about local services and facilities in your area from people who live around you. The beta is presently only available Mumbai

You may also like