Home » ರೈತರ ಆದಾಯ ಡಬಲ್‌ ಮಾಡಲು ಕೇಂದ್ರ ಸರ್ಕಾರದಿಂದ ಈ ಯೋಜನೆ! ಯಾವುದು ಅದು?..

ರೈತರ ಆದಾಯ ಡಬಲ್‌ ಮಾಡಲು ಕೇಂದ್ರ ಸರ್ಕಾರದಿಂದ ಈ ಯೋಜನೆ! ಯಾವುದು ಅದು?..

by manager manager

ಭಾರತ ಹಳ್ಳಿಗಳ ದೇಶ. ಜೈ ಕಿಶಾನ್ ಎನ್ನುವ ಮೂಲಕ ದೇಶದ ಬೆನ್ನೆಲುಬಾಗಿರುವ ರೈತನಿಗೆ ರಾಷ್ಟ್ರ ಮಟ್ಟದಲ್ಲಿ ಗೌರವ ನೀಡಲಾಗುತ್ತದೆ. ಈಗ ಅದೇ ರೈತನ ಬಾಳನ್ನು ಹಸನಾಗಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಜಾರಿಗೊಳಿಸಿದ.

ಹೌದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಆದಾಯವನ್ನು ಡಬಲ್ ಮಾಡುವ ಸಲುವಾಗಿ ಇತ್ತೀಚೆಗಷ್ಟೇ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಗೋಬರ್ ಧನ್(GOBARdhan) ಎಂಬ ಯೋಜನೆಗೆ ಚಾಲನೆ ನೀಡಿದೆ. ಇದರ ಮೂಲಕ ರಾಷ್ಟ್ರದಾದ್ಯಂತ ಈ ಯೋಜನೆಯನ್ನು ಜಾರಿ ಮಾಡಿದೆ. ಪ್ರಸ್ತುತದಲ್ಲಿ (2018-19) ಸುಮಾರು 700 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅಧಕೃತವಾಗಿ ಅನುಷ್ಠಾನಗಳಿಸುವ ಗುರಿ ಹೊಂದಿದೆ.

ಗೋಬರ್ ಧನ್ ಯೋಜನೆಯ ಉದ್ದೇಶ

ಸಾವಯವ ಗೊಬ್ಬರದಿಂದ ನೈಸರ್ಗಿಕ ಅನಿಲ ಉತ್ಪಾದನೆ ಉತ್ತೇಜಿಸಲು ಸಗಣಿ ಮತ್ತು ಕೃಷಿ ತ್ಯಾಜ್ಯಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಅನುಕೂಲ ಆಗುವಂತೆ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಈ ಗೋಬರ್ ಧನ್(Galvanising Organic Bio Agro Resources-GOBAR-DHAN) ಜಾರಿಗೊಳಿಸಿದೆ. ಈ ಯೋಜನೆಯನ್ನು ಪ್ರಸ್ತಾಪಿಸುವ ಜತೆಗೆ ಇದರಿಂದ ರೈತರು ಮತ್ತು ಹೈನುಗಾರರ ಆದಾಯ ಹೆಚ್ಚಲಿರುವ ಭರವಸೆಯನ್ನು ನೀಡಿದೆ.

ಏನಿದು ಗೋಬರ್-ಧನ್?

Galvanising Organic Bio Agro Resources (GOBAR-DHAN) ಗೋಬರ್ ಧನ್ ಸಂಕ್ಷಿಪ್ತ ರೂಪ ಇದು. ಈ ಯೋಜನೆ ಬಗ್ಗೆ ಈ ಭಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಜಾನುವಾರುಗಳ ಕೃಷಿ ತ್ಯಾಜ್ನಗಳು ಮತ್ತು ಸಗಣಿ ಸಂಗ್ರಹಿಸಿ ನೈಸರ್ಗಿಕ ಅನಿಲ, ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(CNG) ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಮುಖ ಉದ್ದೇಶದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಗೋಬರ್ ಧನ್ ಯೋಜನೆಯ ಅನುಕೂಲಗಳು

ಭಾರತ ಹಳ್ಳಿಗಳ ದೇಶವಾಗಿದ್ದು , 30ಕೋಟಿಗೂ ಅಧಿಕ ಜಾನುವಾರುಗಳು ಇವೆ. ಈ ಯೋಜನೆಯಿಂದ ಇಡೀ ದೇಶಕ್ಕೆ ಅನುಕೂಲವಿದೆ. ದಿನನಿತ್ಯ 30 ಲಕ್ಷ ಟನ್ ಗಿಂತಲೂ ಹೆಚ್ಚು ಸಗಣಿ ಉತ್ಪಾದನೆಯಾಗುತ್ತದೆ. ಇದರೊಂದಿಗೆ ಲಕ್ಷಾಂತರ ಟನ್‌ಗಳಷ್ಟು ಕೃಷಿ ತ್ಯಾಜ್ಯವು ಉತ್ಪಾದನೆ ಆಗುತ್ತದೆ. ಇಷ್ಟು ತ್ಯಾಜ್ಯವು ವ್ಯರ್ಥವಾಗುವ ಬದಲು ರೈತರ ಆದಾಯದ ಮೂಲವನ್ನಾಗಿಸುವಲ್ಲಿ ಗೋಬರ್ ಧನ್ ಸಹಾಯಕವಾಗಲಿದೆ. ಅಷ್ಟೇ ಅಲ್ಲದೇ

-ಈ ಯೋಜನೆಯಿಂದ ಗ್ರಾಮೀಣ ಜನತೆಗೆ ಹೆಚ್ಚು ಉಪಯೋಗವಾಗಲಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

-ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು ತ್ಯಾಜ್ಯ ಸಂಗ್ರಹಣೆ, ಸಾಗಣಿಕೆಗೆ ಸಂಬಂಧಿಸಿದ ಉದ್ಯೋಗಗಳು ಲಭಿಸುವುದರಿಂದ ಮಹಿಳೆಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.

-ಗ್ರಾಮದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಉದ್ದೇಶವು ಇದರಿಂದ ನೆರವೇರಲಿದೆ. ಇದರಿಂದ ಜಾನುವಾರುಗಳ ಆರೋಗ್ಯವು ಸುಧಾರಿಸಲಿದೆ.

-ಕಾಂಪೋಸ್ಟ್ ಗೊಬ್ಬರ ಬಳಕೆಯಿಂದ ಬೆಳೆಗಳ ಇಳುವರಿಯೂ ಹೆಚ್ಚಲಿದೆ.

-ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ಉತ್ಪಾದನೆಯಿಂದ ರಾಷ್ಟ್ರವು ಅಡುಗೆ ಅನಿಲ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ.

-ರೈತರು ತಾವು ಉತ್ಪಾದಿಸಿದ ಸಾವಯವ ಗೊಬ್ಬರ ಮತ್ತು ಗೋಬರ್ ಅನಿಲದ ಮಾರಾಟಕ್ಕೂ ಆನ್‌ಲೈನ್ ವ್ಯವಸ್ಥೆಯಲ್ಲಿ ಅವಕಾಶವಿರಲಿದೆ.

-ರೈತರು ಮತ್ತು ಕೃಷಿ ತ್ಯಾಜ್ಯ ಖರೀದಿದಾರರ ಮಧ್ಯೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.

-ಹಸುವಿನ ಸಗಣಿ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆಗಳು ಈಗಾಗಲೇ ಯುರೋಪ್‌ನ ಕೆಲವು ದೇಶಗಳಲ್ಲಿ ಮತ್ತು ಚೀನಾದಲ್ಲಿಯೂ ಜಾರಿಯಲ್ಲಿವೆ.

-ಈ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದೆ.

ಗೋಬರ್ ಧನ್ ಯೋಜನೆಗೆ ಅಪ್ಲೇ ಮಾಡುವುದು ಹೇಗೆ?

ಈ ಯೋಜನೆ 700 ಜಿಲ್ಲೆಗಳಿಗೆ ವಿಸ್ತಾರ ಹೊಂದಲಿದೆ. ಆದರೆ ಪ್ರಸ್ತುತ ಈ ಯೋಜನೆಗೆ ಅಪ್ಲೇ ಮಾಡುವುದು ಹೇಗೆ ಮತ್ತು ಬಳಸಿಕೊಳ್ಳುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಶೀಘ್ರದಲ್ಲಿ ಈ ಎಲ್ಲಾ ಮಾಹಿತಿ ದೊರೆಯಲಿದೆ. ಗೋಬರ್ ಧನ್ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡಲಿವೆ.

Gobardhan Scheme is to encourage the use of Biogas as a Source of Energy. To achieve this, Government will provide Subsidy to those who will install Biogas Plants Along with Biogas Usage, under this scheme Compost Fertilizer will also be prepared. under this sheme, one village from every district of country will be selected.

You may also like