ಗ್ಯಾಸ್ಟ್ರಿಕ್ ಒಂದು ಉರಿಯೂತದ ಸಮಸ್ಯೆ, ಹೊಟ್ಟೆಯಲ್ಲಿ ಒಂದು ವಿಧದ ಕಿರಿ ಕಿರಿ ಮತ್ತು ಒಳಪದರದ ಸವೆತ ಎನ್ನಬಹುದು. ಇದು ಹಠಾತ್ ಅಥವಾ ಕ್ರಮೇಣ ಸಂಭವಿಸಬಹುದು. ತೀವ್ರವಾದ ಗ್ಯಾಸ್ಟ್ರಿಕ್ ಹಠಾತ್ ಹೊಟ್ಟೆ ಉರಿಯನ್ನು ಉಂಟುಮಾಡಬಹುದು. ತುಂಬ ಕಾಲದ ಗ್ಯಾಸ್ಟ್ರಿಕ್ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ.
ಗ್ಯಾಸ್ಟ್ರಿಕ್ ಬರಲು ಕಾರಣಗಳು :-
– ಬಹಳ ತೀವ್ರವಲ್ಲದ ನೋವಿಗೆ ತೆಗೆದುಕೊಳ್ಳುವ ಕೆಲವು ಔಷಧಿಗಳ ಅಡ್ಡ ಪರಿಣಾಮವಾಗಿ ಗ್ಯಾಸ್ಟ್ರಿಕ್ ಉಂಟಾಗಬಹುದು.
– ತುಂಬ ಕಾಲದ ಗ್ಯಾಸ್ಟ್ರಿಕ್ ಗೆ ದೇಹದ ಇತರ ವೈದ್ಯಕೀಯ ಸ್ಥಿತಿ ಕಾರಣವಾಗಬಹುದು. ರೋಗ ನಿರೋಧಕ ಶಕ್ತಿಗಳು ಬ್ಯಾಕ್ಟಿರೀಯಾಗಳ ವಿರುದ್ಧ ವರ್ತಿಸುವಾಗ ನಮ್ಮ ಶಕ್ತಿಯು ಸೋಲುವುದು ಒಂದು ಕಾರಣ.
– ಕಾಫಿ, ವಿನಾಶಕಾರಿ ರಕ್ತಹೀನತೆ, ಪಿತ್ತರಸದ ಪ್ರತಿಫಲನ, ಕಿಮಿಯೋಥೆರಫಿ. .
ಗ್ಯಾಸ್ಟ್ರಿಕ್‍ನ ಲಕ್ಷಣಗಳು :-
ಗ್ಯಾಸ್ಟ್ರಿಕ್ ನಿಂದ ಬಳಲುತ್ತಿರುವ ಹೆಚ್ಚಿನ ಜನರಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಆದರೂ ಅವರಲ್ಲಿ ಬರುವ ಸಾಮಾನ್ಯ ಲಕ್ಷಣವೆಂದರೇ.
– ವಾಕರಿಕೆ
– ವಾಂತಿ
– ತೇಗುವುದು
– ಹೊಟ್ಟೆ ಉಬ್ಬರಿಸುವುದು
– ಬೇಗ ಹೊಟ್ಟೆ ತುಂಬಿದಂತನಿಸುವುದು
– ಬಿಕ್ಕಳಿಕೆ
– ಅಜೀರ್ಣ
– ಹಸಿವಾಗದಿರುವುದು
– ತೂಕ ಕಡಿಮೆಯಾಗುವುದು
ಗ್ಯಾಸ್ಟ್ರಿಕ್ ಇದ್ದವರು ಸೇವಿಸಬಹುದಾದ ಆಹಾರಗಳು :-
– ಹೆಚ್ಚಿನ ಗ್ಯಾಸ್ಟ್ರಿಕ್ ಇದ್ದವರು ಉಪವಾಸಮಾಡಬೇಕು. ಉಪವಾಸದ ಸಮಯದಲ್ಲಿ ಹಣ್ಣಿನ ರಸವನ್ನು ಸೇವಿಸ ಬಹುದು. ಹಣ್ಣಿನ ರಸವನ್ನು 5 ಗಂಟೆಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಬೇಕು.
– ಪಾಲಕ ರಸದೊಂದಿಗೆ 10 ಔನ್ಸ್ ಕ್ಯಾರೆಟ್ ರಸವನ್ನು ಮಿಶ್ರಣ ಮಾಡಿ ಸೇವಿಸಿ.
– ಊಟಕ್ಕೆ ಮೊದಲು ನಿಯಮಿತವಾಗಿ ಜೇನುತುಪ್ಪ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯ ಪದರವು ಬಲಗೊಳ್ಳುವುದು.
– ಒಂದು ಕಪ್ ಬಿಸಿ ಹಾಲಿಗೆ ಒಂದು ಚಮಚ ಆಲಿವ್ ತೈಲವನ್ನು ಹಾಕಿಕೊಂಡು ಬೆಳಗ್ಗೆ ಪ್ರತಿನಿತ್ಯ ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಕಿರಿಕಿರಿ ತಪ್ಪುವುದು ಮತ್ತು ಇದು ಗ್ಯಾಸ್ಟ್ರಿಕ್ ಒಳ್ಳೆಯ ಚಿಕಿತ್ಸೆ.
– ಕಾಲು ಚಮಚದಷ್ಟು ಕಾಲೋನ್ಜಿ ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆ ಮತ್ತು ತೀವ್ರ ಜಠರದುರಿ ನಿವಾರಣೆ ಮಾಡಬಹುದು.
– ಒಂದು ಕಪ್ ಮೊಸರಿಗೆ 2-3 ಚಮಚದಷ್ಟು ಇಸಬುಗೋಲ್ ಹಾಕಿಕೊಳ್ಳಿ ಮತ್ತು ಅದಕ್ಕೆ ಒಂದು ಬಾಳೆಹಣ್ಣು ಹಾಕಿ. ಪ್ರತಿನಿತ್ಯ ಉಪಾಹಾರಕ್ಕೆ ಅರ್ಧ ಗಂಟೆ ಮೊದಲು ಇದನ್ನು ಸೇವನೆ ಮಾಡಿ.
– ಪಪ್ಪಾಯಿ ಬೀಜಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಂಡು ಅದನ್ನು ನಿತ್ಯವೂ ಹುಡಿ ಮಾಡಬೇಕು. ಈ ಹುಡಿಯನ್ನು ಒಂದು ತುಂಡು ಅನಾನಸಿಗೆ ಹಾಕಿಕೊಂಡು ದಿನನಿತ್ಯವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.
– ಒಂದು ವೇಳೆ ವಾಯುಪ್ರಕೋಪ ಎದುರಾಗಿ ಹೊಟ್ಟೆಯುಬ್ಬರಿಕೆ ಕಾಣಿಸಿಕೊಂಡರೆ ತಕ್ಷಣವೇ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು.
ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಸೇವಿಸಬಾರದ ಆಹಾರಗಳು :-
– ನಿಕೋಟೀನ್ ಇರುವ ಪದಾರ್ಥಗಳನ್ನು ಸೇವಿಸಬಾರದು.
– ಮದ್ಯಪಾನವನ್ನು ಸೇವಿಸಬಾರದು.
– ಮಸಾಲೆಯುಕ್ತ ಮತ್ತು ಕರಿದ ಪದಾರ್ಥಗಳನ್ನು ಸೇವಿಸಬಾರದು.
– ಅತೀ ಹೆಚ್ಚಾಗಿ ಮಾಂಸಾಹಾರವನ್ನು ಸೇವಿಸಬಾರದು.
– ಅಡುಗೆಯಲ್ಲಿ ಮೆಣಸು ಕಡಿಮೆ ಬಳಸಿಕೊಳ್ಳಬೇಕು.
– ಡಬ್ಬಿಯಲ್ಲಿ ತುಂಬಿಟ್ಟ ಉಪ್ಪಿನಕಾಯಿಯನ್ನು ದೂರವಿಡಬೇಕು.
– ಚಹಾ ಮತ್ತು ಕಾಫಿಯು ಮಿತವಾಗಿರಬೇಕು.
– ಕೊಬ್ಬುಯುಕ್ತ ಹಾಲನ್ನು ಅತೀ ಹೆಚ್ಚಾಗಿ ಬಳಸಬಾರದು.
– ಹುಳಿ ಪದಾರ್ಥಗಳನ್ನು ದೂರವಿಡಬೇಕು.
ಬಿಕ್ಕಳಿಕೆ ಏಕೆ ಬರುತ್ತದೆ? ಕಂಟ್ರೋಲ್ ಮಾಡುವುದು ಹೇಗೆ?