Home » ಬಿಕ್ಕಳಿಕೆ ಏಕೆ ಬರುತ್ತದೆ? ಕಂಟ್ರೋಲ್‌ ಮಾಡುವುದು ಹೇಗೆ?

ಬಿಕ್ಕಳಿಕೆ ಏಕೆ ಬರುತ್ತದೆ? ಕಂಟ್ರೋಲ್‌ ಮಾಡುವುದು ಹೇಗೆ?

by manager manager

How To Stop Hiccups:

ಬಿಕ್ಕಳಿಕೆ ಎಂಬುದು ಹೇಳದೇ ಕೇಳದೇ ಬರುವ ಅತಿಥಿಯಂತೆ. ಈ ಅತಿಥಿಯು ಕೆಲವೊಂದು ಭಾರಿ ನಮಗೆ ಕೆಟ್ಟದನ್ನು ತರುತ್ತದೆ. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ.

ಬಿಕ್ಕಳಿಕೆ ಹೇಗೆ ಬರುತ್ತದೆ ? ಅದಕ್ಕೆ ಸಾಮಾನ್ಯ ಕಾರಣಗಳು ಯಾವುವು ಗೊತ್ತೇ?

– ಒತ್ತಡದಿಂದ ಬಳಲುವುದು

– ಆತಂಕದಿಂದ ಬಳಲುವುದು

– ತುಂಬ ಅವಸರವಾಗಿ ತಿನ್ನುವುದು

– ಸ್ಟ್ರೋಕ್

– ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ

ನಿಮ್ಮ ನಿದ್ದೆ ಅಥವಾ ಜೀವನಶೈಲಿ ಮೇಲೆ ಬಿಕ್ಕಳಿಕೆಯು ಅಡ್ಡಿಪಡಿಸುತ್ತಿದ್ದರೆ ನೀವು ಆರೋಗ್ಯ ತಜ್ಞರ ಸಲಹೆ ಪಡೆಯುವುದು ಮುಖ್ಯವಾಗಿರುತ್ತದೆ.

ಬಿಕ್ಕಳಿಕೆಯನ್ನು ನಿಯಂತ್ರಿಸಿ ನಿವಾರಿಸಿಕೊಳ್ಳುವುದು ಹೇಗೆ ?

– ತಕ್ಷಣಕ್ಕೆ ಬಿಕ್ಕಳಿಕೆ ನಿಲ್ಲಿಸಬೇಕೆಂದರೆ ಒಂದು ಚಮಚ ಸಕ್ಕರೆ ತಿನ್ನಬೇಕು.

– ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಲು ಮತ್ತೊಂದು ಹಳೆಯ ಹಾಗೂ ಉತ್ತಮ ಪರಿಹಾರವೆಂದರೆ ಆಳವಾಗಿ ಉಸಿರಾಡುವುದು.

– ಒಂದು ಲೋಟ ತುಂಬ ನೀರು ಕುಡಿಯಿರಿ. ಇನ್ನು, ನೀರು ಕುಡಿಯುವಾಗ ನೀವು ಬೇರೆ ಏನನ್ನೋ ಯೋಚಿಸುತ್ತಿರಬೇಕು. ಹೀಗಾಗಿ, ಇದೂ ಕೂಡ ಬಿಕ್ಕಳಿಕೆ ನಿಲ್ಲಿಸಲು ಪ್ರಮುಖ ವಿಧಾನವಾಗಿದೆ.

– ಬಿಕ್ಕಳಿಕೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆದರಿಸಿದರೆ ಅವರ ಗಮನ ಬೇರೆ ಕಡೆಗೆ ಕೇಂದ್ರೀಕರಿಸುತ್ತದೆ. ಇದರಿಂದಾಗಿ ಬಿಕ್ಕಳಿಕೆ ಕ್ರಮೇಣವಾಗಿ ನಿಲ್ಲುತ್ತದೆ.

– ಹುಳಿ ಇರುವ ಪದಾರ್ಥಗಳನ್ನು ತಿನ್ನುವುದರಿಂದಾಗಿ ಉಸಿರಾಟಕ್ಕೆ ಅಡಚಣೆಯುಂಟಾಗಲಿದ್ದು, ಬಿಕ್ಕಳಿಕೆ ನಿಲ್ಲುತ್ತದೆ.

– ಅಂಗೈಯನ್ನು ಒತ್ತಿ ಹಿಡಿಯಿರಿ ಒಂದು ಕೈಯ ಹೆಬ್ಬರಳಿನಿಂದ ಮತ್ತೊಂದು ಕೈಯ ಅಂಗೈಯನ್ನು ಒತ್ತಿ ಹಿಡಿಯಿರಿ.

– ಎಡ ಕೈಯ ಹೆಬ್ಬರಳನ್ನು ಬಲಕೈಯ ಹೆಬ್ಬರಳು ಹಾಗೂ ಮಧ್ಯ ಬೆರಳಿನಿಂದ ಗಟ್ಟಿಯಾಗಿ ಚಿವುಟಿ.

– ಕಿವಿಯನ್ನು ಒತ್ತಿ ಹಿಡಿಯುವುದು, ಈ ರೀತಿ ಮಾಡಿದರೆ ನರಗಳಿಗೆ ಸಂದೇಶ ಹೋಗುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುವುದು.

– ಬಾಯಿ ಮುಚ್ಚಿ ಬಾಯಿ ಹಾಗೂ ಮೂಗನ್ನು ಮುಚ್ಚಿ ಹಿಡಿದು ಉಸಿರಾಟವನ್ನು ಮುಂದುವರೆಸಿ, ಈ ರೀತಿ ಮಾಡಿದರೆ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಬಿಡುಗಡೆಯಾಗಿ ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ.

ವಯಸ್ಕರು ಬಿಕ್ಕಳಿಸಿವುದನ್ನು ನಿಲ್ಲಿಸಲು ಸಾಕಷ್ಟು ಪರಿಹಾರಗಳಿವೆ. ಆದರೆ ಮಗುವಿನ ಮೇಲೆ ಎಂದು ಪ್ರಯತ್ನಿಸಬಾರದು ಏಕೆಂದರೆ ಇದರಿಂದ ಗಂಭೀರವಾದ ತೊಡಕುಗಳನ್ನು ಹೊಂದಿರಬಹುದು. ಮೂಗು ಹಿಡಿದುಕೊಳ್ಳುವುದು, ಮಗುವನ್ನು ಹೆದರಿಸುವುದು, ನಾಲಿಗೆ ಅಥವಾ ಕಿವಿಗಳನ್ನು ಎಳೆಯುವುದನ್ನು ತಪ್ಪಿಸಬೇಕು.

ಬಿಕ್ಕಳಿಕೆ ಬರದಂತೆ ನೋಡಿಕೊಳ್ಳುವುದು ಹೇಗೆ ?

– ಅತಿಯಾಗಿ ತಿನ್ನುವುದನ್ನು ಬಿಡಿ.

– ನಿಧಾನವಾಗಿ ತಿನ್ನಿ ಹಾಗೂ ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿ.

– ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.

– ಆಳವಾಗಿ ಉಸಿರಾಡುವ ವ್ಯಾಯಾಮಗಳನ್ನು ಪ್ರಾಕ್ಟೀಸ್ ಮಾಡಿಕೊಳ್ಳಿ.

– ಹೆಚ್ಚು ಸಕ್ರಿಯವಾಗಿರುವುದನ್ನು ರೂಢಿಸಿಕೊಳ್ಳಿ.

ಮಕ್ಕಳಿಗೆ ಬಿಕ್ಕಳಿಕೆ ಬಂದರೆ ನಿಲ್ಲಿಸುವುದು ಹೇಗೆ ?

– ಮಗುವಿಗೆ ಚೆನ್ನಾಗಿ ತೇಗಿಸಿ. ಶಿಶುಗಳಿಗೆ ತಿನ್ನುಸುವಾಗ ಸಿಕ್ಕಿಹಾಕಿಕೊಂಡಿರುವ ಹೆಚ್ಚುವರಿ ಗಾಳಿಯಿಂದ ಬಿಕ್ಕಳಿಕೆ ಪ್ರಚೋದಿಸುವುದು. ತೇಗಿಸುವುದರಿಂದ ಸಿಕ್ಕಿ ಹಾಕಿಕೊಂಡಿರುವ ವಾಯು ಗುಳ್ಳೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

– ಶಿಶುಗಳಿಗೆ ಹಾಲು ಕುಡಿಸುವ ಬಾಟಲಿಯನ್ನು ಪರಿಶೀಲಿಸಿ. ಕೆಲವು ಬಾಟಲ್ ವಿನ್ಯಾಸಗಳು ಹಾಲು ಕುಡಿಯುವಾಗ ಹೆಚ್ಚಿನ ಗಾಳಿಯನ್ನು ನುಂಗುವ ಸಾಧ್ಯತೆ ಇರುತ್ತದೆ. ಬಾಟಲಿಯಲ್ಲಿ ಸಿಲುಕಿರುವ ಗಾಳಿಯನ್ನು ಕಡಿಮೆ ಮಾಡುವ ವಿಭಿನ್ನ ಬ್ರಾಂಡ್‍ಗಳು ಅಥವಾ ಪ್ರಕಾರಗಳನ್ನು ಪ್ರಯತ್ನಿಸಬಹುದು. ಮೊಲೆತೊಟ್ಟುಗಳಲ್ಲಿ ಹಾಲಿನ ಶೇಕರಣೆ.

– ಹಾಲು ಕುಡಿದ/ಕುಡಿಸಿದ ನಂತರ ಜಿಗಿಯುವುದು/ಹಾರುವುದು ಅಥವಾ ಪುಟಿಯುವಂತಹ ಆಯಾಸವಾಗುವಂತ ಚಟುವಟಿಕೆ ಅಥವಾ ಆಟ ತಪ್ಪಿಸಬೇಕು.

– 20-30 ನಿಮಿಷಗಳ ಹಾಲುಕುಡಿಸಿ ಮತ್ತು ತಿನ್ನಿಸಿದ ಮೇಲೆ ಮಗುವನ್ನು ನೇರವಾಗಿ ಕೂರಿಸಿ.

ಈ ಲಕ್ಷಣಗಳಿದ್ದರೆ ಡೆಂಗ್ಯೂ ಜ್ವರ ಬಂದಿರುವ ಮುನ್ಸೂಚನೆ ಇರುತ್ತದೆ.. ಜೋಪಾನ