Home » 1360 ಎಕರೆ ಪ್ರದೇಶದಲ್ಲಿ ಒಬ್ಬರೇ ಅರಣ್ಯ ನಿರ್ಮಿಸಿದ ಭಾರತೀಯ ಧೀರ ಇವರು!

1360 ಎಕರೆ ಪ್ರದೇಶದಲ್ಲಿ ಒಬ್ಬರೇ ಅರಣ್ಯ ನಿರ್ಮಿಸಿದ ಭಾರತೀಯ ಧೀರ ಇವರು!

by manager manager

‘ಪ್ರತಿ ವರ್ಷ ವಿಶ್ವ ಪರಿಸರ ದಿನದಂದು, ಅಥವಾ ಹುಟ್ಟಿದ ಹಬ್ಬ ದಿನದಂದು ನಾನು ಸಸಿಗಳನ್ನು ನೆಡುತ್ತೇನೆ’ ಹೀಗೆ ಬಹುಸಂಖ್ಯಾತ ಯುವಜನತೆ ಸಂಕಲ್ಪ ಮಾಡುತ್ತಾರೆ. ಹಾಗೆ ಮಾಡುತ್ತಲೇ ಇರುತ್ತಾರೆ. ಅಂತಹ ಸಂಕಲ್ಪಧಾರಿಗಳು ಪ್ರಪಂಚದ ತುಂಬ ಬೇಕಾದಷ್ಟು ಜನರು ಸಿಗುತ್ತಾರೆ. ಆದರೆ ಇಂತಹ ಮಹತ್ತರ ಕೆಲಸಗಳನ್ನು ಕಾರ್ಯರೂಪಕ್ಕೆ ತರುವವರು ಬೆರಳೆಣಿಕೆಯಷ್ಟು ಎಂದರು ತಪ್ಪಾಗುತ್ತದೆ.

ಪರಿಸರದ ಬಗ್ಗೆ ಯಾಕಿಷ್ಟು ಪೀಠಿಕೆ ಅಂದ್ರೆ ಇಂದಿನ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ವ್ಯಕ್ತಿಯೋರ್ವರ ಕುರಿತು ತಿಳಿದರೆ ಏಕೆ ಎಂಬುದು ನಿಮಗೆ ತಿಳಿಯುತ್ತದೆ.

Forest Man who spent 37 years to plant whole Forest Jadav Payeng 1

Forest Man who spent 37 years to plant whole Forest Jadav Payeng 1

ಹೆಸರು ಜಾದವ್ ಪಯಾಂಗ್(Jadav Payeng).ಇವರ ಮೂಲತಃ ಸ್ಥಳ ಅಸ್ಸಾಂ. ಅಸ್ಸಾಂ ಪ್ರಸ್ತುತ ಇರುವ ಹಾಗೆ ಈ ಹಿಂದೆ ಇರಲಿಲ್ಲ. ಅಲ್ಲಿ ಪ್ರತಿ ಮಾನ್ಸೂನ್‌ ನಲ್ಲಿ ಪ್ರವಾಹ ಬಂದು ಜನ ಜೀವನಕ್ಕೆ ಹೇರಳವಾಗಿ ಅಸ್ತವ್ಯಸ್ಥಗೊಳ್ಳುತ್ತಿತ್ತು. ಜನರಿಗೆ ಮಾತ್ರವಲ್ಲದೇ ಪ್ರಾಣಿ ಸಂಕುಲಕ್ಕೆ ಈ ಪ್ರವಾಹ ದೊಡ್ಡ ಕೆಡಕಾಗಿದ್ದು. ಹೀಗೆ ಪ್ರವಾಹದ ಪರಿಣಾಮದಿಂದ ಪ್ರತಿ ಸಾರಿ ಸತ್ತು ಬೀಳುತ್ತಿದ್ದ ಸರೀಸೃಪಗಳು ಮತ್ತು ಇತರೆ ಜೀವಿ ಸಂಕುಲಗಳನ್ನು ನೋಡಿ ಮನನೊಂದ ಜಾದವ್ ಪಯಾಂಗ್ ಇವುಗಳ ನೆಲೆಗೆ ಒಂದು ನಿರ್ಧಾರ ಕೈಗೊಂಡರು. ಅವರ ಆ ನಿರ್ಧಾರವೇ ಅಸ್ಸಾಂ ನ ಸುತ್ತಮುತ್ತಲ ಪ್ರದೇಶದಲ್ಲಿ ಕಾಡು ಬೆಳೆಸುವುದು.

1979 ರಲ್ಲಿ ಪ್ರತಿ ದಿನ ಸಸಿಗಳನ್ನು ನೆಡಲು ಪ್ರಾರಂಭಿಸಿದ ಜಾದವ್ ಪಯಾಂಗ್(Forest Man) ರವರ ಶ್ರಮದಿಂದ ಇಂದು 1360 ಎಕರೆ ಪ್ರದೇಶದಲ್ಲಿ ಒಂದು ದೊಡ್ಡ ಅರಣ್ಯವೇ ನಿರ್ಮಾಣಗೊಂಡಿದೆ. ಆದರೆ ನೆನಪಿಡಬೇಕಾದ ಒಂದು ಅಂಶ ಈ ಬೃಹತ್ ಪ್ರದೇಶದ ಅರಣ್ಯ ಕೇವಲ ಇವರೊಬ್ಬರ ಕೈಯಿಂದಲೇ ಪೋಷಣೆಗೊಂಡಿದೆ ಎಂಬುದನ್ನ.

Forest Man who spent 37 years to plant whole Forest Jadav Payeng 2

Forest Man who spent 37 years to plant whole Forest Jadav Payeng 2

ಈ ಅರಣ್ಯ ನಿರ್ಮಾಣವಾಗುವ ಮೊದಲು ಈ ಪ್ರದೇಶದಲ್ಲಿ ಗಿಡ-ಮರಗಳನ್ನು ಪೋಷಿಸಬಹುದಾ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದ್ದರಂತೆ ಜಾದವ್. ಅದಕ್ಕೆ ಈ ಪ್ರದೇಶದಲ್ಲಿ ಏನು ಬೆಳೆಯಲು ಸಾಧ್ಯವಿಲ್ಲ, ಆದರೆ ಬಿದಿರು ಸಸಿಗಳನ್ನು ನೆಟ್ಟು ಪ್ರಯತ್ನಿಸಬಹುದು ಎಂದಿದ್ದರಂತೆ. ಬಿದಿರು ಸಸಿಗಳನ್ನೇ ನೆಡುತ್ತಾ ಬಂದ ಜಾದವ್ ತಮ್ಮ 37 ವರ್ಷಗಳನ್ನು ಶ್ರಮಿಸಿ ಹಲವು ಬಗೆಯ ಸರೀಸೃಪಗಳು ಮತ್ತು ಜೀವಿಗಳಿಗೆ ನೆಲೆಯನ್ನು ಕಲ್ಪಿಸಿದ್ದಾರೆ.

ಅಂದಹಾಗೆ ಜಾದವ್ (Forest Man) ನಿರ್ಮಾಣ ಮಾಡಿರುವ ಈ ಅರಣ್ಯ ಎಷ್ಟು ದೊಡ್ಡದು ಎಂದರೆ, ನ್ಯೂಯಾರ್ಕ್ ನ 778 ಎಕರೆಯ ಸೆಂಟ್ರಲ್‌ ಪಾರ್ಕ್‌ ಗಿಂತಲೂ ಎರಡು ಪಟ್ಟು ದೊಡ್ಡದು. ಇಂತಹ ಬೃಹತ್ ಅರಣ್ಯದ ನಿರ್ಮಾತೃ ಜಾದವ್ ಪಯಾಂಗ್ ಪ್ರಪಂಚದ ಯುವಜನತೆಗೆ ಉನ್ನತ ಮಟ್ಟದಲ್ಲಿ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಯಾವುದೇ ಹಣಕ್ಕಾಗಿ, ಹಿರಿಮೆ-ಗರಿಮೆಗಾಗಿ ಅಲ್ಲದೇ ಜೀವಿ ಸಂಕುಲದ ಉಳಿವಿಗಾಗಿ ತನ್ನ 37 ವರ್ಷ ವಯಸ್ಸನ್ನೇ ಮುಡಿಪಾಗಿಟ್ಟಿರುವ ಇವರ ಸಾಧನೆ ಶ್ಲಾಘನೀಯ.

ಪರಿಸರ ದಿನಚರಣೆಯಂದು ಒಂದೊಂದು ಸಸಿನೆಟ್ಟು ಅದನ್ನೇ ಹಿಡಿದು ಪೋಟೋಕೆ ಪೋಸ್‌ ಕೊಡುವವರು ಒಮ್ಮೆ ಇವರ ಸಾಧನೆಯನ್ನು ಒಮ್ಮೆ ಸ್ಮರಿಸಬೇಕಾಗಿ ವಿನಂತಿ.

ಅಂದಹಾಗೆ ಜಾದವ್ ರವರ ಈ ಮಹತ್ತರ ಕೆಲಸದ ಕುರಿತು ಫಾರೆಸ್ಟ್‌ ಮ್ಯಾನ್(Forest Man) ಎಂಬ ಡಾಕ್ಯುಮೆಂಟರಿಯೂ ನಿರ್ಮಾಣವಾಗಿದ್ದು, ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ನಿರ್ದೇಶಕರಿಗೆ ತಂದು ಕೊಟ್ಟಿದೆ. ಆ ಸಾಕ್ಷ್ಯಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Jadav Payeng, who spent his 37 years to Plant a whole Forest named as Forest Man for his great work. Ream more here..

You may also like