Home » ‘ಸಮೃದ್ಧಿ’ಯಿಂದ ನಿರುದ್ಯೋಗಿ ಯುವಕ-ಯುವತಿಯರಿಗೆ 10 ಲಕ್ಷ ರೂವರೆಗೆ ಆರ್ಥಿಕ ನೆರವು

‘ಸಮೃದ್ಧಿ’ಯಿಂದ ನಿರುದ್ಯೋಗಿ ಯುವಕ-ಯುವತಿಯರಿಗೆ 10 ಲಕ್ಷ ರೂವರೆಗೆ ಆರ್ಥಿಕ ನೆರವು

by manager manager

Financial assistance to unemployed youths up to Rs 10 lakh from Samrudhi

Financial assistance to unemployed youths up to Rs 10 lakh from ‘Samrudhi’

ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮವು 2018-19 ನೇ ಸಾಲಿನಲ್ಲಿ ಸರ್ಕಾರದ ಆಯವ್ಯಯ ‍ಘೋಷಣೆ ಅನುಸಾರ ಸಾಮಾಜಿಕ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ‘ಸಮೃದ್ಧಿ’ ಎಂಬ ನೂತನ ಯೋಜನೆಯನ್ನು ಅನಷ್ಟಾನಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ನೀಡಲು ಮುಂದಾಗಿದೆ.

ಈ ಆರ್ಥಿಕ ನೆರವಿನಿಂದ ಸ್ವಯಂ ಉದ್ಯೋಗ ಘಟಕಗಳನ್ನು ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿರುವ ರೀಟೈಲ್ ವ್ಯವಹಾರದ ಕಂಪನಿಗಳ ಫ್ರಾಂಚೈಸಿ ಅಥವಾ ಡೀಲರ್‌ಶಿಪ್ ಪಡೆದು, ಆ ಕಂಪನಿಯ ರೀಟೈಲ್ ಮಳಿಗೆಗಳನ್ನು ಆರಂಭಿಸಲು ಅವಕಾಶವಿರುತ್ತದೆ.

ಈ ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದು, ಈ ಯೋಜನೆಗೆ ಅನುದಾನ ರೂಪದಲ್ಲಿ ರೂ.10, ಲಕ್ಷಗಳವರೆಗೆ ಆರ್ಥಿಕ ನೆರವನ್ನು ನೀಡಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮೇಲಿನ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತ ನಿರುದ್ಯೋಗಿಗಳು ದಿನಾಂಕ 10-12-2018 ರವರೆಗೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು.

ಅರ್ಹ ಫಲಾನುಭವಿಗಳಿಗೆ ರೂ.10 ಲಕ್ಷ ರೂ ವರೆಗೂ ಧನ ಸಹಾಯ ದೊರೆಯಲಿದೆ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಓದಿ ತಿಳಿಯಲು ಸಮೃದ್ಧಿ.ಕಾಂ ಗೆ ಭೇಟಿ ನೀಡಿರಿ.

ಅರ್ಜಿ ಸಲ್ಲಿಸಲು ಈ ಕೆಳಗಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ

– www.karnataka.gov.in/kmvstdcl.com

– samruddhiyojane.com

– kalyanakendra.com

Financial assistance to unemployed youths up to Rs 10 lakh from ‘Samrudhi’. samruddhiyojane.com

You may also like